ಚಿನ್ನಸ್ವಾಮಿ ಬ್ಯಾನ್.. RCB ಪಂದ್ಯಗಳೆಲ್ಲಿ – WPL, IPL ಮಿಸ್ ಮಾಡಿಕೊಳ್ತೇವಾ?
KSCA ಕಳ್ಳಾಟ.. ಪುಣೆಯಲ್ಲಿ ಮ್ಯಾಚ್?

ಡಬ್ಲ್ಯೂಪಿಎಲ್ ಮೆಗಾ ಆಕ್ಷನ್, ಐಪಿಎಲ್ ಮಿನಿ ಆಕ್ಷನ್ ಅಂತಾ ಫ್ರಾಂಚೈಸಿಗಳೆಲ್ಲಾ ಸಿದ್ಧವಾಗ್ತಿವೆ. 2026ರ ಟ್ರೋಫಿ ಮೇಲೆ ಕಣ್ಣಿಟ್ಟು ಬಲಿಷ್ಠ ಆಟಗಾರರನ್ನೆಲ್ಲಾ ಟಾರ್ಗೆಟ್ ಮಾಡಿದ್ದಾರೆ. ಆದ್ರೆ ಐಪಿಎಲ್ನ ಟಾಪ್ ಮೋಸ್ಟ್ ಪಾಪ್ಯುಲರ್ ಟೀಂ ಆರ್ಸಿಬಿಗೆ ಮಾತ್ರ ಸ್ಟೇಡಿಯಂನದ್ದೇ ಚಿಂತೆ. ನೆಕ್ಸ್ಟ್ ಸೀಸನ್ಗೆ ಯಾವ ಮೈದಾನದಲ್ಲಿ ಪಂದ್ಯಗಳನ್ನ ಆಡೋದು ಅನ್ನೋ ಕನ್ಫ್ಯೂಷನ್.
ಇದನ್ನೂ ಓದಿ : ನಾಯಿ ಕಚ್ಚಿ ಸಾವನ್ನಪ್ಪಿದ್ರೆ 5 ಲಕ್ಷ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ!
ಇಂಡಿಯನ್ ಪ್ರೀಮಿಯರ್ಲೀಗ್ನ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ವುಮೆನ್ಸ್ ಪ್ರೀಮಿಯರ್ ಲೀಗ್ ಜನವರಿಯಿಂದ ಸ್ಟಾರ್ಟ್ ಆದ್ರೆ ಐಪಿಎಲ್ ಮಾರ್ಚ್ನಿಂದ ಸ್ಟಾರ್ಟ್ ಆಗುತ್ತೆ. ಌಂಡ್ ಮೆಗಾ ಆಕ್ಷನ್, ಮಿನಿ ಆಕ್ಷನ್, ಟ್ರೇಡ್ ವಿಂಡೋ ಅಂತಾ ಆಲ್ರೆಡಿ ನೆಕ್ಸ್ಟ್ ಸೀಸನ್ ಪ್ರಿಪರೇಷನ್ ಜೋರಾಗಿದೆ. ಮೆನ್ಸ್ ಌಂಡ್ ವುಮೆನ್ಸ್ ಎರಡೂ ತಂಡಗಳಲ್ಲೂ ಬೆಸ್ಟ್ ಪ್ಲೇಯರ್ಸ್ ಇದ್ರೂ ಆರ್ಸಿಬಿಗೆ ಸ್ಟೇಡಿಯಮ್ನದ್ದೇ ಗೊಂದಲವಾಗಿದೆ. ಯಾಕಂದ್ರೆ ಮುಂದಿನ ಆವೃತ್ತಿಗೆ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸೋದು ಅನುಮಾನ ಇದೆ. ಕಳೆದ ಜೂನ್ನಲ್ಲಿ ಆರ್ಸಿಬಿ ಕಪ್ ಗೆದ್ದ ವಿಕ್ಟರಿ ಪರೇಡ್ ವೇಳೆ ಮೈದಾನದ ಬಳಿಯೇ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಬಿಟ್ಟಿದ್ರು. ಹೀಗಾಗಿ ಅದೇ ಮೈದಾನದೊಳಗೆ ಪಂದ್ಯಗಳನ್ನ ನಡೆಸೋಕೆ ಅನುಮತಿ ಸಿಗುವ ಸಾಧ್ಯತೆ ತೀರಾ ಕಮ್ಮಿ ಇದೆ.
ಪುಣೆಯ ಎಂಸಿಎ ಮೈದಾನದಲ್ಲಿ ಆರ್ ಸಿಬಿ ಪಂದ್ಯಗಳು?
ಹಾಗೇನಾದ್ರೂ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಪಂದ್ಯಗಳು ನಡೆಯೋಕೆ ಅವಕಾಶ ಸಿಗದೇ ಇದ್ರೆ ಬೇರೆ ಮೈದಾನವನ್ನ ನೋಡಿಕೊಳ್ಬೇಕಾಗುತ್ತೆ. ಈ ಪ್ರಶ್ನೆಗೆ ಸದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನ ಅಧೀನದಲ್ಲಿರುವ ಪುಣೆಯ MCA ಸ್ಟೇಡಿಯಂನಲ್ಲಿ ಆರ್ಸಿಬಿ ತನ್ನ ಪಂದ್ಯಗಳನ್ನು ಆಯೋಜಿಸೋ ಸಾಧ್ಯತೆ ಇದೆ. ತವರಿನಲ್ಲಿ ಹೋಸ್ಟಿಂಗ್ಗೆ ಅನುಮತಿ ಸಿಗದಿರೋ ಕಾರಣಕ್ಕೆ ಪರ್ಯಾಯ ಸ್ಥಳಗಳನ್ನು ಹುಡುಕುತ್ತಿದ್ದಾರೆ. ಅಲ್ದೇ ಎಂಸಿಎ ಅಧಿಕಾರಿಗಳ ಜೊತೆ ಒಂದು ಸುತ್ತಿನ ಮಾತುಕತೆಯೂ ಆಗಿದೆ. ಈ ಬಗ್ಗೆ ಮಾತ್ನಾಡಿರೋ ಎಂಸಿಎ ಕಾರ್ಯದರ್ಶಿ ಕಮಲೇಶ್ ಪಿಸಾಲ್ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ತೇವೆ ಎಂದಿದ್ದಾರೆ.
ಒಂದ್ಕಡೆ ಪಂದ್ಯಗಳೆಲ್ಲಿ ನಡೆಸೋದು ಅನ್ನೋ ಗೊಂದಲದಲ್ಲಿದ್ರೆ ಇನ್ನೊಂದ್ಕಡೆ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಎಲೆಕ್ಷನ್ ನಲ್ಲೂ ಹೈಡ್ರಾಮಾ ನಡೀತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ನವೆಂಬರ್ 30ಕ್ಕೆ ಚುನಾವಣೆ ನಡೆಯಬೇಕಿತ್ತು. ಆದ್ರೆ ಡಿಸೆಂಬರ್ 30ಕ್ಕೆ ಮುಂದೂಡಿಕೆ ಮಾಡಲಾಗಿದೆ. ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸ್ಪರ್ಧಿಸಿದ್ದಾರೆ. ಹಾಗೇ ತಾವು ಅಧ್ಯಕ್ಷರಾಗಿ ಆಯ್ಕೆಯಾದ್ರೆ ಆರ್ಸಿಬಿ ಪಂದ್ಯಗಳನ್ನ ಬೆಂಗಳೂರಿನಲ್ಲೇ ನಡೆಸೋಕೆ ಅನುಮತಿ ಪಡೆಯೋದಾಗಿ ಹೇಳಿದ್ರು. ವೆಂಕಟೇಶ್ ಪ್ರಸಾದ್ ಬಣಕ್ಕೆ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಬೆಂಬಲ ನೀಡಿದ್ದಾರೆ. ಆದ್ರೀಗ ಚುನಾವಣೆಯೇ ಪೊಸ್ಟ್ ಪೋನ್ ಆಗ್ತಿದೆ. ಆದ್ರೆ ಇವತ್ತು ಆರ್ಸಿಬಿ ಪಂದ್ಯಗಳಿಗೆ ತವರು ಮೈದಾನ ಇಲ್ಲದಂತಾಗೋಕೆ ಮುಖ್ಯ ಕಾರಣವೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ನ ಕಳ್ಳಾಟ.
ಕರ್ನಾಟಕದಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ಪರ್ಯಾಯ ಮೈದಾನವಿಲ್ಲ!
ಬಿಗ್ ಟೂರ್ನಮೆಂಟ್ಸ್ ಅಂತಾ ಬಂದಾಗ ಕರ್ನಾಟಕದಲ್ಲಿ ಇರೋದೇ ಚಿನ್ನಸ್ವಾಮಿ ಮೈದಾನ ಮಾತ್ರವೇ. ಹಾಗಂತ ಅದೂ ಕೂಡ ಏನು ದೊಡ್ಡದಲ್ಲ. ಆದ್ರೆ ಅದಕ್ಕೆ ಪರ್ಯಾಯವಾಗಿ ಅಂದ್ರೆ ಕರ್ನಾಟಕದಲ್ಲಿ ಚಿನ್ನಸ್ವಾಮಿಗೆ ಆಲ್ಟರ್ ನೇಟಿವ್ ಆಗಿ ಮತ್ತೊಂದು ಮೈದಾನ ನಿರ್ಮಿಸದೇ ಕೆಎಸ್್ಸಿಎ ಕಳ್ಳಾಟ ಆಡಿಕೊಂಡೇ ಬರ್ತಿದೆ. ಬಹುತೇಕ ರಾಜ್ಯಗಳಲ್ಲಿ ಎರಡೆರಡು ಮೈದಾನಗಳಿವೆ. ಆದ್ರೆ ಕರ್ನಾಟಕದಲ್ಲಿ ಚಿನ್ನಸ್ವಾಮಿಗೆ ಮಾತ್ರವೇ ಸೀಮಿತವಾಗಿದ್ದಾರೆ. ಬಹುಶಃ ರಾಜ್ಯದಲ್ಲೇ ಮತ್ತೊಂದು ಆಪ್ಶನ್ಸ್ ಇದ್ರೆ ಪಂದ್ಯಗಳನ್ನ ಅಲ್ಲಿಗೆ ಶಿಫ್ಟ್ ಮಾಡ್ಬೋದಿತ್ತು. ಐಪಿಎಲ್ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ಆರ್ಸಿಬಿಗೆ ಐಪಿಎಲ್ನಲ್ಲಿ ಹೋಂ ಮ್ಯಾಚಸ್ ಇಲ್ಲ ಅಂದ್ರೆ ಅತಿದೊಡ್ಡ ಸೆಟ್ಬ್ಯಾಕ್ ಆಗುತ್ತೆ. ಯಾವುದೋ ಮತ್ತೊಂದು ರಾಜ್ಯಕ್ಕೆ ಹೋಗಿ ಪಂದ್ಯಗಳನ್ನ ಆಡೋದ್ರಿಂದ ಆಟಗಾರರಿಗೂ ಕಿಕ್ ಸಿಗಲ್ಲ. ಅಭಿಮಾನಿಗಳಿಗೂ ಮಜಾ ಬರಲ್ಲ. ಸೋ ಇನ್ನಾದ್ರೂ ಕೆಎಸ್ಸಿಎ ಅಲರ್ಟ್ ಆಗ್ಬೇಕಿದೆ. ಮೊದ್ಲೇ ಆರ್ಸಿಬಿ ವಿಕ್ಟರಿ ಪರೇಡ್ ನಲ್ಲಿ ದೊಡ್ಡ ಎಡವಟ್ಟೇ ಆಗಿದೆ. ಇದೀಗ ಪಂದ್ಯಗಳೂ ಕರ್ನಾಟಕದ ಕೈ ತಪ್ಪಿ ಹೋದ್ರೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗೋದು ಪಕ್ಕಾ. ಹೀಗಾಗಿ ಸುರಕ್ಷತೆಯ ನಡುವೆ ಚಿನ್ನಸ್ವಾಮಿಯಲ್ಲೇ ಪಂದ್ಯಗಳನ್ನ ಆಯೋಜನೆ ಮಾಡುವಂತೆ ನೋಡಿಕೊಳ್ಬೇಕಿದೆ.

ನೋಡಿರಿ

