RCB ಸಕ್ಸಸ್ ಸೀಕ್ರೆಟ್ DK..! – ದಿನೇಶ್ ಕಾರ್ತಿಕ್ ಅಚ್ಚುಮೆಚ್ಚಿನ ಗುರು

ಮಾರ್ಚ್ 22ರ ಉದ್ಘಾಟನಾ ಪಂದ್ಯದಿಂದ ಹಿಡ್ದು ಮೇ29ರಂದು ನಡೆದ ಕ್ವಾಲಿಫೈಯರ್ 1 ಮ್ಯಾಚ್ವರೆಗೂ ಆರ್‌ಸಿಬಿ ಜರ್ನಿ ಅತ್ಯದ್ಭುತ. ಬೌಲಿಂಗ್ & ಬ್ಯಾಟಿಂಗ್ ಎಲ್ಲದ್ರಲ್ಲೂ ವೀ ಆರ್ ಸೂಪರ್ ಸ್ಟ್ರಾಂಗ್. ಹೀಗಾಗೇ 18ನೇ ಸೀಸನ್ ಫಸ್ಟ್ ಫೈನಲಿಸ್ಟ್ ಆಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಾಗಿದೆ. ಫ್ಯಾನ್ಸ್, ಮಾಜಿ ಕ್ರಿಕೆಟರ್ಸ್, ಎಕ್ಸ್ಪರ್ಟ್ಸ್ ಹೀಗೆ ಎಲ್ರೂ ಬೆಂಗಳೂರು ಟೀಮ್ ಪರ್ಫಾಮೆನ್ಸ್ಗೆ ಕಂಪ್ಲೀಟ್ ಬೌಲ್ಡ್ ಆಗಿದ್ದಾರೆ. ಬಟ್ ನಿಮಗೊತ್ತಾ ಆರ್ಸಿಬಿಯ ಈ ಸಕ್ಸಸ್ಫುಲ್ ಜರ್ನಿ ಹಿಂದೆ ದ್ರೋಣಾಚಾರ್ಯನಾಗಿ ನಿಂತಿರೋದು ದಿನೇಶ್ ಕಾರ್ತಿಕ್. ಹೀಗಾಗೇ ಡಿಕೆ ಬಾಸ್ ಕೂಡ ಫುಲ್ ಟ್ರೆಂಡಿಂಗ್ನಲ್ಲಿದ್ದಾರೆ.
ಇದನ್ನೂ ಓದಿ: ʼಕಣ್ಣಪ್ಪʼ ಚಿತ್ರದ ಹಾರ್ಡ್ ಡ್ರೈವ್ ಕಳ್ಳತನ – ನೀರಿನಲ್ಲಿ ಹೋಮವಾಯ್ತು ಕೋಟಿ ಕೋಟಿ ದುಡ್ಡು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಅಂದ್ರೇನೇ ಐಪಿಎಲ್‌ನಲ್ಲಿ ದಿ ಮೋಸ್ಟ್ ಸ್ಪೆಷಲ್. 17 ಸೀಸನ್.. 10 ಸಲ ಪ್ಲೇಆಫ್.. 3 ಸಲ ಫೈನಲಿಸ್ಟ್.. ಬಟ್ ಟ್ರೋಫಿ ಮಾತ್ರ ಮಾಯಾಜಿಂಕೆಯಂತೆ ಕೈಗೆ ಸಿಗದೆ ಮಾಯವಾಗ್ತಿದೆ. ತಲೆ ಮೇಲೆ ಹೊತ್ತು ಮೆರೆಸೋ ಅಭಿಮಾನಿಗಳಿದ್ದಾರೆ.. ಜಗತ್ತೇ ಮೆಚ್ಚಿದ ಕ್ರಿಕೆಟರ್ಸ್ ಆಡಿದ್ದಾರೆ. ಲಾಯಲ್ಟಿ ಅಂದ್ರೆ ನಾವೇ ಅನ್ನೋ ಫ್ಯಾನ್ಸ್ ಇದ್ದಾರೆ.. ಬ್ರ್ಯಾಂಡ್ನಲ್ಲಿ ಆರ್ಸಿಬಿನ ಮೀರಿಸೋರು ಇನ್ನೊಬ್ರಿಲ್ಲ. ದೇಶದ ಯಾವುದೇ ಗಡಿಯಲ್ಲಿ ಮ್ಯಾಚ್ ನಡೆದ್ರೂ ಆರ್‌ಸಿಬಿ ಆರ್‌ಸಿಬಿ ಚಾಂಟ್ ಕೇಳದೆ ಇರಲ್ಲ. ಐಪಿಎಲ್‌ನಲ್ಲಿ ಆಡಿದ್ರೆ ಒಂದ್ಸಲನಾದ್ರೂ ಆರ್‌ಸಿಬಿ ಟೀಮ್ನಲ್ಲಿ ಆಡ್ಬೇಕು ಅನ್ನೋದು ಎಷ್ಟೋ ಯಂಗ್ ಕ್ರಿಕೆಟರ್ಸ್ ಡ್ರೀಮ್. ಬಟ್ ಇಂಥಾ ಟೀಂ ಹಾಗೇ ಫ್ಯಾನ್ಸ್ಗೆ ಇರೋ ಒಂದೇ ಒಂದು ಕೊರಗು ಟ್ರೋಫಿ. ಆ ಟ್ರೋಫಿಯನ್ನ ಈ ಸಲ ಗೆದ್ದೇ ಗೆಲ್ಬೇಕು ಅನ್ನೋ ಪಣ ತೊಟ್ಟು ತ್ರಿವಿಕ್ರಮನಂತೆ ಆಟಗಾರರ ಬೆನ್ನ ಹಿಂದೆ ನಿಂತಿದ್ದಾರೆ ದಿನೇಶ್ ಕಾರ್ತಿಕ್.
ಆರ್ ಸಿಬಿ ಪ್ಲೇಯರ್ಸ್ ಭರ್ಜರಿ ಶೋಗೆ ಡಿಕೆಯೇ ಸೂತ್ರದಾರಿ!
ಬೆಂಗಳೂರು ಟೀಂ ಅಂದ್ರೆ ಬರೀ ಅಭಿಮಾನಿಗಳಷ್ಟೇ ಅಲ್ಲ ಇಲ್ಲಿ ಆಡಿದ ಪ್ಲೇಯರ್ಸ್ಗೂ ಅಚ್ಚುಮೆಚ್ಚು. ಹೀಗಾಗಿ ಟೀಂ ಬಿಟ್ರೂ ಅಭಿಮಾನ ಬಿಟ್ಟಿಲ್ಲ. ಕ್ರಿಸ್ ಗೇಲ್, ಎಬಿಡಿವಿಲಿಯರ್ಸ್ ಈಗ್ಲೂ ಆರ್‌ಸಿಬಿ ಸಪೋರ್ಟ್ಗೆ ಬರ್ತಾರೆ. ಈಗ ಆಲ್ರೆಡಿ ಕ್ರಿಸ್ ಗೇಲ್ ಬಂದು ಹೋಗಿದ್ರು. ಈಗ ಎಬಿಡಿ ಕೂಡ ಕ್ವಾಲಿಫೈಯರ್ 1ಮ್ಯಾಚ್ನಲ್ಲೇ ಜಾಯ್ನ್ ಆಗಿದ್ದಾರೆ. ಹೀಗೇ ಆರ್ಸಿಬಿಯನ್ನ ಅತಿಹೆಚ್ಚು ಪ್ರೀತಿಸೋರಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ರು. ದಿನೇಶ್ ಕಾರ್ತಿಕ್ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಪ್ರೀತಿಯ ಡಿಕೆ. 2024ರ ಐಪಿಎಲ್ ಸೀಸನ್ನಲ್ಲಿ ಆರ್‌ಸಿಬಿ ಸ್ಕ್ವಾಡ್ನಲ್ಲಿದ್ದ ಡಿಕೆ ತಂಡದ ಪ್ಲೇಆಫ್ ಜರ್ನಿಯಲ್ಲಿ ಆಪತ್ವಾಂಧವನಾಗಿದ್ರು. ಬಟ್ ಎಲಿಮಿನೇಟರ್ ಮ್ಯಾಚಲ್ಲಿ ಆರ್‌ಸಿಬಿ ಹೊರಬಿದ್ದಿತ್ತು. ರಾಜಸ್ಥಾನ ವಿರುದ್ಧದ ಅದೇ ಪಂದ್ಯದಲ್ಲಿ ಡಿಕೆ ಐಪಿಎಲ್ಗೆ ನಿವೃತ್ತಿ ಘೋಷಿಸಿದ್ರು. ಬಟ್ ಟ್ಯಾಲೆಂಟೆಡ್ ಡಿಕೆಯನ್ನ ಬಿಟ್ಟುಕೊಡೋಕೆ ಒಪ್ಪದ ಫ್ರಾಂಚೈಸಿ ಬ್ಯಾಟಿಂಗ್ ಕೋಚ್ ಹಾಗೇ ಮೆಂಟರ್ ಆಗಿ ಆಯ್ಕೆ ಮಾಡಿತ್ತು. ಅಂದಿನಿಂದ ಈವರೆಗೂ ಡಿಕೆ ಸ್ಟ್ರಾಟರ್ಜಿ ಕಂಪ್ಲೀಟ್ ಆಗಿ ವರ್ಕ್ ಆಗ್ತಿದೆ.
ಆರ್ ಸಿಬಿ ಮಾಸ್ಟರ್ ಮೈಂಡ್ ಡಿಕೆ!
ಐಪಿಎಲ್‌ನಲ್ಲಿ ಆರ್ಸಿಬಿಯಿಂದಲೇ ನೇಮ್, ಫೇಮ್ ಪಡೆದ ಡಿಕೆಗೆ ಫ್ರಾಂಚೈಸಿ ಬ್ಯಾಟಿಂಗ್ ಕೋಚ್ ಹಾಗೇ ಮೆಂಟರ್ ಸ್ಥಾನ ನೀಡಿತ್ತು. ಸೋ ಸಿಕ್ಕಿರೋ ಅವಕಾಶದಲ್ಲಿ ಏನಾದ್ರೂ ಮಾಡ್ಬೇಕು ಅಂತಾ ಪಣ ತೊಟ್ಟ ಟಿಕೆ ಆರ್ ಸಿಬಿ ಸೇರುತ್ತಿದ್ದಂತೆ ಟೀಂ ಬದಲಾವಣೆಗೆ ಯೋಜನೆಗಳನ್ನ ರೂಪಿಸಿದ್ರು. ಹಾಗೇ 2024ರ ನವೆಂಬರ್ ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಕ್ವಾಲಿಟಿ ಪ್ಲೇಯರ್ಸ್ ಖರೀದಿಗೆ ಶಾರ್ಟ್ ಲಿಸ್ಟ್ ರೆಡಿ ಮಾಡಿಕೊಂಡಿದ್ರು. ಅವ್ರನ್ನ ಏಕಾಏಕಿ ಖರೀದಿ ಮಾಡೋದಕ್ಕಿಂತ ಮೊದಲು ಆಟಗಾರರ ರೆಕಾರ್ಡ್ಸ್ ಬಗ್ಗೆ ವರ್ಕ್ ಮಾಡಿದ್ರು. ಪರ್ಫಾಮೆನ್ಸ್ ಹೇಗಿದೆ, ನಮಗೆ ಯಾವ ಸ್ಲಾಟ್ನಲ್ಲಿ ಉಪಯೋಗಕ್ಕೆ ಬರ್ತಾರೆ ಅನ್ನೋದನ್ನ ಡಿಸ್ಕಸ್ ಮಾಡಿದ್ರು. ಅಲ್ದೇ ಪ್ರತೀ ಸೀಸನ್ನಲ್ಲಿ ಆರ್ಸಿಬಿಗೆ ಬ್ಯಾಟಿಂಗ್ ಲೈನಪ್ ಚೆನ್ನಾಗಿದ್ರೂ ಬೌಲಿಂಗ್ ಕೈಕೊಡ್ತಿತ್ತು. ಬಟ್ ಈ ಸಲ ಕಂಪ್ಲೀಟ್ ಉಲ್ಟಾ. ಬ್ಯಾಟಿಂಗ್ ಎಷ್ಟು ಚೆನ್ನಾಗಿದ್ಯೋ ಬೌಲಿಂಗ್ ಕೂಡ ಅಷ್ಟೇ ಸ್ಟ್ರಾಂಗ್ ಆಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ತಿಂಗಳುಗಟ್ಟಲೆ ಫ್ರಾಂಚೈಸಿ ಜೊತೆಗೇ ಇದ್ದು ತಂತ್ರಗಾರಿಕೆಗಳನ್ನ ರೂಪಿಸಿದ್ರು. ಪ್ರತೀ ಪಂದ್ಯಕ್ಕೂ ಮುನ್ನ ಪ್ಲೇಯಿಂಗ್ 11 ಬಗ್ಗೆ ಚರ್ಚೆ ನಡೆಸ್ತಿದ್ರು. ಯಾರನ್ನ ಕಣಕ್ಕಿಳಿಸಬೇಕು ಅವ್ರ ಪ್ಲಸ್ & ಮೈನಸ್ ಏನು ಅನ್ನೋದನ್ನೆಲ್ಲಾ ಕ್ಯಾಲ್ಕುಲೇಟ್ ಮಾಡ್ತಿದ್ರು. ಇನ್ನು ಮ್ಯಾಚ್ ಮುಗಿದ ಮೇಲೂ ರಿಸಲ್ಟ್ ಬಗ್ಗೆ ಮಾತುಕತೆ ನಡೆಸ್ತಿದ್ರು. ಡ್ರೆಸ್ಸಿಂಗ್ ರೂಮ್ ನಲ್ಲಿ ಎಲ್ಲರ ಜೊತೆಯೂ ಫ್ರೆಂಡ್ಲಿಯಾಗಿ ಮಿಂಗಲ್ ಆಗೋ ಡಿಕೆ ಮೋಟಿವೇಷನಲ್ ಸ್ಪೀಚ್ ಕೊಡೋದ್ರಲ್ಲಿ ಎತ್ತಿದ ಕೈ. ಇದೇ ಕಾರಣಕ್ಕೆ ಡಿಕೆ ಅಂದ್ರೆ ಆಟಗಾರರಿಗೂ ಅಚ್ಚುಮೆಚ್ಚು.
ಹೀಗೆ ಪ್ರತೀ ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಸೇರೋ ಡಿಕೆ ಎಲ್ಲಾ ಆಟಗಾರರು ಕುರಿತು ಮಾತ್ನಾಡ್ತಾರೆ. ಹಾಗೇ ಅವ್ರ ಪರ್ಫಾಮೆನ್ಸ್ನ ಅಪ್ರಿಶಿಯೇಟ್ ಮಾಡ್ತಾರೆ.
ಲಕ್ನೋ ವಿರುದ್ಧ ಗೆದ್ದು ಡಿಕೆ ನೆನೆದಿದ್ದ ಜಿತೇಶ್ ಶರ್ಮಾ!
ಲೀಗ್ ಹಂತದ ಕೊನೇ ಪಂದ್ಯದಲ್ಲಿ ಲಕ್ನೋ ಟೀಂ ನೀಡಿದ್ದ 227 ರನ್ಗಳ ಟಾರ್ಗೆಟ್ನ ಆರ್‌ಸಿಬಿ ಈಸಿಯಾಗಿ ಬೆನ್ನತ್ತಿತ್ತು. ಈ ಪಂದ್ಯದಲ್ಲಿ ಜಿತೇಶ್ ಶರ್ಮಾ ಹೀರೋ ಆಗಿದ್ರು. ಈ ಪಂದ್ಯದ ಬಳಿಕ ಮಾತ್ನಾಡಿದ್ದ ಜಿತೇಶ್ ತಮ್ಮ ಪರ್ಫಾಮೆನ್ಸ್ ಹಿಂದೆ ನಮ್ಮ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಇದ್ದಾರೆ ಎಂದು ಹೇಳಿದ್ರು. ದಿನೇಶ್ ಕಾರ್ತಿಕ್ ಅವರು ಸ್ಪರ್ಧೆಯಲ್ಲಿ ಇನ್ನೂ ದೊಡ್ಡ ಪಂದ್ಯಗಳನ್ನ ಆಡಬೇಕಾಗಿದೆ ಎಂದು ಆಟಗಾರರಿಗೆ ನೆನಪಿಸಿದ್ರು. ಈ ವರ್ಷ ದೊಡ್ಡ ಗುರಿಯನ್ನೇ ಸಾಧಿಸುವುದಿದೆ ಎಂದು ಪ್ರೇರೇಪಿಸಿದ್ರು. ನಿಮ್ಮಿಂದ ಎಲ್ಲವೂ ಸಾಧ್ಯ ಎಂದು ಹೇಳಿದ್ದೇ ಫಿಯರ್ಲೆಸ್ ಬ್ಯಾಟಿಂಗ್ಗೆ ನೆರವಾಯ್ತು ಎಂದು ಹೇಳಿಕೊಂಡಿದ್ರು.
ಆರ್ ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ ಡಿಕೆ!
ಐಪಿಎಲ್‌ನಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಸೇರಿದಂತೆ ಆರು ತಂಡಗಳ ಪರ ಡಿಕೆ ಕಣಕ್ಕಿಳಿದಿದ್ರು. 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ದಿನೇಶ್ ಕಾರ್ತಿಕ್ ಅವರನ್ನು ಖರೀದಿಸಿತ್ತು. 2024ರ ಆವೃತ್ತಿಯಲ್ಲಿ 15 ಪಂದ್ಯಗಳನ್ನ ಆಡಿದ್ದು, 187ರ ಸ್ಟ್ರೈಕ್ ರೇಟ್‌ನಲ್ಲಿ 326 ರನ್ ಗಳಿಸಿದ್ರು. ಒಟ್ಟಾರೆ ಐಪಿಎಲ್‌ನಲ್ಲಿ 257 ಪಂದ್ಯಗಳನ್ನ ಆಡಿದ್ದು, 22 ಅರ್ಧಶತಕಗಳೊಂದಿಗೆ 4842 ರನ್ ಗಳಿಸಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಒಟ್ನಲ್ಲಿ ಮೂರು ವರ್ಷ ಆರ್‌ಸಿಬಿಗಾಗಿ ಆಡಿದ್ದ ಡಿಕೆಗೆ ಅಭಿಮಾನಿಗಳ ನಾಡಿ ಮಿಡಿತ ಅರ್ಥವಾಗಿತ್ತು. ಅವ್ರ ಪ್ರೀತಿ, ತಾಳ್ಮೆ ನೋವು, ಸಂಕಟ, ನಿರಾಸೆ ಇವೆಲ್ಲವನ್ನು ಹತ್ತಿರದಿಂದ ನೋಡಿದ್ರು. ಹೀಗಾಗೇ ತಮಗಾಗಿ ಅಲ್ದೇ ಇದ್ರೂ ಅವ್ರಿಗೋಸ್ಕರನಾದ್ರೂ ಕಪ್ ಗೆಲ್ಲಲೇಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಸದ್ಯ ಆರ್‌ಸಿಬಿ ಫೈನಲ್ ತಲುಪಿದೆ. ಕೋಟ್ಯಂತರ ಕನ್ನಡಿಗರು ಹಾಗೇ ಜಗತ್ತಿನೆಲ್ಲೆಡೆ ಇರೋ ಅಭಿಮಾನಿಗಳು ಕಪ್ ಎತ್ತಿ ಹಿಡಿಯೋದನ್ನ ನೋಡೋಕೆ ಕಾಯ್ತಿದ್ದಾರೆ. ಇದೆಲ್ಲದ್ರ ಹಿಂದೆ ದೈತ್ಯ ಶಕ್ತಿಯಾಗಿ ಬ್ಯಾಟಿಂಗ್ ಮಾಸ್ಟರ್ ಮೈಂಡ್ ಆಗಿ ಡಿಕೆ ನಿಂತಿದ್ದಾರೆ. ಇದೇ ಕಾರಣಕ್ಕೆ ಆರ್ ಸಿಬಿ ಫ್ಯಾನ್ಸ್ ಡಿಕೆಯನ್ನ ನೆನಪು ಮಾಡಿಕೊಳ್ತಿದ್ದಾರೆ. ತಂಡದಲ್ಲಿ ಇದ್ದಾಗ್ಲೂ ಇಲ್ದೇ ಇದ್ದಾಗ್ಲೂ ನೀವೇ ನಮ್ಮ ಆಪತ್ಪಾಂಧವ ಅಂತಾ ಗುಣಗಾನ ಮಾಡ್ತಿದ್ದಾರೆ.