RCB ಪ್ಲೇ ಆಫ್ ಕನಸು ಭಗ್ನ? – 4 ಮ್ಯಾಚ್ ಗಳಿಗಿಲ್ಲ ವಿಲ್ ಜಾಕ್ಸ್!
ಅಭಿಮಾನಿಗಳ ಕನಸು ಛಿದ್ರವಾಗುತ್ತಾ?

RCB ಪ್ಲೇ ಆಫ್ ಕನಸು ಭಗ್ನ? – 4 ಮ್ಯಾಚ್ ಗಳಿಗಿಲ್ಲ ವಿಲ್ ಜಾಕ್ಸ್!ಅಭಿಮಾನಿಗಳ ಕನಸು ಛಿದ್ರವಾಗುತ್ತಾ?

ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿತ್ತು. ಸತತ ಸೋಲುಗಳಿಂದ ಕುಗ್ಗಿ ಹೋಗಿದ್ದ ಆರ್​ಸಿಬಿ ಫ್ಯಾನ್ಸ್​ಗೆ ಹೊಸ ಹುರುಪು ತಂದಿತ್ತು. ಇನ್ನೇನು ಪ್ಲೇಆಫ್ ಹಾದಿ ಮುಚ್ಚೇಹೋಯ್ತು ಅನ್ನುವಾಗ್ಲೇ, ಇಲ್ಲ ಇನ್ನೂ ಅವಕಾಶ ಇದೆ ಅನ್ನೋ ಲೆಕ್ಕಾಚಾರ ಹಾಕಿದ್ರು. ಆದ್ರೆ ಆರ್​ಸಿಬಿಗೆ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇರುವಂತೆಯೇ ಬಿಗ್ ಶಾಕ್ ಎದುರಾಗಿದೆ. ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್​ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅಷ್ಟಕ್ಕೂ ಯಾರು ಆ ಪ್ಲೇಯರ್..? ಆರ್​ಸಿಬಿ ತಂಡಕ್ಕೆ ಹೊಡೆತ ಬೀಳುತ್ತಾ..? ಪ್ಲೇಆಫ್ ಕಥೆ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 10 ಪಂದ್ಯ.. 7 ಸೋಲು.. 3 ಜಯ – RCB ಪ್ಲೇ ಆಫ್ ಚಾನ್ಸ್ ಇನ್ನೂ ಇದ್ಯಾ?

ಭಾರತದಲ್ಲಿ ಐಪಿಎಲ್ ಫೀವರ್ ಜೋರಾಗಿದ್ದು ಇದಾದ ಬೆನ್ನಲ್ಲೇ 2024ರ ಐಸಿಸಿ ಮೆಗಾ ಸಮರ ಟಿ20 ವಿಶ್ವಕಪ್​ ಶುರುವಾಗಲಿದೆ. ವಿಶ್ವಯುದ್ಧಕ್ಕೆ ಈಗಾಗಲೇ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಐಪಿಎಲ್​ ಬೆನ್ನಲ್ಲೇ ಎಲ್ಲರ ಗಮನ ಟಿ20 ವಿಶ್ವಕಪ್​​ನತ್ತ ನೆಟ್ಟಿದೆ. ಇದರ ಮಧ್ಯೆ ಆರ್​​​​ಸಿಬಿ ಬಿಗ್​ ಶಾಕ್​ ಎದುರಾಗಿದೆ.  ಜೂನ್​ನಲ್ಲಿ ನಡೆಯಲಿರೋ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್​​, ಸೌಥ್​​ ಆಫ್ರಿಕಾ, ಇಂಗ್ಲೆಂಡ್‌, ಭಾರತ ಮತ್ತು ಆಸ್ಟ್ರೇಲಿಯಾ 15 ಸದಸ್ಯರನ್ನು ಒಳಗೊಂಡ ಬಲಿಷ್ಠ ತಂಡ ಪ್ರಕಟಿಸಿವೆ. ಟಿ20 ವಿಶ್ವಕಪ್​ಗಾಗಿ ಇಂಗ್ಲೆಂಡ್​ ತಂಡದ ಆಟಗಾರರು ಐಪಿಎಲ್​​​ನಿಂದ ದೂರ ಸರಿಯಬೇಕಿದೆ. ಆದ್ದರಿಂದ ಇದು ಐಪಿಎಲ್‌ ತಂಡಗಳ ಮೇಲೆ ಪ್ರಭಾವ ಬೀರಲಿದ್ದು, ಆರ್​​ಸಿಬಿಗೂ ಸಂಕಷ್ಟ ಎದುರಾಗಲಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯ ಹೀರೋ ಆಗಿದ್ದ ವಿಲ್ ಜಾಕ್ಸ್ ಕೂಡ ತವರಿಗೆ ಮರಳಲಿದ್ದಾರೆ.

ವಿಲ್ ಜಾಕ್ಸ್ ಶಾಕ್! 

ಐಪಿಎಲ್​ ಪ್ಲೇ ಆಫ್​ ಗೂ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​​​ ಇಂಗ್ಲೆಂಡ್​ ತಂಡ ಸೇರಿಕೊಳ್ಳಲಿದ್ದಾರೆ. ಟಿ20 ವಿಶ್ವಕಪ್​ಗೆ ಮುನ್ನ ಮೇ 22ರಿಂದ ಇಂಗ್ಲೆಂಡ್​​ ತಂಡವು ಪಾಕ್​ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್​​ ವಿಲ್​ ಜಾಕ್ಸ್​​​ ಇಂಗ್ಲೆಂಡ್​ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ವಿಲ್ ಜಾಕ್ಸ್ ಆರ್​ಸಿಬಿ ಪರ ಆಡೋದು ಡೌಟಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ವಿಲ್​​ ಜಾಕ್ಸ್​​​ ಕೇವಲ 41 ಬಾಲ್​ನಲ್ಲಿ 100 ರನ್ ಚಚ್ಚಿದ್ರು. ಬರೋಬ್ಬರಿ 10 ಸಿಕ್ಸರ್​​, 5 ಫೋರ್​ ಸಿಡಿಸಿದ್ರು. ಇವರನ್ನು ಆರ್​​ಸಿಬಿ ತಂಡದ ಜೂನಿಯರ್​ ಎಬಿಡಿ ಎಂದೇ ಹೇಳಲಾಗುತ್ತಿದೆ. ಇದರ ಮಧ್ಯೆ ವಿಲ್​ ಜಾಕ್ಸ್​ ಇಂಗ್ಲೆಂಡ್​ ಮತ್ತೆ ವಾಪಸ್​ ಆಗಲಿದ್ದು, ಇದು ಆರ್​​ಸಿಬಿಗೆ ಆಘಾತ ತಂದಿದೆ.ಇನ್ನು, ಆಂಗ್ಲರ ತಂಡವನ್ನು ಜೋಸ್​ ಬಟ್ಲರ್​ ಮುನ್ನಡೆಸಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್​ ನಲ್ಲಿಯೂ ಬಟ್ಲರ್​ ರಾಜಸ್ತಾನ ರಾಯಲ್ಸ್ ಪರ 2 ಬಾರಿ ಶತಕ ಸಿಡಿಸಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇವರೊಂದಿಗೆ ಫಿಲ್ ಸಾಲ್ಟ್, ರೀಸ್ ಟೋಪ್ಲಿ, ವಿಲ್ ಜ್ಯಾಕ್ಸ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಜಾನಿ ಬೇರ್​ಸ್ಟೋ, ಮೊಯೀನ್ ಅಲಿ ಕೂಡ  ತವರಿಗೆ ಮರಳಲಿದ್ದಾರೆ. ವಿಶ್ವಕಪ್ ತಂಡವು ಮೇ 31 ರಂದು ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್‌ನ ಆರಂಭಿಕ ಗುಂಪು ಪಂದ್ಯದ ಮೊದಲು ಕೆರಿಬಿಯನ್‌ಗೆ ಹಾರಲಿದೆ.

ಐಪಿಎಲ್​​ ಸೀಸನ್​ 17ರಲ್ಲಿ ಸತತ ಸೋಲುಗಳಿಂದಲೇ ಆರ್​ಸಿಬಿ ಅಭಿಮಾನಿಗಳಿಗೆ ಬಾರೀ ನಿರಾಸೆ ಮೂಡಿಸಿತ್ತು. ಹೊಸ ಅಧ್ಯಾಯ ಅಂತಾ ಬಂದವ್ರು ಹಳೇ ಸಂಪ್ರದಾಯವನ್ನೇ ಮುಂದುವರಿಸಿದ್ರು. ಆದ್ರೆ ಕಳೆದ ಎರಡು ಪಂದ್ಯಗಳ ಬಳಿಕ ಆರ್​​ಸಿಬಿ ಕಮ್​ಬ್ಯಾಕ್​ ಕಂಡು ಫುಲ್ ಹ್ಯಾಪಿಯಾಗಿದ್ದಾರೆ. ಜೊತೆಗೆ ಪ್ಲೇ ಆಫ್ ಲೆಕ್ಕಾಚಾರ ಕೂಡ ನಡೀತಿದೆ.

ನಾಲ್ಕು ಪಂದ್ಯ ಸ್ಪೆಷಲ್! 

ಆರ್ ಸಿಬಿ ಪ್ರಸ್ತುತ ಐಪಿಎಲ್ ಸೀಸನ್​ನಲ್ಲಿ ಈವರೆಗೂ 10 ಪಂದ್ಯಗಳನ್ನ ಆಡಿದೆ. ಆದ್ರೆ ಆಡಿರೋ 10 ಮ್ಯಾಚ್​ಗಳಲ್ಲಿ ಗೆದ್ದಿರೋದು 3 ಪಂದ್ಯಗಳನ್ನ ಅಷ್ಟೇ. ಇನ್ನು ಉಳಿದ 7 ಪಂದ್ಯಗಳನ್ನ ಕೈ ಚೆಲ್ಲಿದೆ. ಸದ್ಯ 6 ಪಾಯಿಂಟ್​​ಗಳನ್ನ ಹೊಂದಿದ್ದು ಪಾಯಿಂಟ್ಸ್ ಟೇಬಲ್ ನಲ್ಲಿ ಕೊನೇ ಸ್ಥಾನದಲ್ಲಿದೆ. ಆದ್ರೆ ಕಳೆದ ಎರಡು ಮ್ಯಾಚ್​ಗಳ ಭರ್ಜರಿ ಫರ್ಫಾಮೆನ್ಸ್ ನೋಡಿ ಪ್ಲೇಆಫ್​ಗೆ ಹೋಗ್ಬೋದು, ಚೆನ್ನಾಗಿ ಆಡ್ಬೇಕು ಅಷ್ಟೇ ಅಂತಿದ್ದಾರೆ. ಅದ್ರಲ್ಲೂ ಗುಜರಾತ್ ವಿರುದ್ಧ ಸಿಡಿದಿದ್ದ ವಿಲ್ ಜಾಕ್ಸ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದರು. ಮುಂದಿನ 4 ಪಂದ್ಯಗಳನ್ನ ಗೆದ್ದರೆ 14 ಅಂಕಗಳನ್ನು ಕಲೆ ಹಾಕಲಿದೆ. ಭಾರೀ ಅಂತರದಲ್ಲಿ ಜಯಭೇರಿ ಭಾರಿಸಿದ್ರೆ, ರನ್​​ರೇಟ್​ ಕೂಡ ಹೆಚ್ಚಲಿದೆ. ಆಗ ಮಾತ್ರ ಪ್ಲೇಆಫ್​ಗೆ ಹೋಗೋ ಚಾನ್ಸ್ ಇರಲಿದೆ ಎಂದುಕೊಳ್ತಿದ್ರು. ಮೇ 4ರಂದು ಗುಜರಾತ್ ವಿರುದ್ಧ, ಮೇ 9ರಂದು ಪಂಜಾಬ್ ವಿರುದ್ಧ, ಮೇ 12ರಂದು ಡೆಲ್ಲಿ ವಿರುದ್ಧ ಹಾಗೇ ಮೇ 18 ರಂದು ಚೆನ್ನೈ ವಿರುದ್ಧ ಮ್ಯಾಚ್ ನಡೆಯಲಿದೆ.

ಆರ್​ಸಿಬಿ ಪರ ಅಬ್ಬರಿಸಿ ಎಬಿಡಿಯನ್ನ ನೆನಪಿಸಿದ್ದ ವಿಲ್ ಜಾಕ್ಸ್ ಇದೀಗ ನಾಕೌಟ್ ಪಂದ್ಯಗಳ ವೇಳೆ ತವರಿಗೆ ಮರಳಲಿಸಿದ್ದಾರೆ. ಅವರ ಅನುಪಸ್ಥಿತಿ ಅಭಿಮಾನಿಗಳಿಗೂ ಭಾರೀ ನಿರಾಸೆ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *