LSG ಮಣಿಸಿದ್ರೆ RCBಯೇ ನಂ.1 – ರಜತ್ Vs ಪಂತ್ ಪಡೆ ಪ್ಲಸ್ ಏನು?

ಹಿಂದಿನ 17 ಸೀಸನ್ಗಳದ್ದೇ ಒಂದು ಲೆಕ್ಕ. ಈ ಬಾರಿಯ 18ನೇ ಸೀಸನ್ದೇ ಮತ್ತೊಂದು ಲೆಕ್ಕ. ಪಂದ್ಯದಿಂದ ಪಂದ್ಯಕ್ಕೆ ಆರ್‌ಸಿಬಿ ಫ್ಯಾನ್ಸ್ ಫುಲ್ ಹ್ಯಾಪಿಯಾಗುವಂಥ ರಿಸಲ್ಟೇ ಬರ್ತಿದೆ. ಆಟಗಾರರಂತೂ ಒಬ್ರಿಗಿಂತ ಒಬ್ರು ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಹೋಂ ಗ್ರೌಂಡ್ನಲ್ಲಿ ಆರಂಭದ ಮೂರು ಪಂದ್ಯಗಳಲ್ಲಿ ಸ್ಟ್ರಗಲ್ ಮಾಡಿದ್ದು ಬಿಟ್ರೆ ಉಳಿದೆಲ್ಲಾ ಪಂದ್ಯಗಳಲ್ಲೂ ನಮ್ದೇ ಗೆಲುವು. ಅವೇ ಪಿಚ್ನಲ್ಲಂತೂ ರೆಡ್ ಆರ್ಮಿ ಸೋಲಿಸಿದವ್ರೇ ಇಲ್ಲ. ಇದೀಗ ಮತ್ತೊಮ್ಮೆ ತವರಿನ ಹೊರಗೆ ಮ್ಯಾಚ್ ಆಡೋಕೆ ರೆಡಿಯಾಗಿರೋ ಆರ್ಸಿಬಿಗೆ ಲಕ್ನೋ ಎದುರಾಗಲಿದೆ. ಪ್ಲೇಆಫ್ ರೇಸ್ನಲ್ಲಿ ಉಳಿಯೋಕೆ ಒದ್ದಾಡ್ತಿರೋ ಎಲ್ಎಸ್ಜಿಗೆ ಶುಕ್ರವಾರದ ಪಂದ್ಯ ಮಾಡು ಇಲ್ಲವೇ ಮಡಿ ಫೈಟ್ ಆಗಿದೆ.
ಇದನ್ನೂ ಓದಿ : RCB ವಿರುದ್ಧ ಗೆದ್ದ ಬಳಿಕ ಮಂಕಾದ್ರಾ KL ರಾಹುಲ್? – DC ಪ್ಲೇ ಆಫ್‌ಗೆ ಹೋಗಲ್ವಾ?
ಲೀಗ್ ಹಂತದ 14 ಪಂದ್ಯಗಳ ಪೈಕಿ ಆರ್‌ಸಿಬಿ ಈ ಸೀಸನ್ನಲ್ಲಿ ಈಗಾಗ್ಲೇ 11 ಪಂದ್ಯಗಳನ್ನ ಆಡಿದೆ. ಬಟ್ ಈ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಲಕ್ನೋ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಆರ್ ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯ ಮೇ 9ರಂದು ಅಂದ್ರೆ ನಾಳೆ ನಡೆಯಲಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಪಂದ್ಯ ಗೆದ್ದರೆ ಆರ್ ಸಿಬಿ ಮತ್ತೆ ಟೇಬಲ್ ಟಾಪರ್ ಆಗಲಿದೆ. ಹಾಗೇ ಪ್ಲೇಆಫ್ ಸ್ಥಾನವೂ ಕೂಡ ಫಿಕ್ಸ್ ಆಗಲಿದೆ. ಆರ್ ಸಿಬಿ ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯಗಳನ್ನ ಆಡಲಿದ್ದು ಕನಿಷ್ಠ ಎರಡು ಮ್ಯಾಚ್ ಗೆದ್ರೂ ಮೊದಲ ಎರಡು ಸ್ಥಾನಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದು. ಇದು ಫೈನಲ್ ಹಾದಿಯನ್ನು ಮತ್ತಷ್ಟು ಸುಗಮವಾಗಿಸುತ್ತೆ.
ಮತ್ತೊಂದೆಡೆ ಲಕ್ನೋ ಸೂಪರ್ ಜೇಂಟ್ಸ್ ತಂಡ ಈ ಸೀಸನ್ನಲ್ಲಿ ಸಾಕಷ್ಟು ಸ್ಟ್ರಗಲ್ ಕಂಡಿದೆ. 11 ಪಂದ್ಯಗಳನ್ನ ಆಡಿದ್ದು ಈ ಪೈಕಿ 5 ಮ್ಯಾಚ್ ವಿನ್ ಆಗಿದ್ರೆ 6 ಪಂದ್ಯಗಳನ್ನ ಸೋತಿದೆ. 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಇನ್ನು ಮೂರು ಮ್ಯಾಚ್ಗಳಿದ್ದು ಎಲ್ಲಾ ಪಂದ್ಯಗಳನ್ನೂ ಗೆದ್ರೂ ಲಕ್ನೋಗೆ ಪ್ಲೇಆಫ್ಗೇರುವ ಅವಕಾಶ ಸಿಗುತ್ತಾ ಅನ್ನೋ ಅನುಮಾನ ಇದೆ. ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿರುವ ಲಕ್ನೋ ಮುಂದಿನ ಮೂರು ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇಆಫ್‌ಗೆ ಅವಕಾಶ ಪಡೀಬಹುದು. ಬಟ್ ತಂಡ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನ ನೋಡ್ತಿದ್ರೆ ಪ್ಲೇಆಫ್ ಹಾದಿ ಕಷ್ಟವಾಗಿದೆ.
ಆರ್ ಸಿಬಿ ಲಕ್ನೋ ವಿರುದ್ಧ ಗೆಲ್ಲೋದ್ರ ಜೊತೆಗೆ ರನ್ ರೇಟ್ನೂ ಕೂಡ ಜಾಸ್ತಿ ಮಾಡಿಕೊಳ್ಳೋ ಚಾಲೆಂಜ್ ಇದೆ. ಈ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಆರ್ ಸಿಬಿ 11 ಪಂದ್ಯಗಳ ಪೈಕಿ 8 ರಲ್ಲಿ ಗೆದ್ದು 3ರಲ್ಲಿ ಸೋತು 16 ಅಂಕಗಳೊಂದಿಗೆ +0.482 ನೆಟ್ ರನ್ ರೇಟ್ ನೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು 16 ಅಂಕಗಳನ್ನೇ ಪಡೆದಿದ್ರೂ +0.793 ನೆಟ್ ರನ್ ರೇಟ್ ನೊಂದಿಗೆ ಗುಜರಾತ್ ಅಗ್ರಸ್ಥಾನದಲ್ಲಿದೆ. ಸೋ ಟೇಬಲ್ ಟಾಪರ್ ಆಗೋಕೆ ಜಸ್ಟ್ ಗೆಲುವು ಮಾತ್ರ ಸಾಕಾಗೋದಿಲ್ಲ. ರನ್ ರೇಟ್ ಕೂಡ ಜಾಸ್ತಿ ಮಾಡಿಕೊಳ್ಳಬೇಕಾದ ಸವಾಲೂ ಆರ್ ಸಿಬಿ ಆಟಗಾರರ ಮುಂದಿದೆ.
ಲಕ್ನೋ ವಿರುದ್ಧದ ಮ್ಯಾಚ್ಗೆ ಆರ್‌ಸಿಬಿ ತಂಡದಲ್ಲಿ 2 ಬದಲಾವಣೆಗಳನ್ನ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವ್ರ ಬದಲಿಗೆ ಮಯಾಂಕ್ರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ಈ ಭಾರಿ ಪಡಿಕ್ಕಲ್ ಬದಲಿಗೆ ಮತ್ತೋರ್ವ ಆಟಗಾರ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ಲೇಯಿಂಗ್ 11 ಸರ್ಜರಿ!
ವಿರಾಟ್ ಕೊಹ್ಲಿ
ಜೇಕಬ್ ಬೆಥೆಲ್
ರಜತ್ ಪಾಟಿದಾರ್
ಮಯಾಂಕ್ ಅಗರ್ವಾಲ್
ಕೃನಾಲ್ ಪಾಂಡ್ಯ
ಜಿತೇಶ್ ಶರ್ಮಾ
ಟಿಮ್ ಡೇವಿಡ್
ರೊಮಾರಿಯೊ ಶೆಫರ್ಡ್
ಭುವನೇಶ್ವರ್ ಕುಮಾರ್
ಯಶ್ ದಯಾಳ್
ಜೋಶ್ ಹ್ಯಾಝಲ್ವುಡ್
ಆರ್ ಸಿಬಿ ಈ ಆವೃತ್ತಿಯಲ್ಲಿ ಈಗಾಗಲೇ ತವರಿನ ಹೊರಗೆ ಆಡಿರುವ 6 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಇದೀಗ ತವರಿನ ಹೊರಗೆ 7ನೇ ಪಂದ್ಯ ಆಡಲು ರೆಡಿಯಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಆರ್ ಸಿಬಿ ಇತಿಹಾಸ ಸೃಷ್ಟಿಸಲಿದೆ. ಯಾವ ತಂಡ ಕೂಡ ಈವರೆಗೂ ತವರಿನ ಹೊರಗಿನ ಎಲ್ಲಾ 7 ಪಂದ್ಯಗಳನ್ನೂ ಗೆದ್ದಿದ್ದೇ ಇಲ್ಲ. ಒಂದು ವೇಳೆ ಆರ್ ಸಿಬಿ ಈ ಸಾಧನೆ ಮಾಡಿದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ತಂಡಗಳು ಇದುವರೆಗೆ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ 5 ಪಂದ್ಯಗಳಲ್ಲಿ ಆರ್‌ಸಿಬಿ 3 ಪಂದ್ಯಗಳಲ್ಲಿ ಗೆದ್ದಿದ್ದರೆ, ಎಲ್‌ಎಸ್‌ಜಿ 2 ಬಾರಿ ಜಯಗಳಿಸಿದೆ. ಶುಕ್ರವಾರದ ಪಂದ್ಯದಲ್ಲೂ ಲಕ್ನೋವನ್ನ ಮಣಿಸಿದ್ದೇ ಆದಲ್ಲಿ ಆರ್ಸಿಬಿಗೆ ಪ್ಲೇಆಫ್ ಟಿಕೆಟ್ ಕನ್ಪರ್ಮ್ ಆಗುತ್ತೆ.