ಆರ್​ಸಿಬಿ ಮ್ಯಾನೇಜ್ಮೆಂಟ್​ SOLD ಆಗೋದ್ಯಾವಾಗ? – ಹರಾಜಿನಲ್ಲಿ ಮತ್ತದೇ ರಾಗ.. ಅದೇ ಹಾಡು..!

ಆರ್​ಸಿಬಿ ಮ್ಯಾನೇಜ್ಮೆಂಟ್​ SOLD ಆಗೋದ್ಯಾವಾಗ? – ಹರಾಜಿನಲ್ಲಿ ಮತ್ತದೇ ರಾಗ.. ಅದೇ ಹಾಡು..!

ರಾಯಲ್​ ಚಾಲೆಂಜರ್ಸ್ ಬೆಂಗಳೂರು.. ಈ ಫ್ರಾಂಚೈಸಿಗೆ ಇನ್ನೂ ಕೂಡ ಕಪ್​ ಗೆಲ್ಲಬೇಕು ಅನ್ನೋ ಟಾರ್ಗೆಟ್ ಇದ್ದಂತೆ ಕಾಣ್ತಿಲ್ಲ. ಆರ್​ಸಿಬಿ ಎಡವಟ್ಟು ಆಕ್ಷನ್​​ನಿಂದಲೇ ಶುರುವಾಗುತ್ತೆ. 16 ವರ್ಷಗಳಿಂದ ಒಂದೇ ಒಂದು ಬಾರಿ ಟ್ರೋಫಿ ಗೆಲ್ಲದೇ ಇರೋದಕ್ಕೆ ಮತ್ತೊಂದು ಮೇನ್ ರೀಸನ್ ಅಂದ್ರೆ ಆರ್​ಸಿಬಿ ಮ್ಯಾನೇಜ್ಮೆಂಟ್. ಮೊದ್ಲು ಈ ಆರ್​ಸಿಬಿ ಮ್ಯಾನೇಜ್ಮೆಂಟ್​ನ್ನೇ ಆಕ್ಷನ್​ಗಿಡೋದು ಬೇಟರ್ ಅನ್ಸುತ್ತೆ. ಅವರು ಕೂಡ ಸೋಲ್ಡ್ ಆಗೋದಿಲ್ಲ ಬಿಡಿ.. ಅದು ಬೇರೆ ಪ್ರಶ್ನೆ. ಆದ್ರೆ ಆರ್​ಸಿಬಿ ಮತ್ತೊಮ್ಮೆ ಆಕ್ಷನ್​ನಲ್ಲಿ ಬ್ಲಂಡರ್ ಮಾಡಿರೋದಂತೂ ನಿಜ. ರಾಯಲ್​ ಫ್ಯಾನ್ಸ್​​ಗಳಂತೂ ನಿಜಕ್ಕೂ ರೋಸಿ ಹೋಗಿದ್ದಾರೆ. ಆರ್​​ಸಿಬಿಯ ಆಕ್ಷನ್ ಎಡವಟ್ಟು ಮತ್ತು ಈಗ ಇರೋ ಪ್ಲೇಯರ್ಸ್​ಗಳ ಪೈಕಿ ಬೆಸ್ಟ್ ಪ್ಲೇಯಿಂಗ್-11 ಹೇಗಿರಬಹುದು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಐಪಿಎಲ್ 2024 ​ನಲ್ಲಿ ಮಹತ್ವದ ಬದಲಾವಣೆ ತಂದ ಬಿಸಿಸಿಐ –  ಸೀಸನ್‌ 17 ನಲ್ಲಿ ಹೊಸ ನಿಯಮ ಜಾರಿ!

ಈ ಬಾರಿಯ ಆಕ್ಷನ್​​ನಲ್ಲಿ ಆರ್​​ಸಿಬಿಗೆ ಬೇಕಾಗಿದ್ದಿದ್ದೇ ಬೌಲರ್ಸ್. ಆರ್​ಸಿಬಿ ಬ್ಯಾಟಿಂಗ್​ ಲೈನ್​ಅಪ್​ ಬಗ್ಗೆ ಪ್ರಶ್ನೆ ಮಾಡುವಂತೆಯೇ ಇಲ್ಲ. ಒಂಥರಾ ಎನಿಮಲ್ ಸಿನಿಮಾದಲ್ಲಿ ರಣ್​ಬೀರ್ ಕಪೂರ್​ ಗ್ಯಾಂಗ್​ ರೀತಿಯ ಬ್ಯಾಟಿಂಗ್​​ ಲೈನ್​​ಅಪ್​​ನ್ನ ಆರ್​ಸಿಬಿ ಹೊಂದಿದೆ. ಆದ್ರೆ ಕಳೆದ ಒಂದು ದಶಕಗಳಿಂದ ಆರ್​ಸಿಬಿ ಪ್ರಾಬ್ಲಂ ಎದುರಿಸ್ತಾ ಇರೋದೆ ಬೌಲಿಂಗ್​ ಲೈನ್​​ಅಪ್​​ನಲ್ಲಿ. ಈ ಬಾರಿಯಾದ್ರೂ ಆಕ್ಷನ್​ನಲ್ಲಿ ಸೊಲ್ಯೂಷನ್​ ಕಂಡುಕೊಳ್ಳಬಹುದು ಅಂದ್ರೆ ಮತ್ತದೇ ರಾಗ.. ಅದೇ ಹಾಡು.. ತಮ್ಮ ಪರ್ಸ್​​ನಲ್ಲಿರೋ ಆಲ್​ಮೋಸ್ಟ್ ಎಲ್ಲಾ ಹಣವನ್ನ ಪ್ಯಾಟ್​ ಕಮಿನ್ಸ್​ಗೆ ಸುರಿಯೋಕೆ ಮುಂದಾಗಿದ್ರೆ. ಆದ್ರೆ ಸನ್​​ರೈಸರ್ಸ್ ಹೈದರಾಬಾದ್​​ಗೆ ಜೊತೆಗಿನ ರೇಸ್ ಗೆಲ್ಲೋಕೆ ಸಾಧ್ಯವಿಲ್ಲ. ಬಳಿಕ ತನ್ನ ಟಾಪ್ ಬೌಲರ್ ಆಗಿ ಆರ್​ಸಿಬಿ ಪಿಕ್ ಮಾಡಿರೋದು ವೆಸ್ಟ್​ಇಂಡೀಸ್​ನ ಅಲ್ಜಾರಿ ಜೋಸೆಫ್​ರನ್ನ. 11.50 ಕೋಟಿ ರೂಪಾಯಿ ಕೊಟ್ಟು ಜೋಸೆಫ್​ರನ್ನ ಪರ್ಚೇಸ್ ಮಾಡಿದ್ದಾರೆ. ಇದೊಂಥರಾ ರಿಸ್ಕೀ ಚಾಯ್ಸ್​ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಯಾಕಂದ್ರೆ ಜೋಸೆಫ್ ಆಡಿರೋದೆ 19 ಟಿ-20, 19 ಐಪಿಎಲ್​ ಮ್ಯಾಚ್​ಗಳನ್ನ. ಇದುವರೆಗೂ ಐಪಿಎಲ್​​ನಲ್ಲಿ ಫೈರಿಂಗ್ ಪರ್ಫಾಮೆನ್ಸ್​ನ್ನಂತೂ ಕೊಟ್ಟಿಲ್ಲ. ಆದ್ರೆ ಅಲ್ಜಾರಿ ಜೋಸೆಫ್​​ರನ್ನ ಖರೀದಿಸೋಕೆ ಇಲ್ಲಿ ಇನ್ನೊಂದು ಮೇನ್ ರೀಸನ್ ಕೂಡ ಇದೆ. ಜೋಸೆಫ್​ ಟಾಫ್​ ಪೇಸ್​​ನಲ್ಲಿ ಬೌಲಿಂಗ್ ಮಾಡೋ ಕೆಪಾಸಿಟಿ ಹೊಂದಿದ್ದಾರೆ. ತುಂಬಾ ಹೈಟ್ ಇರೋ ಬೌಲರ್ ಆಗಿರೋದ್ರಿಂದ ಹೆಚ್ಚು ಬೌನ್ಸಿ ಬಾಲ್​ಗಳನ್ನ ಎಸೀತಾರೆ. ಚಿನ್ನಸ್ವಾಮಿ ಗ್ರೌಂಡ್​ಗೆ ಇಂಥಾ ಒಬ್ಬ ಬೌಲರ್​ನ ಅವಶ್ಯಕತೆ ಇದೆ ಅನ್ನೋದು ಆರ್​ಸಿಬಿ ಮ್ಯಾನೇಜ್ಮೆಂಟ್ ಲೆಕ್ಕಾಚಾರ. ಜೊತೆಗೆ ಅಲ್ಜಾರಿ ಜೋಸೆಫ್ ಡೆತ್​ ಓವರ್ ಸ್ಪೆಷಲಿಸ್ಟ್ ಕೂಡ ಆಗಿದ್ದು ಹೀಗಾಗಿ ಅವರನ್ನ ಖರೀದಿಸಿದ್ದೀವಿ ಅಂತಾ ಆರ್​ಸಿಬಿ ಡೈರೆಕ್ಟರ್​ ರೀಸನ್ ಕೊಟ್ಟಿದ್ದಾರೆ.

ಅಲ್ಜಾರಿ ಜೋಸೆಫ್ ಏನೋ ಓಕೆ ಇರ್ಲಿ ಬಿಡಿ.. ಸಿರಾಜ್​​ಗೆ ಕಂಪನಿ ಕೊಡೋಕೆ ಒಬ್ಬ ಮೇನ್ ಪೇಸ್ ಬೌಲರ್​ ಆಗಿ ತೆಗೆದುಕೊಂಡಿದ್ದಾರೆ. ಆದ್ರೆ, ಆರ್​​ಸಿಬಿ ಮಾಡಿರೋ ಅತೀ ದೊಡ್ಡ ಬ್ಲಂಡರ್ ಅಂತಾ ಅನ್ನಿಸ್ತಾ ಇರೋದು ಮೀಡಿಯಮ್ ಪೇಸ್ ಬೌಲರ್ ಯಶ್ ದಯಾಳ್ ವಿಚಾರದಲ್ಲಿ. ಯಶ್ ದಯಾಳ್​ರನ್ನ ಬರೋಬ್ಬರಿ 5 ಕೋಟಿ ರೂಪಾಯಿ ಕೊಟ್ಟು ಆರ್​ಸಿಬಿ ಖರೀದಿಸಿದೆ. 14 ಐಪಿಎಲ್​​ ಮ್ಯಾಚ್​ಗಳನ್ನಾಡಿರೋ ಯಶ್​ ದಯಾಳ್ ಇಕಾನಮಿ ರೇಟ್ 10.02. ವನ್​ ಆಫ್ ದಿ ಎಕ್ಸ್​​ಪೆನ್ಸಿವ್ ಬೌಲರ್. 14 ಮ್ಯಾಚ್​ಗಳಲ್ಲಿ ಪಡೆದಿರೋದು 13 ವಿಕೆಟ್. 3/40 ಪಡೆದಿರೋದೆ ಬೆಸ್ಟ್ ಬೌಲಿಂಗ್​ ಪರ್ಫಾಮೆನ್ಸ್. ಎಲ್ಲಕ್ಕಿಂತ ಹೆಚ್ಚಾಗಿ ಕಳೆದ ಐಪಿಎಲ್​ ಟೂರ್ನಿಯಲ್ಲಿ ಇದೇ ಯಶ್ ದಯಾಳ್ ಬೌಲಿಂಗ್​ನಲ್ಲಿ ರಿಂಕು ಸಿಂಗ್ 5 ಬಾಲ್​​ಗೆ 5 ಸಿಕ್ಸರ್ ಹೊಡೆದಿದ್ರು. ಕೊನೆಯ ಓವರ್​ನಲ್ಲಿ ಗುಜರಾತ್​ ಟೈಟಾನ್ಸ್​ನ್ನ ಕೆಕೆಆರ್​ ಸೋಲಿಸಿತ್ತು. ಕಾಮಿಡಿ ಏನಂದ್ರೆ 5 ಬಾಲ್​ಗೆ 5 ಸಿಕ್ಸರ್​ ಹೊಡೆದ ರಿಂಕು ಸಿಂಗ್​​ರನ್ನ ಕೆಕೆಆರ್​ ಪರ್ಚೇಸ್ ಮಾಡಿದ್ದು ಕೇವಲ 55 ಲಕ್ಷ ರೂಪಾಯಿಗೆ. ಆದ್ರೆ ರಿಂಕು ಸಿಂಗ್​ ಕೈಯಲ್ಲಿ 5 ಸಿಕ್ಸರ್ ಹೊಡೆಸಿಕೊಂಡ ಯಶ್​ ದಯಾಳ್​ ಆರ್​ಸಿಬಿ ಕೃಪೆಯಿಂದಾಗಿ 5 ಕೋಟಿ ರೂಪಾಯಿ ಬಾಚಿಕೊಂಡಿದ್ದಾರೆ.

ಇನ್ನು ಆರ್​​ಸಿಬಿ ಬ್ಯಾಟಿಂಗ್​ ಲೈನ್​ಗೆ ಬಂದ್ರೆ ಇಲ್ಲೂ ಒಂದು ಪ್ರಾಬ್ಲಂ ಇದೆ. ಆರ್​ಸಿಬಿಯಲ್ಲಿ ಒಬ್ಬ ಬೆಸ್ಟ್​ ಫಿನಿಷರ್ ಅಂತಾ ಯಾರೂ ಇಲ್ಲ. ಅಲ್ಜಾರಿ ಜೋಸೆಫ್ ಮತ್ತು ಯಶ್ ದಯಾಳ್​ರನ್ನ ಖರೀದಿಸಿಗಾಲೇ ಆಲ್​​ಮೋಸ್ಟ್ ಎಲ್ಲಾ ಹಣ ಖಾಲಿಯಾಗಿದೆ. ಒಬ್ಬ ಒಳ್ಳೆಯ ಪಿನಿಷಿಂಗ್ ಬ್ಯಾಟ್ಸ್​​ಮನ್​​ನನ್ನ ಪರ್ಚೇಸ್ ಮಾಡೋಕೆ ದುಡ್ಡೇ ಉಳಿದಿರಲಿಲ್ಲ. ಸದ್ಯಕ್ಕೆ ಆರ್​ಸಿಬಿ ಡಿಪೆಂಡ್ ಆಗಿರೀ ಫಿನಿಶರ್ ಅಂದ್ರೆ ದಿನೇಶ್ ಕಾರ್ತಿಕ್ ಮಾತ್ರ. 2022ರ ಟಿ-20 ವರ್ಲ್ಡ್​​ಕಪ್ ಬಳಿಕ ಟೀಂ ಇಂಡಿಯಾದಲ್ಲಂತೂ ಡಿಕೆ ಒಂದೇ ಒಂದು ಮ್ಯಾಚ್ ಆಡಿಲ್ಲ. ಕಳೆದ ಒಂದು ವರ್ಷದಿಂದ ಕಾಮೆಂಟ್ರಿ ಬಾಕ್ಸ್​ನಲ್ಲೇ ಹೆಚ್ಚು ಕಾಣಿಸಿಕೊಳ್ತಿದ್ದಾರೆ. ಈಗ ಡಿಕೆಯನ್ನ ಯಾವ ಗ್ಯಾರಂಟಿ ಮೇಲೆ ನಂಬೋದು. ಆರ್​​ಸಿಬಿ ಮ್ಯಾನೇಜ್ಮೆಂಟ್​ಗೇ ಗೊತ್ತು. 5 ಕೋಟಿ ರೂಪಾಯಿ ಕೊಟ್ಟು ಯಶ್ ದಯಾಳ್​ರಂಥಾ ಮೀಡಿಯಂ ಪೇಸ್​ ಬೌಲರ್​​ನ್ನ ತಗೊಳ್ಳೋದ್ರ ಬದಲು 20, 40 ಲಕ್ಷ ರೂಪಾಯಿ ಕೆಲ ದೇಸೀ ಪ್ರತಿಭೆಗಳನ್ನ ಆರ್​ಸಿಬಿಗೆ ಪರ್ಚೇಸ್ ಮಾಡಬಹುದಿತ್ತು. ಕಾರ್ತಿಕ್ ತ್ಯಾಗಿನೇ ಇದ್ರೂ..ಬೆಸ್ಟ್ ಆಪ್ಷನ್.. ಅಲ್ಲಿ ಸ್ವಲ್ಪ ಹಣ ಸೇವ್ ಆಗ್ತಿತ್ತು. ಅದ್ರಲ್ಲಿ ಒಬ್ಬ ವರ್ಲ್ಡ್​​ಕ್ಲಾಸ್ ಫಿನಿಶರ್​​ನ್ನಾದ್ರೂ ತಂಡಕ್ಕೆ ಸೇರಿಸಿಕೊಳ್ಳಬಹುದಿತ್ತು. ಇದ್ರ ಜೊತೆಗೆ ಆರ್​ಸಿಬಿಯಲ್ಲಿ ಈಗ ಟಾಪ್​ ಕ್ಲಾಸ್ ಸ್ಪಿನ್ನರ್ ಕೂಡ ಇಲ್ಲ. ಮಿಡ್ಲ್ ಓವರ್​​ನಲ್ಲಿ ರನ್​ ಕಂಟ್ರೋಲ್​ ಮಾಡಬಲ್ಲ, ವಿಕೆಟ್ ತೆಗೆಯಬಲ್ಲ, ಮ್ಯಾಚ್​ ಟರ್ನ್ ಮಾಡೋ ಕ್ವಾಲಿಟಿ ಸ್ಪಿನ್ನರ್ ಇಲ್ಲ. ಹಸರಂಗರನ್ನ ಬಿಟ್ಟು ಕೊಟ್ರು. ಸಿಕ್ಕಿದ್ದೇ ಚಾನ್ಸ್ ಅಂತಾ ಒಂದೂವರೆ ಕೋಟಿ ರೂಪಾಯಿ ಬೇಸ್​​ಪ್ರೈಸ್​​ಗೆ ಹೈದರಾಬಾದ್ ಪರ್ಚೇಸ್ ಮಾಡಿದೆ. ಕರ್ನಾಟಕದವರೇ ಆದ ಟ್ಯಾಲೆಂಟೆಡ್ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್​ರನ್ನ ಮುಂಬೈ ಇಂಡಿಯನ್ಸ್ 20 ಲಕ್ಷಕ್ಕೆ ಖರೀದಿಸಿದೆ. ಯಾವಾಗಲೂ ಟೂರ್ನಿ ಗೆಲ್ಲಿಸಿಕೊಡೋದು ಬೌಲರ್ಸ್​ಗಳೇ. ಬೌಲಿಂಗ್​ ಲೈನ್​ಅಪ್​ ಸ್ಟ್ರಾಂಗ್ ಇಲ್ಲಾಂದ್ರೆ ಟೂರ್ನಿ ಗೆಲ್ಲೋಕೆ ಸಾಧ್ಯವೇ ಇಲ್ಲ. ಬ್ಯಾಟ್ಸ್​ಮನ್​ಗಳಿಂದಲೇ ಟೂರ್ನಿ ಗೆಲ್ತಿದ್ರೆ, ಇಷ್ಟೊತ್ತಿಗೆ ಆರ್​ಸಿಬಿ ಹಲವು ಬಾರಿ ಟ್ರೋಫಿ ಗೆಲ್ಬೇಕಿತ್ತು. ಹೇಳಿ ಕೇಳಿ ಐಪಿಎಲ್​​ನಲ್ಲಿ 7 ಮ್ಯಾಚ್​​ಗಳನ್ನ ಆರ್​ಸಿಬಿ ಚಿನ್ನಸ್ವಾಮಿ ಗ್ರೌಂಡ್​​ನಲ್ಲಿ ಆಡುತ್ತೆ. ಚಿನ್ನಸ್ವಾಮಿ ಪಿಚ್ ಹೇಗಿದೆ ಅನ್ನೋದು ನಿಮಗೆ ಗೊತ್ತೇ ಇದೆ. ಬ್ಯಾಟ್ಸ್​​ಮನ್​ಗಳಿಗೆ ಸ್ವರ್ಗ. ಇಂಥಾ ಪಿಚ್​​ನಲ್ಲಿ ರನ್​ ಕಂಟ್ರೋಲ್​ ಮಾಡೋ ಬೌಲರ್ಸ್​ಗಳಿಲ್ಲಾಂದ್ರೆ ಮ್ಯಾಚ್​​ ಗೆಲ್ಲೋಕೆ ಸಾಧ್ಯವೇ ಇಲ್ಲ. ಆದ್ರೆ ಯಶ್ ದಯಾಳ್​ರಂಥಾ ಎಕ್ಸ್​​ಪೆನ್ಸಿವ್ ಬೌಲರ್​​​ನ್ನೇ ಪರ್ಚೇಸ್ ಮಾಡಿರೋ ಆರ್​ಸಿಬಿ ಮ್ಯಾನೇಜ್ಮೆಂಟ್​​ಗೆ ಏನು ಹೇಳಬೇಕೋ ಗೊತ್ತಿಲ್ಲ. ಅಂತೂ ಈ ಆರ್​ಸಿಬಿ ಹಿಂದೆ ಮಾಡಿದ ಮಿಸ್ಟೇಕ್ಸ್​ಗಳನ್ನ ಪ್ರತಿ ಬಾರಿಯೂ ರಿಪೀಟ್ ಮಾಡ್ತಾನೆ ಇದೆ.

ಆಕ್ಷನ್ ಆಗಿದೆ.. ಆರ್​ಸಿಬಿ ಟೀಂ ಕೂಡ ಫೈನಲ್ ಆಗಿದೆ. ಒಟ್ಟು 25 ಪ್ಲೇಯರ್ಸ್​​ಗಳು ಆರ್​​ಸಿಬಿಯಲ್ಲಿದ್ದಾರೆ. ಈ 25 ಮಂದಿ ಪೈಕಿ ಸ್ಟ್ರಾಂಗ್​-11 ಹೇಗಿರಬಹುದು ಅನ್ನೋದನ್ನ ಕೂಡ ನೋಡೋಣ.

RCB ಬೆಸ್ಟ್ PLAYING-11?

ವಿರಾಟ್ ಕೊಹ್ಲಿ, ಫಾಪ್ ಡುಪ್ಲೆಸಿಸ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್ ​ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್, ಆಕಾಶ್ ದೀಪ್ OR ಯಶ್ ದಯಾಳ್, ಕರಣ್ ಶರ್ಮಾ  ಇದು ಈಗ ಇರೋ ಪ್ಲೇಯರ್ಸ್​ಗಳ ಪೈಕಿ ಆಗಬಹುದಾದ ಆರ್​ಸಿಬಿಯ ಸ್ಟ್ರ್ಯಾಂಗ್ ಪ್ಲೇಯಿಂಗ್-11. 2024ರಲ್ಲಿ ಈ ಟೀಮ್​ ಜೊತೆಗೆ ಆರ್​ಸಿಬಿ ಚಾಂಪಿಯನ್​ ಆಗುತ್ತಾ? ಈ ಬಾರಿಯಾದ್ರೂ ಕಪ್​ ನಮ್ದೇನಾ ಅಂತಾ ಕಾದುನೋಡಬೇಕಿದೆ.

Shwetha M