RCB ಫ್ಯಾನ್ಸ್ ಹಾರ್ಟ್ ಬ್ರೇಕ್ – ಚಿನ್ನಸ್ವಾಮಿಯಲ್ಲಿ ನಡೆಯಲ್ಲ IPL
ಯಾರದ್ದೋ ತಪ್ಪಿಗೆ ಮೈದಾನಕ್ಕೆ ಶಿಕ್ಷೆನಾ?

2026ರ ಐಪಿಎಲ್ ಕಾವು ದಿನೇದಿನೇ ರಂಗೇರ್ತಿದೆ. ಇನ್ನೇನು ಎರಡು ವಾರದಲ್ಲಿ ಮಿನಿ ಆಕ್ಷನ್ ಕೂಡ ಇದೆ. ಮತ್ತೊಂದ್ಕಡೆ ಜನವರಿ ಸೆಕೆಂಡ್ ವೀಕಲ್ಲಿ ಡಬ್ಲ್ಯೂಪಿಎಲ್ ಸೀಸನ್ 4 ಸ್ಟಾರ್ಟ್ ಆಗುತ್ತೆ. ಆರ್ಸಿಬಿಯಲ್ಲಿ ಮೆನ್ಸ್ & ವುಮೆನ್ಸ್ ಎರಡೂ ತಂಡಗಳೂ ಒಂದೊಂದು ಸಲ ಚಾಂಪಿಯನ್ಸ್ ಆಗಿದ್ದಾರೆ. ಹಾಗೇ ಮುಂದಿನ ವರ್ಷ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ನೆಕ್ಸ್ಟ್ ಸೀಸನ್ ಸ್ಟಾರ್ಟ್ ಆಗೋ ಮುನ್ನವೇ ಆರ್ಸಿಬಿ ಫ್ಯಾನ್ಸ್ ಹಾರ್ಟ್ ಬ್ರೇಕ್ ಆಗುವಂತ ನ್ಯೂಸ್ವೊಂದು ಹೊರ ಬಿದ್ದಿದೆ.
ಇದನ್ನೂ ಓದಿ : 15 ದಿನದಲ್ಲೇ ಕೋಟಿ ಒಡೆಯನಾದ ಅಯ್ಯಪ್ಪ! – ಶಬರಿಮಲೆ ಅಯ್ಯಪ್ಪನ ಹುಂಡಿಗೆ 92 ಕೋಟಿ ರೂ!
2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಚೊಚ್ಚಲ ಟ್ರೋಫಿಗೆ ಮುತ್ತಿಟಿದೆ. ಹಾಗೇ 2025ರ ಆವೃತ್ತಿಯಲ್ಲಿ ಮೆನ್ಸ್ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು ಮುಂದಿನ ಆವೃತ್ತಿಯಲ್ಲಿ ಟಫ್ ಫೈಟ್ ಕೊಡೋಕೆ ಕಾಯ್ತಿದ್ದಾರೆ. ವಿಪರ್ಯಾಸ ಅಂದ್ರೆ ಹೋಂ ಟೌನ್ನಲ್ಲಿ ಆರ್ಸಿಬಿ ಪಂದ್ಯಗಳು ನಡೆಯೋದೇ ಡೌಟಿದೆ. ಅಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪಂದ್ಯಗಳು ಶಿಫ್ಟ್ ಆಗೋದು ಬಹುತೇಕ ಪಕ್ಕಾ ಆಗಿದೆ.
2026ರ ಐಪಿಎಲ್ ಪಂದ್ಯಗಳಿಗಿಲ್ಲ ಚಿನ್ನಸ್ವಾಮಿ!
ಚಿನ್ನಸ್ವಾಮಿ ಮೈದಾನ. ಆರ್ಸಿಬಿ ತಂಡದ ತವರು ಮೈದಾನ. ಕೋಟ್ಯಂತರ ಕನ್ನಡಿಗರ ಅಚ್ಚುಮೆಚ್ಚಿನ ಮೈದಾನ. ಬೆಂಗಳೂರಿನ ಹೃದಯಭಾಗದಲ್ಲೇ ಇರೋ ಈ ಸ್ಟೇಡಿಯಮ್ನಲ್ಲಿ ಲೆಜೆಂಡರಿ ಪ್ಲೇಯರ್ಗಳೇ ವಿಶ್ವದಾಖಲೆಗಳನ್ನ ಬರೆದಿದ್ದಾರೆ. ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಷ್ಟೇ ಯಾಕೆ ಕಿಂಗ್ ವಿರಾಟ್ ಕೊಹ್ಲಿಯವ್ರ ಅಚ್ಚುಮೆಚ್ಚಿನ ಮೈದಾನ ಕೂಡ ಚಿನ್ನಸ್ವಾಮಿಯೇ. ಇತ್ತೀಚೆಗಷ್ಟೇ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನವೂ ಕೊಹ್ಲಿ ಇದೇ ಮಾತು ಹೇಳಿದ್ರು. ಆದ್ರೆ ಭವಿಷ್ಯದಲ್ಲಿ ಇಲ್ಲಿ ಮ್ಯಾಚ್ಗಳು ನಡೆಯೋದೇ ಡೌಟಿದೆ. 2026ರ ಜನವರಿ 9ರಿಂದ ಆರಂಭವಾಗಲಿರೋ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಈ ಮೈದಾನವನ್ನ ಪರಿಗಣಿಸಿಲ್ಲ. ಬದಲಾಗಿ, ಸ್ಮೃತಿ ಮಂಧಾನ ಮತ್ತು ತಂಡವು ತಮ್ಮ ಮೊದಲ ನಾಲ್ಕು ಪಂದ್ಯಗಳನ್ನು ನವಿ ಮುಂಬೈನಲ್ಲಿ ಆಡಲಿದ್ದು, ಉಳಿದ ನಾಲ್ಕು ಪಂದ್ಯಗಳನ್ನು ಗುಜರಾತ್‌ನ ವಡೋದರಾದಲ್ಲಿ ಆಡಲಿದೆ. ಲೀಗ್ ಜನವರಿ 9 ರಿಂದ ಫೆಬ್ರುವರಿ 5 ರವರೆಗೆ ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿದೆ. ಇದೀಗ ಮೆನ್ಸ್ ಲೀಗ್ನಲ್ಲೂ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಪಂದ್ಯಗಳ ಆಯೋಜನೆಗೆ ಅನುಮತಿ ಸಿಗೋದು ಡೌಟ್ ಇದೆ.
ಜೂನ್ 4ರ ಬಳಿಕ ಮಹತ್ವದ ಟೂರ್ನಿಗಳೂ ಮಿಸ್!
ಜೂನ್ 4 ರಂದು ಬೆಂಗಳೂರಿನಲ್ಲಿ ಆರ್ಸಿಬಿ ವಿಕ್ಟರಿ ಪರೇಡ್ ಹಮ್ಮಿಕೊಂಡಿತ್ತು. ಬಟ್ ಬ್ಯಾಡ್ ಲಕ್ ಆವತ್ತೇ ಕಾಲ್ತುಳಿತದಿಂದಾಗಿ 11 ಅಭಿಮಾನಿಗಳು ಪ್ರಾಣ ಕಳ್ಕೊಂಡಿದ್ರು. ಈ ಸಾವು ನೋವಿಗೆಲ್ಲಾ ಸರ್ಕಾರದ ಬೇಜವಾಬ್ದಾರಿ, ಕೆಎಸ್ಸಿಎನ ನೆಗ್ಲಿಜೆನ್ಸ್, ಆರ್ಸಿಬಿ ಮ್ಯಾನೇಜ್ಮೆಂಟ್ ತರಾತುರಿಯೇ ಕಾರಣ ಆಗಿತ್ತು. ಆದ್ರೆ ಶಿಕ್ಷೆ ಅನುಭವಿಸ್ತಿರೋದು ಮಾತ್ರ ಚಿನ್ನಸ್ವಾಮಿ ಮೈದಾನ. ಜೂನ್ 4ರ ಬಳಿಕ ಸಾಕಷ್ಟು ದೊಡ್ಡ ದೊಡ್ಡ ಇವೆಂಟ್ಸ್ ಮತ್ತೆ ಟೂರ್ನಿಗಳನ್ನ ಮಿಸ್ ಮಾಡಿಕೊಂಡಿದೆ. ಭಾರತದ ಪಂದ್ಯಗಳು ಮಿಸ್ ಆಗಿವೆ. ಐಸಿಸಿ ವುಮೆನ್ಸ್ ವಿಶ್ವಕಪ್ ಪಂದ್ಯಗಳು ಮಿಸ್ ಆಗಿವೆ. ಈಗ 2026ರ ಟಿ-20 ವಿಶ್ವಕಪ್ಗೂ ಚಿನ್ನಸ್ವಾಮಿಯನ್ನ ಪರಿಗಣಿಸಿಲ್ಲ. ಹಾಗೇ ಡೊಮೆಸ್ಟಿಕ್ ಕ್ರಿಕೆಟ್ಗೂ ಅನುಮತಿ ಸಿಕ್ಕಿಲ್ಲ. ಅಲ್ದೇ ಈಗ ರಾಜ್ಯ ಸರ್ಕಾರ ಕೂಡ ಪಂದ್ಯಗಳನ್ನು ಆಯೋಜಿಸಲು ಅನುಮೋದನೆ ನೀಡುವ ಮೊದಲು ಸ್ಟ್ರಕ್ಚರಲ್ ಫಿಟ್‌ನೆಸ್ ಪರೀಕ್ಷೆಗೆ ನಿರ್ದೇಶಿಸಿದೆ. ಒಟ್ನಲ್ಲಿ 18 ವರ್ಷಗಳ ಬಳಿಕ ಆರ್ಸಿಬಿ ಕಪ್ ಗೆದ್ದಿದ್ದ ಖುಷಿ ಜಸ್ಟ್ ಒಂದೇ ದಿನದಲ್ಲಿ ಮಾಯವಾಗಿತ್ತು. ಈಗ ಯಾರದ್ದೋ ತಪ್ಪಿಗೆ ಚಿನ್ನಸ್ವಾಮಿಗೆ ಶಿಕ್ಷೆ ಕೊಡೋದು ನಿಜಕ್ಕೂ ತಪ್ಪು. ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯಗಳು ನಡೆಯೋದು ಬರೀ ಫ್ಯಾನ್ಸ್ಗೆ ಅಷ್ಟೇ ಅಲ್ಲ ತಂಡದ ಆಟಗಾರರಿಗೂ ತುಂಬಾನೇ ಇಷ್ಟ. ಹೀಗಾಗಿ ಮುಂದಿನ ಆವೃತ್ತಿಗೆ ಸಕಲ ಸಿದ್ಧತೆಗಳೊಂದಿಗೆ ಅನುಮತಿ ನೀಡಿದ್ರೆ ಒಳ್ಳೇದು.

ನೋಡಿರಿ

