RCB ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ? ನಾಲ್ಕಕ್ಕೆ 4 ಗೆಲ್ಲುತ್ತಾ?, ಲಾಸ್ಟಲ್ಲಿ ಕೈ ಕೊಡುತ್ತಾ?
ಟಾಪ್‌ನಲ್ಲಿದ್ರೂ ಬೆಂಗಳೂರು ಸೇಫ್ ಅಲ್ವಾ?

ಈ ಬಾರಿಯ ಐಪಿಎಲ್ ನಲ್ಲಿ ಪ್ರತಿಯೊಂದು ತಂಡವೂ ತಲಾ 14 ಪಂದ್ಯಗಳನ್ನು ಆಡುತ್ತಿದೆ. ರಾಯಲ್ ಚಾಲೆಂಡರ್ಸ್ , ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ 10 ಪಂದ್ಯಗಳನ್ನು ಪೂರ್ತಿಗೊಳಿಸಿವೆ. ಆಡಿರುವ 10 ಪಂದ್ಯಗಳಿಂದ 7 ಗೆಲುವು ಮತ್ತು 3 ಸೋಲುಗಳೊಂದಿಗೆ 14 ಅಂಕಗಳನ್ನು ಕಲೆ ಹಾಕಿರುವ ಆರ್ ಸಿಬಿ ಬಲಿಷ್ಠವಾಗಿ ಗೋಚರಿಸುತ್ತಿದೆ. ಗುಜರಾತ್ ಜೈಂಟ್ಸ್ ಮತ್ತು ಆರ್‌ಸಿಬಿ ನಡುವೆ ಹಾವು ಏಣಿಯ ಆಟ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ದಿಲ್ಲಿ ಕ್ಯಾಪಿಟಲ್ಸ್ ಗಳು ಸಹ ಕ್ರಮವಾಗಿ 10 ಮತ್ತು 9 ಪಂದ್ಯಗಳಿಂದ ಅಷ್ಟೇ ಅಂಕಗಳನ್ನು ಕಲೆಹಾಕಿ ನಂತರದ ಸ್ಥಾನಗಳಲ್ಲಿವೆ.
ಅಂಕಪಟ್ಟಿಯಲ್ಲಿ ಗುಜರಾತ್ ಬಲಿಷ್ಠ
ಆದರೆ ಹತ್ತೂ ತಂಡಗಳಲ್ಲಿ ಗುಜರಾತ್ ತಂಡವೇ ಅಂಕಪಟ್ಟಿಯಲ್ಲಿ ಬಲಿಷ್ಠವಾಗಿ ಗೋಚರಿಸುತ್ತಿದೆ. ಯಾಕೆಂದರೆ ಕಡಿಮೆ ಪಂದ್ಯಗಳಿಂದ ಹೆಚ್ಚು ಅಂಕ ಗಳಿಸಿರುವ ತಂಡವಿದು. ಉತ್ತಮ ರನ್ ರೇಟ್ ಅನ್ನು ಸಹ ಹೊಂದಿದೆ. ಹೀಗಾಗಿ ಜಿಟಿ ಮತ್ತೆ ಅಗ್ರಸ್ಥಾನಿಯಾಗಲಿದೆ.
ಈ ಹಾವು ಏಣಿಯಾಟದಲ್ಲಿ ಆರ್ ಸಿಬಿ ತನ್ನ ನೆಲೆ ಕಂಡುಕೊಳ್ಳಬೇಕಾದ ಅಗತ್ಯವಿದೆ. ಪ್ಲೇ ಆಫ್ ರೇಸ್ ನಲ್ಲಿ 16 ಅಂಕ ಗಳಿಸಿದಲ್ಲಿ ಸೇಫ್ ಎಂದರ್ಥ. ಅಂದರೆ ಆರ್ ಸಿಬಿ ಇನ್ನುಳಿದ 4 ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಅಗ್ರ 4ರೊಳಗೆ ಆಯ್ಕೆ ಆಗುವುದು ಖಚಿತ. ಎರಡಕ್ಕಿತ ಹೆಚ್ಚು ಗೆಲುವು ರಜತ್ ಪಾಟೀದಾರ್ ಬಳಗವನ್ನು ಮತ್ತಷ್ಟು ಸುರಕ್ಷಿತ ಮತ್ತು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲುದು. ಆಗ ಉಳಿದ ತಂಡಗಳ ಸೋಲು ಗೆಲುವುಗಳು RCBಯ ಪ್ಲೇ ಆಫ್ ಹಾದಿಯಲ್ಲಿ ಸಮಸ್ಯೆಯನ್ನು ಉಂಟು ಮಾಡಲಾರದು.
ಆರ್ ಸಿಬಿಗೆ ಬಾಕಿ ಇರುವ ಪಂದ್ಯ ಮೇ 3ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ಮೇ 9ರಂದು ಲಖನೌ ಸೂಪರ್ ಜೈಂಟ್ಸ್, ಮೇ 13ರಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಮೇ 17ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ ಸೆಣೆಸಬೇಕಿದೆ. ಇದರಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಹೊರತುಪಡಿಸಿದರೆ ಉಳಿದ ಮೂರು ಪಂದ್ಯಗಳು ಸಹ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಆರ್ ಸಿಬಿಯ ಪ್ಲಸ್ ಪಾಯಿಂಟ್.
ಜೊತೆಗೆ ತವರು ನೆಲದಲ್ಲಿ ಆರ್ ಸಿಬಿ ಸೋಲುವುದೇ ಹೆಚ್ಚು ಎಂಬ ಅಪವಾದದಿಂದ ಹೊರ ಬರಲು ಸಹ ಒಳ್ಳೆಯ ಅವಕಾಶ.. ಈ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನೂ ಗೆದ್ದಲ್ಲಿ ಅಗ್ರಸ್ಥಾನಿಯಾಗಿಯೇ ಪ್ಲೇ ಆಫ್ ಪ್ರವೇಶಿಸುವ ಎಲ್ಲಾ ಸಾಧ್ಯತೆಗಳಿವೆ. ಎರಡರಿಂದ ಮೂರು ಗೆದ್ದಲ್ಲಿ ಅಗ್ರ ಮೂರರೊಳಗೆ ಮತ್ತು ಒಂದು ಗೆದ್ದಲ್ಲಿ ನಾಲ್ಕರೊಲ್ಲಿ ಒಂದು ತಂಡವಾಗಿ ಪ್ಲೇ ಆಫ್ ನಲ್ಲಿ ಸ್ಥಾನ ನಿಶ್ಚಿತ ಎಂದು ಈಗಿನ ಲೆಕ್ಕಾಚಾರವಾಗಿದೆ. ಆದ್ರೆ ಈ ಬಾರಿ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಸಿಎಸ್‌ಕೆ ಕೊನೆಯಿಂದ ಮೊದಲ ಸ್ಥಾನವನ್ನ ಪಡೆದಿದ್ದು, ಸಿಎಸ್‌ಕೆ ಮತ್ತು ಆರ್ ಆರ್‌ಗೆ ಪ್ಲೇ ಕನಸನ್ನ ಕೈ ಬಿಟ್ಟಿವೆ.
ಯಾವ ತಂಡ ಮಾಡದ ಸಾಧನೆ ಮಾಡಿದ ಆರ್‌ಸಿಬಿ
ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡವು ತವರಿನಾಚೆಯೇ ದಾಖಲೆಯ 6ನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ತವರಿನಾಚೆಯೇ ಸತತ 6 ಪಂದ್ಯ ಗೆದ್ದ ಮೊದಲ ತಂಡ ಎನ್ನುವ ಅಪರೂಪದ ದಾಖಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾತ್ರವಾಗಿದೆ. ತವರಿನ ಹೊರಗೆ ಇನ್ನೊಂದು ಪಂದ್ಯ ಆಡಲಿದ್ದು ಅದನ್ನೂ ಗೆದ್ದರೆ ಅದು ಮತ್ತೊಂದು ದಾಖಲೆಯಾಗಲಿದೆ. ಮೇ 9ರಂದು ಲಕ್ನೋದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದ್ದು ಇದು ಆರ್ ಸಿಬಿಯ ಕೊನೆಯ ತವರಿನ ಹೊರಗಿನ ಪಂದ್ಯವಾಗಲಿದೆ. ಒಟ್ನಲ್ಲಿ ಇಷ್ಟು ಟೈಂ ಅವರ್ ಸೋತ್ರೆ, ಇವರ್ ಸೋತ್ರೆ ನಾವ್ ಪ್ಲೇ ಆಫ್‌ಗೆ ಹೋಗಬಹುದು ಅನ್ನೋ ಲೆಕ್ಕಚಾರವನ್ನ ಹಾಕ್ತಾ ಇದ್ದವೆ. ಆದ್ರೆ ಈಗ ಆ ಟೆನ್ಷನ್ ಇಲ್ಲ,. ಒಂದೇ ಒಂದು ಪಂದ್ಯ ಗೆದ್ದರು ಪ್ಲೇ ಆಫ್‌ಗೆ ಹೋಗಬಹುದು.. ಎಲ್ಲಾ ಪಂದ್ಯ ಗೆದ್ದರೇ ಫೈನಲ್‌ಗೆ ಹೋಗಬಹುದು.. ಆರ್‌ಸಿಬಿ ಖರದ್ ಈ ಸಲ ಚೇಂಜ್ ಆಗಿದ್ದು ಮಾತ್ರ ಸುಳ್ಳಲ್ಲ..