RCBಗೆ ಈಗ AWAY ಚಾಲೆಂಜ್ – ಮತ್ತೆ ಔಟ್ ಆಫ್ ಔಟ್ ಬರುತ್ತಾ?
RR ವಿರುದ್ಧದ ಫೈಟ್ ನಲ್ಲಿದೆ ಟ್ವಿಸ್ಟ್!

RCBಗೆ ಈಗ AWAY ಚಾಲೆಂಜ್ – ಮತ್ತೆ ಔಟ್ ಆಫ್ ಔಟ್ ಬರುತ್ತಾ?RR ವಿರುದ್ಧದ ಫೈಟ್ ನಲ್ಲಿದೆ ಟ್ವಿಸ್ಟ್!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮ್ಯಾಚ್ ಗೆದ್ದಿರೋ ಆರ್ ಸಿಬಿ ಈಗ ಈ ಸೀಸನ್ ನ ಮೊದಲ ಅವೇ ಮ್ಯಾಚ್ ಗಾಗಿ ಗುವಾಹಟಿಗೆ ಹಾರಿದೆ. ರಾಜಸ್ಥಾನ ವಿರುದ್ಧ ಏಪ್ರಿಲ್ 10ಕ್ಕೆ ಪಂದ್ಯ ನಡೆಯಲಿದೆ. ಬೆಂಗಳೂರು ಬಾಯ್ಸ್ ಇರೋ ಫಾರ್ಮ್ ನೋಡಿದ್ರೆ ಹೊರಗಿನ ಮೈದಾನಗಳಲ್ಲೂ ಡಾಮಿನೇಟ್ ಮಾಡೋದು ಪಕ್ಕಾ.

ಇದನ್ನೂ ಓದಿ : CSKಯಲ್ಲಿ ಸದ್ದೇ ಮಾಡ್ತಿಲ್ಲ ಸಂಜು – 3 ಮ್ಯಾಚ್.. 22 ರನ್ಸ್.. ಏನಾಯ್ತು?

2026ರ ಸೀಸನ್​ನಲ್ಲಿ ಆರ್​ಸಿಬಿ ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತೆ. ಇದ್ರಲ್ಲಿ 7 ಹೋಂ ಪಿಚ್ ಹಾಗೇ 7 ಹೊರಗಿನ ಪಿಚ್​ಗಳಲ್ಲಿ ಆಡ್ಬೇಕಿತ್ತು. ಬಟ್ ರಾಯ್ಪುರವನ್ನ ತವರು ಮೈದಾನ ಅಂತಾ ಘೋಷಣೆ ಮಾಡಿರೋದ್ರಿಂದ 2 ಪಂದ್ಯಗಳನ್ನ ರಾಯ್ಪುರದಲ್ಲಿ ಆಡುತ್ತೆ. ಅವೂ ಕೂಡ ಹೋಂ ಪಿಚ್ ಅಂತಾನೇ ಕನ್ಸಿಡರ್ ಮಾಡ್ಬೇಕು. ಇನ್ನು ಬೆಂಗಳೂರಲ್ಲಿ ಟೋಟಲ್ 5 ಮ್ಯಾಚಸ್. ಆಲ್ರೆಡಿ 2 ಪಂದ್ಯ ಆಡಿದ್ದಾರೆ. ಇನ್ನು ಮೂರು ಪಂದ್ಯ ಅಷ್ಟೇ ಇರುತ್ತೆ. ಉಳಿದ 7 ಅವೇ ಗೇಮ್​ಗಳಲ್ಲಿ ಮೊದಲ ಪಂದ್ಯ ಈಗ ರಾಜಸ್ಥಾನ ವಿರುದ್ಧ ನಡೆಯಲಿದೆ.

2025ರಲ್ಲಿ ಏಳಕ್ಕೆ ಏಳೂ ಪಂದ್ಯಗಳನ್ನ ಗೆದ್ದಿದ್ದ ಬೆಂಗಳೂರು!

ಕಳೆದ ಸೀಸನ್​ನಲ್ಲಿ ಆರ್​ಸಿಬಿ ಚಿನ್ನಸ್ವಾಮಿಯಲ್ಲಿ ಕೆಲ ಪಂದ್ಯಗಳನ್ನ ಸೋತಿದ್ದು ಬಿಟ್ರೆ ಹೊರಗಿನ ಮೈದಾನಗಳಲ್ಲಿ ಔಟ್ ಆಫ್ ಔಟ್ ಮ್ಯಾಚಸ್ ವಿನ್ ಆಗಿತ್ತು. ಅಂದ್ರೆ ಏಳಕ್ಕೆ ಏಳೂ ಪಂದ್ಯಗಳನ್ನ ಗೆದ್ದು ದಾಖಲೆ ಬರೆದಿದ್ರು. ಐಪಿಎಲ್ ಇತಿಹಾಸದಲ್ಲಿ ಯಾವುದೇ ಟೀಂ ಕೂಡ ಈ ಸಾಧನೆ ಮಾಡಿರಲಿಲ್ಲ. ಕೆಕೆಆರ್, ಚೆನ್ನೈ, ಮುಂಬೈ, ರಾಜಸ್ಥಾನ, ಪಂಜಾಬ್, ಡೆಲ್ಲಿ, ಹಾಗೇ ಲಕ್ನೋ ತಂಡಗಳನ್ನ ಅವ್ರದ್ದೇ ಮೈದಾನದಲ್ಲಿ ಸೋಲಿಸಿ ಮೆರೆದಾಡಿದ್ರು. ಈಗ ಆರ್​ಸಿಬಿ ಪ್ಲೇಯರ್​ಗಳ ಆರ್ಭಟ ನೋಡಿದ್​ರೆ ಈ ಸೀಸನ್​ನಲ್ಲೂ ಅಂಥದ್ದೇ ಸಾಧನೆ ಮಾಡೋ ಥರ ಕಾಣ್ತಿದ್ದಾರೆ. ಸದ್ಯ ಇದೇ ಶುಕ್ರವಾರ ರಾಜಸ್ಥಾನ ವಿರುದ್ಧ ಗುವಾಹಟಿಯಲ್ಲಿ ಪಂದ್ಯ ಇದ್ದು ಎಲ್ಲರ ಕಣ್ಣು ಈ ಪಂದ್ಯದ ಮೇಲಿದೆ.

ಹೊರಗಿನ ಮೈದಾನಗಳಲ್ಲಿ ಬೆಂಗಳೂರು ಪಂದ್ಯಗಳು!

ದಿನಾಂಕ                     ಎದುರಾಳಿ                        ಸ್ಥಳ                      ಸಮಯ

ಏ.10                     ರಾಜಸ್ಥಾನ್ ರಾಯಲ್ಸ್            ಎಸಿಎ ಸ್ಟೇಡಿಯಂ         ಸಂಜೆ 7:30

ಏ.12                    ಮುಂಬೈ ಇಂಡಿಯನ್ಸ್              ವಾಂಖೆಡೆ                 ಸಂಜೆ 7:30

ಏ.27                    ದೆಹಲಿ ಕ್ಯಾಪಿಟಲ್ಸ್                ಅರುಣ್ ಜೇಟ್ಲಿ              ಸಂಜೆ 7:30

ಏ.30                   ಗುಜರಾತ್ ಟೈಟಾನ್ಸ್             ಮೋದಿ ಮೈದಾನ             ಸಂಜೆ 7:30

ಮೇ 7                 ಲಕ್ನೋ ಸೂಪರ್ ಜೈಂಟ್ಸ್          ಏಕನಾ ಕ್ರೀಡಾಂಗಣ           ಸಂಜೆ 7:30

ಮೇ 17                ಪಂಜಾಬ್ ಕಿಂಗ್ಸ್                HPCA ಕ್ರೀಡಾಂಗಣ           ಮಧ್ಯಾಹ್ನ 3:30

ಮೇ 22               ಸನ್‌ ರೈಸರ್ಸ್ ಹೈದರಾಬಾದ್     ರಾಜೀವ್ ಗಾಂಧಿ ಮೈದಾನ       ಸಂಜೆ 7.30

ಅಲ್ಲಿಗೆ ಬೆಂಗಳೂರಿನಲ್ಲಿ ಹೈದ್ರಾಬಾದ್ ವಿರುದ್ಧದ ಪಂದ್ಯದ ಮೂಲಕ ಸ್ಟಾರ್ಟ್ ಆಗಿದ್ದ ಆರ್​ಸಿಬಿ ಜರ್ನಿ ಮೇ 22ರಂದು ಹೈದರಾಬಾದ್​ನಲ್ಲಿ ಅದೇ ಹೈದ್ರಾಬಾದ್ ತಂಡದ ವಿರುದ್ಧದ ರಿವೇಂಜ್ ಮ್ಯಾಚ್ ಮೂಲಕ ಕೊನೆಯಾಗಲಿದೆ. ರಾಯ್ಪುರದಲ್ಲೂ 2 ಮ್ಯಾಚಸ್ ನಡೆದ್ರೂ ಅದು ಹೋಂ ಗ್ರೌಂಡ್ ಅಂತಾ ಘೋಷಣೆ ಮಾಡಿರೋದ್ರಿಂದ ಅವನ್ನ ಅವೇ ಪಿಚ್ ಪಂದ್ಯಗಳಿಗೆ ಕನ್ಸಿಡರ್ ಮಾಡೋಕೆ ಆಗಲ್ಲ.

Shantha Kumari