6 ಸೋಲು.. 6 ಗೆಲುವು.. ಪ್ಲೇಆಫ್! – RCB ಅದೃಷ್ಟ ಬದಲಿಸಿದ್ದೇ ಈ ಪಂದ್ಯ!
TOP 10 To 4 ಜರ್ನಿ ಹೇಗಿತ್ತು?
ಹದಿನೈದು ದಿನ. ಜಸ್ಟ್ ಹದಿನೈದು ದಿನಗಳ ಹಿಂದೆ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ 10ನಲ್ಲಿದ್ದ ಆರ್ಸಿಬಿ ಈಗ ಟಾಪ್ 4ಗೆ ಜಿಗಿದಿದೆ. ಟೂರ್ನಿಯಿಂದ ಫಸ್ಟ್ ಎಲಿಮಿನೇಟ್ ಆಗೋ ಲಿಸ್ಟ್ನಲ್ಲಿದ್ದ ಬೆಂಗಳೂರು ಟೀಂ ಟ್ರೋಫಿಗೆ ಮುತ್ತಿಕ್ಕೋ ಫೇವರೆಟ್ ತಂಡ ಎನಿಸಿಕೊಂಡಿದೆ. ಫಸ್ಟ್ ಆಫ್ನಲ್ಲಿ ಒಂದೇ ಒಂದು ಮ್ಯಾಚ್ ಗೆದ್ದು ಸತತ 6 ಪಂದ್ಯ ಕೈ ಚೆಲ್ಲಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಡೀ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತೆ ಪ್ಲೇ ಆಫ್ಗೆ ಕ್ವಾಲಿಫೈ ಆಗಿದೆ. ಎರಡು ವಾರಗಳಲ್ಲಿ ಯಾರೂ ಇಮ್ಯಾಜಿನ್ ಮಾಡದ ರೀತಿಯಲ್ಲಿ ಫಿನಿಕ್ಸ್ನಲ್ಲಿ ಎದ್ದು ಬಂದಿದೆ. ಶನಿವಾರದ ಪಂದ್ಯವಂತೂ ಐಪಿಎಲ್ ಇತಿಹಾಸದಲ್ಲೇ ನೆನಪಿಟ್ಟುಕೊಳ್ಳುವಂಥ ದಿನ ಅಂದ್ರೂ ತಪ್ಪಾಗಲ್ಲ. ಸೀಸನ್ 17 ಟೂರ್ನಿಯಲ್ಲಿ ಸೋಲಿನೊಂದಿಗೆ ಯಾನ ಆರಂಭಿಸಿದ್ದ ಆರ್ಸಿಬಿ ಗೆಲುವಿನ ಸುನಾಮಿ ಎಬ್ಬಿಸಿದ್ದೇಕೆ..? ಟಾಪ್ 10 ಟು ಟಾಪ್ 4 ಜರ್ನಿ ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ.
ಮೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್ ಗಳ ಅಂತರದಿಂದ ಗೆದ್ದು ಪ್ಲೇಆಫ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಯಾವ ತಂಡದ ವಿರುದ್ಧ ಸೋತು ಸೀಸನ್ 17 ಜರ್ನಿ ಆರಂಭಿಸಿತ್ತೋ ಅದೇ ತಂಡವನ್ನ ಮನೆಗೆ ಕಳಿಸೋ ಮೂಲಕ ಟ್ರೋಫಿಯತ್ತ ಹೆಜ್ಜೆ ಇಟ್ಟಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿ ಬಳಿಕ ಗೆಲುವಿನ ಲಯಕ್ಕೆ ಮರಳಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹೈದರಾಬಾದ್..! – ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೆ ಜಿಗಿತ
ಮಾರ್ಚ್ 22ರಂದು ಐಪಿಎಲ್ ಸೀಸನ್ 17 ಪಂದ್ಯದ ಉದ್ಘಾಟನಾ ಪಂದ್ಯದ ಮೂಲಕವೇ ಆರ್ಸಿಬಿ ಜರ್ನಿ ಆರಂಭಿಸಿತ್ತು. ಫಸ್ಟ್ ಮ್ಯಾಚ್ನಲ್ಲೇ ಸಿಎಸ್ಕೆ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯ ಧೋನಿ ವರ್ಸಸ್ ಕೊಹ್ಲಿ ನಡುವಿನ ಕ್ಲಾಶ್ ಎಂದೇ ಬಿಂಬಿತವಾಗಿತ್ತು. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆರ್ಸಿಬಿಗೆ ಮೊದಲ ಪಂದ್ಯದಲ್ಲೇ ಸೋಲಿನ ಶಾಕ್ ಸಿಕ್ಕಿತ್ತು. ಫಸ್ಟ್ ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನತ್ತಿದ್ದ ಸಿಎಸ್ಕೆ 18.4 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕುವ ಮೂಲಕ ಗೆಲುವಿನ ಶುಭಾರಂಭ ಮಾಡಿತ್ತು.
ಇನ್ನು ಮಾರ್ಚ್ 25ರಂದು ನಡೆದಿದ್ದ ಸೆಕೆಂಡ್ ಮ್ಯಾಚ್ನಲ್ಲಿ ಆರ್ಸಿಬಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಆರ್ಸಿಬಿಗೆ ಇದು ಮೊದಲ ಗೆಲುವಾಗಿತ್ತು. ಫಸ್ಟ್ ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 176 ರನ್ ಗಳಿಸಿದ್ರು. ರನ್ ಚೇಸ್ಗೆ ಇಳಿದ ಆರ್ಸಿಬಿ ಪ್ಲೇಯರ್ಸ್ 19.2 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆಗಿದ್ರು.
ಬಳಿಕ ಮಾರ್ಚ್ 29ರಂದು ಬೆಂಗಳೂರಿನಲ್ಲೇ ನಡೆದಿದ್ದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸೋಲು ಅನುಭವಿಸಿತ್ತು. ಫಸ್ಟ್ ಬ್ಯಾಟ್ ಮಾಡಿದ ಬೆಂಗಳೂರು ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಕಲೆ ಹಾಕಿದ್ರು. ಈ ಟಾರ್ಗೆಟ್ ಅನ್ನ ನೀರು ಕುಡಿದಷ್ಟೇ ಸಲೀಸಾಗಿ ಕೆಕೆಆರ್ ಚೇಸ್ ಮಾಡಿತ್ತು. 16.5 ಓವರ್ಗಳಲ್ಲೇ 3 ವಿಕೆಟ್ ನಷ್ಟಕ್ಕೆ 186 ರನ್ ಬಾರಿಸಿದ್ರು.
ಇನ್ನು ಏಪ್ರಿಲ್ 2ರಂದು ಬೆಂಗಳೂರಿನಲ್ಲೇ ಲಕ್ನೋ ಸೂಪರ್ ಜೇಂಟ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗ್ಗರಿಸಿತ್ತು. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿದ್ರು. ಈ ಸ್ಕೋರ್ ನೋಡಿದ್ರೆ ಆರ್ಸಿಬಿ ತವರಿನಲ್ಲಿ ಈಸಿಯಾಗಿ ಚೇಸ್ ಮಾಡ್ತಾರೆ ಅಂತಾನೇ ಫ್ಯಾನ್ಸ್ ಅನ್ಕೊಂಡಿದ್ರು. ಆದ್ರೆ ಇನ್ನೂ ನಾಲ್ಕು ಬಾಲ್ ಇದ್ದಂತೆಯೇ ಆರ್ಸಿಬಿ ಆಟಗಾರರು 153 ರನ್ಗಳಿಗೆ ಆಲೌಟ್ ಆಗಿದ್ರು. ಎಲ್ಎಸ್ಜಿ ತಂಡ 28 ರನ್ಗಳ ಅಂತರದಲ್ಲಿ ಗೆದ್ದು ಬೀಗಿತ್ತು.
ಹಾಗೇ ಏಪ್ರಿಲ್ 6ರಂದು ಜೈಪುರದಲ್ಲಿ ನಡೆದಿದ್ದ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಫಸ್ಟ್ ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿತ್ತು. 184 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಆರ್ಆರ್ ತಂಡ ಇನ್ನೂ 5 ಬಾಲ್ಗಳು ಬಾಕಿ ಇರುವಂತೆಯೇ 189 ರನ್ ಗಳಿಸುವ ಮೂಲಕ ಪಂದ್ಯ ಗೆದ್ದುಕೊಂಡಿತ್ತು.
ಬಳಿಕ ಏಪ್ರಿಲ್ 11 ರಂದು ನಡೆದ ಪಂದ್ಯದಲ್ಲೂ ಮತ್ತದೇ ಸೋಲು. ವಾಂಖೇಡೆ ಸ್ಟೇಡಿಯಮ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಫಾಫ್ ಪಡೆ ಸೋಲನುಭವಿಸಿತ್ತು. ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ಟೀಂ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಕಲೆ ಹಾಕಿದ್ರು. ಇದನ್ನ ಪಾಂಡ್ಯ ಟೀಂ ಈಸಿಯಾಗಿ ರೀಚ್ ಮಾಡಿತ್ತು. ಇನ್ನೂ 27 ಬಾಲ್ಗಳು ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 199 ರನ್ ಚಚ್ಚಿ ಗೆದ್ದು ಬೀಗಿತ್ತು ಮುಂಬೈ ಇಂಡಿಯನ್ಸ್ ಟೀಂ.
ಇನ್ನು ಏಪ್ರಿಲ್ 15ರಂದು ನಡೆದ ಪಂದ್ಯವನ್ನಂತೂ ಯಾರೂ ಮರೆಯೋಕೆ ಸಾಧ್ಯನೇ ಇಲ್ಲ ಬಿಡಿ. ಬೆಂಗಳೂರಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ತಂಡ ಆರ್ಸಿಬಿ ಎದುರು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಕಲೆ ಹಾಕಿತ್ತು. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಹೈದ್ರಾಬಾದ್ ಪ್ಲೇಯರ್ಸ್ 20 ಓವರ್ಗಳಲ್ಲಿ ಬರೋಬ್ಬರಿ 287 ರನ್ ಬಾರಿಸಿದ್ರು. ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ಬೆಂಗಳೂರು ಟೀಂ ಕೂಡ ಚೆನ್ನಾಗೇ ಚೇಸಿಂಗ್ ಮಾಡಿದ್ರು. 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಕಲೆ ಹಾಕಿದ್ರು. ಆದ್ರೆ ಅಂತಿಮವಾಗಿ 25 ರನ್ ಗಳಿಂದ ಸೋಲಬೇಕಾಯ್ತು.
ಹಾಗೇ ಏಪ್ರಿಲ್ 21 ರಂದು ನಡೆದ ಮ್ಯಾಚ್ ಕೂಡ ಆರ್ಸಿಬಿ ಫ್ಯಾನ್ಸ್ ಮರೆಯೋಕೆ ಆಗಲ್ಲ. ಗ್ರೀನ್ ಜೆರ್ಸಿಯಲ್ಲಿ ಕೆಕೆಆರ್ ವಿರುದ್ಧ ಈಡನ್ ಗಾರ್ಡನ್ಸ್ನಲ್ಲಿ ಕಣಕ್ಕಿಳಿದಿದ್ದ ಫಾಫ್ ಪಡೆ ವೀರೋಚಿತ ಸೋಲು ಕಂಡಿತ್ತು. ಫಸ್ಟ್ ಬ್ಯಾಟ್ ಮಾಡಿದ ಶ್ರೇಯಸ್ ಅಯ್ಯರ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಕಲೆ ಹಾಕಿತ್ತು. ಟಾರ್ಗೆಟ್ ಬೆನ್ನತ್ತಿದ್ದ ಫಾಫ್ ಟೀಂ 221 ರನ್ ಗಳಿಸಿ ಕೊನೆಗೆ ಜಸ್ಟ್ 1 ರನ್ನಿಂದ ಸೋಲು ಕಂಡಿತ್ತು. ಹೀಗೆ ಸತತ 6 ಪಂದ್ಯಗಳಲ್ಲಿ ಸೋತ ಆರ್ಸಿಬಿ ಇನ್ನೇನು ಮನೆ ಕಡೆಗೆ ಹೋಗ್ತಾರೆ, ಈ ಸಲನೂ ಕಪ್ ನಮ್ದಲ್ಲ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಆದ್ರೆ ಕೆಕೆಆರ್ ವಿರುದ್ಧದ ಈ 1 ರನ್ನ ಸೋಲು ಆರ್ಸಿಬಿ ಪಡೆಯನ್ನ ಬಡಿದೆಬ್ಬಿಸಿತ್ತು. ಗೆಲ್ಲಲೇಬೇಕೆಂಬ ಛಲ ಹುಟ್ಟಿಸಿತ್ತು. ಬಳಿಕ ಬೆಂಗಳೂರು ಆಟಗಾರರು ಹಿಂತಿರುಗಿ ನೋಡ್ಲೇ ಇಲ್ಲ.
ಏಪ್ರಿಲ್ 25ರಂದು ಹೈದ್ರಾಬಾದ್ನಲ್ಲಿ ನಡೆದ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಆಟಗಾರರು ಸೋಲಿನ ಸೇಡು ತೀರಿಸಿಕೊಂಡಿದ್ರು. ಫಸ್ಟ್ ಬ್ಯಾಟ್ ಮಾಡಿ 7 ವಿಕೆಟ್ ನಷ್ಟಕ್ಕೆ ಫಾಫ್ ಟೀಂ 206 ರನ್ ಕಲೆ ಹಾಕಿತ್ತು. ಚೇಸಿಂಗ್ಗೆ ಇಳಿದ ಹೈದ್ರಾಬಾದ್ ಆಟಗಾರರಿಗೆ 171 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ ಸತತ 6 ಪಂದ್ಯಗಳ ಸೋಲಿನ ಬಳಿಕ ಆರ್ಸಿಬಿ ಭರ್ಜರಿ 35 ರನ್ಗಳ ಅಂತರದಿಂದ ಗೆದ್ದು ಬೀಗಿತ್ತು.
ಬಳಿಕ ಏಪ್ರಿಲ್ 28ರಂದು ಗುಜರಾತ್ನ ಅಹಮದಾಬಾದ್ ಸ್ಟೇಡಿಯಮ್ನಲ್ಲಿ ಗಿಲ್ ಪಡೆ ವಿರುದ್ಧವೂ ಅಬ್ಬರಿಸಿದ್ದ ಬೆಂಗಳೂರು ಪಡೆ 9 ವಿಕೆಟ್ಗಳ ವಿಕ್ಟರಿ ಸಾಧಿಸಿತ್ತು. ಫಸ್ಟ್ ಬ್ಯಾಟ್ ಮಾಡಿದ್ದ ಗುಜರಾತ್ ತಂಡ 20 ಓವರ್ಗಳಲ್ಲಿ 200 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ಆರ್ಸಿಬಿ ಪರ ವಿಲ್ ಜಾಕ್ಸ್ ಭರ್ಜರಿ ಶತಕದ ಮೂಲಕ 16 ಓವರ್ಗಳಲ್ಲೇ 206 ರನ್ ಬಾರಿಸಿ ಗೆದ್ದಿತ್ತು.
ನಂತ್ರ ಮೇ 4ರಂದು ಮತ್ತದೇ ಗುಜರಾತ್ ತಂಡದ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮ್ಯಾಚ್ನಲ್ಲೂ ಬೆಂಗಳೂರು ಆಟಗಾರರು ಅಬ್ಬರಿಸಿ ಬೊಬ್ಬಿರಿರಿದಿದ್ರು. ಫಸ್ಟ್ ಬ್ಯಾಟ್ ಮಾಡಿದ್ದ ಗುಜರಾತ್ ತಂಡ 147 ರನ್ ಗಳಿಸುವಲ್ಲಿ ಆಲೌಟ್ ಆಗಿತ್ತು. ಈ ಟಾರ್ಗೆಟನ್ನ 13.4 ಓವರ್ಗಳಲ್ಲೇ 152 ರನ್ ಬಾರಿಸುವ ಮೂಲಕ ಬೆಂಗಳೂರು ತಂಡ ರೀಚ್ ಮಾಡಿತ್ತು. ಈ ಪಂದ್ಯದವರೆಗೂ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ 10ನಲ್ಲಿದ್ದ ಆರ್ಸಿಬಿ ಫಸ್ಟ್ ಟೈಂ ಟಾಪ್ 7ಗೆ ಜಂಪ್ ಆಗಿತ್ತು. ಇದೇ ಜಿಗಿತ ಆರ್ಸಿಬಿ ಆಟಗಾರರು ಮತ್ತು ಅಭಿಮಾನಿಗಳ ಭರವಸೆಯನ್ನ ದುಪ್ಪಟ್ಟು ಮಾಡಿತ್ತು.
ಇನ್ನು ಮೇ 9ರಂದು ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲೂ ಆರ್ಸಿಬಿ ಆಟಗಾರರು ರನ್ ಮಳೆ ಹರಿಸಿದ್ರು. ಪಂಜಾಬ್ ವಿರುದ್ಧ 20 ಓವರ್ಗಳಲ್ಲಿ 241 ರನ್ ಕಲೆ ಹಾಕಿದ್ರು. ಆದ್ರೆ ಪಂಜಾಬ್ ಆಟಗಾರರು 20 ಓವರ್ಗಳಲ್ಲಿ 181 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ ಆರ್ಸಿಬಿಗೆ 60 ರನ್ಗಳ ಅಂತರದಲ್ಲಿ ಜಯ ಲಭಿಸಿತ್ತು.
ಹಾಗೇ ಮೇ 12 ರಂದು ಬೆಂಗಳೂರಿನಲ್ಲಿ ನಡೆದ ಮ್ಯಾಚ್ನಲ್ಲಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಫಸ್ಟ್ ಬ್ಯಾಟ್ ಮಾಡಿತ್ತು. 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಅಷ್ಟೇ ಗಳಿಸಿದ್ರು. ಆದ್ರೆ ಅಂದು ಆರ್ಸಿಬಿ ಬೌಲರ್ಸ್ ಡೆಲ್ಲಿ ಆಟಗಾರರ ಬೆವರಿಳಿಸಿದ್ರು. 19.1 ಓವರ್ನಲ್ಲೇ ಡೆಲ್ಲಿ ಬಾಯ್ಸ್ 140 ರನ್ ಗಳಿಸಿ ಆಲ್ಔಟ್ ಆದ್ರು. ಈ ಮೂಲಕ ಆರ್ಸಿಬಿಗೆ 47 ರನ್ಗಳ ಅಂತರದಲ್ಲಿ ಗೆದ್ದು ಬೀಗಿತ್ತು.
ಇನ್ನು ಮೇ 18ರಂದು ನಡೆದ ಪಂದ್ಯದ ಬಗ್ಗೆಯಂತೂ ಹೇಳಲೇಬೇಕು. ಸತತ ಐದು ಪಂದ್ಯಗಳಿಂದ ಡು ಆರ್ ಡೈ ಮ್ಯಾಚ್ನಂತೆಯೇ ಆಡಿಕೊಂಡು ಬಂದಿದ್ದ ಆರ್ಸಿಬಿ ಅಸಲಿ ಸವಾಲು ಇದ್ದದ್ದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ಮತ್ತು ಆರ್ಸಿಬಿ ನಡುವೆ ಹೈವೋಲ್ಟೇಜ್ ಕದನ ನಡೆಯಿತು. ಯಾಕಂದ್ರೆ ಇದು ಎಲಿಮಿನೇಟರ್ ಪಂದ್ಯ ಆಗಿತ್ತು. ಯಾರು ಗೆಲ್ತಾರೋ ಅವ್ರು ಪ್ಲೇಆಫ್ಗೆ ಸೋತವ್ರು ಮನೆ ಕಡೆ ಅನ್ನೋದು ಮೊದ್ಲೇ ಡಿಸೈಡ್ ಆಗಿತ್ತು. ಆದ್ರೆ ಇಲ್ಲೂ ಒಂದು ಟ್ವಿಸ್ಟ್ ಇತ್ತು. ಆರ್ಸಿಬಿ 18 ರನ್ಗಳ ಅಂತರದಲ್ಲಿ ಗೆಲ್ಬೇಕು. ಇಲ್ಲದಿದ್ರೆ 11 ಎಸೆತಗಳು ಬಾಕಿ ಇರುವಂತೆಯೇ ಚೇಸ್ ಮಾಡ್ಬೇಕು ಅನ್ನೋದು. ಟಾಸ್ ಸೋತು ಫಸ್ಟ್ ಬ್ಯಾಟಿಂಗ್ಗೆ ಇಳಿದ ಆರ್ಸಿಬಿಗೆ 3 ಓವರ್ಗಳಲ್ಲೇ ಮಳೆ ಕಾಟ ಶುರುವಾಗಿತ್ತು. ಒಂದಷ್ಟು ಗ್ಯಾಪ್ ಬಳಿಕ ಮತ್ತೆ ಪಂದ್ಯ ಸ್ಟಾರ್ಟ್ ಆಗಿದ್ದು ಅಲ್ಲಿ ಮಳೆ ಬದಲಿಗೆ ಬೆಂಗಳೂರು ಆಟಗಾರರು ರನ್ ಮಳೆ ಹರಿಸಿದ್ರು. 20 ಓವರ್ಗಳಲ್ಲಿ 2018 ರನ್ ಸಿಡಿಸಿದ್ರು. ಇಲ್ಲೂ ಒಂದು ಸ್ಪೆಷಾಲಿಟಿ ಏನಂದ್ರೆ ಈ ಟಾರ್ಗೆಟ್ನಲ್ಲೂ 18 ನಂಬರ್ ಇತ್ತು. ಈ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ಗೆ ಪ್ಲೇ ಆಫ್ ತಲುಪಲು 201 ರನ್ ಸಿಡಿಸಿದ್ರೂ ಸಾಕಾಗಿತ್ತು. ಆದ್ರೆ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ, ಬೆಂಗಳೂರು ಆಟಗಾರರ ಅದ್ಬುತ ಪ್ರದರ್ಶನದ ಮೂಲಕ ಸಿಎಸ್ಕೆ 20 ಓವರ್ಗಳಲ್ಲಿ 191 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ ಆರ್ಸಿಬಿ ಯಾರೂ ಊಹಿಸದ ರೀತಿಯಲ್ಲಿ ಪ್ಲೇ ಆಫ್ಗೆ ರಾಯಲ್ ಆಗೇ ಲಗ್ಗೆ ಇಟ್ಟಿದೆ. ಇಲ್ಲಿ ಒಂದು ವಿಶೇಷ ಏನಂದ್ರೆ ಬೆಂಗಳೂರು ತಂಡವನ್ನ ಸೋಲಿಸುವ ಮೂಲಕ ಚೆನ್ನೈ ತಂಡ ಟೂರ್ನಿಗೆ ಸ್ವಾಗತ ಕೋರಿತ್ತು. ಆದ್ರೆ ಬೆಂಗಳೂರು ತಂಡ ಅದೇ ಸೋಲಿನ ತಿರುಗೇಟು ನೀಡುವ ಮೂಲಕ ಪ್ಲೇ ಆಫ್ನಿಂದ ಹೊರದಬ್ಬಿದೆ. ಒಟ್ಟಾರೆ ಆರ್ಸಿಬಿ ಆರಂಭದಲ್ಲಿ ಸತತ ಸೋಲನ್ನ ಕಂಡ್ರೂ ಸೆಕೆಂಡ್ ಆಫ್ನಲ್ಲಿ ಸತತ ಗೆಲುವಿನ ಮೂಲಕ ಟಾಪ್ 4ಗೆ ಎಂಟ್ರಿ ಕೊಟ್ಟಿದೆ. ಇದೇ ಗೆಲುವಿನ ಓಟ ಮುಂದುವರಿಯಲಿ ಟ್ರೋಫಿಯನ್ನ ಎತ್ತಿ ಹಿಡಿಯಲಿ ಅಂತಾ ಪ್ಯಾನ್ಸ್ ಹಾರೈಸುತ್ತಿದ್ದಾರೆ.