ಪಡಿಕ್ಕಲ್‌ ಗೆ ಕಾಡಿದ ಅನಾರೋಗ್ಯ.. ಕ್ರಿಕೆಟ್‌ ಬಿಡಲು ನಿರ್ಧರಿಸಿದ್ರಾ RCB ಬಾಯ್‌?

ಪಡಿಕ್ಕಲ್‌ ಗೆ ಕಾಡಿದ ಅನಾರೋಗ್ಯ.. ಕ್ರಿಕೆಟ್‌ ಬಿಡಲು ನಿರ್ಧರಿಸಿದ್ರಾ RCB ಬಾಯ್‌?

ಈ ಸಲನಾದ್ರೂ ಕಪ್‌ ನಮ್ದಾಗುತ್ತಾ ಅಂತಾ ಆರ್‌ ಸಿಬಿ ಫ್ಯಾನ್ಸ್‌ ಸತತ 18 ವರ್ಷಗಳಿಂದ ಕಾಯ್ತಾ ಬಂದಿದ್ದಾರೆ. ಈ ಬಾರಿ ಬೆಂಗಳೂರು ಬಾಯ್ಸ್‌ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಹೀಗಾಗಿ ಕಪ್‌ ಗೆದ್ದೇ ಗೆಲ್ತಾರೆ ಅಂತಾ ಫ್ಯಾನ್ಸ್‌ ಹೋಪ್‌ ಇಟ್ಕೊಂಡಿದ್ದಾರೆ. ಇದೀಗ ತಂಡಲ್ಲಿ ಕನ್ನಡಿಗ ದೇವದತ್ತ್‌ ಪಡಿಕ್ಕಲ್‌ ಸ್ಪೋಟಕ ಬ್ಯಾಟಿಂಗ್‌ ಮೂಲಕ ಅಬ್ಬರಿಸ್ತಿದ್ದಾರೆ. ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸ್ತಿದ್ದಾರೆ. ಆದ್ರೆ ಪಡಿಕ್ಕಲ್‌ ಒಂದು ಟೈಮ್‌ ನಲ್ಲಿ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ರು. ಇದ್ರಿಂದಾಗಿ ತಮ್ಮ ಅಚ್ಚುಮೆಚ್ಚಿನ ಆಟ ಕ್ರಿಕೆಟ್‌ ಅನ್ನ ಬಿಡಲು ನಿರ್ಧರಿಸಿದ್ರು.

ಇದನ್ನೂ ಓದಿ:  ಇಂಗ್ಲೆಂಡ್ ಸರಣಿಗೂ ಮುನ್ನವೇ ಟೆಸ್ಟ್ ಗೆ ವಿರಾಟ್ ವಿದಾಯ? – ಟೀಂ ಇಂಡಿಯಾಗೆ ದೊಡ್ಡ ಹೊಡೆತ!

ದೇವದತ್ ಪಡಿಕ್ಕಲ್ ಹುಟ್ಟಿದ್ದು ಕೇರಳವಾದರೂ, ಚಿಕ್ಕವಯಸ್ಸಿನಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಹೀಗಾಗಿ ಕನ್ನಡಿಗನಾಗಿ ಬೆಳೆದ ದೇವದತ್ ಪಡಿಕ್ಕಲ್ ಅಂದಿನಿಂದಲ್ಲೂ ಆರ್‌ಸಿಬಿಯ ಅಪ್ಪಟ ಅಭಿಮಾನಿ. ಕಳೆದ ಎರಡು ಸೀಸನ್‌ಗಳಿಂದ ಕೈ ತಪ್ಪಿ ಹೋಗಿದ್ದ ಸ್ಪೋಟಕ ಬ್ಯಾಟರ್ ಪಡಿಕ್ಕಲ್ ಅವರನ್ನು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಬಿಡ್ ಮಾಡಿ ತಂಡಕ್ಕೆ ಮತ್ತೆ ಕರೆ ತಂದಿದೆ. ನಿರೀಕ್ಷೆಗೆ ತಕ್ಕಂತೆ ಪಡಿಕ್ಕಲ್ ಪ್ರದರ್ಶನ ನೀಡುತ್ತಿದ್ದಾರೆ.  ಕನ್ನಡಿಗ ದೇವದತ್ ಪಡಿಕ್ಕಲ್  ಸಖತ್ ಫಾರ್ಮ್‌ನಲ್ಲಿದ್ದಾರೆ. ಪಡಿಕ್ಕಲ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಆದ್ರೆ ಕೆಲ ಸಮಯದ ಹಿಂದೆ ಪಡಿಕ್ಕಲ್‌ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕ್ರಿಕೆಟ್ ಅನ್ನು ತೊರೆಯಲು ನಿರ್ಧರಿಸಿದ್ರಂತೆ.

ಹೌದು, ಇತ್ತೀಚೆಗೆ ದೇವದತ್‌ ಪಡಿಕ್ಕಲ್ ಆರ್‌ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ  ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ತಮ್ಮ ಜೀವನದ ಕಹಿ ಘಟನೆಗಳನ್ನ ಬಿಚ್ಚಿಟ್ಟಿದ್ದಾರೆ.  2022 ರಲ್ಲಿ ಪಡಿಕ್ಕಲ್‌ ಅನಾರೋಗ್ಯಕ್ಕೆ ತುತ್ತಾಗಿದ್ರು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ರು. ಬಳಿಕ ವೈದ್ಯಕೀಯ ತಪಾಸನೆಯಲ್ಲಿ ಪಡಿಕ್ಕಲ್‌ ಗೆ ಅಲ್ಸರೇಟಿವ್ ಕೊಲೈಟಿಸ್ ಎಂಬ ಆರೋಗ್ಯ ಸಮಸ್ಯೆ ಇದೆ ಅನ್ನೋದು ಗೊತ್ತಾಯ್ತು. ಇದ್ರಿಂದಾಗಿ ದೇವದತ್‌ ಕ್ರಿಕೆಟ್‌ ಕೆರಿಯರ್‌ ಗೂ ತೊಂದರೆಯಾಯ್ತು. ಅಂದ್ಹಾಗೆ ಅಲ್ಸರೇಟಿವ್ ಕೊಲೈಟಿಸ್ ಅನ್ನೋದು ಕರುಳು ಸಂಬಂಧಿತ ಕಾಯಿಲೆ.   ಕರುಳಿನ ಮೇಲೆ ಅಲ್ಸರ್ ಆಗೋದು. ಸಾಮಾನ್ಯವಾಗಿ ನಮ್ಮ ದೇಹದೊಳಗೆ ಯಾವುದ್ರು ಕೆಟ್ಟ ಬ್ಯಾಕ್ಟೀರಿಯಾ ಪ್ರವೇಶ ಆದ್ರೆ,  ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಕೇಳೋದಕ್ಕೆ ಸಾಮಾನ್ಯ ಎನಿಸಿದರೂ, ಕೆಲವೊಮ್ಮೆ ಪ್ರಾಣ ಕೂಡ ಕಳೆದುಕೊಂಡಿರುವ ಉದಾಹರಣೆಗಳಿವೆ. ಇಂತಹದ್ದೇ ಪರಿಸ್ಥಿತಿಯನ್ನ ಪಡಿಕ್ಕಲ್‌ ಫೇಸ್‌ ಮಾಡಿದ್ರು. ಇದ್ರಿಂದಾಗೆ ಇವ್ರ ಕ್ರಿಕೆಟ್‌ ಕೆರಿಯರ್‌ ಗೆ ತೊಂದರೆಯಾಯ್ತು.

ಹೌದು, ದೇವದತ್‌ ಅನಾರೋಗ್ಯಕ್ಕೆ  ತುತ್ತಾದ್ಮೇಲೆ ಸಾಕಷ್ಟು ತೊಂದರೆ ಅನುಭವಿಸಿದ್ರು. ಪಡಿಕ್ಕಲ್ ಫಿಟ್ ಆಗಿದ್ದರೂ ಯಾವಾಗಲೂ ಆಯಾಸವಾಗುತ್ತಿತ್ತು. ಕೇವಲ ಎರಡೇ ತಿಂಗಳಲ್ಲಿ 10-12 ಕೆಜಿ ತೂಕ ಇಳಿಕೆಯಾಯ್ತು. ಅಷ್ಟೇ ಅಲ್ಲ 3 ರಿಂದ 4 ತಿಂಗಳು ಕ್ರಿಕೆಟ್‌ ಆಡೋದನ್ನ ಬಿಡಬೇಕಾಯಿತು. ಈ ವೇಳೆ ತಾನು ಕ್ರಿಕೆಟ್‌ನಲ್ಲಿ ಮುಂದುವರಿಯೋದು ಡೌಟ್‌ ಅಂತ ಅನ್ನಿಸಲು ಶುರುವಾಯ್ತು. ಮಾನಸಿಕವಾಗಿ ಕುಗ್ಗಿದ್ದ ಪಡಿಕ್ಕಲ್‌,  ಕ್ರಿಕೆಟ್‌ ಬಿಡಲು ನಿರ್ಧರಿಸಿದ್ರು. ಆದ್ರೂ ಪಡಿಕ್ಕಲ್‌ ಹೋಪ್‌ ಕಳೆದುಕೊಳ್ಳಲಿಲ್ಲ.. ವೈದ್ಯರ ಸಲಹೆಯಂತೆ ಚಿಕಿತ್ಸೆ ತೆಗೆದುಕೊಳ್ಳಲು ಶುರುಮಾಡಿದ್ರು.. ಕಠಿಣ ಡಯೆಟ್‌ ಫಾಲೋ ಮಾಡಿದ್ರು.. ಬರು ಬರುತ್ತಾ ಅವ್ರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಾಣಿಸಿಕೊಳ್ಳಲು ಶುರುವಾಯ್ತು.. ಅದೃಷ್ಟವಶಾತ್ ಈ ಎಲ್ಲಾ ಸಮಸ್ಯೆಗಳಿಂದ ಪಾರಾದ್ರು.

Shwetha M