CSK ವಿರುದ್ಧ RCB ಇತಿಹಾಸ! ರಜತ್ ಪಡೆಯ ಟಾರ್ಗೆಟ್ ಏನು?
ತವರಿನಲ್ಲಿ ಧಮಾಕ ಮಾಡುತ್ತಾ RCB?

CSK ವಿರುದ್ಧ RCB ಇತಿಹಾಸ!  ರಜತ್ ಪಡೆಯ ಟಾರ್ಗೆಟ್ ಏನು?ತವರಿನಲ್ಲಿ ಧಮಾಕ ಮಾಡುತ್ತಾ RCB?

ಆರ್‌ಸಿಬಿ ತವರಿನಲ್ಲಿ ಹ್ಯಾಟ್ರಿಕ್‌ ಸೋಲಿನ ನೋವನ್ನು ಅನುಭವಿಸಿತ್ತು. ಆದರೆ ಕೊನೆಗೆ ರಾಜಸ್ಥಾನ ವಿರುದ್ಧ ಜಯ ಸಾಧಿಸಿ, ಅಭಿಮಾನಿಗಳನ್ನು ಸಮಾಧಾನ ಮಾಡಿದೆ. ಇನ್ನು ಈ ಬಾರಿ ಆರ್‌ಸಿಬಿ ಹಲವು ದಾಖಲೆಗಳನ್ನು ನಿರ್ಮಿಸುತ್ತಾ ಸಾಗಿದೆ. ಈ ವೇಳೆ 17 ವರ್ಷಗಳ ಬಳಿಕ ಚೆನ್ನೈನಲ್ಲಿ ಸಿಎಸ್‌ಕೆ  ತಂಡವನ್ನು, 10 ವರ್ಷಗಳ ಬಳಿಕ ಮುಂಬೈನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಮಣಿಸಿರುವ ಅಬ್ಬರಿಸಿರುವ ಆರ್‌ಸಿಬಿ ಇತಿಹಾಸದ ಸನಿಹದಲ್ಲಿದೆ.

ಆರ್‌ಸಿಬಿ ಆಡಿರುವ 10 ಪಂದ್ಯಗಳಲ್ಲಿ 7 ಜಯ, 3 ಸೋಲು ಕಂಡಿದ್ದು, 14 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಮುಂಬೈ, ಗುಜರಾತ್‌, ಡೆಲ್ಲಿ ತಂಡಗಳು ಕ್ರಮೇಣ ಎರಡು, ಮೂರು, ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಮೇ 9 ರಂದು ಆರ್‌ಸಿಇಬಿ ಲಕ್ನೋ ಸೂಪರ್‌ ಜೈಂಟ್ಸ್ ವಿರುದ್ಧ ತವರಿನಾಚೆ ಒಂದು ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿದರೆ ಇತಿಹಾಸ ನಿರ್ಮಿಸಲಿದೆ. ಲೀಗ್‌ ಹಂತದಲ್ಲಿ ತವರಿನಾಚೆ ಎಲ್ಲ ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆ ಆರ್‌ಸಿಬಿ ತಂಡದ್ದಾಗಲಿದೆ.

  ಆರ್‌ಸಿಬಿ ವಿರುದ್ಧ ಗೆದ್ದೇ ಗೆಲ್ಲುತ್ತಾ ಸಿಎಸ್‌ಕೆ?

ಆರ್‌ಸಿಬಿ ಲೀಗ್‌ ಹಂತದ ತನ್ನ ಮುಂದಿನ ಪಂದ್ಯವನ್ನು ಮೇ 3 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಬಲಿಷ್ಠವಾಗಿದೆ. ಆದರೆ ಸದ್ಯದ ಫಾರ್ಮ್‌ ಬೇರೆ ಕಥೆಯನ್ನೇ ಹೇಳುತ್ತದೆ. ಚೆನ್ನೈ ಶನಿವಾರ ಪ್ರತಿಷ್ಠೆಗಾಗಿ ಪಂದ್ಯವನ್ನು ಆಡಲಿದೆ. ಈಗಾಗಲೇ ಚೆನ್ನೈ ಪ್ಲೇ ಆಫ್‌ ರೇಸ್‌ನಿಂದ ಹೊರಗಿದೆ. ಚೆನ್ನೈ  ಸದ್ಯ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದು ಹೀನಾಯ ಸ್ಥಿತಿಯಲ್ಲಿದೆ. ಮೇ 3ರಂದು ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿದ್ದೇ ಆದಲ್ಲಿ ಮತ್ತೊಂದು ಇತಿಹಾಸವನ್ನು ನಿರ್ಮಿಸಲಿದೆ. ಆರ್‌ಸಿಬಿ ಲೀಗ್‌ ಹಂತದಲ್ಲಿ ಎಂದಿಗೂ ಚೆನ್ನೈ ತಂಡವನ್ನು ಎರಡು ಬಾರಿ ಸೋಲಿಸಿಲ್ಲ. ಈ ದಾಖಲೆಯನ್ನು ಆರ್‌ಸಿಬಿ ಮಾಡುವ ಕನಸು ಕಾಣುತ್ತಿದೆ. ಆದ್ರೆ ಇಲ್ಲಿ ಸಿಎಸ್‌ಕೆ ಕೂಡ ಆರ್‌ಸಿಬಿಯನ್ನ ಸೋಲಿಸಿ ಒಂಚೂರು ಮರ್ಯಾದೆ ಉಳಿಸಿಕೊಳ್ಳೋಣ ಅಂತ ಕೂಡ ಪ್ಲ್ಯಾನ್  ಮಾಡ್ತಿದೆ. ಆದ್ರೆ ಆರ್‌ಸಿಬಿ ಈ ಪಂದ್ಯವನ್ನ ಬಿಟ್ಟು ಕೊಡುವ ಚಾನ್ಸ್ ಇಲ್ಲ.

 ಮೇ 9ಕ್ಕೆ ನಡೆಯಲಿದೆ ಬಿಗ್ ಫೈಟ್   

ಮೇ 9 ರಂದು ಜಿದ್ದಿನ ಪಂದ್ಯ ಮೇ ಶುಕ್ರವಾರ ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಂಕ ದಾಖಲೆಯನ್ನು ಬರೆಯುವ ಕನಸು ಆರ್‌ಸಿಬಿ ತಂಡದ್ದಾಗಿದೆ. ಆದರೆ ಈ ಪಂದ್ಯ ಲಕ್ನೋ ಪಾಲಿಗೂ ಮಹತ್ವದಾಗಿರಲಿದೆ. ಆರ್‌ಸಿಬಿಗಿಂತಲೂ ಮೊದಲು ಎಲ್‌ಎಸ್‌ಜಿ ಧರ್ಮಶಾಲಾದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳಿಗೆ ಪ್ಲೇ ಆಫ್‌ ಪ್ರವೇಶಿಸುವ ನಿಟ್ಟಿನಲ್ಲಿ ಈ ಪಂದ್ಯ ಮಹತ್ವದಾಗಿರಲಿದೆ.  ಮೇ 9 ರಂದು ನಡೆಯಲುವ ಪಂದ್ಯವೂ ಸಹ ರಿಷಭ್‌ ಪಂತ್‌ ಪಡೆಗೆ ಮಹತ್ವದಾಗಿದೆ. ಸದ್ಯ 10 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಎಲ್‌ಎಸ್‌ಜಿ 10 ಅಂಕಗಳನ್ನು ಕಲೆ ಹಾಕಿದೆ. ಪ್ಲೇ ಆಫ್‌ ರೇಸ್‌ನಲ್ಲಿ ಜೀವಂತವಾಗಿರಬೇಕು ಎಂದರೆ ಎಲ್‌ಎಸ್‌ಜಿ ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳನ್ನಾದ್ರೂ ಗೆಲ್ಲಬೇಕಾದ ಒತ್ತಡದಲ್ಲಿರುತ್ತದೆ. ಹೀಗೆ ಆರ್‌ಸಿಬಿ ಸಹ ಅಂಕ ಪಟ್ಟಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಫೈಟ್‌ ನಡೆಸಲಿದೆ.

ತವರಿನಲ್ಲಿ ಎಸ್‌ಆರ್‌ಹೆಚ್‌ ವಿರುದ್ಧ ರೋಚಕ ಪಂದ್ಯ

 ಆರ್‌ಸಿಬಿ ಲೀಗ್‌ ಹಂತದ 13ನೇ ಪಂದ್ಯವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಆಡಲಿದೆ. ಈ ಪಂದ್ಯ ಮೇ 13 ರಂದು ನಡೆಯಲಿದೆ. ಬ್ಯಾಟಿಂಗ್ ಸ್ವರ್ಗ ಎಂದೇ ಕರೆಸಿಕೊಳ್ಳುತ್ತಿದ್ದ ಚಿನ್ನಸ್ವಾಮಿ ಈಗ ಕೊಂಚ ಭಿನ್ನವಾಗಿ ಕಾಣುತ್ತಿದೆ. ಎಸ್‌ಆರ್‌ಎಚ್‌ಗೂ ಮುಂದಿನ ಎಲ್ಲಾ ಪಂದ್ಯಗಳು ಮಹತ್ವದಾಗಲಿವೆ. ಸದ್ಯ ಸನ್‌ರೈಸರ್ಸ್‌ ಹೈದರಾಬಾದ್ ಆಡಿರುವ 9 ಪಂದ್ಯಗಳಲ್ಲಿ 3 ಜಯ ದಾಖಲಿಸಿದೆ. ಹಾಲಿ ರನ್ನರ್‌ ಅಪ್‌ ಸನ್‌ ತಂಡ ಮುಂದಿನ ಹಾದಿಯನ್ನು ಸುಗಮವಾಗಿಸಿಕೊಳ್ಳಲು ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಈ ಹಂತಕ್ಕಾಗಲೇ ಆರ್‌ಸಿಬಿ ಮೋಸ್ಟಲಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ.   ಈ ವೇಳೆಗೆ ಲೀಗ್‌ ಹಂತದ ಕೊನೆಯ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಆತ್ಮವಿಶ್ವಾಸದಿಂದ ಮುನ್ನುಗುವ ಕನಸು ಕಾಣುತ್ತಿದ್ದು, ಆರ್‌ಸಿಬಿಗೆ ಮೇ 13ರ ಪಂದ್ಯ ಸಹ ಮಹತ್ವದಾಗಿರಲಿದೆ.

ಆರಂಭದಂತೆ ಅಂತ್ಯದಲ್ಲೂ ಕೆಕೆಆರ್‌ಗೆ ಸೋಲಿನ ರುಚಿ?

ಹಾಲಿ ಚಾಂಪಿಯನ್‌ ವಿರುದ್ಧ ಕೊನೆಯ ಪಂದ್ಯ ಆರ್‌ಸಿಬಿ ಈ ಲೀಗ್‌ನ ಉದ್ಘಾಟನಾ ಪಂದ್ಯವನ್ನು ಆಡಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಜೊತೆಗೆ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿ ಪ್ಲೇ ಆಫ್‌ ರೇಸ್‌ನಲ್ಲಿ ಜೀವಂತವಾಗಿರುವ ಕೆಕೆಆರ್‌ಗೂ ಮೇ 17ರ ಪಂದ್ಯ ಇಂಪಾರ್ಟೆಂಟ್ ಆಗಿರಲಿದೆ.

ಮೊದಲ ಎರಡು ಸ್ಥಾನದ ಮೇಲೆ ಆರ್‌ಸಿಬಿ ಕಣ್ಣು 

 ಸದ್ಯ ಲೀಗ್‌ ಹಂತದಲ್ಲಿ ಅಮೋಘ ಪ್ರದರ್ಶನವನ್ನು ನೀಡುತ್ತಿರುವ ಆರ್‌ಸಿಬಿ ತಂಡದ ಟಾರ್ಗೆಟ್‌ ಒಂದೇ ಆಗಿರಲಿದೆ. ಸಾಧ್ಯವಾದಷ್ಟು ಲೀಗ್‌ ಹಂತದ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲೊ ಮೊದಲೆರಡು ಸ್ಥಾನಗಳನ್ನು ಭದ್ರ ಪಡಿಸಿಕೊಳ್ಳುವ ಆಸೆ ಆರ್‌ಸಿಬಿ ತಂಡದ್ದಾಗಿದೆ. ಈ ಮೂಲಕ ಕ್ವಾಲಿಫೈಯರ್‌ ಪಂದ್ಯವನ್ನು ಆಡುವ ಇರಾದೆಯನ್ನು ಹೊಂದಿದೆ. ಮೊದಲೆರಡು ಸ್ಥಾನ ಪಡೆದ ತಂಡಗಳಿಗೆ ಒಂದು ಪಂದ್ಯದಲ್ಲಿ ಸೋತರೂ ಸಹ ಪುಟಿದೇಳುವ ಅವಕಾಶ ಇರುತ್ತದೆ. ಹೀಗಾಗಿ ಆರ್‌ಸಿಬಿ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರರ ಭರ್ಜರಿ ಫಾರ್ಮ್‌ನಲ್ಲಿದ್ದು ಭರವಸೆ ಮೂಡಿಸಿದ್ದಾರೆ. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್‌ ಕೊಹ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ದಾಖಲೆಯ ಮೂರನೇ ಆರೆಂಜ್‌ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ವಿರಾಟ್‌ ಆಡಿರುವ 10 ಪಂದ್ಯಗಳಲ್ಲಿ 63ರ ಸರಾಸರಿಯಲ್ಲಿ 443 ರನ್‌ ಕಲೆ ಹಾಕಿದ್ದಾರೆ. ಇವರ ಫಾರ್ಮ್‌ ನಿಜಕ್ಕೂ ಎದುರಾಳಿಗಳಿಗೆ ದೊಡ್ಡ ಚಿಂತೆಯನ್ನು ತಂದು ಒಡ್ಡಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಜೋಶ್‌ ಹ್ಯಾಜಲ್‌ವುಡ್ ತಂಡಕ್ಕೆ ಆಧಾರವಾಗುತ್ತಿದ್ದಾರೆ. ಸದ್ಯ ಇವರ ತಲೆಯ ಮೇಲೆ ಪರ್ಪಲ್‌ ಕ್ಯಾಪ್‌ ಇದ್ದು, ಇವರು ಆಡಿರುವ 10 ಪಂದ್ಯಗಳಲ್ಲಿ 17.27ರ ಸರಾಸರಿಯಲ್ಲಿ 18 ವಿಕೆಟ್‌ ಕಬಳಿಸಿದ್ದಾರೆ. ಈ ಇಬ್ಬರೂ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದೇ ಆದಲ್ಲಿ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯಬಹುದಾಗಿದೆ. ಆರ್‌ಸಿಬಿ ತಂಡದ ಉಳಿದ ಆಟಗಾರರು ಸಹ ತಮ್ಮ ಜವಾಬ್ದಾರಿಯನ್ನು ಅರಿತು ಆಟ ಆಡುತ್ತಿದ್ದು ಎದುರಾಳಿಗಳಿಗೆ ಟೆನ್ಷನ್‌ ಶುರುಮಾಡಿದೆ. ಒಟ್ನಲ್ಲಿ ಪ್ಲೇ ಆಫ್‌ನಲ್ಲಿ ಟಾಪ್‌ನಲ್ಲಿರೋ ಆರ್‌ಸಿಬಿ, ಈ ಬಾರಿ ಕಪ್‌ ಗೆಲ್ಲಲಿ ಅನ್ನೋದು ಆರ್‌ಸಿಬಿ ಫ್ಯಾನ್ಸ್‌ಗಳ 18 ವರ್ಷದ ಕನಸು..

 

 

Kishor KV

Leave a Reply

Your email address will not be published. Required fields are marked *