7 ವರ್ಷ ಡೇಟಿಂಗ್, ಲಂಡನ್ ನಲ್ಲಿ ಪ್ರಪೋಸ್! – ಆಶಿತಾ ಸೂದ್‌ಗೆ RCB ಪ್ಲೇಯರ್ ಮಯಾಂಕ್ ಬೌಲ್ಡ್!

ಮಯಾಂಕ್ ಅಗರ್ವಾಲ್.. ಸುಮಾರು 12 ವರ್ಷಗಳ ಬಳಿಕ ಮತ್ತೆ RCB ಗೆ ಕನ್ನಡಿಗ ಕಮ್‌ಬ್ಯಾಕ್ ಮಾಡಿದ್ದಾರೆ. ದೇವದತ್ ಪಡಿಕ್ಕಲ್ ಗಾಯಗೊಂಡಿರುವ ಹಿನ್ನೆಲೆ ಮಯಾಂಕ್‌ನ ಬದಲಿ ಆಟಗಾರನಾಗಿ ಟೀಮ್ ಆಯ್ಕೆ ಮಾಡಲಾಗಿದೆ. ಆರ್‌ಸಿಬಿ ಟೀಮ್ ಗೆ ಮತ್ತೆ ಕಮ್‌ಬ್ಯಾಕ್ ಮಾಡ್ತಿದ್ದಂತೆ ಫ್ಯಾನ್ಸ್ ಕನ್ನಡಿಗನ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಮಯಾಂಕ್ ಗೆ ಮದುವೆ ಆಗಿದ್ಯಾ? ಹೆಂಡ್ತಿ ಯಾರು ಅಂತಾ ಫ್ಯಾನ್ಸ್ ಗೂಗಲ್‌ನಲ್ಲಿ ಸರ್ಚ್ ಮಾಡ್ತಿದ್ದಾರೆ. ಅಂದ್ಹಾಗೆ ಮಯಾಂಕ್ ಗೆ ಮದ್ವೆ ಆಗಿದೆ. ಬಾಲ್ಯದ ಗೆಳತಿಯನ್ನೇ ಮಯಾಂಕ್ ಮದ್ವೆ ಆಗಿದ್ದಾರೆ.
ಇದನ್ನೂ ಓದಿ: RCB ಫಾರ್ಮ್ ಕಳೆದುಕೊಳ್ಳುತ್ತಾ? – ನಾಲ್ವರು ಫಾರಿನ್ ಪ್ಲೇಯರ್ಸ್ ವಾಪಸ್?
ಕನ್ನಡಿಗ ಮಯಾಂಕ್ ಅಗರ್ವಾಲ್ ಕಳೆದ 12 ವರ್ಷಗಳ ಹಿಂದೆ ಆರ್‌ಸಿಬಿ ಪರ ಕಣಕ್ಕಿಳಿದಿದ್ದರು. ಅದರಲ್ಲೂ ಮಯಾಂಕ್ ಐಪಿಎಲ್ ಕೆರಿಯರ್ ಆರಂಭಿಸಿದ್ದು ಆರ್‌ಸಿಬಿ ಪರ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. 2011 ರಲ್ಲಿ ಮಯಾಂಕ್ ಅಗರ್ವಾಲ್ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. 2011 ರಿಂದ 2012 ರವರೆಗೆ ಉತ್ತಮ ಪ್ರದರ್ಶನ ನೀಡಿದ್ದ ಮಯಾಂಕ್ 2013 ರಲ್ಲಿ ಕಳಪೆ ಪ್ರದರ್ಶನ ನೀಡಿದ್ರು, ಇದ್ರ ಪರಿಣಾಮ ಮರು ವರ್ಷವೇ ಮಯಾಂಕ್ ನ ಆರ್‌ಸಿಬಿ ತಂಡದಿಂದ ಕೈ ಬಿಟ್ಟಿತ್ತು. ಇದಾದ ಬಳಿಕ 2014 ರಿಂದ 2016ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 2017 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡದಲ್ಲಿದ್ದ ಮಯಾಂಕ್ ಅವರು ಆ ಬಳಿಕ 2018 ರಿಂದ 2022 ರವರೆಗೆ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. 2023 ಹಾಗೂ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಂಡಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಬದಲಿ ಆಟಗಾರನಾಗಿ ಕನ್ನಡಿಗ ಆರ್‌ಸಿಬಿ ತಂಡಕ್ಕೆ ರಿಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಬರೋಬ್ಬರಿ 12 ವರ್ಷಗಳ ಬಳಿಕ ಎಂಬುದು ವಿಶೇಷ.ಇದೀಗ ಮಯಾಂಕ್ ಬೆಂಗಳೂರು ಟೀಮ್ ಗೆ ಎಂಟ್ರಿ ಆಗ್ತಿದ್ದಂತೆ ಅವರ ವೈಯಕ್ತಿಕ ಜೀವನ ಕೂಡ ಮುನ್ನಲೆಗೆ ಬಂದಿದೆ. ಮಯಾಂಕ್ ಬಾಲ್ಯದ ಗೆಳತಿಯನ್ನ ಪ್ರೀತಿಸಿ ಮದುವೆ ಆಗಿದ್ದಾರೆ.
ಅಂದ್ಹಾಗೆ ಮಯಾಂಕ್ ಮದುವೆ ಆಗಿದ್ದು ಅಶಿತಾ ಸೂದ್ ಅವರನ್ನ.. ಅಶಿತಾ ಸೂದ್ ಸಿಬಿಐ ಮುಖ್ಯಸ್ಥ ಪ್ರವೀಣ್ ಸೂದ್ ಅವರ ಮಗಳು. ಅಶಿತಾ ಹಾಗೂ ಮಯಾಂಕ್ ಮೊದಲು ಮೀಟ್ ಆಗಿದ್ದು, ದೀಪಾವಳಿಯ ಸಮಯದಲ್ಲಿ.. ಅದು ಕೂಡ ಕುಟುಂಬ ಸಮಾರಂಭದಲ್ಲಿ. ಅಲ್ಲಿಂದ ಫ್ರೆಂಡ್ಸ್ ಆಗಿದ್ದ ಅಶಿತಾ ಹಾಗೂ ಮಯಾಂಕ್ ಮಧ್ಯೆ ಬರು ಬರುತ್ತಾ ಪ್ರೀತಿ ಚಿಗುರಿತು. ಸುಮಾರು ಏಳು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದ ಜೋಡಿ, ಮದುವೆ ಆಗಲು ನಿರ್ಧರಿಸಿದ್ದರು. ಮಯಾಂಕ್ 2018ರ ಜನವರಿಯಲ್ಲಿ ಆಶಿತಾಗೆ ಪ್ರಪೋಸ್ ಮಾಡಿದ್ದರು. ಲಂಡನ್ ನ ಥೇಮ್ಸ್ ನದಿಯ ದಡದಲ್ಲಿ ನಿರ್ಮಿಸಿರುವ ಏರಿಯಲ್ ಸ್ವಿಂಗ್ ಲಂಡನ್ ನಲ್ಲಿ ಆಶಿತಾಗೆ ಪ್ರೇಮ ನಿವೇದನೆ ಮಾಡಿದ್ದರು. ಅದಕ್ಕೆ ಆಶಿತಾ ಒಪ್ಪಿಗೆ ಕೂಡ ಸೂಚಿಸಿದ್ದರು. ಬಳಿಕ ಮನೆಯವರ ಒಪ್ಪಿಗೆ ಪಡೆದು ಈ ಜೋಡಿ 2018ರ ಜೂನ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ರು..
ಇನ್ನು ಆಶಿತಾ ಸೂದ್ ವೃತ್ತಿಯಲ್ಲಿ ವಕೀಲೆ.. ಬೆಂಗಳೂರಿನಲ್ಲೇ ಕಾನೂನು ವ್ಯಾಸಂಗ ಮಾಡಿದ್ದಾರೆ. ಆಶಿತಾರನ್ನ ಮದುವೆಯಾದ ನಂತರ ಮಯಾಂಕ್ ಅದೃಷ್ಟವೇ ಬದಲಾಯಿತು. ಮದುವೆಯಾದ ನಂತರ 2018ರಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದರು. 2018ರ ಡಿಸೆಂಬರ್ 26 ರಂದು ಮೆಲ್ಲೋರ್ನಲ್ಲಿ ಆಸ್ಟ್ರೇಲಿಯಾ ಎದುರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರು. ಆಶಿತಾ ಹಾಗೂ ಮಯಾಂಗ್ ಗೆ ಮುದ್ದಾದ ಮಗನಿದ್ದಾನೆ. ಅಯಾಂಶ್ ಎಂದು ಮಗುವಿಗೆ ಹೆಸರಿಟ್ಟಿದ್ದಾರೆ ಈ ದಂಪತಿ. ಇನ್ನು ಅಶಿತಾ ಸದಾ ಗಂಡನಿಗೆ ಸಪೋರ್ಟ್ ಮಾಡ್ತಿರ್ತಾರೆ. ಆಕೆ ಎಲ್ಲೇ ಪಂದ್ಯ ನಡೆದ್ರೂ ಸ್ಟೇಡಿಯಂ ಗೆ ಬಂದು ಗಂಡನಿಗೆ ಚಿಯರ್ ಅಪ್ ಮಾಡ್ತಾರೆ. ಈ ಮುದ್ದಾದ ಜೋಡಿ ಹೀಗೆ ಇರ್ಲಿ ಅಂತಾ ಫ್ಯಾನ್ಸ್ ಆಶಯ.

ನೋಡಿರಿ

