RCB ಮಾರಾಟಕ್ಕಿಟ್ಟ ಮಾಲೀಕರು – BCCI ಹೊಸ ರೂಲ್ಸ್ ಕಂಟಕವಾಯ್ತಾ?
ಕಪ್ ಗೆದ್ದ ವಾರದಲ್ಲೇ ಇದೆಂಥಾ ಶಾಕ್?

RCB ಮಾರಾಟಕ್ಕಿಟ್ಟ ಮಾಲೀಕರು – BCCI ಹೊಸ ರೂಲ್ಸ್ ಕಂಟಕವಾಯ್ತಾ?ಕಪ್ ಗೆದ್ದ ವಾರದಲ್ಲೇ ಇದೆಂಥಾ ಶಾಕ್?

ರಾಯಲ್ ಚಾಲೆಂಜರ್ಸ್ ಬೆಂಗಳೂರು. ಐಪಿಎಲ್​ನ ದಿ ಮೋಸ್ಟ್ ಫ್ಯಾನ್ಸ್ ಬೇಸ್ಡ್ ಌಂಡ್ ವ್ಯಾಲ್ಯುಯೇಬಲ್ ಟೀಂ. 18 ವರ್ಷದಿಂದ ಕಪ್ ಗೆದ್ದಿರಲಿಲ್ಲ ಅಂದ್ರೂ ಆರ್​ಸಿಬಿ ವ್ಯಾಲ್ಯೂ ಪೀಕ್​ನಲ್ಲೇ ಇತ್ತು. ಅದ್ರಲ್ಲೂ ಈ ಸಲ ಟ್ರೋಫಿ ಗೆದ್ದ ಮೇಲಂತೂ ಒನ್ ಟು ಡಬಲ್ ಆಗಿದೆ. ಆದ್ರೀಗ ಆರ್ ಸಿಬಿ ಫ್ರಾಂಚೈಸಿ ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್‌ನ ಪೇರೆಂಟ್ ಆರ್ಗನೈಸರ್ ಆಗಿರುವ ಡಿಯಾಜಿಯೊ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ತಂಡದಲ್ಲಿರುವ ಪಾಲನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅಷ್ಟಕ್ಕೂ ಫ್ರಾಂಚೈಸಿಯ ಇಂಥಾದ್ದೊಂದು ನಿರ್ಧಾರಕ್ಕೆ ಕಾರಣವೇ ಬಿಸಿಸಿಐನ ಹೊಸ ನಿಯಮ ಎನ್ನಲಾಗಿದೆ.

ಇದನ್ನೂ ಓದಿ : ಕ್ರಿಕೆಟ್ ಜಗತ್ತಿಗೆ ಪೂರನ್ ಶಾಕ್ – ದೇಶಕ್ಕಿಂತ ಹಣವೇ ಮುಖ್ಯವಾಯ್ತಾ?

ಐಪಿಎಲ್​ ಫೈನಲ್ ಪಂದ್ಯದ ಬಳಿಕ ಆರ್​ಸಿಬಿ ಫುಲ್ ಟ್ರೆಂಡಿಂಗ್​ನಲ್ಲಿದೆ. ಮೊದಲನೇದಾಗಿ 18 ವರ್ಷಗಳ ಬಳಿಕ ಕಪ್ ಗೆದ್ದ ಖುಷಿಯನ್ನ ಜಗತ್ತಿನಾದ್ಯಂತ ಇರುವ ಆರ್ ಸಿಬಿ ಫ್ಯಾನ್ಸ್ ಸೆಲೆಬ್ರೇಟ್ ಮಾಡಿದ್ರು. ಅದಾದ ಮರುದಿನವೇ ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಬಿಟ್ಟಿದ್ರು. ಹೀಗಾಗಿ ಕಳೆದೊಂದು ವಾರದಿಂದ ಆರ್​ಸಿಬಿ ಫುಲ್ ಸುದ್ದಿಯಲ್ಲಿದೆ. ಇದ್ರ ನಡುವೆ ತಂಡವನ್ನ ಮಾರಾಟ ಮಾಡೋಕೆ ಮುಂದಾಗಿರೋದು ಕುತೂಹಲಕ್ಕೆ ಕಾರಣವಾಗಿದೆ.

ಹೊಸ ನಿಯಮದಿಂದಲೇ ತಂಡ ಮಾರಾಟ!

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಠಿಣ ನಿಯಮಗಳು ಜಾರಿ ಸಾಧ್ಯತೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಂಕಷ್ಟ ಎದುರಾಗುವುದು ಗ್ಯಾರಂಟಿ

ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಸಮಾಲೋಚನೆ

ತಂಬಾಕು ಮತ್ತು ಆಲ್ಕೋಹಾಲ್ ಬ್ರ್ಯಾಂಡ್ ​​ಗಳ ಜಾಹೀರಾತು ನಿಷೇಧ

ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿದೆ

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ

ಐಪಿಎಲ್​ನಲ್ಲಿ ಅನಾರೋಗ್ಯಕರ ವಸ್ತುಗಳನ್ನು ನೇರವಾಗಿ ಅಥವಾ ಪರೋಕ್ಷ ಪ್ರಚಾರ

ಜಾರಿಯಾಗಿದ್ದೇ ಆದ್ರೆ ಆರ್​ಸಿಬಿ ಫ್ರಾಂಚೈಸಿಯು ಐಪಿಎಲ್ ಆಡೋದೇ

ಆರ್​ಸಿಬಿ ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವುದು ಆಲ್ಕೋಹಾಲ್ ಕಂಪೆನಿ

ಷೇರು ಮಾರಾಟ ಮಾಡಲು ಅಥವಾ ಸಂಪೂರ್ಣ ಫ್ರಾಂಚೈಸಿಯನ್ನು ಸೇಲ್ ಮಾಡಲು

ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 17 ಸಾವಿರ ಕೋಟಿ ರೂಪಾಯಿ

ಅಷ್ಟಕ್ಕೂ ಇಲ್ಲಿ ಆರ್​ಸಿಬಿ ಫ್ರಾಂಚೈಸಿ ಉದಯಿಸಿದ್ದೇ ಇಂಟ್ರೆಸ್ಟಿಂಗ್ ಆಗಿದೆ. 2008ರಲ್ಲಿ ಐಪಿಎಲ್​ಗೆ ಕಾಲಿಟ್ಟ ಆರ್​ಸಿಬಿ ಟ್ರೋಫಿಗಳ ಹೊರತಾಗಿಯೂ ಯಶಸ್ಸಿನ ಉತ್ತುಂಗಕ್ಕೇರಿದೆ.

ವಿಜಯ್ ಮಲ್ಯ ಕಟ್ಟಿದ ಕೋಟೆ!

ಆರ್ ಸಿಬಿ ಐಪಿಎಲ್‌ ನ ಉದ್ಘಾಟನಾ ಆವೃತ್ತಿಯೊಂದಿಗೆ ಸ್ಥಾಪನೆಯಾಯಿತು

ಕರ್ನಾಟಕವನ್ನು ಪ್ರತಿನಿಧಿಸುವ ಈ ಫ್ರಾಂಚೈಸಿಯನ್ನು ವಿಜಯ್ ಮಲ್ಯ ಖರೀದಿ

ಕಿಂಗ್ ಫಿಶರ್ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದ ಮಲ್ಯ, 111.6 ಮಿಲಿಯನ್ ಡಾಲರ್‌

ಮಾಡೆಲ್ಸ್, ಬಾಲಿವುಡ್ ಹೀರೋಯಿನ್ಸ್ ಜೊತೆಯೇ ಬರ್ತಿದ್ದ ಮಲ್ಯ ತಳಪಾಯ

ಸಾಲ ಮರುಪಾವತಿ ಮಾಡದ ಕಾರಣ ಫ್ರಾಂಚೈಸಿಯನ್ನು ಮತ್ತೊಬ್ಬರು ಖರೀದಿ

2022ನೇ ಹೊತ್ತಿಗೆ ಆರ್​ಸಿಬಿ 3ನೇ ಶ್ರೀಮಂತ ಫ್ರಾಂಚೈಸಿ, ಪ್ರಥಮೇಶ್ ಮಿಶ್ರಾ ಅಧ್ಯಕ್ಷ

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ವಿಶ್ವದ ಎರಡನೇ ಅತಿದೊಡ್ಡ ಸ್ಪಿರಿಟ್ ಉತ್ಪಾದಕ

ಆರ್ಥಿಕ ಶಕ್ತಿಯನ್ನು ಬಲಪಡಿಸಿದ್ದು, ಫ್ರಾಂಚೈಸಿಯನ್ನು ಐಪಿಎಲ್‌ ನ ಶಕ್ತಿಶಾಲಿ

USLನ ನಾಯಕತ್ವದಲ್ಲಿ, ಆರ್‌ಸಿಬಿ ತಂಡದ ಬ್ರಾಂಡ್ ಮೌಲ್ಯವು ಗಗನಕ್ಕೇರಿದೆ

Shantha Kumari

Leave a Reply

Your email address will not be published. Required fields are marked *