RCBಗೆ 2ನೇ ಕಪ್ Loading….. – 2026ಕ್ಕೆ ಟ್ರಂಪ್ ಕಾರ್ಡ್ ಜೇಕಬ್ ಡಫಿ
ಬಿಡ್ ನಲ್ಲೇ ಗೆದ್ದ ಬೆಂಗಳೂರು ಟೀಂ!

ಐಪಿಎಲ್ ಮಿನಿ ಆಕ್ಷನ್ನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ಸ್ಲಾಟ್ಗಳನ್ನ ಫುಲ್ಫಿಲ್ ಮಾಡ್ಕೊಂಡಿದ್ದಾರೆ. ವೀಕ್ ಅನ್ಸಿದವ್ರನ್ನ ಕೈಬಿಟ್ಟು ಸ್ಟ್ರಾಂಗ್ ಅನ್ನೋವ್ರನ್ನ ಪಿಕ್ ಮಾಡಿದ್ದಾರೆ. ಸೋ 2026ರ ಸೀಸನ್ಗೆ ಕಪ್ ಮೇಲೆ ಕಣ್ಣಿಟ್ಟು ಟೀಂಗಳನ್ನ ಬ್ಯಾಲೆನ್ಸ್ ಮಾಡಿದ್ದಾರೆ. ಆದ್ರೆ ಹರಾಜಿನ ಬಳಿಕ ಎಲ್ಲಾ ತಂಡಗಳಿಗಿಂತ್ಲೂ ಆರ್ಸಿಬಿಯದ್ದೇ ಬೆಸ್ಟ್ ಸೆಲೆಕ್ಷನ್ ಅನ್ನೋ ಟಾಕ್ ನಡೀತಿದೆ. ಅದಕ್ಕೆ ಕಾರಣ ಜೇಡಬ್ ಡಫಿಯವ್ರ ಖರೀದಿ. ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್ಗಿಂತ ಡಫಿ ಖರೀದಿಯೇ ಫುಲ್ ಟ್ರೆಂಡಿಂಗ್ನಲ್ಲಿದೆ. ಅದೂ ಕೂಡ ಬೇಸ್ ಪ್ರೈಸ್ಗೆ ಡೈನಮೇಟ್ನೇ ಖರೀದಿ ಮಾಡಿಬಿಟ್ರಲ್ಲ ಅಂತಾ ಅಪ್ರಿಶಿಯೇಟ್ ಮಾಡ್ತಿದ್ದಾರೆ.
ಇದನ್ನೂ ಓದಿ : RCB ಮಾಸ್ಟರ್ ಮೈಂಡ್ DK – ಹರಾಜಿನಲ್ಲೇ SMART ಐಡಿಯಾ
ಐಪಿಎಲ್ ಮಿನಿ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಆಟಗಾರರನ್ನ ಖರೀದಿ ಮಾಡಿದೆ. ಅದ್ರಲ್ಲಿ ವೆಂಕಿ ಮತ್ತು ಮಂಗೇಶ್ ಕಾಸ್ಟ್ಲಿ ಅನ್ಸಿದ್ರೂ ಉಳಿದವ್ರೆಲ್ಲಾ ಮೂಲಬೆಲೆಯಲ್ಲೇ ಸೇರ್ಕೊಂಡಿದ್ದಾರೆ. ಆದ್ರೆ 2 ಕೋಟಿ ಮೂಲ ಬೆಲೆಗೆ ಬಂದಿರೋ ಜೇಕಬ್ ಡಫಿಯವ್ರ ರಿಯಲ್ ಸ್ಟ್ರೆಂಥ್ ಏನು ಅನ್ನೋದು ಎಲ್ಲಾ ಫ್ರಾಂಚೈಸಿಗಳಿಗೆ ಗೊತ್ತಿದ್ರೆ ಬಹುಶಃ ಮಿನಿ ಆಕ್ಷನ್ನಲ್ಲಿ ಒನ್ ಆಫ್ ದಿ ಕಾಸ್ಟ್ಲಿಯೆಸ್ಟ್ ಪ್ಲೇಯರ್ ಆಗ್ತಿದ್ರೋ ಏನೋ. ಆದ್ರೆ ಡಫಿ ಬಗ್ಗೆ ಗ್ರೌಂಡ್ವರ್ಕ್ ಮಾಡದ ಫ್ರಾಂಚೈಸಿಗಳು ಈಸಿಯಾಗಿ ಬಿಟ್ಕೊಟ್ರು. ಬಟ್ ಆರ್ಸಿಬಿ ಡಫಿಯವ್ರ ಆಳ ಅಗಲವನ್ನೆಲ್ಲಾ ಕೆದಕಿ ಬಿಡ್ ಮಾಡ್ತು. ಫೈಟೇ ಇಲ್ಲದೆ ಈಸಿಯಾಗಿ ಮೂಲ ಬೆಲೆಯಲ್ಲೇ ಡಫಿಯನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈಗ ಡಫಿ ಪರ್ಫಾಮೆನ್ಸ್ ನೋಡಿ ಎಲ್ರೂ ಸ್ಟನ್ ಆಗಿದ್ದಾರೆ.
ಪದಾರ್ಪಣೆ ವರ್ಷದಲ್ಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಡಫಿ ಇತಿಹಾಸ!
ಜೇಕಬ್ ಡಫಿ ನ್ಯೂಜಿಲೆಂಡ್ ತಂಡದ ವೇಗದ ಬೌಲರ್. 31 ವರ್ಷದ ಈ ಆಟಗಾರ ರೈಟ್ ಆರ್ಮ್ ಫಾಸ್ಟ್ ಬೌಲರ್ ಒಂದೇ ವರ್ಷದಲ್ಲೇ ದಶಕಗಳ ದಾಖಲೆಗಳನ್ನೆಲ್ಲಾ ಬ್ರೇಕ್ ಮಾಡಿದ್ದಾರೆ. ಅದ್ರಲ್ಲೂ ಕಿವೀಸ್ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ ವರ್ಷ ನ್ಯೂಜಿಲೆಂಡ್ ಪರ 36 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಜೇಕಬ್ ಡಫಿ 325 ಓವರ್ಗಳನ್ನು ಬೌಲ್ ಮಾಡಿದ್ದಾರೆ. ಅಂದ್ರೆ ಬರೋಬ್ಬರಿ 1950 ಬಾಲ್ಗಳನ್ನ ಎಸೆದಿದ್ದಾರೆ. ಈ ವೇಳೆ 81 ವಿಕೆಟ್ಗಳನ್ನ ಬೇಟೆಯಾಡಿದ್ದಾರೆ. ಈ ಮೂಲಕ 2025ರ ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ಗಳನ್ನ ಬೇಟೆಯಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಝಿಲೆಂಡ್ ಪರ ಒಂದೇ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ತವರಿನ ಟೆಸ್ಟ್ ಸರಣಿಯಲ್ಲಿ ವಿಂಡೀಸ್ ವಿರುದ್ಧ 23 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದಾರೆ. ಇನ್ನು ಒಂದೇ ವರ್ಷ ಮೂರು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವರ್ಷವೇ ಮೂರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಡಫಿಯವ್ರ ಈ ಪರ್ಫಾಮೆನ್ಸ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಆರ್.ಅಶ್ವಿನ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು ಆರ್ಸಿಬಿಯ ನಡೆಯನ್ನ ಕೊಂಡಾಡಿದ್ದಾರೆ.
ಡಫಿ ಆಟ, ಆರ್ ಸಿಬಿ ಆಕ್ಷನ್ ಗೆ ಅಶ್ವಿನ್ ಕ್ಲೀನ್ ಬೌಲ್ಡ್!
ಜೇಕಬ್ ಡಫಿ ಎಂಥಾ ಕ್ವಾಲಿಟಿ ಪ್ಲೇಯರ್ ಅನ್ನೋ ಬಗ್ಗೆ ಆರ್ ಅಶ್ವಿನ್ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರ್ಕೊಂಡಿದ್ದಾರೆ. ಜೇಕಬ್ ಡಫಿ ಎಂಥಾ ಕ್ರಿಕೆಟಿಗನಾಗಿ ಹೊರಹೊಮ್ಮುತ್ತಿದ್ದಾರೆ. 2025 ಅವರ ಪ್ರಬುದ್ಧ ವರ್ಷವಾಗಿದೆ. ವಿಂಡೀಸ್ ವಿರುದ್ಧದ ಟೆಸ್ಟ್ಗಳಲ್ಲಿ 15.43 ಸರಾಸರಿಯಲ್ಲಿ 23 ವಿಕೆಟ್ಗಳು, 40.3 ಸ್ಟ್ರೈಕ್ ರೇಟ್ ಮತ್ತು ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ನಂಬರ್ 2 ಶ್ರೇಯಾಂಕದ T20I ಬೌಲರ್ ಕೂಡ ಆಗಿದ್ದಾರೆ. T20ಗಳಲ್ಲಿ 18.9 ಸರಾಸರಿಯಲ್ಲಿ 57 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೇ ಏಕದಿನದಲ್ಲಿ 21 ವಿಕೆಟ್ ಬೇಟೆಯಾಡಿದ್ದಾರೆ. 7.89 ಎಕಾನಮಿ ರೇಟ್ ಮತ್ತು 53.1 ಪ್ರತಿಶತ ಡಾಟ್ ಬಾಲ್ ರೇಟ್ನೊಂದಿಗೆ 2025ರ ಸೆನ್ಸೇಷನಲ್ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ. 31ನೇ ವಯಸ್ಸಿನಲ್ಲಿ ಪೀಕ್ ಎಫಿಶಿಯನ್ಸಿಯಲ್ಲಿ ಆಪರೇಟ್ ಮಾಡ್ತಿದ್ದಾರೆ. 2 ಕೋಟಿ ಮೂಲ ಬೆಲೆಗೆ ಅವರನ್ನು ಆಯ್ಕೆ ಮಾಡಿದ RCB ಯದ್ದು ಸಂಪೂರ್ಣ ಉತ್ತಮ ನಡೆ. ಸೆನ್ಸೇಷನಲ್ ಸೆಲೆಕ್ಷನ್ ಅಂತಾ X ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಜೇಕಬ್ ಡಫಿ ಆರ್ಸಿಬಿಗೆ ಬಂದದ್ದು ಆನೆಬಲ ಬಂದಂತಾಗಿದೆ. ಆಕ್ಷನ್ನಲ್ಲಿ ಇವ್ರನ್ನ ಖರೀದಿ ಮಾಡಿದಾಗ ತುಂಬಾ ಜನ್ರಿಗೆ ಇವ್ರ ಬಗ್ಗೆ ಐಡಿಯಾನೇ ಇರ್ಲಿಲ್ಲ. ಆದ್ರೆ ಈಗ ಇಡೀ ಜಗತ್ತೇ ತಮ್ಮ ಬಗ್ಗೆ ಮಾತ್ನಾಡುವಂತೆ ಮೈದಾನದಲ್ಲಿ ಅಬ್ಬರಿಸಿದ್ದಾರೆ. ಡಫಿಯವ್ರ ಫಾರ್ಮ್, ಪರ್ಫಾಮೆನ್ಸ್, ಅಟ್ಯಾಕಿಂಗ್ ಸ್ಟೈಲ್ ನೋಡಿ ಆರ್ಸಿಬಿ ಮ್ಯಾನೇಜ್ಮೆಂಟ್ ಅಂತೂ ಫುಲ್ ಥ್ರಿಲ್ ಆಗಿದೆ. 2026 ರ ಐಪಿಎಲ್ನಲ್ಲಿ ಆರ್ಸಿಬಿ ಬೌಲಿಂಗ್ ವಿಭಾಗಕ್ಕೆ ಜೋಶ್ ಹೇಜಲ್ವುಡ್ ಜೊತೆಗೆ ಡಫಿ ಕೂಡ ಟ್ರಂಪ್ ಕಾರ್ಡ್ ಆಗ್ತಾರೆ ಅನ್ನೋದು ಗೊತ್ತಾಗಿದೆ. ನೆಕ್ಸ್ಟ್ ಸೀಸನ್ನಲ್ಲಿ ಆರ್ಸಿಬಿ ಸ್ಕ್ವಾಡ್ ನೋಡ್ತಿದ್ರೆ ಸೆಕೆಂಡ್ ಕಪ್ ಲೋಡಿಂಗ್ ಅನ್ನೋ ಥರನೇ ಇದೆ.

ನೋಡಿರಿ

