ಕೊಹ್ಲಿ Vs ಕೃಷ್ಣ.. ಭುವಿ Vs ಗಿಲ್ –  GT ಬೇಟೆಗೆ ಹೀಗಿದೆ ಪ್ಲೇಯಿಂಗ್ 11
ಚಿನ್ನಸ್ವಾಮಿ ಕೊನೇ TEST ಗೆಲ್ತಾರಾ?

ಕೊಹ್ಲಿ Vs ಕೃಷ್ಣ.. ಭುವಿ Vs ಗಿಲ್ –  GT ಬೇಟೆಗೆ ಹೀಗಿದೆ ಪ್ಲೇಯಿಂಗ್ 11ಚಿನ್ನಸ್ವಾಮಿ ಕೊನೇ TEST ಗೆಲ್ತಾರಾ?

ಆರ್​ಸಿಬಿಗೆ ಮಸ್ಟ್ ವಿನ್ ಮ್ಯಾಚ್.. ಜಿಟಿಗೆ ಕ್ರೂಶಿಯಲ್ ಗೇಮ್. ಶುಕ್ರವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರೋ ಈ ಪಂದ್ಯದಲ್ಲಿ ಗೆದ್ದು ಕಂ ಬ್ಯಾಕ್ ಮಾಡೋಕೆ ಎರಡೂ ತಂಡಗಳು ಕಾಯ್ತಿವೆ. ಯಾಕಂದ್ರೆ ಕಳೆದ ಪಂದ್ಯಗಳಲ್ಲಿ ಇಬ್ರೂ ಸೋತಿದ್ದಾರೆ. ಅದೂ ಅಲ್ದೇ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿಗೆ ಇದು ಕೊನೇ ಮ್ಯಾಚ್.

ಇದನ್ನೂ ಓದಿ : ಮುಂಬೈ ವಿರುದ್ಧ ಚೆನ್ನೈ ಸವಾಲ್ – ಸಿಎಸ್ಕೆ ಪರ ಸ್ಪೆನ್ಸರ್ ಜಾನ್ಸನ್ ಎಂಟ್ರಿ, ಮುಂಬೈ ಸೇರಿಕೊಂಡ ವಿಲ್ ಜಾಕ್ಸ್

ಚಿನ್ನಸ್ವಾಮಿ ಸ್ಟೇಡಿಯಂ ಹೇಳಿ ಕೇಳಿ ಬ್ಯಾಟಿಂಗ್ ಫ್ರೆಂಡ್ಲಿ ಪಿಚ್. ಆವರೇಜ್ ಸ್ಕೋರ್ 197 ಇದೆ. ಬೌಲಿಂಗ್ ಅಂತಾ ಬಂದಾಗ ಇಲ್ಲಿ ಪೇಸ್ ಬೌಲರ್​ಗಳದ್ದೇ ಡಾಮಿನೇಷನ್. ಸ್ಪಿನ್ನರ್ಸ್ ರನ್ಸ್ ಕಂಟ್ರೋಲ್ ಮಾಡಿದ್ರೂ ಕೂಡ ವಿಕೆಟ್ಸ್ ಅಂತಾ ಬಂದಾಗ ವೇಗದ ಬೌಲರ್​ಗಳೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಐದು ಪಂದ್ಯಗಳ ಸ್ಟಾಟ್ಸ್ ನೋಡಿದಾಗ ಸ್ಪಿನ್ನರ್ಸ್ 14 ವಿಕೆಟ್ಸ್ ತಗೊಂಡಿದ್ರೆ ವೇಗದ ಬೌಲರ್ಸ್ 48 ವಿಕೆಟ್ಸ್ ಬೇಟೆಯಾಡಿದ್ದಾರೆ. ಹೀಗಾಗಿ ಆರ್​ಸಿಬಿ ಪರ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್​ವುಡ್ ಅಟ್ಯಾಕ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ.

ಆರ್ ಸಿಬಿಗೆ ಮಸ್ಟ್ ವಿನ್ ಮ್ಯಾಚ್!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಸೋಲು.. ಕಂ ಬ್ಯಾಕ್ ಒತ್ತಡ

ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಆಡಲಿರುವ ಕೊನೇ ಪಂದ್ಯ

ಸೆಕೆಂಡ್ ಆಫ್ ಎಲ್ಲವೂ ಹೊರಗಿನ ಪಂದ್ಯಗಳೇ ಆಗೋದ್ರಿಂದ ರಿಸ್ಕ್

ಪಾಯಿಂಟ್ಸ್ ಪಟ್ಟಿಯಲ್ಲಿ ಈಗಾಗ್ಲೇ 3ನೇ ಸ್ಥಾನಕ್ಕೆ ಜಾರಿರುವ ತಂಡ

ಡಿಫೆಂಡಿಂಗ್ ಚಾಂಪಿಯನ್ಸ್ ಆಗಿರೋದ್ರಿಂದ ಮೊಮೆಂಟಮ್ ಕಂಟಿನ್ಯೂ

ಆಲ್ರೆಡಿ ಒಂದಷ್ಟು ತಂಡಗಳು ಏಳೇಳು ಪಂದ್ಯಗಳನ್ನ ಆಡಿವೆ. ಸೋ ಅಲ್ಲಿಗೆ ಫಸ್ಟ್ ಆಫ್ ಮುಗಿತಾ ಬಂದಿದೆ. ಇನ್ನು ಸೆಕೆಂಡ್ ಆಫ್ ಆರಂಭ ಆದ್ಮೇಲೆ ಒಂದೊಂದು ಪಂದ್ಯಗಳೂ ಕ್ರೂಶಿಯಲ್ ಆಗುತ್ತೆ. ಪ್ರತಿ ದಿನವೂ ಪಾಯಿಂಟ್ಸ್ ಟೇಬಲ್ ವೇರಿಯೇಷನ್ಸ್ ಆಗ್ತಾ ಇರುತ್ತೆ. ಪಾಯಿಂಟ್ಸ್ ಈಕ್ವಲ್ ಇದ್ರೆ ಸಾಕಾಗಲ್ಲ ನೆಟ್ ರನ್ ರೇಟ್ ಕೂಡ ಜಾಸ್ತಿ ಮಾಡಿಕೊಳ್ಬೇಕು. ಹೀಗಾಗಿ ಪಾಯಿಂಟ್ಸ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ.

ಆರ್ ಸಿಬಿ ಸಂಭಾವ್ಯ ಪ್ಲೇಯಿಂಗ್ 11

ಫಿಲ್ ಸಾಲ್ಟ್

ವಿರಾಟ್ ಕೊಹ್ಲಿ

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್

ಟಿಮ್ ಡೇವಿಡ್

ಜಿತೇಶ್ ಶರ್ಮಾ

ರೊಮಾರಿಯೋ ಶೆಫರ್ಡ್

ಕೃನಾಲ್ ಪಾಂಡ್ಯ

ಭುವನೇಶ್ವರ್ ಕುಮಾರ್

ಜೋಶ್ ಹ್ಯಾಜಲ್‌ ವುಡ್

ಸುಯಾಶ್ ಶರ್ಮಾ

ಇಲ್ಲಿ ಪ್ಲೇಯಿಂಗ್ 11 ಚೇಂಜ್ ಮಾಡೋ ಚಾನ್ಸಸ್ ಇಲ್ಲ. ಯಾಕಂದ್ರೆ ಇದು ಬ್ಯಾಲೆನ್ಸ್​ಡ್ ಟೀಂ. ಬ್ಯಾಟಿಂಗ್, ಬೌಲಿಂಗ್ , ಫಿನಿಶಿಂಗ್ ಎಲ್ಲವೂ ಚೆನ್ನಾಗಿದೆ. ಹೌದು ಲಾಸ್ಟ್ ಗೇಮ್ ಸೋತಿರಬಹುದು. ಬಟ್ ಲಾಸ್ಟ್ ಓವರ್​ನಲ್ಲಿ ಪಂದ್ಯ ಕೈತಪ್ಪಿತ್ತು. ಸೋ ಇಲ್ಲಿ ಟೀಂ ಚೇಂಜ್ ಮಾಡಲ್ಲ. ಇನ್ನು ಈ ಪಂದ್ಯದಲ್ಲಿ ಕೊಹ್ಲಿ ವರ್ಸಸ್ ಪ್ರಸಿದ್ಧ್ ಕೃಷ್ಣ ಬ್ಯಾಟಲ್ ಕೂಡ ಇರುತ್ತೆ. ಆರ್​ಸಿಬಿ ಪರ ಹೈಯೆಸ್ಟ್ ರನ್ ಸ್ಕೋರರ್ ಕೊಹ್ಲಿ. ಹಾಗೇ ಗುಜರಾಥ್ ಪರ ಹೈಯೆಸ್ಟ್ ವಿಕೆಟ್ ಟೇಕರ್ ಪ್ರಸಿದ್ಧ್ ಕೃಷ್ಣ. ಇವ್ರಿಬ್ಬರ ಬ್ಯಾಟಲ್ ಇಂಟ್ರೆಸ್ಟಿಂಗ್ ಆಗಿರುತ್ತೆ. ಈವರೆಗೆ ಕೊಹ್ಲಿ ಐಪಿಎಲ್​ನಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್​ನಲ್ಲಿ 34 ಎಸೆತಗಳನ್ನ ಫೇಸ್ ಮಾಡಿದ್ದಾರೆ. 56 ರನ್ಸ್ ಬಂದಿದೆ. ಌಂಡ್ 3 ಸಲ ವಿಕೆಟ್ ಒಪ್ಪಿಸಿದ್ದಾರೆ. ಹಾಗೇ ಈ ಪಂದ್ಯದಲ್ಲಿ ಶುಭ್​ಮನ್ ಗಿಲ್ ವರ್ಸಸ್ ಭುವನೇಶ್ವರ್ ಕುಮಾರ್ ಬ್ಯಾಟಲ್ ಕೂಡ ಇಂಟ್ರೆಸ್ಟಿಂಗ್ ಆಗಿರುತ್ತೆ. ಇವ್ರಿಬ್ರು ಐಪಿಎಲ್​ನಲ್ಲಿ 11 ಇನ್ನಿಂಗ್ಸ್​ನಲ್ಲಿ ಫೇಸ್ ಟು ಫೇಸ್ ಆಗಿದ್ದಾರೆ. 64 ಬಾಲಲ್ಲಿ ಕೊಟ್ಟಿರೋದೇ 66 ರನ್ಸ್.. ಅದ್ರಲ್ಲಿ 30 ಡಾಟ್ ಬಾಲ್​ಗಳೇ ಇವೆ. ಌಂಡ್ 4 ಸಲ ಗಿಲ್​ಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಭುವಿ ಸಕ್ಸಸ್ ಆಗಿದ್ದಾರೆ. ಒಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಂ ಬ್ಯಾಕ್ ಮಾಡೋಕೆ ಇದು ಬೆಸ್ಟ್ ಸಿಚುಯೇಷನ್. ಲಾಸ್ಟ್ ಮ್ಯಾಚಲ್ಲಿ ಗುಜರಾತ್ ತಂಡ 99 ರನ್​ಗಳ ಬಿಗ್ ಮಾರ್ಜಿನ್​ನಿಂದ ಸೋತಿದೆ. ಅದನ್ನೇ ಎನ್​ಕ್ಯಾಶ್ ಮಾಡ್ಕೊಂಡು ಆರ್​ಸಿಬಿ ಗೆದ್ರೆ ಮತ್ತೆ ಡಾಮಿನೇಷನ್ ಸ್ಟಾರ್ಟ್ ಮಾಡ್ಬೋದು.

Shantha Kumari