HITಮ್ಯಾನ್ಗೆ ಪಟ್ಟ ಕಟ್ಟುತ್ತಾ RCB? – ರೋಹಿತ್ಗೆ ಕೊಹ್ಲಿ ಬಂಪರ್ ಆಫರ್
RO-KO ಒಂದಾದ್ರೆ ಕಪ್ ನಮ್ದೇ!

ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟಿರೋ ಹಿಟ್ಮ್ಯಾನ್ ರೋಹಿತ್ ಶರ್ಮಾ ಆರ್ಸಿಬಿಗೂ ಕಪ್ ಗೆದ್ದು ಕೊಡ್ತಾರಾ? ಇಂಥಾದ್ದೊಂದು ಪ್ರಶ್ನೆ ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಕಿಂಗ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬೆಸ್ಟ್ ಪ್ಲೇಯರ್ಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಭಾರತ ತಂಡಕ್ಕಾಗಿ ಆಡುವಾಗ ಇಬ್ಬರೂ ಕೂಡ ಬೆಂಕಿ ಬಿರುಗಾಳಿಯಂತೆ ಅಬ್ಬರಿಸ್ತಾರೆ. ಆದ್ರೆ ಐಪಿಎಲ್ನಲ್ಲಿ ಮಾತ್ರ ಇಬ್ಬರೂ ಬೇರೆ ಬೇರೆ ಫ್ರಾಂಚೈಸಿಗಳ ಪರ ಕಣಕ್ಕಿಳಿಯುತ್ತಾರೆ. ಇದೀಗ 2025ಕ್ಕೆ ರೋ-ಕೋ ಜೋಡಿ ಒಂದೇ ಟೀಮ್ನಲ್ಲಿ ಕಣಕ್ಕಿಳಿಯೋ ಬಗ್ಗೆ ಸಾಕಷ್ಟು ಸುದ್ದಿಯಾಗ್ತಿದೆ. ಅದೂ ಕೂಡ ಹಿಟ್ಮ್ಯಾನ್ ರೋಹಿತ್ ಶರ್ಮಾ ನಮ್ಮ ಆರ್ಸಿಬಿಗೆ ಬರ್ತಾರಂತೆ. ಅರೇ ಈ ಸುದ್ದಿ ನಿಜನಾ? ರೋಹಿತ್ ಬೆಂಗಳೂರು ತಂಡಕ್ಕೆ ಬರ್ತಾರಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಿಶ್ವಕಪ್ನಲ್ಲಿ KINGಗೆ ಅಹಂ – ಸತ್ಯ ಒಪ್ಪಿಕೊಂಡ ವಿರಾಟ್ ಹೇಳಿದ್ದೇನು?
2024ರ ಟಿ-20 ವಿಶ್ವಕಪ್ ಚಾಂಪಿಯನ್ ಆಗಿರೋ ಟೀಂ ಇಂಡಿಯಾ ಮುಂದಿನ ಐಸಿಸಿ ಟ್ರೋಫಿಗಳ ಮೇಲೆ ಕಣ್ಣಿಟ್ಟಿದೆ. ಇದ್ರ ನಡುವೆ 2025ರ ಐಪಿಎಲ್ಗೆ ಮೆಗಾ ಌಕ್ಷನ್ ನಡೆಯಲಿದ್ದು, ಒಟ್ಟು ಹತ್ತು ತಂಡಗಳ ನಡುವೆ ಟೈಟಲ್ ಗಾಗಿ ಪೈಪೋಟಿ ನಡೆಯಲಿದೆ. ಅಲ್ಲದೆ 18ನೇ ಆವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳಾಗೋ ಸಾಧ್ಯತೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಇದರಿಂದ ಹೊರತಾಗಿಲ್ಲ. ಆದ್ರೆ ಒಂದು ಗುಡ್ ನ್ಯೂಸ್ ಏನಪ್ಪಾ ಅಂದ್ರೆ ಭಾರತವನ್ನ ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿರೋ ರೋಹಿತ್ ಶರ್ಮಾ ಆರ್ಸಿಬಿಗೆ ಬರ್ತಾರಂತೆ. ಇದನ್ನ ನಾವು ಹೇಳ್ತಾ ಇಲ್ಲ. ಖುದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯೇ ರೋಹಿತ್ರನ್ನ ತಂಡಕ್ಕೆ ಕರೆತರೋಕೆ ಸರ್ವಪ್ರಯತ್ನವನ್ನೂ ಆರಂಭಿಸಿದೆ. ಅಷ್ಟೇ ಯಾಕೆ ನಮ್ಮ ಕಿಂಗ್ ವಿರಾಟ್ ಕೊಹ್ಲಿ ಕೂಡ ರೋಹಿತ್ಗಾಗಿ ಪಟ್ಟು ಹಿಡಿದಿದ್ದಾರೆ. 2025ರ ಐಪಿಎಲ್ ಸೀಸನ್ಗೆ ಕೊಹ್ಲಿ ಅವರೇ ರೋಹಿತ್ ಶರ್ಮಾ ಅವರನ್ನು ಆರ್ಸಿಬಿ ಕ್ಯಾಪ್ಟನ್ ಮಾಡಿ ಎಂಬ ಪ್ರಸ್ತಾಪ ಇಟ್ಟಿದ್ದಾರಂತೆ.
ಆರ್ ಸಿಬಿಗೆ ರೋಹಿತ್?
ವಿಶ್ವಕಪ್ ಗೆದ್ದ ಕೂಡಲೇ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರೂ ತಾನು ಐಪಿಎಲ್ ಆಡೋದಾಗಿ ರೋಹಿತ್ ಹೇಳಿದ್ರು. ಇದೀಗ ಆ್ಯಕ್ಷನ್ನಲ್ಲಿ ಆರ್ಸಿಬಿ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ಖರೀದಿ ಮಾಡಲಿ. ರೋಹಿತ್ ಕ್ಯಾಪ್ಟನ್ ಆಗಲಿ, ಕೊಹ್ಲಿ ಆರ್ಸಿಬಿ ಪರ ಚೆನ್ನಾಗಿ ಆಡಿ ಕಪ್ ಗೆಲ್ಲಿಸಲಿ ಅಂತಾ ಖುದ್ದು ಅಭಿಮಾನಿಗಳೇ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಮಾಡ್ತಿದ್ದಾರೆ. ಸದ್ಯ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ 2025ರ ಐಪಿಎಲ್ಗೂ ಮುನ್ನವೇ ವಿದಾಯ ಹೇಳೋ ಸಾಧ್ಯತೆ ಇದೆ. ಹೀಗಾಗಿ ಫಾಫ್ ಸ್ಥಾನಕ್ಕೆ ಕಿಂಗ್ ವಿರಾಟ್ ಕೊಹ್ಲಿಯವ್ರನ್ನೇ ಕ್ಯಾಪ್ಟನ್ ಮಾಡಲು ಮನವೊಲಿಕೆಗೆ ಮುಂದಾಗಿದೆ. ಹಾಗೇನಾದ್ರೂ ಕೊಹ್ಲಿ ಒಪ್ಪದೇ ಇದ್ರೆ ರೋಹಿತ್ ಶರ್ಮಾ ಅವರನ್ನು ಬೆಂಗಳೂರು ತಂಡಕ್ಕೆ ಕರೆ ತರೋ ಸಾಧ್ಯತೆಗಳು ದಟ್ಟವಾಗಿವೆ. ರೋಹಿತ್ಗೆ ಕ್ಯಾಪ್ಟನ್ಸಿ ಮಾತ್ರವಲ್ಲ ತಂಡದ ಓಪನಿಂಗ್ ಮಾಡೋ ಜವಾಬ್ದಾರಿ ಕೂಡ ಇರಲಿದೆ. ಆರ್ಸಿಬಿ ತಂಡಕ್ಕೆ ಬೆಸ್ಟ್ ಓಪನರ್ ಕೂಡ ಬೇಕಾಗಿದ್ದಾರೆ. ರೋಹಿತ್ ಮೇಲೆ ಒಲವು ಹೊಂದಿರುವ ಆರ್ಸಿಬಿ ಫ್ರಾಂಚೈಸಿ ಟಿ-20 ವಿಶ್ವಕಪ್ ಗೆದ್ದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾಗಾಗಿ ಸ್ಪೆಷಲ್ ಪೋಸ್ಟ್ ಹಾಕಿದೆ. ಎಷ್ಟೋ ವರ್ಷಗಳಿಂದ ಕಾಯುತ್ತಿದ್ದ ನಮಗೆ ವಿಶ್ವಕಪ್ ತಂದುಕೊಟ್ಟಿದ್ದಾಗಿ ಧನ್ಯವಾದಗಳು. ಇವು ಅದ್ಭುತ ಕ್ಷಣಗಳು ಎಂದು ರೋಹಿತ್ ಶರ್ಮಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇನ್ನು 2024ರ ಐಪಿಎಲ್ಗೂ ಮುನ್ನ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಾಕಷ್ಟು ಅವಮಾನ ಅನುಭವಿಸಿದ್ದರು. ರೋಹಿತ್ರನ್ನ ಏಕಾಏಕಿ ಕ್ಯಾಪ್ಟನ್ಸಿಯಿಂದ ಇಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿತ್ತು. ಇದ್ರಿಂದ ಸಾಕಷ್ಟು ನೊಂದಿರುವ ರೋಹಿತ್ ತಂಡ ಬಿಡೋದು ಕನ್ಫರ್ಮ್ ಆಗಿದೆ. ಹಾಗೇನಾದ್ರೂ ಮುಂಬೈ ತೊರೆದ್ರೆ ರೋಹಿತ್ರನ್ನ ಬೆಂಗಳೂರು ತಂಡಕ್ಕೆ ಕರೆ ತರಲು ಫ್ರಾಂಚೈಸಿ ಪ್ಲ್ಯಾನ್ ಮಾಡಿದೆ.
ಇನ್ನು ವಿರಾಟ್ ಕೊಹ್ಲಿಯೇ ಆರ್ಸಿಬಿಯ ಮೇನ್ ಪಿಲ್ಲರ್. ಡೇ ಒನ್ನಿಂದ ತಂಡಕ್ಕಾಗಿ ಆಡ್ತಿರೋ ವಿರಾಟ್ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. 2013ರಲ್ಲಿ ಆರ್ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿದ್ದ ವಿರಾಟ್ 2021ರ ತನಕ ಆರ್ಸಿಬಿಯನ್ನು ಮುನ್ನಡೆಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್ ಇತಿಹಾಸದಲ್ಲಿ ವಿನ್ನಿಂಗ್ಸ್ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ. ಹೀಗಾಗಿ ಆರ್ಸಿಬಿಗೆ ವಿರಾಟ್ ಕೊಹ್ಲಿಯೇ ಕಿಂಗ್. ಒಂದ್ಕಡೆ ರೋಹಿತ್ ತಂಡಕ್ಕೆ ಬರ್ತಾರಾ ಅನ್ನೋ ನಿರೀಕ್ಷೆ ಇದ್ರೆ ಇನ್ನೊಂದ್ಕಡೆ ಎಲ್ಲಿ ವಿರಾಟ್ರನ್ನ ಕಳೆದುಕೊಳ್ತೇವೋ ಅನ್ನೋ ಭೀತಿಯೂ ಕಾಡ್ತಿದೆ. ಅದಕ್ಕೆ ಕಾರಣ ಬಿಸಿಸಿಐನ ಹೊಸ ಹರಾಜು ನಿಯಮ.
ಹರಾಜು ನಿಯಮ ಟೆನ್ಷನ್!
2025ರ ಐಪಿಎಲ್ ಸೀಸನ್ಗೆ ರಿಟೇನ್ ಪಾಲಿಸಿಯಲ್ಲಿ ಭಾರೀ ಬದಲಾವಣೆ ಆಗಲಿದ್ದು, ಇದ್ರಿಂದ ಆರ್ಸಿಬಿಗೆ ಬಿಗ್ ಶಾಕ್ ಕಾದಿದೆ. ಬಿಸಿಸಿಐ ಈಗಾಗ್ಲೇ ಮುಂಬರುವ ಸೀಸನ್ಗೆ ರೀಟೇನ್ ಪಾಲಿಸಿಯಲ್ಲಿ ಚೇಂಜಸ್ ತರಲು ಮುಂದಾಗಿದ್ದು, ಎಲ್ಲಾ ಫ್ರಾಂಚೈಸಿಗಳಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಈ ಪೈಕಿ ಒಂದು ತಂಡ ಮಾತ್ರ 8 ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಪ್ರಸ್ತಾಪ ಇಟ್ಟಿದೆ. ಇನ್ನು, ಕೆಲವು ಟೀಮ್ಗಳು 5ರಿಂದ7 ಮಂದಿ ರಿಟೈನ್ ಆಗಬಹುದು ಎಂದಿವೆ. ಉಳಿದ ಬಹುತೇಕ ಟೀಮ್ಗಳು ಜೀರೋ ರೀಟೇನ್ ಪಾಲಿಸಿ ಮಾಡಿ ಎಂದು ಪಟ್ಟು ಹಿಡಿದಿವ್ಯಂತೆ. ಒಂದು ವೇಳೆ ಬಿಸಿಸಿಐ ಜೀರೋ ರೀಟೇನ್ ಪಾಲಿಸಿ ಮಾಡಿದ್ರೆ ಎಲ್ಲಾ ಆಟಗಾರರು ಆಕ್ಷನ್ಗೆ ಬರಬೇಕಾಗುತ್ತದೆ. ಹೀಗಾದ್ರೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರನ್ನು ಆಕ್ಷನ್ಗೆ ಬಿಡಬೇಕು. ಬಳಿಕ ಆಕ್ಷನ್ನಲ್ಲಿ ತಮಗೆ ಬೇಕಾದ ಆಟಗಾರರನ್ನ ಖರೀದಿ ಮಾಡಬೇಕು. ಇದು ಆರ್ಸಿಬಿ ಸೇರಿದಂತೆ ಹಲವು ತಂಡಗಳಿಗೆ ದೊಡ್ಡ ತಲೆನೋವಾಗಿದೆ. ಐಪಿಎಲ್ ಶುರುವಾಗಿ ಬರೋಬ್ಬರಿ 17 ವರ್ಷಗಳು ಕಳೆದಿವೆ. ಆರಂಭದಿಂದಲೂ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ಕಳೆದ ಸೀಸನ್ನಲ್ಲೂ ಆರ್ಸಿಬಿ 15 ಕೋಟಿಗೆ ಕೊಹ್ಲಿಯನ್ನು ರಿಟೈನ್ ಮಾಡಿಕೊಂಡಿತ್ತು. ಈಗ ಜೀರೋ ರೀಟೇನ್ ಪಾಲಿಸಿ ಜಾರಿಗೆ ಬಂದರೆ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಎಂಥಾ ಫ್ರೆಂಡ್ಸ್ ಅನ್ನೋದು ಇಡೀ ಕ್ರಿಕೆಟ್ ಜಗತ್ತಿಗೇ ಗೊತ್ತಿದೆ. ಅದೆಂಥದ್ದೇ ಪರಿಸ್ಥಿತಿ ಇದ್ರೂ ಒಬ್ಬರನ್ನ ಒಬ್ಬರು ಬಿಟ್ಟುಕೊಟ್ಟಿದ್ದೇ ಇಲ್ಲ. ಟಿ-20 ವಿಶ್ವಕಪ್ನಲ್ಲೂ ಕೂಡ ಇದು ಸಾಬೀತಾಗಿದೆ. ಹಾಗೇನಾದ್ರೂ ಆರ್ಸಿಬಿಯಲ್ಲಿ ರೋಕೋ ಜೋಡಿ ಒಂದಾಯ್ತು ಅಂದ್ರೆ ಇವ್ರನ್ನ ತಡೆಯೋರೇ ಇರಲ್ಲ. ಹೀಗಾಗೇ ಆರ್ಸಿಬಿ ಫ್ಯಾನ್ಸ್ ಕೂಡ ರೋಹಿತ್ ತಮ್ಮ ತಂಡಕ್ಕೆ ಬರ್ಲಿ ಅಂತಾ ಡಿಮ್ಯಾಂಡ್ ಮಾಡ್ತಿದ್ದಾರೆ.