ಆರ್‌ಸಿಬಿ & ಪಂಜಾಬ್ ಟೀಮ್ ಪಾಲಿಗೆ ಕ್ಯಾಪ್ಟನ್ ಗಳೇ ದುಷ್ಮನ್ ಗಳಾದ್ರಾ?
ಐಪಿಎಲ್‌ನಲ್ಲಿ ಇಬ್ಬರು ಕ್ಯಾಪ್ಟನ್ಸ್ ತಮಗೆ ತಲೆಯೇ ಇಲ್ಲ ಎಂದು ಸಾಬೀತುಪಡಿಸಿದ್ದಾರೆ.. ಗೆಲ್ಲೋದಿಕ್ಕೆ ಇರೋ ಅವಕಾಶವನ್ನು ತಪ್ಪಿಸೋದು ಹೇಗೆ ಎನ್ನುವುದನ್ನು ಇವರನ್ನು ನೋಡಿಯೇ ಕಲೀಬೇಕು.. ಬ್ಯಾಟಿಂಗ್ ಆರ್ಡರ್ ಮೊದ್ಲು ಸೆಟ್ ಮಾಡಿದ್ದನ್ನೇ ಫಾಲೋ ಮಾಡೋಕಷ್ಟೇ ನಾವಿರೋದು ಎಂಬ ರೀತಿಯಲ್ಲಿ ಬ್ಯಾಟಿಂಗ್ ಗೆ ಕಳಿಸ್ತಿದ್ದಾರೆ.. ಇದ್ರಿಂದಾಗಿಯೇ ಈ ಎರಡು ಟೀಂಗಳನ್ನು ಹೊಡೆತ ತಿನ್ನುತ್ತಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ..
ಪಂಜಾಬ್ ಮತ್ತು ಹೈದ್ರಾಬಾದ್ ನಡುವಿನ ಮ್ಯಾಚ್ ನೋಡಿರಬಹುದು.. ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಪಂಜಾಬ್ ಕೇವಲ ಎರಡೇ ಎರಡು ರನ್ ಗಳಿಂದ ಸೋಲು ಕಂಡಿತ್ತು.. ಎರಡು ರನ್‌ಗೆ ಸೋತಾಗಲೂ ಈ ತಂಡದಲ್ಲಿ ಅತಿಹೆಚ್ಚು ಸ್ಕೋರ್ ಮಾಡಿದ್ದ ಇಬ್ಬರೂ ಬ್ಯಾಟ್ಸ್‌ಮನ್‌ಗಳು ನಾಟೌಟ್ ಆಗಿ ಉಳಿದಿದ್ದರು.. ಪಂಜಾಬ್ ಕಿಂಗ್ಸ್ ದಿಗ್ವಿಜಯ ಸಾಧಿಸಬೇಕು ಎಂಬ ರೀತಿಯಲ್ಲೇ ಆಟವಾಡಿದ್ದರು.. ಆದರೆ ತಂಡದ ಕ್ಯಾಪ್ಟನ್ ಮತ್ತು ಟೀಂ ಮ್ಯಾನೇಜ್ ಮೆಂಟ್‌ನ ಮೂರ್ಖತನದಿಂದಾಗಿ ಇವರಿಬ್ಬರೂ ಗೆಲುವಿನ ನಗೆ ಬೀರುವಲ್ಲಿ ಕಡೇ ಕ್ಷಣದಲ್ಲಿ ವಿಫಲರಾದ್ರು.. ಕಡೆಯ ಓವರ್‌ನಲ್ಲಿ 29 ರನ್ ಬೇಕಿತ್ತು ಗೆಲ್ಲಲು.. ಇಬ್ಬರೂ ಸೇರಿ 27 ರನ್ ಗಳಿಸಿ, ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದ್ದರು.. ಒಂದೇ ಒಂದು ಎಸೆತದಲ್ಲಿ ಇವರಿಬ್ಬರು ಮಾಡಿದ ಸಣ್ಣ ತಪ್ಪಿನಿಂದಾಗಿ ತಂಡ ಸೋಲಬೇಕಾಯ್ತು.. ಆದ್ರೆ ಅದಕ್ಕೆ ಜಡ್ಡ್‌ಮೆಂಟ್ ಎರರ್ ಅಂತಷ್ಟೇ ಹೇಳಬಹುದು.. ಅದು ಆ ಕ್ಷಣದಲ್ಲಿ ಸಂಭವಿಸುವ ಸಾಮಾನ್ಯ ಸಂಗತಿ.. ಆದರೆ ತಂಡದ ತಲೆಯಿಲ್ಲದ ಕ್ಯಾಪ್ಟನ್ ಮಾಡಿದ್ದು ಇದೆಲ್ಲಕ್ಕಿಂತ ದೊಡ್ಡ ಮಿಸ್ಟೇಕ್.. ಅದ್ರಿಂದಾಗಿಯೇ ಗೆಲ್ಲೋ ಅವಕಾಶವನ್ನು ಪಂಜಾಬ್ ಕಳೆದುಕೊಂಡಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ..
ಇದನ್ನೂ ಓದಿ: ಬಿಡದಿ ತೋಟದ ಮನೆಯಲ್ಲಿ ಹೆಚ್‍ಡಿಕೆ ಔತಣಕೂಟ – ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಎಲೆಕ್ಷನ್ ಕಮಿಷನ್
ಸನ್ ರೈಸರ್ಸ್ ಹೈದ್ರಾಬಾದ್ ವರ್ಸಸ್ ಪಂಜಾಬ್ ಕಿಂಗ್ಸ್ ಮ್ಯಾಚ್‌ನಲ್ಲಿ ಗೆಲ್ಲುವ ಅವಕಾಶವನ್ನು ಹೈದ್ರಾಬಾದ್ ತಂಡ ಒಂದು ಹಂತದಲ್ಲಿ ಕ್ರಿಯೇಟ್ ಮಾಡಿಕೊಂಡಿತ್ತು.. ಆದ್ರೆ ಹೈದ್ರಾಬಾದ್ ಕೈಯಿಂದ ಗೆಲುವನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಪಂಜಾಬ್‌ನ ಇಬ್ಬರು ಆಟಗಾರರು ಮಾಡಿದ್ದರು.. ಈ ಇಬ್ಬರು ಆಟಗಾರರು ಇಂತದ್ದೊಂದು ಆಟ ಆಡಿದ್ದು ಇದೇ ಮೊದಲೇನೂ ಅಲ್ಲ.. ಇಂತದ್ದೇ ಪರಿಸ್ಥಿತಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ದಾಖಲಿಸಿಕೊಂಡಿದ್ದರು.. ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಆಡಿದ ರೀತಿಯನ್ನು ಗಮನಿಸಿದಾಗ ಗೆಲ್ಲೋದಿಕ್ಕೆ ಅಸಾಧ್ಯವಾದ ಪಂದ್ಯವನ್ನೂ ಟಿ20ಯಲ್ಲಿ ಗೆಲ್ಲಲು ಸಾಧ್ಯವಿದೆ ಎಂಬುದು ಸಾಬೀತಾಗಿದೆ.. 13.1 ಓವರ್‌ನಲ್ಲಿ 91 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ನಂತರ ಮುಂದಿನ 6.5 ಓವರ್‌ಗಳಲ್ಲಿ 89 ರನ್ ಸೇರಿಸಲು ಸಾಧ್ಯವಾಗಿದ್ದು ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಅದ್ಭುತ ಬ್ಯಾಟಿಂಗ್‌ನಿಂದ.. ಈ ಇಬ್ಬರೂ ಪ್ಲೇಯರ್ಸ್ ಇಂತದ್ದೇ ಪರಿಸ್ಥಿತಿಯಲ್ಲಿ ಜಿಟಿ ವಿರುದ್ಧ ತಂಡವನ್ನು ಗೆಲ್ಲಿಸಿದ್ದರು.. ಅಲ್ಲದೆ ಪಂಜಾಬ್ ಕಿಂಗ್ಸ್ ತಪ್ಪಾಗಿ ಖರೀದಿಸಿದ್ದ ಶಶಾಂಕ್ ಸಿಂಗ್ ತಮ್ಮನ್ನು ಖರೀದಿ ಮಾಡಿದ ತಂಡಕ್ಕೆ ಕಿಂಚಿತ್ತೂ ಮೋಸ ಮಾಡದೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.. ಆರ್‌ಸಿಬಿ ವಿರುದ್ಧ ಕೇವಲ 8 ಎಸೆತಗಳಲ್ಲಿ 21 ರನ್ ಬಾರಿಸಿದ್ದ ಶಶಾಂಕ್, ಜಿಟಿ ವಿರುದ್ಧ 61 ರನ್ ಹೊಡೆದು ತಂಡವನ್ನು ಗೆಲ್ಲಿಸಿದ್ದರು.. ಅಲ್ಲದೆ ಹೈದ್ರಾಬಾದ್ ವಿರುದ್ಧವೂ 25 ಎಸೆತಗಳಲ್ಲಿ 46 ರನ್ ಹೊಡೆದು ನಾಟೌಟ್ ಆಗಿಯೇ ಉಳಿದರು.. ಹೀಗೆ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿರುವ ಶಶಾಂಕ್, ಜಿಟಿ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ಗೆಲ್ಲಿಸಿದ ಮೇಲೆ ಸಹಜವಾಗಿಯೇ ಕಾನ್ಫಿಡೆನ್ಸ್ ಹೆಚ್ಚಿಸಿಕೊಂಡಿದ್ದಾರೆ..
ಪಂಜಾಬ್ ಕಿಂಗ್ಸ್‌ನಲ್ಲಿ ಸ್ಯಾಮ್ ಕರ್ರನ್ ಒಳ್ಳೆಯ ಆಲ್‌ರೌಂಡರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆರಂಭದಲ್ಲಿ ಬ್ಯಾಟಿಂಗ್ ಕುಸಿದಾಗ ರನ್ ರೇಟ್ ಹೆಚ್ಚಿಸಲು ಸ್ಯಾಮ್ ಕರ್ರನ್ ಒಳ್ಳೆಯ ಆಯ್ಕೆ.. ಆದ್ರೆ ಅವರ ನಂತರ ಸಿಕಂದರ್ ರಾಜಾನನ್ನು ಬ್ಯಾಟಿಂಗ್‌ಗೆ ಕಳಿಸೋದು ಇದ್ಯಲ್ಲ.. ಇದು ತಂಡವನ್ನು ಗೆಲ್ಲಿಸೋದಿಕ್ಕೋ.. ಸೋಲಿಸೋದಿಕ್ಕೋ ಅನ್ನೋದೇ ಅರ್ಥವಾಗ್ತಿಲ್ಲ.. ಸಿಕಂದರ್ ರಾಜಾ ಬೌಲಿಂಗ್ ಆಲ್‌ರೌಂಡರ್.. ಐಪಿಎಲ್‌ನಲ್ಲಿ ಅಧ್ಭುತವಾಗಿ ಬ್ಯಾಟ್ ಬೀಸಿದ ಉದಾಹರಣೆಯಿಲ್ಲ.. ಜಿಟಿ ವಿರುದ್ಧದ ಪಂದ್ಯದಲ್ಲೂ ತಿಣುಕಾಡಿದ್ದರು.. ಆದ್ರೆ ಅವರ ಜಾಗದಲ್ಲಿ ಶಶಾಂಕ್ ಸಿಂಗ್‌ನನ್ನು ಕಳಿಸಿರುತ್ತಿದ್ದರೆ, ಆರಾಮಾಗಿ ಇನ್ನಿಂಗ್ಸ್ ಕಟ್ಟೋದಿಕ್ಕೆ ಹೆಚ್ಚಿನ ಅವಕಾಶ ಸಿಗುತ್ತಿತ್ತು.. ಹೈದರಾಬಾದ್ ವಿರುದ್ಧ ಕಡೆಗೆ 2 ಸಿಕ್ಸ್ 2 ಬೌಂಡರಿ ಹೊಡೆದರಾದರೂ ಒಂದು ಬಿಗ್ ಶಾಟ್ ಹೊಡೆದ ಮೇಲೆ ಮತ್ತೆ ಎರಡು ಅಥವಾ ಮೂರು ಎಸೆತಗಳನ್ನು ಡಾಟ್ ಮಾಡ್ತಿದ್ದರು.. ಇದ್ರಿಂದಾಗಿ ತಂಡದ ರನ್ ರೇಟ್ ಸ್ವಲ್ಪವೂ ಮೇಲೇರಲು ಸಹಾಯ ಆಗಲಿಲ್ಲ.. ಬದಲಿಗೆ required ರನ್ ರೇಟ್ ಜಾಸ್ತಿಯಾಗುತ್ತಲೇ ಹೋಗಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಿತ್ತು.. ಕ್ಯಾಪನ್ಟ್ ಶಿಖರ್ ಧವನ್‌ಗೆ ಸ್ವಲ್ಪನಾದರೂ ತಲೆಯಿದ್ದಿರುತ್ತಿದ್ದರೆ ಹೈದ್ರಾಬಾದ್ ವಿರುದ್ಧದ ಪಂದ್ಯ ಹೇಗಿದ್ದರೂ ಸೋಲುವ ಹಂತವನ್ನು ಮೊದಲು 10 ಓವರ್‌ಗಳ ಒಳಗೆಯೇ ತಲುಪಿದ್ದಾಗ, ಗೆಲ್ಲಲು ಟ್ರೈ ಮಾಡೋಣ ಅಂತಾದ್ರೂ ಶಶಾಂಕ್ ಸಿಂಗ್ ಅವರನ್ನು ಮೇಲಿನ ಆರ್ಡರ್‌ನಲ್ಲಿ ಕಳಿಸಬಹುದಿತ್ತು.. ಆದ್ರೆ ತಲೆಯಿಲ್ಲದ ಕ್ಯಾಪ್ಟನ್ ಮೊದಲೇ ಫಿಕ್ಸ್ ಆಗಿದ್ದ ಬ್ಯಾಟಿಂಗ್ ಆರ್ಡರ್‌ನಲ್ಲಿಯೇ ಆಟಗಾರರನ್ನು ಕ್ರೀಸ್‌ಗಿಳಿಸಿದ್ರು.. ಪರಿಣಾಮ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಾಗಿ ಅಂತಿಮವಾಗಿ ಎರಡು ರನ್‌ಗಳಿಂದ ಪಂದ್ಯ ಕಳೆದುಕೊಳ್ಳಬೇಕಾಯ್ತು.. ಒಂದು ವೇಳೆ ಸಿಕಂದರ್ ರಾಜಾ ಸ್ಥಾನದಲ್ಲಿ ಶಶಾಂಕ್, ನಂತರ ಜಿತೇಶ್ ಶರ್ಮಾ ಆಮೇಲೆ ಅಶುತೋಷ್ ಶರ್ಮಾ ಎಂಬ ರೀತಿಯಲ್ಲಿ ಬ್ಯಾಟಿಂಗ್ ಆರ್ಡರ್ ಬದಲಿಸಿರುತ್ತಿದ್ದರೆ ಪಂದ್ಯ ಗೆಲ್ಲುವ ಎಲ್ಲಾ ಅವಕಾಶ ಪಂಜಾಬ್‌ಗಿತ್ತು.. ಆದ್ರೆ ಕ್ಯಾಪ್ಟನ್ ಯಾವುದೇ ರೀತಿಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗದೇ ಇದ್ದಿದ್ದರಿಂದ ಪ್ರೀತಿ ಝಿಂಟಾ ಟೀಂ ಕಡೇ ಕ್ಷಣದಲ್ಲಿ ಮುಗ್ಗರಿಸಿತ್ತು.. ಆದ್ರೆ ತಮಗೆ ಕಳ್ಕೊಳ್ಳೋದಿಕ್ಕೆ ಏನೂ ಇಲ್ಲ ಎಂಬಂತೆ ಅಶುತೋಷ್ ಹಾಗೂ ಶಶಾಂಕ್ ಬ್ಯಾಟ್ ಬೀಸಿದ್ದರಿಂದ ಪಂಜಾಬ್ ಫ್ಯಾನ್ಸ್‌ಗಂತೂ ಗೆಲುವು ತಮ್ಮದಾಗಬಹುದು ಎಂಬ ಆಸೆ ಮೊಳೆತಿತ್ತು.. ಅದರಲ್ಲೂ ಐಪಿಎಲ್‌ನಲ್ಲಿ ತಪ್ಪಾಗಿ ಖರೀದಿಸಿದ್ದ ಆಟಗಾರ ಎಂದೇ ಪರಿಗಣಿತರಾಗಿರುವ ಶಶಾಂಕ್ ಸಿಂಗ್ ಮಾತ್ರ ತನ್ನಲ್ಲಿದ್ದ ಅದ್ಭುತ ಪ್ರತಿಭೆಯನ್ನು ಬ್ಯಾಟಿಂಗ್ ಮೂಲಕವೇ ತೋರಿಸಿಕೊಡುತ್ತಿದ್ದಾರೆ.. ಈಗ ಒಬ್ಬ ತಲೆಯಿಲ್ಲದ ಕ್ಯಾಪ್ಟನ್ ಬಗ್ಗೆ ನಿಮಗೆ ಅರ್ಥವಾಗಿರಬಹುದು..
ಇನ್ನೊಬ್ಬ ತಲೆಯಿಲ್ಲದ ಕ್ಯಾಪ್ಟನ್ ಅಂದ್ರೆ ಅದು ಬೇರೆ ಯಾರೂ ಅಲ್ಲ.. ನಮ್ಮ ಮೆಚ್ಚಿನ ಆರ್‌ಸಿಬಿ ತಂಡದ ಅನುಪಯುಕ್ತ ನಾಯಕ ಫಾಫ್ ಡು ಪ್ಲೆಸಿಸ್.. ಈ ಫಾಫ್ ನಿಜಕ್ಕೂ ಒಬ್ಬ ಒಳ್ಳೆಯ ಬ್ಯಾಟ್ಸ್‌ಮನ್. ಅದ್ಭುತ ಫೀಲ್ಡರ್.. ದಕ್ಷಿಣ ಆಫ್ರಿಕಾ ತಂಡಕ್ಕೂ ಕ್ಯಾಪ್ಟನ್ ಆಗಿ ಕೆಲಸ ಮಾಡಿದವರು.. ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗುವಲ್ಲಿಅವರ ಕೊಡುಗೆ ದೊಡ್ಡದಿತ್ತು.. ಆದ್ರೆ ಅವರು ಬೇರೆಯವರ ಅಂಡರ್‌ನಲ್ಲಿ ಆಟಗಾರನಾಗಿ ಆಡಲು ಮಾತ್ರ ಬೆಸ್ಟ್.. ಆದ್ರೆ ಕ್ಯಾಪ್ಪನ್ಸಿ ವಿಚಾರಕ್ಕೆ ಬಂದಾಗ ಇವರೂ ಕೂಡ ತಲೆಯಿಲ್ಲದ ರೀತಿಯಲ್ಲೇ ಆಡಿದ್ದಾರೆ.. ಎಲ್ಲಾ ಹೋಗ್ಲಿ.. ಮೊನ್ನೆ.. ಆರ್ ಆರ್ ವಿರುದ್ಧದ ಪಂದ್ಯವನ್ನೇ ನೋಡಿ.. ಒಂದು ಕಡೆ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ತಮ್ಮ ವಿರಾಟ್ ರೂಪ ತೋರಿಸಿದ್ದರು.. ಮೊದಲು ಬ್ಯಾಟಿಂಗ್ ಮಾಡುತ್ತಾ, ಒಂದು ಕಡೆ ವಿಕೆಟ್ ಹೋಗ್ತಿದ್ದರೆ ಕೊಹ್ಲಿ ಮಾತ್ರ ಭರ್ಜರಿಯಾಗಿಯೇ ಬ್ಯಾಟ್ ಬೀಸುತ್ತಿದ್ದರು.. 14.5 ಓವರ್‌ಗಳಾಗಿದ್ದಾಗ ಮ್ಯಾಕ್ಸ್‌ವೆಲ್ ಕೇವಲ 1 ರನ್ ಗಳಿಸಿ ಔಟಾದರು.. ಆಗ ತಂಡದ ಸ್ಕೋರ್ 128 ರನ್‌ಗಳು.. ಉಳಿದಿದ್ದು ಕೇವಲ 5.1 ಓವರ್‌ಗಳು ಮಾತ್ರ.. ಅಂದರೆ ಕೇವಲ 31 ಎಸೆತಗಳು ಮಾತ್ರ ಬಾಕಿ ಇದ್ದವು.. ಕೈಯಲ್ಲಿ 8 ವಿಕೆಟ್ ಇತ್ತು.. ಅಂತ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಕ್ರೀಸ್‌ಗಿಳಿಸಬೇಕಿತ್ತು.. ಯಾಕಂದ್ರೆ ಹೇಗಿದ್ದರೂ ತಂಡದ ಸ್ಕೋರ್ ಚೆನ್ನಾಗಿಯೇ ಮೇಲಕ್ಕೆ ಹೋಗ್ತಿತ್ತು.. ಇದ್ದ 31 ಎಸೆತಗಳಲ್ಲಿ ಡಿಕೆ ಕನಿಷ್ಠ 12 ಎಸೆತ ಎದುರಿಸಿದ್ದರೂ ಕಡಿಮೆಯೆಂದರೂ ಹತ್ತಿರತ್ತಿರುವ 20ಕ್ಕಿಂತ ಹೆಚ್ಚು ರನ್‌ಗಳಿಸುವ ಸಾಧ್ಯತೆಯಿತ್ತು.. ಚೆನ್ನಾಗಿಯೇ ಬ್ಯಾಟ್ ಬೀಸಿದ್ದರೆ ಅದನ್ನು 30 ರನ್‌ವರೆಗೂ ಕೊಂಡೊಯ್ಯುವ ಅವಕಾಶ ಡಿಕೆಗಿತ್ತು.. ಆದ್ರೆ ಡಿಕೆ ಮೊದಲು ಡೆಬ್ಯು ಮ್ಯಾಚ್ ಆಡ್ತಿದ್ದ ಸೌರವ್ ಚೌಹಾನ್‌ನನ್ನು ಕಣಕ್ಕಿಳಿಸಿದ್ದರು.. ಅದೂ ಸಾಲದೆಂಬಂತೆ ಸೌರವ್ ಔಟಾದ ನಂತರ 17.2 ಓವರ್ ನಲ್ಲಿ ಡಿಕೆ ಬದಲು ಕ್ಯಾಮರೂನ್‌ಗ್ರೀನ್‌ನನ್ನು ಬ್ಯಾಟಿಂಗ್‌ಗೆ ಕಳಿಸಿದ್ದರು.. ನೀವೇ ಯೋಚಿಸಿ, ಗ್ರೀನ್ ಚೆನ್ನಾಗಿ ಬ್ಯಾಟ್ ಬೀಸ್ತಾರೋ ಅಥವಾ ಡಿಕೆಯೋ? ಆರು ಎಸೆತ ಎದುರಿಸಿದ್ದ ಗ್ರೀನ್ ಗಳಿಸಿದ್ದು ಕೇವಲ 5 ರನ್.. ಆದ್ರೆ ಈ ಸೀಸನ್‌ನಲ್ಲಿ ಡಿಕೆ ಬ್ಯಾಟಿಂಗ್ ನೋಡಿದವರಿಗೆ ಒಂದು ವೇಳೆ ಅವರೇ ಆ ಆರು ಎಸೆತ ಎದುರಿಸಿದ್ದರೆ ಸ್ಕೋರ್ ಎಷ್ಟಾಗುತ್ತಿತ್ತು ಎನ್ನುವುದು ಚೆನ್ನಾಗಿಯೇ ಅರ್ಥವಾಗುತ್ತದೆ.. ಒಂದು ಕಡೆ ಆರ್‌ಸಿಬಿಯ ಬೌಲಿಂಗ್ ದುರ್ಬಲವಾಗಿದೆ.. ಇಂತಾ ಸಂದರ್ಭದಲ್ಲಿ ತಂಡ 200ಕ್ಕಿಂತ ಹೆಚ್ಚು ರನ್ ಗಳಿಸಲು ಇದ್ದ ಅವಕಾಶವನ್ನು ಬಿಡಲೇಬಾರದು.. ಒಂದು ಕಡೆ ವಿರಾಟ್ ಸೆಂಚುರಿ ಬಾರಿಸಿ ಅಬ್ಬರಿಸುತ್ತಿದ್ದರೆ ಮತ್ತೊಂದು ಕಡೆಯಿಂದ ಸಣ್ಣ ಸಾಥ್ ಸಿಕ್ಕಿದ್ದರೂ ತಂಡ ಆರಾಮಾಗಿ 200.. ಅಥವಾ 210 ರನ್ ಗಳಿಸಲು ಸಾಧ್ಯವಿತ್ತು.. ಆರ್‌ಆರ್ ವಿರುದ್ಧ 183 ರನ್‌ಗಳ ಬದಲು 200 ಪ್ಲಸ್ ಸ್ಕೋರ್ ಬೋರ್ಡ್‌ನಲ್ಲಿ ಇರುತ್ತಿದ್ದರೆ ಗೆಲುವು ಬೆಂಗಳೂರು ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ..
ತಂಡದ ಕ್ಯಾಪ್ಟನ್ ಸ್ವಲ್ಪ ತಲೆ ಉಪಯೋಗಿಸಿದ್ರೆ ಇದೆಲ್ಲವೂ ಸಾಧ್ಯವಿತ್ತು.. ಹಾಗೆಯೇ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಗೂ ತಲೆ ಇದ್ದಿರುತ್ತಿದ್ದರೆ ಡಿಕೆಯನ್ನು ಡಗೌಟ್ ನಲ್ಲಿ ಕೂರಿಸುವ ಬದಲು ಬ್ಯಾಟಿಂಗ್‌ಗೆ ಕಳಿಸುವ ಬಗ್ಗೆ ಯೋಚನೆ ಮಾಡಬಹುದಿತ್ತು.. ತಂಡದ ಕ್ಯಾಪ್ಟನ್ ಹಾಗೂ ಮ್ಯಾನೇಜ್‌ಮೆಂಟ್ ಮಾಡುವ ಇಂತಹ ಮಿಸ್ಟೇಕ್‌ಗಳಿಂದಲೇ ಟೀಂ ಸೋಲ್ತಿರುವುದರಲ್ಲಿ ಅನುಮಾನ ಬೇಕಿಲ್ಲ.. ಧೋನಿ ಅಥವಾ ರೋಹಿತ್ ಶರ್ಮಾ ಯಾಕೆ ಗ್ರೇಟ್ ಕ್ಯಾಪ್ಟನ್ಸ್ ಅಂದ್ರೆ.. ಅವರಿಬ್ಬರೂ ತಂಡ ಗೆಲ್ಲೋದಿಕ್ಕೆ ಬೇಕಾದ ಯಾವುದೇ ನಿರ್ಧಾರವನ್ನು ಕಡೆಯ ಕ್ಷಣದಲ್ಲಿ ತೆಗೆದುಕೊಳ್ತಿದ್ದರು.. ನಾರ್ಮಲ್ ಆರ್ಡರ್‌ಗಳನ್ನು ಮುರಿದು ಹೊಸ ಪ್ರಯೋಗ ಮಾಡಿ ಯಶಸ್ವಿಯಾಗ್ತಿದ್ದರು.. ಅದೇ ಕಾರಣಕ್ಕೆ ಅವರಿಬ್ಬರೂ ಐದು ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿರೋದೇ ಸಾಕ್ಷಿ.. ಹಾಗೆಯೇ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಒಮ್ಮೆಯೂ ಕಪ್ ಗೆಲ್ಲದೇ ಇರೋದಿಕ್ಕೂ ಇಂತಹ ಕ್ಯಾಪ್ಟನ್ ಗಳೇ ಕಾರಣ ಅಂತ ಮುಲಾಜಿಲ್ಲದೆ ಹೇಳಬಹುದು.