RCB ಹೆಗಲೇರಿದ ಇಂಜುರಿ ಭೂತ.. LSG ಪಂದ್ಯಕ್ಕಿಲ್ವಾ ಟಿಮ್ & ರಜತ್? – ಪ್ಲೇಆಫ್ಸ್ ಫೈಟ್ ಗೆ ಅಸಲಿ ಚಾಲೆಂಜ್

RCB ಹೆಗಲೇರಿದ ಇಂಜುರಿ ಭೂತ.. LSG ಪಂದ್ಯಕ್ಕಿಲ್ವಾ ಟಿಮ್ & ರಜತ್? – ಪ್ಲೇಆಫ್ಸ್ ಫೈಟ್ ಗೆ ಅಸಲಿ ಚಾಲೆಂಜ್

ಹೈದ್ರಾಬಾದ್ ವಿರುದ್ಧ ಸೋತಿರೋ ಆರ್​ಸಿಬಿ ನೆಕ್ಸ್​​ಟ್ ಲಕ್ನೋ ಚಾಲೆಂಜ್ ಎದುರಿಸಬೇಕಿದೆ. ಈ ಮ್ಯಾಚ್ ಕೂಡ ಏಕನಾ ಸ್ಟೇಡಿಯಮ್​ನಲ್ಲೇ ನಡೆಯಲಿದೆ. ಬಟ್ ಎಲ್​​ಎಸ್​​ಜಿ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ತಂಡಕ್ಕೆ ಸಾಕಷ್ಟು ಸವಾಲುಗಳೇ ಇವೆ. ಆನ್ ಫೀಲ್ಡ್​ಗಿಂತ ಆಫ್​ಫೀಲ್ಡ್ ಪ್ರಾಬ್ಲಮ್ಸ್​​ಗೆ ಸಲ್ಯೂಷನ್ ಹುಡುಕ್ಬೇಕಿದೆ.

ಇದನ್ನೂ ಓದಿ: ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್‌? – ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಣಬೀರ್‌ ಜೋಡಿ?

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಮೇ 25 ಅಂದ್ರೆ ಇವತ್ತು 2025ರ ಐಪಿಎಲ್​ನ ಗ್ರ್ಯಾಂಡ್ ಫಿನಾಲೆ ನಡೀಬೇಕಿತ್ತು. ಒಂದು ತಂಡ ಚಾಂಪಿಯನ್ ಪಟ್ಟಕ್ಕೇರಿ ಮೆರೆದಾಡ್ತಿತ್ತು. ಬಟ್ 9 ದಿನಗಳ ಕಾಲ ಪೋಸ್ಟ್​ಪೋನ್​ನಿಂದಾಗಿ ಇನ್ನೂ ಕೂಡ ಲೀಗ್ ಹಂತದ ಪಂದ್ಯಗಳು ನಡೀತಿವೆ. ಮೇ 27ಕ್ಕೆ ಲೀಗ್ ಸ್ಟೇಜ್​ನ ಮ್ಯಾಚ್​ಗಳಿಗೆ ತೆರೆ ಬೀಳಲಿದ್ದು ಆ ಬಳಿಕ ನಾಕೌಟ್ ಫೈಟ್ ಆರಂಭ ಆಗುತ್ತೆ. ಇಂಟ್ರೆಸ್ಟಿಂಗ್ ಅಂದ್ರೆ ಆರ್​ಸಿಬಿ ವರ್ಸಸ್ ಎಲ್​ಎಸ್​ಜಿ ನಡುವಿನ ಪಂದ್ಯವೇ ಈ ಸೀಸನ್​ನಲ್ಲಿ ಗುಂಪು ಹಂತದ ಕೊನೇ ಪಂದ್ಯ. ಈ ಪಂದ್ಯವನ್ನ ಆರ್​ಸಿಬಿ ಗೆದ್ರೆ ಟ್ರೋಫಿ ಜರ್ನಿ ಮತ್ತಷ್ಟು ಈಸಿಯಾಗುತ್ತೆ. ಸೋ 18ನೇ ಸೀಸನ್​ನ ಆರ್​ಸಿಬಿ ಪಾಲಿಗೆ ಸ್ಪೆಷಲ್ ಮಾಡ್ಬೇಕು ಅಂದ್ರೆ ಟೀಮ್​ನಲ್ಲಿರೋ ಈ ಸಮಸ್ಯೆಗಳೆಲ್ಲಾ ಕ್ಲಿಯರ್ ಆಗ್ಬೇಕಿದೆ.

ಕ್ರೂಶಿಯಲ್ ಟೈಮಲ್ಲೇ ಆರ್ ಸಿಬಿ ಹೇಗಲೇರಿದ ಇಂಜುರಿ ಸಮಸ್ಯೆ!

ಆರ್​ಸಿಬಿ ಟೀಂ ಪ್ಲೇಆಫ್​ಗೆ ಕ್ವಾಲಿಫೈ ಆಗಿದ್ದೇ ಆಗಿದ್ದು. ಒಂದಿಲ್ಲೊಂದು ಸಮಸ್ಯೆ ಎದುರಾಗ್ತಾನೇ ಇದೆ. ಸತತ ನಾಲ್ಕು ಪಂದ್ಯಗಳನ್ನ ಗೆದ್ದು ಒಳ್ಳೆ ಫಾರ್ಮ್​ನಲ್ಲಿ ಇದ್ದಾಗ್ಲೇ ಪೋಸ್ಟ್​ಪೋನ್ ಶಾಕ್ ಎದುರಾಗಿತ್ತು. ಆ ಬಳಿಕ ಹೋಂ ಗ್ರೌಂಡ್​ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯ ಮಳೆಗೆ ಬಲಿ. ಅಲ್ಲಿಂದ ಮ್ಯಾಚ್ ಶಿಫ್ಟ್.. ಸ್ಟೇಡಿಯಂ ಚೇಂಜ್.. ಈಗ ಇಂಜುರಿ ಸಮಸ್ಯೆ. ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೊಡೋವ್ರೇ ಗಾಯಕ್ಕೆ ತುತ್ತಾಗಿದ್ದು ದೊಡ್ಡ ಹೊಡೆತ ನೀಡ್ತಿದೆ.

ಆರ್ ಸಿಬಿಗೆ ಇಂಜುರಿ ಭೂತ!

ಆರ್​ಸಿಬಿ ಪಾಲಿಗೆ ಬೌಲಿಂಗ್ ಬ್ರಹ್ಮಾಸ್ತ್ರವಾಗಿರೋ ಜೋಶ್ ಹೇಜಲ್​ವುಡ್ ಇಂಜುರಿಯಾಗಿದ್ದೇ ತಂಡಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಪವರ್ ಪ್ಲೇ ಮತ್ತು ಡೆತ್ ಓವರ್​ಗಳಲ್ಲಿ ಬ್ರಹ್ಮಾಸ್ತ್ರವಾಗಿದ್ರು. ಬಟ್ ಚೆನ್ನೈ ವಿರುದ್ಧದ ಪಂದ್ಯದ ವೇಳೆಗೆ ಭುಜನ ನೋವಿನಿಂದಾಗಿ ಪಂದ್ಯ ಮಿಸ್ ಮಾಡಿಕೊಂಡಿದ್ರು. ಆ ಬಳಿಕ ಆಸ್ಟ್ರೇಲಿಯಾಕ್ಕೆ ವಾಪಸ್ ಆಗಿದ್ದ ಮತ್ತೆ ಬಂದಿರಲಿಲ್ಲ. ಅಲ್ದೇ ಹೈದ್ರಾಬಾದ್ ವಿರುದ್ಧದ ಪಂದ್ಯಕ್ಕೆ ಹೇಜಲ್​ವುಡ್ ಇಲ್ಲದ್ದೂ ಕೂಡ ರನ್ ಕಂಟ್ರೋಲ್ ಮಾಡೋಕೆ ಸಾಧ್ಯವಾಗಿಲ್ಲ. ಇನ್ನು ಆರ್​ಸಿಬಿ ಪರ 10 ಪಂದ್ಯಗಳಲ್ಲಿ 17.27 ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು RCB ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. RCB ತಂಡವು ಮೊದಲ ಬಾರಿಗೆ IPL ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುವ ಆಟಗಾರರಲ್ಲಿ ಒಬ್ಬರು. ಹಾಗೇ ಆರ್​ಸಿಬಿಯ ಕ್ಯಾಪ್ಟನ್ ರಜತ್ ಪಾಟಿದಾರ್ ಕೂಡ ಇಂಜುರಿಗೆ ಒಳಗಾಗಿದ್ದಾರೆ. ಹಾಗೇ ಫಾರ್ಮ್ ಕಳ್ಕೊಂಡಿದ್ದಾರೆ. ಈ ಸೀಸನ್​ನ ಮೊದಲ 6 ಪಂದ್ಯಗಳಲ್ಲಿ 157.14 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ 209 ರನ್ ಗಳಿಸಿದರು. ಆದರೆ ಇದ್ದಕ್ಕಿದ್ದಂತೆ ಫಾರ್ಮ್ ಕುಸಿದಿದ್ದು, ಮುಂದಿನ 5 ಪಂದ್ಯಗಳಲ್ಲಿ 90.56 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 48 ರನ್‌ಗಳನ್ನು ಗಳಿಸಿದ್ದಾರಷ್ಟೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ 18 ರನ್ ಗಳಿಸಿ ಔಟಾದರು. ಹೀಗಾಗಿ ಲಕ್ನೋ ವಿರುದ್ಧದ ಪಂದ್ಯದ ವೇಳೆಗೆ ಕಂಪ್ಲೀಟ್ ಫಿಟ್ ಌಂಡ್ ಫೈನ್ ಆಗಿ ಬರ್ಬೇಕು. ಇನ್ನು ಆರ್​ಸಿಬಿಯ ಆಪತ್ಬಾಂಧವ ಅಂತಾ ಕರೆಸಿಕೊಳ್ಳೋ ಟಿಮ್ ಡೇವಿಡ್ ಇಂಜುರಿ ಕೂಡ ದೊಡ್ಡ ತಲೆ ನೋವಾಗಿದೆ  ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ವೇಳೆ ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಟಿಮ್ ಡೇವಿಡ್ ಗಾಯಗೊಂಡಿದ್ದಾರೆ. ಓಡಿ ಹೋಗಿ ಚೆಂಡು ಹಿಡಿಯುವಾಗ ಇಂಜುರಿಯಾಗಿ ಅರ್ಧಕ್ಕೆ ಮೈದಾನದ ತೊರೆದಿದ್ರು. ಬ್ಯಾಟಿಂಗ್ ವೇಳೆ ಓಡೋಕೂ ಕೂಡ ಆಗ್ತಾ ಇರ್ಲಿಲ್ಲ.

ಹೀಗೆ ಇವ್ರೆಲ್ಲಾ ಇಂಜುರಿಯಾಗಿರೋದು ಕೂಡ ತಂಡಕ್ಕೆ ದೊಡ್ಡ ಹೊಡೆತ ನೀಡ್ತಿದೆ. ಪ್ಲೇಆಫ್ಸ್ ವೇಳೆಗೆ ಇವ್ರೆಲ್ಲಾ ಕಂಪ್ಲೀಟ್ ಫಿಟ್ ಆಗಿ ಟೀಂ ಸೇರಿಕೊಳ್ಬೇಕು. ಪ್ಲೇಆಫ್ಸ್ ವೇಳೆಗೆ ರೊಮ್ಯಾರಿಯೋ ಶೆಫರ್ಡ್, ಲುಂಗಿ ಎನ್ ಗಿಡಿ, ಜೇಕಬ್ ಬೆಥೆಲ್ ನ್ಯಾಷನಲ್ ಡ್ಯೂಟಿಗಾಗಿ ವಾಪಸ್ ಹೋಗೋದ್ರಿಂದ ಪಾಟಿದಾರ್, ಟಿಮ್ ಡೇವಿಡ್, ಹೇಜಲ್ ವುಡ್ ಕಂಪ್ಲೀಟ್ ರಿಕವರ್ ಆಗ್ಬೇಕಿದೆ. ಇಲ್ದಿದ್ರೆ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಪುಣ್ಯಕ್ಕೆ ಇಂಜುರಿಯಿಂದಾಗಿ 2 ಪಂದ್ಯಗಳಲ್ಲಿ ಹೊರಗುಳಿದಿದ್ದ ಫಿಲ್ ಸಾಲ್ಟ್ ತಂಡಕ್ಕೆ ಮರಳಿರೋದು ಸ್ವಲ್ಪ ಸಮಾಧಾನಕರ ವಿಚಾರ.

Shwetha M

Leave a Reply

Your email address will not be published. Required fields are marked *