ಲಿಯಾಮ್, ಲುಂಗಿ, ಬೆಥೆಲ್ ಬಿರುಗಾಳಿ – RCB ರಿಟೇನ್ ಲಿಸ್ಟ್ ನಲ್ಲಿ 3 ಪ್ಲೇಯರ್ಸ್?
IPL ಮುಗಿದ್ಮೇಲೆ ಭರ್ಜರಿ ಫಾರ್ಮ್!

ಲಿಯಾಮ್, ಲುಂಗಿ, ಬೆಥೆಲ್ ಬಿರುಗಾಳಿ – RCB ರಿಟೇನ್ ಲಿಸ್ಟ್ ನಲ್ಲಿ 3 ಪ್ಲೇಯರ್ಸ್?IPL ಮುಗಿದ್ಮೇಲೆ ಭರ್ಜರಿ ಫಾರ್ಮ್!

2026ರ ಐಪಿಎಲ್​ ಸೀಸನ್​ಗೆ ಸಜ್ಜಾಗ್ತಿರೋ ಫ್ರಾಂಚೈಸಿಗಳು ಒಂದಷ್ಟು ಆಟಗಾರರಿಗೆ ಗೇಟ್​ಪಾಸ್ ಕೊಡೋದು ಬೇರೆ ಆಟಗಾರರನ್ನ ತಂಡಕ್ಕೆ ಸೇರಿಸಿಕೊಳ್ಳೋದು ಕಾಮನ್. ಇದಕ್ಕೆ ಆರ್​ಸಿಬಿಯೂ ಹೊರತಲ್ಲ. ಬಟ್ ಬೆಂಗಳೂರು ಮಾಲೀಕರಿಗೆ ಹೊಸ ತಲೆನೋವು ಶುರುವಾಗಿದೆ. ಯಾರನ್ನೆಲ್ಲಾ ನೆಕ್ಸ್​ಟ್ ಸೀಸನ್​ಗೆ ಕೈಬಿಡ್ಬೇಕು ಅನ್ಕೊಂಡಿದ್ರೋ ಅವ್ರೆಲ್ಲಾ ಈಗ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಐಪಿಎಲ್ ಮುಗಿದ್ಮೇಲೆ ಬೇರೆ ಬೇರೆ ಪಂದ್ಯಗಳಲ್ಲಿ, ಲೀಗ್​ಗಳಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಅದ್ರಲ್ಲೂ ಈ ಮೂವರು ಆಟಗಾರರ ಪ್ರದರ್ಶನ ಇವ್ರನ್ನ ಮತ್ತೆ ರೀಟೇನ್ ಮಾಡಿಕೊಳ್ಳಲೇಬೇಕು ಎನ್ನುವಂತಿದೆ.

ಇದನ್ನೂ ಓದಿ : ಎರಡು ವರ್ಷದ ನಂತ್ರ ಮಣಿಪುರಕ್ಕೆ ಮೋದಿ ಎಂಟ್ರಿ – 7,300 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಅಡಿಪಾಯ

2025ರ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತ್ತು. ಬ್ಯಾಟಿಂಗ್ ಬೌಲಿಂಗ್, ಕೀಪಿಂಗ್ ಹೀಗೆ ಎಲ್ಲದ್ರಲ್ಲೂ ಆಲ್ ರೌಂಡ್ ಪ್ರದರ್ಶನ ನೀಡಿ ಟೈಟಲ್ ಗೆದ್ದಿದ್ರು. ಹೀಗಿದ್ರೂ 2026ರ ಐಪಿಎಲ್​ಗೂ ಮುನ್ನ ಕೆಲವ್ರನ್ನ ರಿಲೀಸ್ ಮಾಡೋ ಲೆಕ್ಕಾಚಾರದಲ್ಲಿದ್ರು. ಅದಲ್ಲೂ ದುಬಾರಿ ಸಂಭಾವನೆ ಪಡೆದು ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲೂ ಸದ್ದು ಮಾಡದ ಲಿಯಾಮ್ ಲಿವಿಂಗ್ ಸ್ಟೋನ್ ಈ ಲಿಸ್ಟ್​ನಲ್ಲಿ ಮುಂಚೂಣಿಯಲ್ಲಿದ್ರು. ಬಟ್ ಈಗ ಅದೇ ಲಿಯಾಮ್ ಬೇರೆ ಲೀಗ್​ಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಲಿಯಾಮ್ ಲಿವಿಂಗ್‌ ಸ್ಟೋನ್

ಮಾನದಂಡ     ಐಪಿಎಲ್       ದಿ ಹಂಡ್ರೆಡ್    ಟಿ20 ಬ್ಲಾಸ್ಟ್

ಇನ್ನಿಂಗ್ಸ್          8                  8              6

ರನ್ಸ್            112                241             231

ಸರಾಸರಿ        16                  40.17           57.75

ಸ್ಟ್ರೈಕ್ ರೇಟ್    133.33            155.48            180.47

2025ರ ಸೀಸನ್​ನಲ್ಲಿ ಇಂಗ್ಲಿಷ್ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ ಅವರನ್ನು ಆರ್​ಸಿಬಿ ಹೆಚ್ಚಾಗಿ ಬೆಂಚ್‌ ಕಾಯಿಸಿದ್ರು. ಯಾಕಂದ್ರೆ ಫಿಲ್ ಸಾಲ್ಟ್‌ರನ್ನ ಓಪನರ್ ಆಗಿ ಕಣಕ್ಕಿಳಿಸಲಾಗಿತ್ತು.ದೇವದತ್ ಪಡಿಕ್ಕಲ್ ಮೂರನೇ ಸ್ಥಾನದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದರಿಂದ, ಹಾಲಿ ಚಾಂಪಿಯನ್‌ಗಳ ತಂಡದಿಂದ ಬೆಥೆಲ್ ಸಂಭಾವ್ಯ ಬಿಡುಗಡೆ ಪಟ್ಟಿಯಲ್ಲಿ ಇರಬಹುದು ಅಂತಾ ಭಾವಿಸಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಬೆಥೆಲ್ ಇತ್ತೀಚಿಗೆ ವೀರೋಚಿತ ಪ್ರದರ್ಶನ ನೀಡಿದ್ದಾರೆ. ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದರು. ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯಲ್ಲೂ 173.47 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಭರ್ಜರಿ ಫಾರ್ಮ್‌ನಲ್ಲಿರುವ ಕಾರಣ, ಆರ್‌ಸಿಬಿ ಅವರನ್ನು ಉಳಿಸಿಕೊಕೊಂಡು 2026ರ ಸೀಸನ್​ಗೆ ಸ್ಪಿನ್‌ ಬೌಲರ್ಸ್  ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸೋ ಚಿಂತನೆಯಲ್ಲಿದೆ.

ಡೆತ್ ಓವರ್ ಸ್ಪೆಷಲಿಸ್ಟ್ ಆಗ್ತಾರಾ ಲುಂಗಿ ಎನ್ ಗಿಡಿ?

ಆರ್ ಸಿಬಿ ಪರ ಬೌಲಿಂಗ್ ಬ್ರಹ್ಮಾಸ್ತ್ರವಾಗಿದ್ದ ಜೋಶ್ ಹೇಜಲ್​ವುಡ್ ಗಾಯದಿಂದಾಗಿ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡಿದ್ರು. ಈ ವೇಳೆ ದಕ್ಷಿಣ ಆಫ್ರಿಕಾದ ಅನುಭವಿ ವೇಗದ ಬೌಲರ್ ಲುಂಗಿ ಎನ್‌ಗಿಡಿ ಅವರನ್ನು ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಂಡಿತ್ತು. ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೂ,  10.13ರ ಎಕಾನಮಿ ದರದಲ್ಲಿ ರನ್ಸ್ ಬಿಟ್ಟುಕೊಟ್ಟಿದ್ರು. ಆದ್ರೆ ಐಪಿಎಲ್ ಬಳಿಕ ತಮ್ಮ ಬೌಲಿಂಗ್ ಸಾಮರ್ಥ್ಯವನ್ನ ಇಂಪ್ರೂವ್ ಮಾಡಿಕೊಂಡಿದ್ದು ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಬೆಸ್ಟ್ ಪ್ರದರ್ಶನ ನೀಡಿದ್ರು. ಹಾಗೇ ODI ಸರಣಿಯಲ್ಲಿ ಮತ್ತೊಮ್ಮೆ ಆಸೀಸ್ ತಂಡವನ್ನು ಕಾಡಿದ್ರು. ಐತಿಹಾಸಿಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಹೀಗಾಗಿ  ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್  ನ್ಯೂ ಬಾಲ್ ಅಟ್ಯಾಕ್​​ ಮಾಡೋದ್ರಿಂದ RCB ತಮ್ಮ ಡೆತ್-ಓವರ್‌ಗಳ ಸ್ಪೆಟಲಿಸ್ಟ್ ಆಗಿ ಎನ್‌ಗಿಡಿಯನ್ನು ಉಳಿಸಿಕೊಳ್ಳಬಹುದು.

Shantha Kumari