RCBಗಿಲ್ಲ ರಜತ್ ಪಾಟಿದಾರ್? – ಜಿತೇಶ್ ಶರ್ಮಾಗೆ ಕ್ಯಾಪ್ಟನ್ಸಿ ಫಿಕ್ಸ್?
ಇತಿಹಾಸ ಸೇರುತ್ತಾ RCB?

ಇಂಡಿಯನ್ ಪ್ರೀಮಿಯರ್ ಲೀಗ್ ನ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಇನ್ನೇನು 19ನೇ ಸೀಸನ್ಗೆ ನಾಲ್ಕು ತಿಂಗಳಷ್ಟೇ ಬಾಕಿ. ಮಿನಿ ಆಕ್ಷನ್, ಟ್ರೇಡ್ ವಿಂಡೋ, ಸ್ವ್ಯಾಪ್ ಡೀಲ್ ಅಂತೆಲ್ಲಾ ಫ್ರಾಂಚೈಸಿಗಳು ಬ್ಯುಸಿಯಾಗಿವೆ. ಹಾಗೇ ಆಟಗಾರರ ರಿಲೀಸ್ ಲಿಸ್ಟ್ ಕೂಡ ರೆಡಿ ಮಾಡಿಕೊಳ್ತಿವೆ. ಆದ್ರೆ ಬೆಂಗಳೂರು ಟೀಂ ಫ್ಯಾನ್ಸ್ ಹರ್ಟ್ ಆಗುವಂತ ಸುದ್ದಿಗಳೇ ಹೊರ ಬೀಳ್ತಿವೆ. ಫ್ರಾಂಚೈಸಿ ಮಾರಾಟ ಚರ್ಚೆ ನಡುವೆ ನೆಕ್ಸ್ಟ್ ಸೀಸನ್ಗೆ ಕ್ಯಾಪ್ಟನ್ ರಜತ್ ಪಾಟಿದಾರ್ ಇರಲ್ಲ ಅನ್ನೋ ಬಿಗ್ ಅಪ್ಡೇಟ್ವೊಂದು ಹೊರ ಬಿದ್ದಿದೆ. ಹಾಗೇ ಜಿತೇಶ್ ಶರ್ಮಾಗೆ ಕ್ಯಾಪ್ಟನ್ಸಿ ನೀಡೋ ಸುಳಿವು ಸಿಕ್ಕಿದ. ಇದೆಲ್ಲಕ್ಕಿಂತ ಹಾರ್ಟ್ ಬ್ರೇಕಿಂಗ್ ನ್ಯೂಸ್ ಅಂದ್ರೆ ಆರ್ಸಿಬಿ ಹೆಸರೇ ಚೇಂಜ್ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಇದನ್ನೂ ಓದಿ : INDಗೆ ವಿಶ್ವ ಚಾಂಪಿಯನ್ಸ್ ಚಾಲೆಂಜ್ – ಟೆಂಬಾ ಟೀಂ ಬೇಟೆಗೆ ಗಿಲ್ ಪಡೆ ರೆಡಿ
2026ರ ಐಪಿಎಲ್ಗೆ ಸಿದ್ಧವಾಗ್ತಿರೋ ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಆಟಗಾರರನ್ನ ತಂಡದಲ್ಲೇ ಉಳಿಸಿಕೊಳ್ಳೋಕೆ ಹಾಗೇ ಉಳಿದ ಆಟಗಾರರನ್ನ ರಿಲೀಸ್ ಮಾಡೋಕೆ ಡೇಟ್ ಫಿಕ್ಸ್ ಆಗಿದೆ. ರಿಟೈನ್ ಹಾಗೂ ರಿಲೀಸ್ ಪಟ್ಟಿ ಸಲ್ಲಿಸಲು ನವೆಂಬರ್ 15 ರವರೆಗೆ ಗಡುವು ನೀಡಲಾಗಿದೆ. ನವೆಂಬರ್ 15 ರಂದು ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೇ ರಿಲೀಸ್ ಮಾಡೋ ಆಟಗಾರರ ಲಿಸ್ಟ್ ಸಲ್ಲಿಸ್ತಾರೆ. ಇದೆಲ್ಲಾ ಆದ್ಮೇಲೆ ಎಷ್ಟು ಸ್ಲಾಟ್ಗಳಿಗೆ ಹರಾಜು ನಡೆಸಬೇಕು ಅನ್ನೋದನ್ನ ಡಿಸೈಡ್ ಮಾಡ್ತಾರೆ. ಐಪಿಎಲ್ ನಿಯಮದ ಪ್ರಕಾರ ಪ್ರತಿ ಫ್ರಾಂಚೈಸಿಗಳು ಒಟ್ಟು 25 ಆಟಗಾರರನ್ನು ಹೊಂದಬಹುದು. ಆದ್ರೆ ಇದು ಮಿನಿ ಹರಾಜು ಆಗಿದ್ದು ಕಡಿಮೆ ಆಟಗಾರರನನ್ನ ಮಾತ್ರ ರಿಲೀಸ್ ಮಾಡೋದ್ರಿಂದ ಕಡಿಮೆ ಸ್ಲಾಟ್ಗಳಿಗೆ ಹರಾಜು ನಡೆಯಲಿದೆ. ಸೋ ಈ ಸಲ ಒಂದೇ ದಿನದಲ್ಲಿ ಮಿನಿ ಆಕ್ಷನ್ ನಡೆಯುತ್ತೆ. ಸದ್ಯ ಆರ್ಸಿಬಿಯಿಂದ ಯಾರೆಲ್ಲಾ ಉಳೀತಾರೆ ಯಾರೆಲ್ಲಾ ಹೊರ ಬೀಳ್ತಾರೆ ಅನ್ನೋ ಚರ್ಚೆ ನಡುವೆ ಕ್ಯಾಪ್ಟನ್ ರಜತ್ ಪಾಟೀದಾರ್ ಬಗ್ಗೆ ಬಿಗ್ ನ್ಯೂಸ್ವೊಂದು ಹೊರ ಬಿದ್ದಿದೆ.
ಇಂಜುರಿ ಕಾರಣಕ್ಕೆ ನೆಕ್ಸ್ಟ್ ಐಪಿಎಲ್ ತಪ್ಪಿಸಿಕೊಳ್ತಾರಾ ಪಾಟಿದಾರ್?
2025ರ ಐಪಿಎಲ್ಗೂ ಮುನ್ನ ರಜತ್ ಪಾಟಿದಾರ್ ಅವ್ರನ್ನ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್ ಆಗಿ ನೇಮಕ ಮಾಡ್ಲಾಗಿತ್ತು. ಌಂಡ್ ಫಸ್ಟ್ ಕ್ಯಾಪ್ಟನ್ಸಿಯಲ್ಲೇ ಆರ್ಸಿಬಿಗೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ರು. ಅದೂ ಕೂಡ 18 ವರ್ಷಗಳ ಮಹಾತಪಸ್ಸಿಗೆ ಫಲ ಸಿಕ್ಕ ದಿನ ಅದು. ಇಂಥ ಲಕ್ಕಿ ಕ್ಯಾಪ್ಟನ್ ಮುಂಬರೋ ಸೀಸನ್ಗೆ ಆರ್ಸಿಬಿ ಪರ ಆಡೋದು ಡೌಟ್ ಇದೆ. ಅಟ್ಲೀಸ್ಟ್ ಆರಂಭದ ಕೆಲ ಪಂದ್ಯಗಳನ್ನಾದ್ರೂ ಮಿಸ್ ಮಾಡಿಕೊಳ್ಬೋದು. ಅದಕ್ಕೆ ಕಾರಣ ಇಂಜುರಿ. ಸೌತ್ ಆಫ್ರಿಕಾ ಎ ವಿರುದ್ಧದ ಮೊದದ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿದಿದ್ದ ರಜತ್ ಪಾಟಿದಾರ್ ಗಂಭೀರವಾಗಿ ಗಾಯಗೊಂಡಿದ್ದರು. ಸ್ನಾಯು ಸೆಳೆತಕ್ಕೆ ಒಳಗಾಗಿದ್ದು ಕನಿಷ್ಠ ನಾಲ್ಕು ತಿಂಗಳಾದ್ರೂ ರೆಸ್ಟ್ ಪಡೆಯಲೇಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಹಾಗೇ ಸ್ಪರ್ಧಾತ್ಮಕ ಕ್ರೀಡೆಯಿಂದ ಹೊರಗುಳಿಯುವಂತೆ ಸಲಹೆ ನೀಡಿದ್ದಾರೆ.
4 ತಿಂಗಳ ರೆಸ್ಟ್.. ಸಾಕಷ್ಟು ಟೂರ್ನಿಗಳು ಮಿಸ್!
ಪಾಟಿದಾರ್ಗೆ ಸದ್ಯ 4 ತಿಂಗಳ ರೆಸ್ಟ್ ಹೇಳಿರೋದ್ರಿಂದ ಸಾಕಷ್ಟು ಡೊಮೆಸ್ಟಿಕ್ ಟೂರ್ನಿಗಳನ್ನೂ ಮಿಸ್ ಮಾಡಿಕೊಳ್ತಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ಪರ ಕಣಕ್ಕಿಳಿಯಲಾಗುವುದಿಲ್ಲ. ಅಲ್ಲದೆ ನವೆಂಬರ್ ಅಂತ್ಯದಲ್ಲಿ ನಡೆಯಲಿರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದಲೂ ಹೊರಗುಳಿಯಲಿದ್ದಾರೆ. ಇನ್ನು ಡಿಸೆಂಬರ್ನಲ್ಲಿ ಪ್ರಾರಂಭವಾಗಲಿರುವ ವಿಜಯ ಹಝಾರೆ ಟೂರ್ನಿಗೂ ರಜತ್ ಪಾಟಿದಾರ್ ಆಬ್ಸೆನ್ ಕಾಡುತ್ತೆ. ಹೀಗಾಗಿ ಮೂರು ತಂಡಗಳಿಗೂ ಮಧ್ಯ ಪ್ರದೇಶ ಕ್ರಿಕೆಟ್ ಬೋರ್ಡ್ ಆಯ್ಕೆ ಸಮಿತಿ ಹೊಸ ನಾಯಕನನ್ನು ಸೆಲೆಕ್ಟ್ ಮಾಡಬೇಕಿದೆ. ಯಾಕಂದ್ರೆ ಈ ಮೂರು ಸ್ವರೂಪಗಳಲ್ಲೂ ಮಧ್ಯ ಪ್ರದೇಶ್ ತಂಡವನ್ನು ರಜತ್ ಪಾಟಿದಾರ್ ಲೀಡ್ ಮಾಡ್ತಿದ್ದಾರೆ. ಇನ್ನೂ ನಾಲ್ಕು ತಿಂಗಳು ರೆಸ್ಟ್ ಅಂತಾ ಹೇಳಿರೋದ್ರಿಂದ ಮಾರ್ಚ್ನಲ್ಲಿ 2026ರ ಐಪಿಎಲ್ ಸ್ಟಾರ್ಟ್ ಆಗುತ್ತೆ. ಈ ವೇಳೆಗೆ ಕಂಪ್ಲೀಟ್ ಆಗಿ ಫಿಟ್ನೆಸ್ ಸಾಧಿಸಿದ್ರೆ ಮಾತ್ರವೇ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಬರ್ತಾರೆ. ಇಲ್ದಿದ್ರೆ ಆರಂಭದ ಕೆಲ ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಅಥವಾ ಅವ್ರ ಹೆಲ್ತ್ ಕಂಡೀಷನ್ ನೋಡ್ಕೊಂಡು ಕಮ್ ಬ್ಯಾಕ್ ನಿರ್ಧಾರ ಮಾಡಲಾಗುತ್ತೆ. ಇನ್ನು 2025ರ ಐಪಿಎಲ್ನಲ್ಲಿ ಪಾಟೀದಾರ್ ಅವರು 15 ಪಂದ್ಯಗಳಿಂದ 312 ರನ್ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದರು.
ಪಾಟಿದಾರ್ ಇಲ್ಲದಿದ್ರೆ ಜಿತೇಶ್ ಶರ್ಮಾಗೆ ಕ್ಯಾಪ್ಟನ್ಸಿ!
ಹಾಗೇನಾದ್ರೂ ರಜತ್ ಪಾಟಿದಾರ್ ಕಮ್ ಬ್ಯಾಕ್ ಲೇಟ್ ಆಯ್ತು ಅಂದ್ರೆ ಜಿತೇಶ್ ಶರ್ಮಾ ಕ್ಯಾಪ್ಟನ್ಸಿ ವಹಿಸಿಕೊಳ್ತಾರೆ. 2025ರ ಆವೃತ್ತಿಯಲ್ಲೂ ಪಾಟಿದಾರ್ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಾಗ ಜಿತೇಶ್ ಶರ್ಮಾರೇ ತಂಡವನ್ನ ಮುನ್ನಡೆಸಿದ್ರು. ಅದ್ರಲ್ಲೂ ಲಕ್ನೋ ವಿರುದ್ಧ ಲೀಗ್ ಹಂತದ ಕೊನೇ ಮ್ಯಾಚಲ್ಲಿ ಕ್ಯಾಪ್ಟನ್ ಆಗಿದ್ದ ಜಿತೇಶ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರು. ಅಜೇಯ 85 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ರು. ಸೋ ಪಾಟಿದಾರ್ಗೆ ಬ್ಯಾಕ್ ಅಪ್ ಕ್ಯಾಪ್ಟನ್ ಆಗಿ ಜಿತೇಶ್ ಲೀಡ್ ಮಾಡ್ತಾರೆ. ಇದೆಲ್ಲಾ ಒಂದ್ಕಡೆಯಾದ್ರೆ ಅಭಿಮಾನಿಗಳ ಅಚ್ಚುಮೆಚ್ಚಿನ ಆರ್ಸಿಬಿ ಟೈಟಲ್ಲೇ ಇತಿಹಾಸದ ಪುಟ ಸೇರುತ್ತಾ ಅನ್ನೋ ಚರ್ಚೆ ಶುರುವಾಗಿದೆ.
ಹೊಸ ಮಾಲೀಕರು ಬಂದ್ರೆ RCB ಹೆಸರೇ ಬದಲಾಗುತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಿಕತ್ವ ಶೀಘ್ರದಲ್ಲೇ ಬದಲಾಗಲಿದೆ. ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಡಿಯಾಜಿಯೊ ಕಂಪನಿಯು ಮೆನ್ಸ್ ಌಂಡ್ ವುಮೆನ್ಸ್ ಎರಡೂ ತಂಡಗಳ ಮಾರಾಟಕ್ಕೆ ಮುಂದಾಗಿದೆ. ಒಂದು ವೇಳೆ ಮಾರ್ಚ್ 31ರೊಳಗೆ ಮಾರಾಟ ಫೈನಲ್ ಆದ್ರೆ ಆರ್ಸಿಬಿ ಹೆಸರೂ ಕೂಡ ಬದಲಾವಣೆಯಾಗೋ ಚಾನ್ಸಸ್ ಇದೆ. ಌಕ್ಚುಲಿ ಐಪಿಎಲ್ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್ಸಿಬಿ ಅನ್ನೋದು ಜಸ್ಟ್ ಒಂದು ಹೆಸರಾಗಿ ಉಳಿದಿಲ್ಲ. ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ಭಾವನೆಗಳ ಜೊತೆಯೇ ಬೆರೆತುಹೋಗಿದೆ. ಟ್ಯಾಟೂಗಳಲ್ಲಿ, ವೆಹಿಕಲ್ಸ್ ಮೇಲೆ, ಮನೆಗಳ ಮೇಲೂ ಆರ್ಸಿಬಿ ಹೆಸರು ಕೆತ್ತಿಸಿದ್ದಾರೆ. ಕ್ರಿಕೆಟ್ ಜಗತ್ತೇ ನೆನಪಿಡುವಂತ ಹೆಸರು ಅದು. ಹೀಗಿದ್ರೂ ಹೊಸ ಮಾಲೀಕತ್ವ ಬಂದ ಮೇಲೆ ಟೈಟಲ್ ಬದಲಾವಣೆ ಮಾಡಬಹುದು ಅನ್ನೋ ಚರ್ಚೆಯಾಗ್ತಿದೆ. ಆದ್ರೆ ಇದು ಅಭಿಮಾನಿಗಳಿಗೆ ಸ್ವಲ್ಪವೂ ಇಷ್ಟ ಇಲ್ಲ.

ನೋಡಿರಿ

