RCB ಟೀಂ ಅಲ್ಲ.. ಎಮೋಷನ್ – ವೈಟ್ ಜೆರ್ಸಿ.. ಪಕ್ಷಿಗಳ ಟ್ರಿಬ್ಯೂಟ್
ಫ್ಯಾನ್ಸ್ ಅಭಿಮಾನಕ್ಕೆ ಕಣ್ಣೀರಾದ ಕೊಹ್ಲಿ

18ನೇ ಸೀಸನ್ ಐಪಿಎಲ್ನ ಪ್ಲೇಆಫ್ಸ್ ರೇಸ್ ಪೀಕ್ನಲ್ಲಿ ಇರುವಾಗ್ಲೇ 9 ದಿನ ಪೋಸ್ಟ್ ಪೋನ್ ಆಗಿತ್ತು. ಸೋ ಆರ್ಸಿಬಿ ಮತ್ತು ಕೆಕೆಆರ್ ಮ್ಯಾಚ್ ಮೂಲಕ ರೀಸ್ಟಾರ್ಟ್ ಕಿಕ್ಗೆ ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿತ್ತು. ಬಟ್ ಮಳೆಯಿಂದಾಗಿ ಟಾಸ್ ಕೂಡ ಕಾಣದೆ ಪಂದ್ಯ ರದ್ದಾಯ್ತು. ಈ ಮೂಲಕ ಪ್ಲೇಆಫ್ಸ್ ರೇಸ್ಗೆ ಆರ್ಸಿಬಿ ಎಂಟ್ರಿ ಕೊಟ್ರೆ ಹಾಲಿ ಚಾಂಪಿಯನ್ ಕೆಕೆಆರ್ ತನ್ನ ಪಯಣ ಮುಗಿಸಿತ್ತು. ಸೋ ಇದಿಷ್ಟು ಅಫಿಶಿಯಲ್ ಪಾಯಿಂಟ್ಸ್. ಬಟ್ ಇದಕ್ಕೂ ಹೊರತಾಗಿ ಒಂದಷ್ಟು ಎಮೋಷನಲ್ ಮೂಮೆಂಟ್ಸ್ ಗೆ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಿತ್ತು.
ಇದನ್ನೂ ಓದಿ : RCB ಲೀಗ್ಸ್ ಪಂದ್ಯಗಳಿಗಿಲ್ಲ ಜೋಶ್ – ಪ್ಲೇಆಫ್ಸ್ ಗಾಗಿ KKR ಗೇಮ್ ಪ್ಲ್ಯಾನ್
ಯೆಸ್. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದು ಅಭಿಮಾನಿಗಳ ಹೃದಯವನ್ನ ಛಿದ್ರಗೊಳಿಸಿದೆ. ಅದ್ರಲ್ಲೂ ಬಿಸಿಸಿಐ ವಿರಾಟ್ಗಾಗಿ ವಿದಾಯ ಪಂದ್ಯವನ್ನಾಗ್ಲಿ ಅಥವಾ ಬೀಳ್ಕೊಡುಗೆಯನ್ನಾಗ್ಲಿ ನೀಡ್ಲಿಲ್ಲ. ಬಿಸಿಸಿಐ ಕೊಡ್ದೇ ಇದ್ರೆ ಏನಂತೆ ನಾವಿದ್ದೇವೆ ಅಂತಾ ಆರ್ಸಿಬಿ ಫ್ಯಾನ್ಸ್ ವೈಟ್ ಜೆರ್ಸಿ ತೊಟ್ಟು ಕ್ರೀಡಾಂಗಣಕ್ಕೆ ಬಂದಿದ್ರು. ಮಳೆ ನಡುವೆಯೂ ಪುಟ್ಟ ಪುಟ್ಟ ಮಕ್ಕಳ ಜೊತೆ ಮ್ಯಾಚ್ಗಾಗಿ ಕಾಯ್ತಾ ಇದ್ರು. ಕೆಂಪು ಜೆರ್ಸಿ ಹಾಗೇ ಫ್ಲ್ಯಾಗ್ಸ್ನಿಂದ ರಾರಾಜಿಸ್ತಿದ್ದ ಚಿನ್ನಸ್ವಾಮಿ ಮೈದಾನದ ಗ್ಯಾಲರಿಗಳು ವೈಟ್ನಲ್ಲಿ ಕಂಗೊಳಿಸ್ತಾ ಇದ್ವು. ಯಾವ ಕಡೆ ನೋಡಿದರು ವೈಟ್ ಜೆರ್ಸಿಯೇ ಕಾಣುತ್ತಿತ್ತು. ಇದನ್ನು ಡೆಸ್ಸಿಂಗ್ ರೂಮ್ನಿಂದಲೇ ನೋಡಿದ ವಿರಾಟ್ ಕೊಹ್ಲಿ ಅವರು ಭಾವುಕರಾಗಿದ್ರು.
ಒಂದ್ಕಡೆ ಅಭಿಮಾನಿಗಳೆಲ್ಲಾ ಮೈದಾನದಲ್ಲಿ ವೈಟ್ ಌಂಡ್ ವೈಟ್ನಲ್ಲಿ ಆಗಸದಲ್ಲೂ ಕೂಡ ಪಕ್ಷಿಗಳು ಚಿತ್ತಾರ ಮೂಡಿಸಿದ್ವು. ಎರಡು ಗುಂಪುಗಳಲ್ಲಿ ಬಿಳಿ ಪಾರಿವಾಳಗಳು ಸಾಕಷ್ಟು ಹೊತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಮೇಲೆ ಹಾರಾಡಿದವು. ಇದನ್ನು ನೋಡಿದ ಅಭಿಮಾನಿಗಳು ಪ್ರಕೃತಿ ಕೂಡ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸುತ್ತಿದೆ ಎಂದು ಖುಷಿಯಾಗಿದ್ರು. ಪಾರಿವಾಳಗಳು ಹಾರುತ್ತಿರುವ ವಿಡಿಯೋವನ್ನು ಹಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಕೂಡ ಈ ಸ್ಪೆಷಲ್ ಟ್ರಿಬ್ಯೂಟ್ನ ಶೇರ್ ಮಾಡಿದೆ. ಇದೊಂದು ಆಕಸ್ಮಿಕ ಘಟನೆಯೇ ಆಗಿದ್ದರೂ ಅಭಿಮಾನಿಗಳಿಗೆ ಪಾಲಿಗೆ ಸ್ಪೆಷಲ್ ವಿಡಿಯೋ ಆಗಿದೆ.
ವಿರಾಟ್ ಕೊಹ್ಲಿಗೆ ವಿಶೇಷ ಗೌರವ ನೀಡಲು ಬಂದಿದ್ದ ಅಭಿಮಾನಿಗಳಿಗೆ ಅವರ ಬ್ಯಾಟಿಂಗ್ ನೋಡಲು ಅವಕಾಶ ಸಿಗದೇ ಇರಬಹುದು. ಬಟ್ ಮುಂದಿನ ಪಂದ್ಯ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ ನಡೆಯಲಿವೆ. ಮೇ 23ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿಯಾಗದಿರಲಿ, ಆರ್ ಸಿಬಿ ಈ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿ ಪ್ಲೇಆಫ್ ತಲುಪಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಹಾಗೇ ಈ ಪಂದ್ಯದ ವೇಳೆಯೂ ಆರ್ಸಿಬಿ ಅಭಿಮಾನಿಗಳು ಕಿಂಗ್ ಕೊಹ್ಲಿಗೆ ಟೆಸ್ಟ್ ಬೀಳ್ಕೊಡುಗೆ ನೀಡಲು ಮತ್ತೆ ವೈಟ್ ಜೆರ್ಸಿಯಲ್ಲಿ ಆಗಮಿಸುವ ಸಾಧ್ಯತೆಯಿದೆ. ಅಲ್ಲದೆ ಆರ್ಸಿಬಿ ಕಡೆಯಿಂದಲೂ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸಿಗಲಿದೆ.