15 ನಿಮಿಷದಲ್ಲೇ ಆರ್‌ಸಿಬಿ ಪಂದ್ಯದ ಟಿಕೆಟ್ ಸೋಲ್ಡ್ ಔಟ್ – ವರ್ಷದಿಂದ ಕಾಯುತ್ತಿದ್ದ ಬೆಂಗಳೂರಿನ ಫ್ಯಾನ್ಸ್ ಆಕ್ರೋಶ

ಬೆಂಗಳೂರಿನ ಅಭಿಮಾನಿಗಳು ಮತ್ತೆ ನಿರಾಶೆಗೊಂಡಿದ್ದಾರೆ. ಒಂದು ವರ್ಷಗಳಿಂದ ಅಭಿಮಾನಿಗಳು ಆರ್‌ಸಿಬಿ ಪಂದ್ಯ ನೋಡಲು ಕಾತರದಿಂದ ಕಾಯುತ್ತಿದ್ದರು. ಆದರೆ, ಟಿಕೆಟ್ ಬಿಡುಗಡೆಯಾಗಿ ಕೇವಲ 15 ನಿಮಿಷದಲ್ಲೇ ಆರ್‌ಸಿಬಿ ಉದ್ಘಟನಾ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಇದನ್ನೂ ಓದಿ:RCB Vs SRH ಪಂದ್ಯಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಪೂಜೆ!
ಐಪಿಎಲ್ 2026 ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಎರಡೇ ದಿನ ಬಾಕಿ. ಬೆಂಗಳೂರಿನ ಅಭಿಮಾನಿಗಳು ಕೂಡಾ ನೆಚ್ಚಿನ ತಂಡದ ಆಟ ನೋಡಲು ಕಾಯುತ್ತಿದ್ದಾರೆ. ಆದರೆ, ಪಂದ್ಯಕ್ಕೂ ಮೊದಲೇ ಅಭಿಮಾನಿಗಳು ಸಿಕ್ಕಾಪಟ್ಟೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಅಭಿಮಾನಿಗಳು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ. ಮಾರ್ಚ್ 24 ಮಂಗಳವಾರ ಆರ್‌ಸಿಬಿ ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಆದರೆ ಟಿಕೆಟ್ ಬಿಡುಗಡೆಗೊಂಡ ಕೇವಲ 15 ನಿಮಿಷದಲ್ಲಿ ಎಲ್ಲಾ ಟಿಕೆಟ್ ಮಾರಾಟವಾಗಿದೆ.
ಇತರ ಎಲ್ಲಾ ತಂಡಗಳ ಪಂದ್ಯದ ಟಿಕೆಟ್ ದರಕ್ಕೆ ಹೋಲಿಸಿದರೆ ಆರ್‌ಸಿಬಿ ಟಿಕೆಟ್ ದರ ದುಬಾರಿ. ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯದ ಟಿಕೆಟ್ ಕನಿಷ್ಠ 3750 ರೂಪಾಯಿ, ಗರಿಷ್ಠ ದರ 47,000 ರೂಪಾಯಿ. ಈ ಟಿಕೆಟ್‌ಗಳು ಮಂಗಳವಾರ ಬಿಡುಗಡೆಯಾಗಿತ್ತು. ಆದರೆ ಈ ಟಿಕೆಟ್‌ಗಳು ಅಷ್ಟೇ ವೇಗದಲ್ಲಿ ಮಾರಾಟವಾಗಿದೆ. ಆದರೆ 11 ಸೀಟಗಳ ಟಿಕೆಟ್ ರಿಸರ್ವ್ ಮಾಡಲಾಗಿದೆ. ಕಳೆದ ಬಾರಿ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ 11 ಅಭಿಮಾನಿಗಳು ಮೃತಪಟ್ಟಿದ್ದರು. ಇವರ ನೆನಪು ಹಾಗೂ ಗೌರವ ನಮನಕ್ಕಾಗಿ ಆರ್‌ಸಿಬಿ ಪ್ರತಿ ಪಂದ್ಯದಲ್ಲಿ 11 ಟಿಕೆಟ್ ಕಾಯ್ದಿರಿಸಲಿದೆ. ಈ ಆಸನದಲ್ಲಿ ಅಭಿಮಾನಿಗಳು ಹೆಸರು ಬರೆದು ಖಾಲಿ ಇಡಲಾಗುತ್ತದೆ.

ನೋಡಿರಿ

