ರಜತ್ ಬೇಕಾಗಿಲ್ಲ.. ರಸಿಕ್ ನೂ ಆಡ್ಸಲ್ಲ – BCCIಗೆ RCB ಪ್ಲೇಯರ್ಸ್ ಬೇಕಾಗಿಲ್ವಾ?
ಅರ್ಹತೆ ಇದ್ರೂ ಅಸಡ್ಡೆ ಮಾಡ್ತಿರೋದೇಕೆ?

ರಜತ್ ಬೇಕಾಗಿಲ್ಲ.. ರಸಿಕ್ ನೂ ಆಡ್ಸಲ್ಲ – BCCIಗೆ RCB ಪ್ಲೇಯರ್ಸ್ ಬೇಕಾಗಿಲ್ವಾ?ಅರ್ಹತೆ ಇದ್ರೂ ಅಸಡ್ಡೆ ಮಾಡ್ತಿರೋದೇಕೆ?

ಅರ್ಹತೆ ಇದ್ದರೂ ಅವಕಾಶಗಳು ಸಿಗ್ಬೇಕು ಅಂದ್ರೆ ಅದೃಷ್ಟವೂ ಇರಬೇಕು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು. 2025 ಹಾಗೇ 2026ರ ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್.. ಹೀಗಿದ್ರೂ ಟೀಂ ಇಂಡಿಯಾದಲ್ಲಿ  ಆರ್​ಸಿಬಿಯ ಒಬ್ಬೇ ಒಬ್ಬ ಆಟಗಾರನಿಗೆ ಅವಕಾಶ ಕೊಟ್ಟಿಲ್ಲ. ಅದ್ರ ಎಫೆಕ್ಟ್ ಈಗ ಭಾರತ ತಂಡ ಸತತ ಎರಡು ಸರಣಿಗಳನ್ನ ಸೋತಿದ್ದು. ಅಷ್ಟಕ್ಕೂ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಆಡೋಕೆ ಬೆಂಗಳೂರು ತಂಡದ ಪ್ಲೇಯರ್ಸ್ ಎಷ್ಟು ಕೇಪೆಬಲ್ ಇದ್ದಾರೆ.

ಇದನ್ನೂ ಓದಿ : ವೈಭವ್ ಗೆ ಆರಂಭದಲ್ಲೇ ಅಗ್ನಿಪರೀಕ್ಷೆ – IPL ಅಸ್ತ್ರ ENGನಲ್ಲಿ ಬಳಸಿದ್ರಾ ಜೋಫ್ರಾ?

ಐರಿಷ್ ಹಾಗೇ ಆಂಗ್ಲರ ವಿರುದ್ಧ ಹೀನಾಯವಾಗಿ ಸೋತಿರೋ ಭಾರತ ಅಟ್​ಲೀಸ್ಟ್​ ಜಿಂಬಾಬ್ವೆ ಸರಣಿಗೆ ಟೀಂ ಸೆಲೆಕ್ಷನ್ ಮಾಡುವಾಗಲಾದ್ರೂ ಅಲರ್ಟ್ ಆಗ್ಬೋದಿತ್ತು. ಒಂದಷ್ಟು ಚೇಂಜಸ್​​ಗಳನ್ನ ಮಾಡಿದ್ರೂ ಕೂಡ ರ್​ಸಿಬಿಯ ಯಾವೊಬ್ಬ ಪ್ಲೇಯರ್​ಗೂ ಅವಕಾಶ ಕೊಟ್ಟಿಲ್ಲ. ಌಂಡ್ ಭಾರತ ತಂಡ ಅಟ್ ಪ್ರಸೆಂಟ್ ಮಿಡಲ್ ಆರ್ಡರ್​ನಲ್ಲಿ ರನ್ಸ್ ಇಲ್ಲದೆ ಒದ್ದಾಡ್ತಿದೆ. ಇದಕ್ಕೂ ಸಲ್ಯೂಷನ್ ಹುಡಿಕಿಲ್ಲ. ಮತ್ತದೇ ಜಾಣಕುರುಡುತನ ಪ್ರದರ್ಶನ ಮಾಡಿದ್ದಾರೆ.

ಮಾಜಿ ಕ್ರಿಕೆಟಿಗರ ಸಲಹೆಯನ್ನೂ ಕೇಳದ ಮ್ಯಾನೇಜ್​ಮೆಂಟ್!

ಪ್ರಸ್ತುತ ಭಾರತ ಟಿ-20ಐ ತಂಡದಲ್ಲಿ ಮಿಡರ್ ಆರ್ಡರ್ ಕಂಪ್ಲೀಟ್ ವೀಕ್ ಇದೆ. ಌಂಡ್ ಸ್ಪಿನ್ ವಿರುದ್ಧ ಫಿಯರ್​ಲೆಸ್ ಆಗಿ ಬ್ಯಾಟ್ ಬೀಸಬಲ್ಲ ಒಬ್ಬೇ ಒಬ್ಬ ಸ್ಪೆಷಲಿಸ್ಟ್ ಬ್ಯಾಟರ್ ಇಲ್ಲ. ಇದೇ ಕಾರಣಕ್ಕೆ ಆರ್​ಸಿಬಿಯ ನಾಯಕ ರಜತ್ ಪಾಟಿದಾರ್​ರನ್ನ ಸೆಲೆಕ್ಟ್ ಮಾಡಿಕೊಳ್ಳಿ ಅಂತಾ ಮಾಜಿ ಕ್ರಿಕೆಟಿಗರು ಒತ್ತಾಯ ಮಾಡಿದ್ರು. ಆಗ ಲೆಫ್ಟ್, ರೈಟ್ ಹ್ಯಾಂಡ್ ಕಾಂಬಿನೇಷನ್ ಕೂಡ ವರ್ಕ್ ಆಗುತ್ತೆ ಅನ್ನೋದು ಅವ್ರ ಸಜೇಷನ್. ಇತ್ತ ದೇವದತ್ ಪಡಿಕ್ಕಲ್ ಕೂಡ ಚೆನ್ನಾಗಿ ಆಡಿದ್ದಾರೆ. ಆದ್ರೆ ಸೆಲೆಕ್ಟರ್ಸ್ ಮಾತ್ರ ನಮಗೆ ಪವರ್ ಇದೆ ನಾವು ಆಡಿದ್ದೇ ಆಟ ಮಾಡಿದ್ದೇ ರೂಲ್ಸ್ ಅಂತಾ ಕ್ಯಾರೇ ಅನ್ನಲಿಲ್ಲ. ಹೋಗ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯನಾದ್ರೂ ತಗೊಳ್ರಯ್ಯಾ ಅಂದ್ರೆ ಏಜ್ ಮ್ಯಾಟ್ರ್ ಆಗುತ್ತೆ ಅಂತಾರೆ. ಭುವನೇಶ್ವರ್ ಕುಮಾರ್​ಗೆ 36, ಕೃನಾಲ್ ಪಾಂಡ್ಯಗೆ 35 ವರ್ಷ.. ನಾವು ಫ್ಯೂಚರ್ ಟೀಂ, ಯಂಗ್ ಸ್ಟರ್ಸ್ ಟೀಂ ಕಟ್ಟೋದು ಅಂತಾ ಕಥೆ ಹೊಡೆದ್ರು. ಆದ್ರೆ ಬಿಸಿಸಿಐ ಮ್ಯಾನೇಜ್​ಮೆಂಟ್​ಗೆ ಟ್ಯಾಲೆಂಟ್​ಗಿಂತ ಕೋಟಾ ಆಟಗಾರರೇ ಇಂಪಾರ್ಟೆಂಟ್ ಅನ್ನೋದು ಇಲ್ಲಿ ಕ್ಲಿಯರ್ ಆಗಿ ಗೊತ್ತಾಗ್ತಿದೆ.

ವಿಕೆಟ್ ಇಲ್ಲದ ಮಯಾಂಕ್ ಓಕೆ.. 19 ವಿಕೆಟ್ಸ್ ಪಡೆದ್ರೂ ರಸಿಕ್ ಬೇಡ!

ಇನ್ನು ಆರ್​ಸಿಬಿಯ ಮತ್ತೊಬ್ಬ ಸ್ಟಾರ್ ಬೌಲರ್ ರಸಿಕ್ ಸಲಾಂ ದಾರ್ ವಿಚಾರದಲ್ಲೂ ಹೀಗೇ ಆಗಿದೆ. 26 ವರ್ಷದ ರಸಿಕ್ 2026ರ ಐಪಿಎಲ್ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಟ್ಯಾಲೆಂಟ್ ತೋರಿಸಿದ್ರು. ಹಾಗೇ ಈ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅನ್‌ಕ್ಯಾಪ್ಡ್ ಆಟಗಾರನಾಗಿ ಸದ್ದು ಮಾಡಿದ್ರು. ಪವರ್​ ಪ್ಲೇ ಹಾಗೂ ಡೆತ್ ಓವರ್​ಗಳಲ್ಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಆರ್​ಸಿಬಿ ಚಾಂಪಿಯನ್ ಆಗುವಲ್ಲಿ ಒನ್ ಆಫ್ ದಿ ರೀಸನ್. ಹೀಗಿದ್ರೂ ಜಿಂಬಾಬ್ವೆ ಪ್ರವಾಸಕ್ಕೂ ರಸಿಕ್ ಮ್ಯಾನೇಜ್​ಮೆಂಟ್ ಕಣ್ಣಿಗೆ ಕಂಡಿಲ್ಲ. ಆದ್ರೆ ಇಡೀ ಐಪಿಎಲ್​ನಲ್ಲಿ ಆಡದೇ ಇದ್ದವು, ಒಂದೂ ವಿಕೆಟ್ ತೆಗೆಯದೇ ಇದ್ದವ್ರು, ಬೆಂಚ್ ಕಾದವ್ರನ್ನ ದುರ್ಬಿನ್ ಹಾಕಿ ಹುಡ್ಕಿ ತಂದಿದ್ದಾರೆ. ಹರ್ಷಿತ್ ರಾಣಾನೇ ತಗೊಳ್ಳಿ ಇಂಜುರಿ ಅಂತಾ ಐಪಿಎಲ್​ನಲ್ಲಿ ಒಂದೇ ಒಂದು ಮ್ಯಾಚ್ ಆಡಿಲ್ಲ. ಬಟ್ ಪ್ಲೇಯಿಂಗ್ 11ನಲ್ಲಿ ಆತ ಗಂಭೀರ್ ಕೋಟಾದಲ್ಲಿ ಚಾನ್ಸ್ ಇದ್ದೇ ಇರುತ್ತೆ. ಇನ್ನು ಜಿಂಬಾಬ್ವೆ ಪ್ರವಾಸಕ್ಕೆ ಸೆಲೆಕ್ಟ್ ಆಗಿರೋ ಪೈಕಿ ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಾಯಾಂಕ್ ಯಾದವ್‌ ಇದ್ದಾರೆ. 2026ರ ಐಪಿಎಲ್​​ನಲ್ಲಿ ಯಶ್ ಠಾಕೂರ್ 10 ಪಂದ್ಯಗಳಿಂದ 9 ವಿಕೆಟ್, ಮಯಾಂಕ್ ಯಾದವ್ 4 ಪಂದ್ಯಗಳಿಂದ 0, ಅಶೋಕ್ ಶರ್ಮಾ 6 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ರು. ಇವ್ರಿಗೆಲ್ಲಾ ಅವಕಾಶ ಕೊಟ್ರೂ ರಸಿಕ್​ಗೆ ಯಾಕಿಲ್ಲ ಅನ್ನೋದೇ ಕ್ರಿಕೆಟ್ ಎಕ್ಸ್​ಪರ್ಟ್​ಗಳ ವಾದ ಕೂಡ. ಹಾಗಂತ ಇಲ್ಲಿ ಆರ್​ಸಿಬಿ ಪ್ಲೇಯರ್ಸ್ ಅನ್ನೋ ಕಾರಣಕ್ಕೆ ಚಾನ್ಸ್ ಕೊಡಿ ಅಂತಾ ಯಾರೂ ಹೇಳ್ತಿಲ್ಲ. ಟ್ಯಾಲೆಂಟ್ ನೋಡಿ ಕೊಡ್ರಪ್ಪ ಅಂತಷ್ಟೇ ಹೇಳ್ತಿರೋದು. ಇಲ್ಲ ನಾವು ಕೋಟಾ ಆಟಗಾರರಿಗೆ ಮಾತ್ರ ಮಣೆ ಹಾಕೋದು ಅಂದ್ರೆ ಟೀಂ ಇಂಡಿಯಾ ಸ್ಥಿತಿ ಇನ್ನಷ್ಟು ಕುಸಿಯುತ್ತೆ ಅಷ್ಟೇ.

ಭಾರತ ಬ್ಯಾಕ್ ಟು ಬ್ಯಾಕ್ ಟಿ-20ಐ ಸರಣಿಗಳನ್ನ ಸೋತಿದ್ದು ಕೋಟ್ಯಂತರ ಭಾರತೀಯ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗುವಂತೆ ಮಾಡಿದೆ. ಎರಡೂ ಸೋಲುಗಳು ಕೂಡ ಟೀಂ ಇಂಡಿಯಾ ಪಾಲಿಗೆ ಬ್ಲ್ಯಾಕ್ ಮಾರ್ಕ್ ಆಗಿ ಉಳಿಯಲಿವೆ. ಅಷ್ಟಕ್ಕೂ ಈ ಸೋಲಿಗೆ ಬಿಸಿಸಿಐನ ಬಿಗ್​ಬಾಸ್​ಗಳು ಮಾಡಿದ ತಪ್ಪುಗಳೇ ಕಾರಣವಾಗಿದೆ.

Shantha Kumari

Leave a Reply

Your email address will not be published. Required fields are marked *