12 ವರ್ಷ ಆಯಸ್ಸು.. ಇಷ್ಟದ ಊಟವಿಲ್ಲ – RCB ಆಟಗಾರ ಕ್ಯಾಮರೂನ್ ಗ್ರೀನ್ ಬದುಕಿನ ರೋಚಕ ಕಥೆ

12 ವರ್ಷ ಆಯಸ್ಸು.. ಇಷ್ಟದ ಊಟವಿಲ್ಲ – RCB ಆಟಗಾರ ಕ್ಯಾಮರೂನ್ ಗ್ರೀನ್ ಬದುಕಿನ ರೋಚಕ ಕಥೆ

ಬ್ಯಾಟ್ ಎತ್ತಿದರೆ ಸಿಕ್ಕಾಪಟ್ಟೆ ಸೌಂಡ್.. ಫೀಲ್ಡಿಗಿಳಿದರೆ ಸಿಡಿಗುಂಡು.. ಕ್ರಿಕೆಟ್ ಅಂದ್ರೆ ಜಗತ್ತು.. 24 ವರ್ಷದ ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾದ ಜನರ ಮನಗೆದ್ದಿದ್ದು ಮಾತ್ರವಲ್ಲ. ಆರ್​ಸಿಬಿ ಫ್ಯಾನ್ಸ್​ಗೂ ತುಂಬಾನೇ ಇಷ್ಟ. ಆದ್ರೆ, ಅದ್ಯಾಕೋ ಈ ಬಾರಿ ಗ್ರೀನ್ ಡಲ್ ಆಗಿದ್ದಾರೆ. ಐಪಿಎಲ್​ನಲ್ಲಿ ಗ್ರೀನ್ ಇದ್ದರೆ ಗೆಲುವು ಗ್ಯಾರಂಟಿ ಅಂತಾ ಬೀಗುತ್ತಿದ್ದ ಆರ್ಸಿಬಿಯಲ್ಲಿ ಗ್ರೀನ್ ಬ್ಯಾಟ್ ಸದ್ದು ಮಾಡ್ತಿಲ್ಲ. ಮುಂದಿನ ಪಂದ್ಯಗಳಲ್ಲಾದ್ರೂ ಆರ್ಸಿಬಿಯ ಈ ದುಬಾರಿ ಆಟಗಾರ ರನ್ ಮಳೆ ಸುರಿಸಬಹುದು ಅನ್ನೋ ನಿರೀಕ್ಷೆ ಅಂತೂ ಫ್ಯಾನ್ಸ್​ಗಿದೆ. ಆದ್ರೆ ಶಾಕಿಂಗ್ ವಿಷ್ಯ ಏನಂದ್ರೆ ಕ್ಯಾಮರೂನ್ ಗ್ರೀನ್ ಕೇವಲ 12 ವರ್ಷಗಳವರೆಗೆ ಮಾತ್ರ ಬದುಕುತ್ತಾನೆ ಅಂತಾ ವೈದ್ಯರೇ ಹೇಳಿದ್ರು. ಆದ್ರೂ ತನ್ನ ಕಾಯಿಲೆಯನ್ನೇ ಸೋಲಿಸಿ ಕ್ರಿಕೆಟ್ ಲೋಕದ ಹೀರೋ ಆಗಿ ಮರೆಯುತ್ತಿರೋ ಗ್ರೀನ್. ಕ್ಯಾಮರೂನ್ ಗ್ರೀನ್​ಗೆ ಕಾಡ್ತಿರೋ ಕಾಯಿಲೆ ಎಂಥಾದ್ದು ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಲಾರ್‌ 2 ಸೆಟ್ಟೇರುವುದು ಅನುಮಾನ! – ಚಿತ್ರ ನಿಲ್ಲಲು ಇದೇ ಕಾರಣ ಆಯ್ತಾ?

ಆರ್‌ಸಿಬಿ ಟೀಮ್​ನಲ್ಲಿರೋ ಸ್ಟಾರ್ ಆಟಗಾರರಲ್ಲಿ ಕ್ಯಾಮರೂನ್ ಗ್ರೀನ್ ಕೂಡಾ ಒಬ್ರು. ಬೆಂಗಳೂರು ಪ್ರಾಂಚೈಸಿ ದುಬಾರಿ ದುಡ್ಡು ಕೊಟ್ಟು ಆಸೀಸ್ ಕ್ರಿಕೆಟರ್​ನನ್ನ ಖರೀದಿಸಿತ್ತು. ಗ್ರೀನ್ ಬಂದಿದ್ರಿಂದ ಆರ್ಸಿಬಿ ಟೀಮ್ಗೂ ಬಲಬಂದಿತ್ತು. ಆದ್ರೆ, ಆರಕ್ಕೇರಲ್ಲ ಮೂರಕ್ಕಿಳಿಯಲ್ಲ ಎಂಬಂತೆ ಗ್ರೀನ್ ಈ ಸೀಸನ್ನಲ್ಲಿ ಸೌಂಡ್ ಮಾಡ್ತಿಲ್ಲ. ಹಾಗಂತಾ ಗ್ರೀನ್ ಆಡಲ್ಲ ಅಂತಾ ಹೇಳೋಕೂ ಆಗಲ್ಲ. ಯಾವಾಗ ಬೇಕಾದರೂ ಕಮ್ ಬ್ಯಾಕ್ ಮಾಡಬಲ್ಲ ಸ್ಫೋಟಕ ಬ್ಯಾಟರ್ ಈ ಕ್ಯಾಮರೂನ್ ಗ್ರೀನ್. ಕೇವಲ 24ರ ಹರೆಯದ ಈ ಸ್ಟಾರ್ ಕ್ರಿಕೆಟರ್ ಗೆ ಪದೇ ಪದೇ ಅದೊಂದು ನೋವು ಕಾಡುತ್ತಲೇ ಇದೆ. ಹೀಗಾಗಿಯೇ ಯಾರ ಜೊತೆಗೂ ಅಷ್ಟೊಂದು ಬೆರೆಯೋದಿಲ್ಲ. ತಮ್ಮ ಈ ಸ್ವಭಾವಕ್ಕೆ ತಾವು ಎದುರಿಸಿರುವ ಆರೋಗ್ಯ ಸಮಸ್ಯೆಯೇ ಮೈನ್ ರೀಸನ್ ಅಂತಾ ಸ್ವತಃ ಗ್ರೀನ್ ಅವರೇ ಹೇಳ್ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿಕ್ಕಂದಿನಲ್ಲಿ ಹೆಚ್ಚು ವರ್ಷ ಬದುಕುಳಿಯುವ ಸಾಧ್ಯತೆ ಇರಲಿಲ್ಲ ಅನ್ನೋ ಕಹಿಸತ್ಯವನ್ನು ಹಂಚಿಕೊಂಡಿದ್ದಾರೆ. ಗ್ರೀನ್ ಗೆ ಕಾಡುತ್ತಿರೋದು ಮೂತ್ರಪಿಂಡದ ರೋಗ. ಇವರಿಗೆ ಕ್ರಾನಿಕ್ ಕಿಡ್ನಿ ಡಿಸೀಸ್ ಇರುವುದು ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಈ ಸಮಸ್ಯೆ ಇದ್ದವರಲ್ಲಿ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಗ್ರೀನ್ ಅವರ ತಾಯಿ ಬೀ ಟ್ರೇಸಿ 19 ವಾರಗಳ ಗರ್ಭಾವಸ್ತೆಯಲ್ಲಿ ಇದ್ದಂತಹ ಸಮಯದಲ್ಲಿ ನಡೆಸಲಾಗಿದ್ದ ಅಲ್ಟ್ರಾಸೌಂಡ್ ಸ್ಕ್ಯಾನ್ ವೇಳೆ ಈ ಸಮಸ್ಯೆ ಬಗ್ಗೆ ತಿಳಿದುಬಂದಿತ್ತು. ಅಂದು ವೈದ್ಯರು ನಿಮ್ಮ ಆಯಸ್ಸು ಕೇವಲ 12 ವರ್ಷ ಮಾತ್ರ ಎಂದಿದ್ದರಂತೆ. ಇಂತಹ ಆರೋಗ್ಯದ ಸಮಸ್ಯೆ ವಿರುದ್ಧ ಹೋರಾಡಿ ಇಂದು ಕ್ಯಾಮರೂನ್ ಗ್ರೀನ್ ಅತ್ಯಂತ ಯಶಸ್ವಿ ಕ್ರಿಕೆಟ್ ವೃತ್ತಿಬದುಕು ಕಟ್ಟಿಕೊಂಡಿದ್ದಾರೆ.

ಗ್ರೀನ್​ರನ್ನ ಕಾಡುತ್ತಿರೋದು ತೀರಾ ಅಪರೂಪದ ಕ್ರಾನಿಕ್ ಕಿಡ್ನಿ ಡಿಸೀಸ್. ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಂಪೂರ್ಣ ಚೇತರಿಕೆ ಎಂದಿಗೂ ಸಾಧ್ಯವಿಲ್ಲ ಅನ್ನೋದು ಗ್ರೀನ್​ಗೂ ಗೊತ್ತಿದೆ. ಆದರೆ ಇರುವಷ್ಟು ದಿನ ತನ್ನ ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಬೇಕು ಅನ್ನೋದೇ ಆಸಿಸ್ ಆಟಗಾರನ ಉದ್ದೇಶ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇದ್ರೂ ಗ್ರೀನ್ ಕ್ರಿಕೆಟ್​​ನಲ್ಲಿ ಯಶಸ್ಸು ಕಾಣಲು ಕಾರಣ ಅವರು ಪಾಲಿಸುವ ಆಹಾರ ಹಾಗೂ ದಿನಚರಿ. ಆರ್​ಸಿಬಿಗೆ ಬಂದ ಮೇಲೂ ಗ್ರೀನ್ ಅವರು ತಂಡದ ಮುಖ್ಯ ಚೆಫ್ ಸಹಾಯದಿಂದ ವಿಶೇಷ ಆಹಾರವನ್ನು ರೆಡಿ ಮಾಡಿಕೊಳ್ತಾರೆ. ಸಾಮಾನ್ಯವಾಗಿ ಮೂತ್ರಪಿಂಡ ಕಾಯಿಲೆಯಿಂದ ಬಳಲುವವರಿಗೆ ಆಹಾರದ ಆಯ್ಕೆಗಳು ಬಹಳ ಸೀಮಿತವೂ ಆಗಿದೆ. ಆದ್ರೂ ಟೂರ್ನಿಯ ವೇಳೆ ತಮ್ಮ ಫಿಟ್​ನೆಸ್ ಕಾಯ್ದುಕೊಳ್ಳಲು ಫ್ರಾಂಚೈಸಿ ವಹಿಸುತ್ತಿರುವ ಶ್ರಮದ ಬಗ್ಗೆ ಕ್ಯಾಮರೂನ್ ಗ್ರೀನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ನನಗೆ ಆಹಾರ ವಿಚಾರದಲ್ಲಿ ಭಾರತ ತುಂಬಾನೇ ಸವಾಲು. ಯಾಕಂದ್ರೆ ನನ್ನ ಕಂಡೀಷನ್​ಗೆ ಇಲ್ಲಿನ ಆಹಾರದ ಆಯ್ಕೆಗಳು ಕೂಡ ಬಹಳ ಸೀಮಿತ. ನನ್ನ ದೇಹಕ್ಕೆ ಅಗತ್ಯವಾಗಿರುವ ಉಪ್ಪು ಹಾಗೂ ಪ್ರೋಟೀನ್ ಅನ್ನು ನಾನು ನೋಡಿಕೊಳ್ಳಬೇಕು. ಕ್ರಿಕೆಟ್ ಸಮಯದಲ್ಲಿ ಇವುಗಳನ್ನು ಬಹಳ ಕನಿಷ್ಠವಾಗಿ ಇಟ್ಟುಕೊಳ್ಳಬೇಕು. ನಾನು ನನ್ನ ಉಪ್ಪಿನ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಬಹುದು. ಯಾಕಂದ್ರೆ ನನಗೆ ಕ್ರಿಕೆಟ್ ಆಡಲು ಇದು ಅಗತ್ಯವಾಗಿರುತ್ತದೆ. ಮೈದಾನದಲ್ಲಿ ಒಳ್ಳೆ ಪ್ರದರ್ಶನ ನೀಡಬೇಕು ಅಂದ್ರೆ ಊಟದ ವಿಚಾರದಲ್ಲಿ  ಸಾಕಷ್ಟು ಕಟ್ಟುನಿಟ್ಟಾಗಿರಬೇಕು. ನಾನೇನಾದ್ರೂ ನನ್ನನ್ನು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ದೀರ್ಘಕಾಲೀನ ಆರೋಗ್ಯದ ಅಪಾಯಗಳಿವೆ ಎಂದು ಗ್ರೀನ್ ತಿಳಿಸಿದ್ದಾರೆ. ಇನ್ನುಆರ್ಸಿಬಿ ಟೀಮ್ ನನಗೆ ಮಾಡುತ್ತಿರುವ ಸಹಾಯವನ್ನು ನೆನಪಿಸಿಕೊಳ್ಳಲೇಬೇಕಿದೆ. ಇಲ್ಲಿನ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ಚೆಫ್ ಜೊತೆ ನಾನು ನಿತ್ಯ ಸಂಪರ್ಕದಲ್ಲಿರುತ್ತೇನೆ. ನನ್ನ ಸ್ಪೆಷಲ್ ಡಯಟ್ ಅನ್ನು ಅವರೇ ಪ್ಲ್ಯಾನ್ ಮಾಡ್ತಾರೆ. ನನಗೆ ಏನು ಅಗತ್ಯವಿದೆಯೋ ಅಷ್ಟೇ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುತ್ತೇವೆ. ಸರಿಯಾದ ಪ್ರೋಟೀನ್ ಇರುವಂಥ ಆಹಾರವನ್ನು ಮಾತ್ರವೇ ಸೇವಿಸುವ ಕಾರಣ ಕ್ರಿಕೆಟ್ ಅನ್ನು ನಿರಾತಂಕವಾಗಿ ಆಡಲು ಸಾಧ್ಯವಾಗುತ್ತದೆ. ಉಪ್ಪಿನ ಪ್ರಮಾಣ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರವೇ ತೆಗೆದುಕೊಳ್ಳುತ್ತೇನೆ. ಇಲ್ಲಿಯವರೆಗೂ ಆರ್​ಸಿಬಿ ಫ್ರಾಂಚೈಸಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ ಎಂದು ಗ್ರೀನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ತಮಗಿರುವ ಮೂತ್ರಪಿಂಡ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಗ್ರೀನ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಕಿಡ್ನಿ ಫೌಂಡೇಶನ್​ಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದರು. ಈ ಫೌಂಡೇಷನ್​ಗೆ ಹೋಗಲು ಸಮಯ ಸಿಕ್ಕಿದ್ದಕ್ಕೆ ನಾನು ಅದೃಷ್ಟ ಮಾಡಿದ್ದೆ.  ಕೆಲವು ಉತ್ತಮ ಸಮಯ ಅಲ್ಲಿ ಕಳೆದೆ. ಫೌಂಡೇಷನ್ ಅನ್ನು ನಡೆಸುತ್ತಿರುವ ರೀತಿಯ ಬಗ್ಗೆ ಪ್ರಭಾವಿತನಾಗಿದ್ದೇನೆ. ತುಂಬಾ ಅದ್ಭುತವಾದ ಸಿಬ್ಬಂದಿ ಇಲ್ಲಿದ್ದಾರೆ. ಕೆಲವು ರೋಗಿಗಳನ್ನು ಕೂಡ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದೆ. ಇಲ್ಲಿನ ಕೆಲವರು ಪ್ರತಿದಿನ ಡಯಾಲಿಸಿಸ್​ಗೆ ಒಳಗಾಗುತ್ತಿದ್ದಾರೆ. ಅವರ ದಿನದ ಹೆಚ್ಚಿನ ಸಮಯವನ್ನು ಅದಕ್ಕಾಗಿ ಮೀಸಲಿಟ್ಟಿದ್ದಾರೆ ಎಂದು ಗ್ರೀನ್ ತಮ್ಮ ಅನುಭವ ಹಂಚಿಕೊಂಡಿದ್ದರು.

ಇಷ್ಟೆಲ್ಲಾ ಸಮಸ್ಯೆಯಿಂದ ಬಳಲ್ತಿರೋ ಗ್ರೀನ್​ಗೆ ಮತ್ತೊಂದು ಸಮಸ್ಯೆಯೂ ಇದೆ. ಅದೇನಂದ್ರೆ ಗ್ರೀನ್​ ಕೆಲವೊಮ್ಮೆ ಫೀಲ್ಡ್​ನಲ್ಲಿ ಆಡುವಾಗಲೇ ಆರೋಗ್ಯ ಸಮಸ್ಯೆಗೆ ತುತ್ತಾಗಿ ಮೈದಾನದಿಂದ ಹೊರ ನಡೆದ ಹಲವು ಪ್ರಸಂಗಗಳಿವೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಕ್ಯಾಮರೂನ್ ಗ್ರೀನ್ ಅವರ ಮಾಂಸಖಂಡಗಳಲ್ಲಿ ದಿಢೀರ್ ಸೆಳೆತ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೆ ಅವರ ಕಿಡ್ನಿ ಸಮಸ್ಯೆಯೇ ಮುಖ್ಯ ಕಾರಣವಾಗಿತ್ತು ಎನ್ನಲಾಗಿದೆ. ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಕೆಲವೊಮ್ಮೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂದು ಗ್ರೀನ್ ವಿವರಿಸಿದ್ದರು. ಪಂದ್ಯದ ವೇಳೆ ನಾನು ಸರಿಯಾಗಿ ನೀರು ಕುಡಿದಿಲ್ಲ, ಆಹಾರ ಸೇವಿಸಿಲ್ಲ, ನನ್ನ ಬಗ್ಗೆ ಕಾಳಜಿ ವಹಿಸಲಿಲ್ಲ. ಅದೇ ಕಾರಣಕ್ಕೆ ಮಾಂಸಖಂಡಗಳಲ್ಲಿ ಸೆಳೆತ ಎದುರಾಗುತ್ತದೆ ಎಂದು ಅಂದುಕೊಂಡಿದ್ದೆ. ಆದರೆ, ನಾನು ಎಲ್ಲವನ್ನೂ ಸರಿಯಾಗಿ ಮಾಡಿದ್ದರೂ ಕೂಡ ಸಮಸ್ಯೆ ಎದುರಾಗುತ್ತದೆ ಎಂಬುದು ನನಗೆ ತಡವಾಗಿ ಅರಿವಾಗಿತ್ತು ಎಂದಿದ್ದರು. ಹೀಗೆ ಮಾರಕ ಕಾಯಿಲೆಗೆ ತುತ್ತಾಗಿದ್ರೂ ಗ್ರೀನ್​ ಛಲ ಬಿಡದೆ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಾಧನೆಗಳ ಮೈಲುಗೈ ಸಾಧಿಸುತ್ತಿದ್ದಾರೆ.

Shwetha M