RCBಗೆ ಅನನ್ಯ ಬಿರ್ಲಾ ಲಕ್.. ಬ್ಯೂಟಿ ವಿಥ್ ಬ್ರೈನ್ ಬಿರ್ಲಾ ಕುಡಿ! – ಅನನ್ಯ ಜೊತೆ ಗಿಲ್ ಲಿಂಕ್!

ಐಪಿಎಲ್ ಹಬ್ಬ ಈಗಾಗ್ಲೇ ಶುರುವಾಗಿದೆ.. ಆಟಗಾರರ ಜೊತೆಗೆ ತಂಡದ ಮಾಲೀಕರು ಸಖತ್ ಸೌಂಡ್ ಮಾಡ್ತಿದ್ದಾರೆ. ಪ್ರತಿ ಮ್ಯಾಚ್ ವೇಳೆಯೂ ಮಾಲೀಕರು ಮೈದಾನದಲ್ಲಿ ಹಾಜರ್ ಆಗೋದು ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಈ ಬಾರಿ ಮಾತ್ರ ಐಪಿಎಲ್ ಅಂಗಳದಲ್ಲಿ ಈ ಬ್ಯೂಟಿಯದ್ದೇ ಮಾತು.. ಆಕೆಯ ಸೌಂದರ್ಯಕ್ಕೆ ಫ್ಯಾನ್ಸ್ ಕಳೆದು ಹೋಗಿದ್ದಾರೆ.. ಆ ಸುಂದರಿ ಬೇರೆ ಯಾರು ಅಲ್ಲ.. RCB ಟೀಂ ಕೋ ಓನರ್ ಅನನ್ಯ ಬಿರ್ಲಾ! ಆರ್‌ಸಿಬಿ ಫ್ಯಾನ್ಸ್ ಈಗ ಅನನ್ಯಾ ಅವರನ್ನು ತಂಡದ ಹೊಸ ಅದೃಷ್ಟದ ದೇವತೆ ಅಂತ ಕರಿತಾ ಇದ್ದಾರೆ. ಮತ್ತೊಂದ್ಕಡೆ ಅನನ್ಯಾ ಹೆಸರು ಗಿಲ್ ಜೊತೆ ಸದ್ದು ಮಾಡ್ತಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ಸೈಡ್ ರೋಲ್ ಮಾಡುತ್ತೇನೆ ಎಂದ ಕೊಹ್ಲಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನ ಆದಿತ್ಯ ಬಿರ್ಲಾ ಒಕ್ಕೂಟ ಬರೊಬ್ಬರಿ 16,706 ಕೋಟಿ ರೂಪಾಯಿಗೆ ಖರೀದಿಸಿದೆ. ಇದ್ರ ಬೆನ್ನಲ್ಲೇ, ಉದ್ಯಮಿ ಕುಮಾರಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಕ್ರಿಕೆಟ್ ಲೋಕದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಇದೀಗ RCB ಟೀಂಗೆ ಹೊಸ ಕಳೆ ಬಂದಿದೆ. ಎಲ್ಲಿ ನೋಡಿದ್ರೂ ಅನನ್ಯಾ ಬಿರ್ಲಾ ಅವರದ್ದೇ ಮಾತು.. ಈಕೆಯ ಬ್ಯೂಟಿಗೆ ಫ್ಯಾನ್ಸ್ ಕಳೆದುಹೋಗಿದ್ದಾರೆ. ಆದ್ರೆ ಅನನ್ಯ ಬ್ಯುಸಿನೆಸ್ ಲೋಕದಲ್ಲೂ ತನ್ನದೇ ಹೆಸ್ರು ಮಾಡಿದ್ದಾರೆ.
ಹೌದು.. ಅನನ್ಯ ಬಿರ್ಲಾ ಕುಟುಂಬದ ಐದನೇ ತಲೆಮಾರಿನ ಕುಡಿ. ಈಗಾಗಲೇ ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಆದಿತ್ಯ ಬಿರ್ಲಾ ಫ್ಯಾಶನ್ ಅಂಡ್ ರಿಟೇಲ್ ಲಿಮಿಟೆಡ್‌ನಂತಹ ದೈತ್ಯ ಕಂಪನಿಗಳ ಬೋರ್ಡ್ ಆಫ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅನನ್ಯ ತನ್ನ ಅಣ್ಣನ ಜೊತೆ ಕ್ರಿಕೆಟ್ ಲೋಕಕ್ಕೂ ಕಾಲಿಟ್ಟಿದ್ದಾರೆ. ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಫ್ರಾಂಚೈಸಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರೆ, ಅನನ್ಯಾ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
1994ರಲ್ಲಿ ಜನಿಸಿದ ಅನನ್ಯ ಅಮೆರಿಕನ್ ಸ್ಕೂಲ್ ಆಫ್ ಬಾಂಬೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್ ವಿಷಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದರು. ಅವರಿಗೆ ಬಾಲ್ಯದಿಂದಲೇ ಸಂಗೀತ ಮತ್ತು ಉದ್ಯಮ ಎರಡರಲ್ಲೂ ಹೆಚ್ಚಿನ ಆಸಕ್ತಿಯಿತ್ತು. ಈ ಕಾರಣದಿಂದಲೇ ಅವರು ಚಿಕ್ಕ ವಯಸ್ಸಿನಲ್ಲೇ ಈ ಎರಡೂ ವೃತ್ತಿಜೀವನಗಳನ್ನು ಬಹಳ ಚತುರತೆಯಿಂದ ಸಮತೋಲನಗೊಳಿಸುತ್ತಾ ಬಂದಿದ್ದಾರೆ. ಕೇವಲ 17 ವರ್ಷ ವಯಸ್ಸಿನಲ್ಲೇ ಅನನ್ಯ ಮೈಕ್ರೋಫಿನ್ ಎಂಬ ಹಣಕಾಸು ಸಂಸ್ಥೆಯನ್ನು ಕಟ್ಟಿದ್ರು. ಈಗ ಈ ಸಂಸ್ಥೆ ಭಾರತದ 20 ರಾಜ್ಯಗಳ 78 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹರಡಿಕೊಂಡಿದ್ದು, ಲಕ್ಷಾಂತರ ಜನರಿಗೆ ಆರ್ಥಿಕ ನೆರವು ನೀಡುತ್ತಿದೆ. ಬಡವರಿಗಾಗಿ ಅಗ್ಗದ ದರದಲ್ಲಿ ಮನೆ ಕಟ್ಟಲು ಮೈಕ್ರೋ ಹೌಸಿಂಗ್ ಫೈನಾನ್ಸ್ ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ ಅನನ್ಯ ಹಾಗೇ ಇ-ಕಾಮರ್ಸ್ ಕಂಪನಿ ‘ಇಕೈ ಅಸೈ’ ಎನ್ನುವ ಕಂಪನಿಯನ್ನು ಆರಂಭಿಸಿ, ತಮ್ಮ ಉದ್ಯಮವನ್ನು ಯಶಸ್ವಿಗೊಳಿಸಿದ್ದಾರೆ.
ಇನ್ನು ಅನನ್ಯ ಬಿಸ್‌ನೆಸ್ ಮಾತ್ರವಲ್ಲ.. ಸಂಗೀತ ಕ್ಷೇತ್ರದಲ್ಲೂ ತನ್ನದೇ ಆದ ಹೆಸರು ಮಾಡಿದ್ದಾರೆ. ಅನನ್ಯಾ ಇಂಟರ್‌ನ್ಯಾಷನಲ್ ಲೆವೆಲ್ ಇಂಗ್ಲಿಷ್ ಪಾಪ್ ಸಿಂಗರ್. ಇಲ್ಲಿಯವರೆಗೆ 500 ಮಿಲಿಯನ್‌ಗಿಂತಲೂ (50 ಕೋಟಿ) ಹೆಚ್ಚು ಸ್ಟ್ರೀಮ್‌ಗಳನ್ನು ಹೊಂದಿದ್ದಾರೆ. ಪಿಯಾನೋ, ಗಿಟಾರ್ ಮತ್ತು ಡ್ರಮ್ಸ್ ನುಡಿಸುವುದರಲ್ಲಿ ಅನನ್ಯಾ ಎಕ್ಸ್‌ಪರ್ಟ್. ಇಂಟರ್‌ನ್ಯಾಷನಲ್ ಸಿಂಗರ್ಸ್ ಹಾಗೇ ಭಾರತದ ಹೆಮ್ಮೆ ಎ.ಆರ್. ರೆಹಮಾನ್ ಅವರ ಜೊತೆಗೂ ಕೆಲಸ ಮಾಡಿದ್ದಾರೆ. ಮೂಲಗಳ ಪ್ರಕಾರ, ಅನನ್ಯಾ ಬಿರ್ಲಾ ವಾರ್ಷಿಕ ಆದಾಯ 1,770 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರು ಮುಂಬೈನಲ್ಲಿ ಸುಮಾರು 425 ಕೋಟಿ ರೂ ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದೀಗ RCB ಅಖಾಡಕ್ಕೆ ಅನನ್ಯ ಕಾಲಿಟ್ಟಿದ್ದಾರೆ. ಇದೀಗ ತಂಡಕ್ಕೆ ಅನನ್ಯಾ ಬಿರ್ಲಾ ಎಂಟ್ರಿಯಿಂದ ಗ್ಲಾಮರ್ ಜೊತೆಗೆ ವ್ಯವಹಾರಿಕ ಶಕ್ತಿ ಎರಡೂ ಸಿಕ್ಕಂತಾಗಿದೆ. ಅವರ ಸರಳತೆ, ಸಾಧನೆ ಮತ್ತು ಕಲೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮೊದಲ ಪಂದ್ಯದ ವೇಳೆಯೂ ಅನನ್ಯಾ ಮ್ಯಾಚ್‌ಗೆ ಹಾಜರಿ ಹಾಕಿದ್ರು. ಇದೀಗ ಆರ್‌ಸಿಬಿ ಅಭಿಮಾನಿಗಳು ತಂಡದ ಅದೃಷ್ಟ ದೇವತೆ. ಈ ಸಲ ಕಪ್ ನಮ್ದೇ ಅಂತ ಹೇಳ್ತಿದ್ದಾರೆ.
ಮತ್ತೊಂದ್ಕಡೆ ಅರ್‌ಸಿಬಿ ಪ್ರಾಂಚೈಸಿ ಬಿರ್ಲಾ ತೆಕ್ಕೆಗೆ ಸೇರಿಕೊಳ್ಳುತ್ತಿದ್ದಂತೆ ಅನನ್ಯಾ ಹೆಸರು ಶುಬ್ಮನ್ ಗಿಲ್ ಜೊತೆ ತಳುಕುಹಾಕಿಕೊಂಡಿದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ತಂಡದ ಕಾರ್ಯಕ್ರಮವೊಂದರಲ್ಲಿ ಅನನ್ಯ ಬಿರ್ಲಾ, ಶುಭ್ಮನ್ ಗಿಲ್ ಜೊತೆಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಸೋಫಾದ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿತ್ತು. ಗಿಲ್ ಜೊತೆ ಅನನ್ಯಾ ಯಾಕಿದ್ದಾರೆ ಎಂದು ಅನೇಕರು ಪ್ರಶ್ನೆ ಮಾಡಿದ್ರು. ಗಿಲ್‌ನ ಅನನ್ಯ ಮೀಟ್ ಮಾಡಿದಿದ್ದಕ್ಕೂ ಒಂದು ಕಾರಣ ಇದೆ. ಬಿರ್ಲಾ ಎಸ್ಟೇಟ್ಸ್ ಸಂಸ್ಥೆಯು ಐಪಿಎಲ್ ಸೀಸನ್ 19ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪ್ರಧಾನ ಪ್ರಾಯೋಜಕರಾಗಿ ಅಧಿಕೃತವಾಗಿ ಕೈಜೋಡಿಸಿದೆ. ಹೀಗಾಗೇ ಅನನ್ಯ ಗಿಲ್ ನ ಭೇಟಿ ಮಾಡಿದ್ದಾರೆ.

ನೋಡಿರಿ

