RR ರೆಕ್ಕೆ ಕತ್ತರಿಸಲು RCB ರೆಡಿ – ಡಫಿ & ಭುವಿಯೇ ಮ್ಯಾಚ್ ವಿನ್ನರ್ಸ್
ಪ್ಲೇಯಿಂಗ್ 11ನಲ್ಲಿ ಜೋಶ್ ಬೇಕಾ?

RR ರೆಕ್ಕೆ ಕತ್ತರಿಸಲು RCB ರೆಡಿ – ಡಫಿ & ಭುವಿಯೇ ಮ್ಯಾಚ್ ವಿನ್ನರ್ಸ್ಪ್ಲೇಯಿಂಗ್ 11ನಲ್ಲಿ ಜೋಶ್ ಬೇಕಾ?

ಈ ಸೀಸನ್​ನ ಒನ್ ಆಫ್ ದಿ ಹೈವೋಲ್ಟೇಜ್ ಬ್ಯಾಟಲ್​ಗೆ ವೇದಿಕೆ ಸಿದ್ಧವಾಗ್ತಿದೆ. ನಾಳೆ ಗುವಾಹಟಿಯಲ್ಲಿ ರಾಜಸ್ಥಾನ ಹಾಗೇ ಬೆಂಗಳೂರು ಟೀಂಗಳು ಮುಖಾಮುಖಿ ಆಗಲಿವೆ. ಈ ಸೀಸನ್​ನಲ್ಲಿ ಎರಡೂ ತಂಡಗಳೂ ಅದ್ಭುತ ಫಾರ್ಮ್​ನಲ್ಲಿದ್ದು ವಿನ್ನಿಂಗ್ ಟ್ರ್ಯಾಕ್​​ನಲ್ಲೇ ಈ ಪಂದ್ಯಕ್ಕೆ ಕಾಲಿಡ್ತಿದ್ದಾರೆ. ಹೀಗಾಗಿ ಮೊದಲ ಸೋಲು ಯಾರಿಗೆ ಅನ್ನೋ ಕುತೂಹಲವೂ ಇದೆ. ಬ್ಯಾಟಿಂಗ್​ನಲ್ಲಿ ಬೆಂಕಿ ಪರ್ಫಾಮೆನ್ಸ್ ನೀಡ್ತಿರೋ ಎರಡೂ ತಂಡಗಳೂ ಅಜೇಯಯಾತ್ರೆಯನ್ನೇ ಎಕ್ಸ್​ಪೆಕ್ಟ್ ಮಾಡ್ತಾ ಇರ್ತಾರೆ.

ಇದನ್ನೂ ಓದಿ : ಮೊದಲ ಗೆಲುವಿನ ಹುಡುಕಾಟದಲ್ಲಿ KKR – ಕೋಲ್ಕತ್ತಾ ತಂಡಕ್ಕೆ LSG ಸವಾಲ್

2026ರ ಐಪಿಎಲ್​ನಲ್ಲಿ ರಾಜಸ್ಥಾನ ಟೀಂ ಈಗ ಆಲ್ರೆಡಿ 3 ಮ್ಯಾಚ್ ಆಡಿ ಮೂರರಲ್ಲೂ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಪ್ಲೇಸ್​ನಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದೆ. ಇತ್ತ ರಾಯಲ್ ಚಾಲೆಂಜರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸತತವಾಗಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಸ್ಟ್ರಾಂಗೆಸ್ಟ್ ಬೌಲಿಂಗ್ ಯುನಿಟ್ ಹೊಂದಿವೆ. ವರ್ಲ್ಡ್​ಕ್ಲಾಸ್ ಬೌಲರ್​​ಗಳೇ ಇದ್ದಾರೆ. ನ್ಯೂ ಬಾಲ್​ನಲ್ಲಿ ಆರ್​ಸಿಬಿಗೆ ಜಾಕೋಬ್ ಡಫಿ ಮತ್ತು ಭುವನೇಶ್ವರ್ ಕುಮಾರ್ ಇದ್ರೆ ಆರ್​ಆರ್​ನಲ್ಲಿ ಜೋಫ್ರಾ ಆರ್ಚರ್ ಮತ್ತು ನಾಂಡ್ರೆ ಬರ್ಗರ್ ಬಿಗ್ಗೆಸ್ಟ್ ಸ್ಟ್ರೆಂಥ್ ಆಗ್ತಾರೆ. ಇನ್ನು ರಾಜಸ್ಥಾನದ ಅತಿದೊಡ್ಡ ಶಕ್ತಿಯೇ ಜೈಸ್ವಾಲ್ ಮತ್ತು ವೈಭವ್ ಪಾಟ್ನರ್​ಶಿಪ್. ಕಳೆದ ಮೂರು ಪಂದ್ಯಗಳ ಗೆಲುವಿನಲ್ಲೂ ಇವ್ರದ್ದೇ ಸಿಂಹಪಾಲು ಇದೆ. ಹೀಗಾಗಿ ಈ ಇಬ್ಬರನ್ನ ಬೇಗ ಪೆವಿಲಿಯನ್ ಸೇರಿಸಿದ್ರೆ ಆರ್​ಸಿಬಿಗೆ ಬಿಗ್ ಅಡ್ವಾಂಟೇಜ್ ಆಗಲಿದೆ. ಸೋ ಇವ್ರಿಬ್ಬರ ಜೊತೆಯಾಟ ಮುರಿಯಲು ಈಗಾಗ್ಲೇ ವೀಕ್​ನೆಸ್ ಬಗ್ಗೆ ಗ್ರೌಂಡ್​ವರ್ಕ್ ನಡೆದೇ ಇರುತ್ತೆ.

ಸಂಭಾವ್ಯ ಪ್ಲೇಯಿಂಗ್ 11

ಫಿಲ್ ಸಾಲ್ಟ್

ವಿರಾಟ್ ಕೊಹ್ಲಿ

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್

ಜಿತೇಶ್ ಶರ್ಮಾ

ಟಿಮ್ ಡೇವಿಡ್

ರೊಮ್ಯಾರಿಯೋ ಶೆಫರ್ಡ್

ಕೃನಾಲ್ ಪಾಂಡ್ಯ

ಭುವನೇಶ್ವರ್ ಕುಮಾರ್

ಅಭಿನಂದನ್ ಸಿಂಗ್

ಜೇಕಬ್ ಡಫಿ

ಸುಯಾಶ್ ಶರ್ಮಾ (IP)

ಈ ಮೂಲಕ ಮೊದಲ ಎರಡು ಪಂದ್ಯಗಳಲ್ಲಿದ್ದ ತಂಡವನ್ನೇ ಮೂರನೇ ಪಂದ್ಯಕ್ಕೂ ಕಂಟಿನ್ಯೂ ಮಾಡ್ತಾರೆ. ಯಾವುದೇ ಚೇಂಜಸ್ ಇರಲ್ಲ. ವಿನ್ನಿಂಗ್ ಟೀಂ ಕಾಂಬಿನೇಷನ್ ಬದಲಾಯಿಸೋ ರಿಸ್ಕ್ ಕೂಡ ತಗೊಳಲ್ಲ. ಯಾಕಂದ್ರೆ ಆಡ್ತಿರೋರೆಲ್ರೂ ತಮ್ಮ ಕಡೆಯಿಂದ ಬೆಸ್ಟ್ ಪರ್ಪಾಮೆನ್ಸ್​​ನೇ ಕೊಟ್ಟಿದ್ದಾರೆ. ಮತ್ತೊಂದೆಡೆ ಸೇರಿಸಿಕೊಳ್ಳಬೇಕು ಅಂದ್ರೆ ಅದು ಜೋಶ್ ಹೇಜಲ್​ವುಡ್ ಮಾತ್ರನೇ. ಫಿಟ್​ನೆಸ್ ಸಾಧಿಸದ ಕಾರಣ ಮೊದಲ ಎರಡು ಪಂದ್ಯಗಳಲ್ಲಿ ಅವ್ರನ್ನ ಆಡಿಸಿಲ್ಲ. ಬದಲಿಗೆ ಜೇಕಬ್ ಡಫಿ ಚಾನ್ಸ್ ಪಡೆದಿದ್ದು ಅವ್ರ ಕಡೆಯಿಂದ ಅದ್ಭುತ ಪ್ರದರ್ಶನವೇ ಬಂದಿದೆ. ಪವರ್​ ಪ್ಲೇನಲ್ಲೇ ವಿಕೆಟ್ ಬೇಟೆಯಾಡ್ತಿದ್ದಾರೆ. ಅದೂ ಅಲ್ದೇ ಓಪನರ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿರೋದೇ ಡಫಿ. ಹೀಗಾಗಿ ಜೋಶ್ ಹೇಜಲ್​ವುಡ್ ಕಂಪ್ಲೀಟ್ ಆಗಿ ಫಿಟ್ ಌಂಡ್ ಫೈನ್ ಆಗಿ ಕಂ ಬ್ಯಾಕ್ ಮಾಡೋವರೆಗೂ ಆರ್​ಸಿಬಿ ಫ್ರಾಂಚೈಸಿ ಡಫಿಯನ್ನೇ ಕಂಟಿನ್ಯೂ ಮಾಡುತ್ತೆ. ಇನ್ನು ಈ ಪಂದ್ಯದಲ್ಲಿ ರಾಜಸ್ಥಾನಕ್ಕೂ ಬಿಗ್ ಅಡ್ವಾಂಟೇಜ್ ಕೂಡ ಇದೆ.

ಹೋಂ ಗ್ರೌಂಡ್ ನಲ್ಲಿ ಎರಡೂ ಪಂದ್ಯಗಳನ್ನ ಗೆದ್ದಿರುವ ರಾಜಸ್ಥಾನ!

ಪಂದ್ಯ ನಡೆಯಲಿರುವ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಮೈದಾನ ಆರ್​ಆರ್​ಗೆ ಪ್ಲಸ್ ಆಗಲಿದೆ. ಐಪಿಎಲ್ 2026 ರಲ್ಲಿ ಈವರೆಗೆ ಎರಡು ಮ್ಯಾಚಸ್ ನಡೆದಿವೆ. ಫಸ್ಟ್ ಮ್ಯಾಚಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ಸ್ ಪಡೆ ಬೌಲಿಂಗ್​ನಲ್ಲಿ ಅಬ್ಬರಿಸಿ ಕೇವಲ 127 ರನ್​ಗಳಿಗೆ ಸೀಮಿತಗೊಳಿಸಿದ್ರು. ಌಂಡ್ 128 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಎರಡನೇ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧದ 11 ಓವರ್‌ಗಳ ಪಂದ್ಯದಲ್ಲಿ ರಾಯಲ್ಸ್ ಪಡೆ ಫಸ್ಟ್ ಬ್ಯಾಟಿಂಗ್ ಮಾಡಿ 150/3 ಗಳಿಸಿತು. ಹಾಗೇ ಡಿಫೆನ್ಸ್ ವೇಳೆ ಮುಂಬೈ ಪಡೆಯನ್ನ 123 ರನ್​ಗಳಿಗೆ ಸೀಮಿತಗೊಳಿಸಿ ಗೆದ್ದಿದ್ರು. ಇದೇ ಪಿಚ್​ನಲ್ಲಿ ಆರ್​ಸಿಬಿ ವಿರುದ್ಧ ಮ್ಯಾಚ್ ಆಡೋದ್ರಿಂದ ಅದೇ ಮೊಮೆಂಟಮ್​ನ ಕಂಟಿನ್ಯೂ ಮಾಡೋಕೆ ನೋಡ್ತಾ ಇರ್ತಾರೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಬೆಂಗಳೂರು ಮತ್ತು ರಾಜಸ್ಥಾನ ತಂಡಗಳು ಒಟ್ಟಾರೆಯಾಗಿ 34 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಇದ್ರಲ್ಲಿ ಪಿಂಕ್ ಆರ್ಮಿ 14 ಮ್ಯಾಚಸ್ ಗೆದ್ರೆ ರೆಡ್ ಆರ್ಮಿ 17 ಪಂದ್ಯ ಗೆದ್ದಿದೆ. 3 ಪಂದ್ಯಗಳ ರಿಸಲ್ಟ್ ಬಂದಿಲ್ಲ. ರಾಯಲ್ಸ್ ಬ್ಯಾಟಲ್​ನಲ್ಲಿ ಬೆಂಗಳೂರು ಮೇಲುಗೈ ಸಾಧಿಸಿದ್ರೂ ಕೂಡ ಅಂಥಾ ದೊಡ್ಡ ಡಿಫ್ರೆನ್ಸೆಸ್ ಏನೂ ಇಲ್ಲ. ಹೀಗಾಗಿ ಹಿಂದಿನಿಂದಲೂ ಟಫ್ ಫೈಟ್ ಇದ್ದೇ ಇದೆ. ಈ ಸೀಸನ್​ನಲ್ಲಿ ಇಬ್ಬರೂ ಕೂಡ ಮೋಸ್ಟ್ ಡೇಂಜರಸ್ ಆಗಿ ಕಾಣ್ತಿದ್ದು ಒನ್ ಆಫ್ ದಿ ಹೈಸ್ಕೋರಿಂಗ್ ಗೇಮ್ ಆಗ್ಬೋದು.

Shantha Kumari