RCB ಬಿಟ್ಟ ಮೇಲೆ ಮ್ಯಾಕ್ಸಿ WELL  – ಪಂಜಾಬ್ ಖುಷ್ ಆಗಿದ್ದೇಕೆ? 

RCB ಬಿಟ್ಟ ಮೇಲೆ ಮ್ಯಾಕ್ಸಿ WELL  – ಪಂಜಾಬ್ ಖುಷ್ ಆಗಿದ್ದೇಕೆ? 

ಐಪಿಎಲ್​ನ ಒನ್ ಆಫ್ ದಿ ಮೋಸ್ಟ್ ಡೇಂಜರಸ್ ಬ್ಯಾಟ್ಸ್ ಮನ್ ಗಳಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಒಬ್ರು. ಅದ್ರಲ್ಲೂ ಆರ್ ಸಿಬಿಗೆ ಬಂದ ಮೇಲೆ ಮ್ಯಾಕ್ಸಿ ಬೇರೆಯದ್ದೇ ಲೆವೆಲ್ ನಲ್ಲಿ ಅಭಿಮಾನಿಗಳನ್ನ ಸಂಪಾದಿಸಿದ್ರು. ಭರ್ಜರಿ ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನ ಬೇಟೆಯಾಡ್ತಿದ್ರು. ಬಟ್ 2024ರ ಸೀಸನ್​ನಲ್ಲಿ ಕಳಪೆ ಫಾರ್ಮ್  ಮ್ಯಾಕ್ಸಿಯನ್ನ ಬಿಟ್ಟೂ ಬಿಡದೆ ಕಾಡಿತ್ತು. ಆದ್ರೆ ಐಪಿಎಲ್ ನಲ್ಲಿ ಆಡದ ಮ್ಯಾಕ್ಸ್ ವೆಲ್ ಈಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಬಿಗ್ ಬ್ಯಾಷ್ ಲೀಗ್ ನಲ್ಲಿ ಸುನಾಮಿ ಎಬ್ಬಿಸಿದ್ದಾರೆ. ತಮ್ಮ ಸ್ಫೋಟಕ ಆಟದ ಮೂಲಕ ಮೈದಾನದಲ್ಲಿ ರನ್​ಗಳ ಮಳೆ ಸುರಿಸ್ತಿದ್ದಾರೆ.

ಇದನ್ನೂ ಓದಿ :  ಬುಮ್ರಾಗೆ ಬೆನ್ನು ನೋವಿನ ಭೂತ – ಕ್ಯಾಪ್ಟನ್ಸಿಯನ್ನೂ ಕಿತ್ತುಕೊಳ್ತಿದ್ಯಾ ಇಂಜುರಿ?  

ಬಿಬಿಎಲ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ಮ್ಯಾಕ್ಸ್‌ವೆಲ್ 6ನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದು ಬೌಂಡರಿ ಸಿಕ್ಸರ್​ಗಳನ್ನ ಚಚ್ಚಿದ್ದಾರೆ. ಮೆಲ್ನೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದಲ್ಲಿ  ಬೌಲರ್​ಗಳನ್ನು ಕಾಡಿದ ಮ್ಯಾಕ್ಸ್‌ವೆಲ್ ಕೇವಲ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್​ಗಳ ಸಹಿತ 90 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದಾರೆ. ಅಂದರೆ ಮ್ಯಾಕ್ಸ್‌ವೆಲ್ ಕೇವಲ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ 14 ಎಸೆತಗಳಲ್ಲಿ ಬರೋಬ್ಬರಿ 76 ರನ್ ಕಲೆ ಹಾಕಿದ್ದಾರೆ. ತಂಡ 75ಕ್ಕೆ 7 ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿದ್ದಾಗ ಸಿಡಿದೆದ್ದ ಮ್ಯಾಕ್ಸಿ, ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದು ತಂಡವನ್ನು ರಕ್ಷಿಸಿದರು. ಅದ್ರಲ್ಲೂ ಕೇನ್ ರಿಚರ್ಡ್ಸ್ 16ನೇ ಓವರ್‌ನ 2ನೇ ಎಸೆತವನ್ನು 122 ಮೀಟರ್ ದೂರ ಸಿಕ್ಸರ್ ಬಾರಿಸಿದರು. ಇದು ಬಿಬಿಎಲ್ ಇತಿಹಾಸದಲ್ಲೇ ಅತಿ ದೂರದ ಸಿಕ್ಸರ್. ಇನ್ನು ಕಳೆದ ಪಂದ್ಯದಲ್ಲೂ ಕೂಡ ಮ್ಯಾಕ್ಸಿ 58 ರನ್ ಸಿಡಿಸಿ ಮಿಂಚಿದ್ದರು.

ಬಿಬಿಎಲ್ ನಲ್ಲಿ ಮ್ಯಾಕ್ಸ್ ವೆಲ್ ಪ್ರದರ್ಶನ ನೋಡಿದ ಆರ್ ಸಿಬಿ ಫ್ಯಾನ್ಸ್ ಅಂತೂ ಫುಲ್ ತಲೆಕೆಡಿಸಿಕೊಂಡಿದ್ದಾರೆ. ಇದೇನ್ ಗುರು ಬೆಂಗಳೂರು ಟೀಮ್ ನಲ್ಲಿದ್ದಾಗ ಲಾಸ್ಟ್ ಸೀಸನ್ ಬ್ಯಾಟ್ ಬೀಸೋಕೂ ಒದ್ದಾಡ್ತಿದ್ರು. ಬಿಬಿಎಲ್ ನಲ್ಲಿ ರನ್ ಮಳೆ ಹರಿಸ್ತಿದ್ದಾರೆ. ಬಟ್ 18ನೇ ಆವೃತ್ತಿಗೆ ಬೆಂಗಳೂರು ತಂಡದಿಂದಲೇ ಕೈ ಬಿಟ್ಟಿದ್ದೇವೆ. ತಪ್ಪು ಮಾಡಿದ್ವಾ ಅಂತಾ ಅಭಿಮಾನಿಗಳು ಮತ್ತು ಆರ್ ಸಿಬಿ ಫ್ರಾಂಚೈಸಿಯಲ್ಲಿ ಚರ್ಚೆ ನಡೀತಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಮ್ಯಾಕ್ಸ್ ವೆಲ್ ಪರ್ಫಾಮೆನ್ಸ್ ಎಷ್ಟು ಕೆಟ್ಟದಾಗಿತ್ತು ಅನ್ನೋದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಆಸ್ಟ್ರೇಲಿಯ ತಂಡದ ಸ್ಟಾರ್ ಬ್ಯಾಟರ್ ಮ್ಯಾಕ್ಸ್​ವೆಲ್ ಅವ್ರನ್ನ ಬೆಂಗಳೂರು ತಂಡ 2021ರಲ್ಲಿ 14.25 ಕೋಟಿ ಮೊತ್ತಕ್ಕೆ ಖರೀದಿ ಮಾಡಿತ್ತು. ನಂತರದ ವರ್ಷಗಳಲ್ಲಿ 11 ಕೋಟಿ ರೂಪಾಯಿಗೆ ರಿಟೇನ್ ಮಾಡಿಕೊಂಡಿತ್ತು. ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ 2021 ರಲ್ಲಿ 513 ರನ್ ಗಳಿಸಿದ್ದರು. 2022ರಲ್ಲಿ 301 ಮತ್ತು 2023ರಲ್ಲಿ 400 ರನ್ ಗಳಿಸಿ ಉತ್ತಮ ಪ್ರದರ್ಶನ ತೋರಿದ್ದರು. ಆದರೆ 2024ರಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಡಕ್ ಔಟ್ ಆಗುವ ಮೂಲಕ ತುಂಬಾನೇ ನಿರಾಸೆ ಮೂಡಿಸಿದ್ರು. ಟೂರ್ನಿಯುದ್ದಕ್ಕೂ ಮ್ಯಾಕ್ಸಿ ಕಲೆ ಹಾಕಿದ್ದು ಬರೀ 52 ರನ್​ಗಳು ಮಾತ್ರ. ಟೂರ್ನಿಯಲ್ಲಿ ಒಟ್ಟು 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ರು. ಈ ಪೈಕಿ ಹೈಎಸ್ಟ್​ ಸ್ಕೋರ್​​ 28 ರನ್. ಅದರಲ್ಲೂ ಒಂದೇ ಸೀಸನ್​ನಲ್ಲಿ 5 ಬಾರಿ ಡಕ್ ಔಟ್ ಆಗಿದ್ರು ಅಂದ್ರೆ ನಂಬಲೇಬೇಕು. ಇದಕ್ಕಿಂತ ಶಾಕಿಂಗ್ ವಿಚಾರ ಅಂದ್ರೆ ಈ ವೇಳೆ  ಮ್ಯಾಕ್ಸ್​ವೆಲ್ ಪಡೆದಿರುವುದು ಬರೋಬ್ಬರಿ 11 ಕೋಟಿ ರೂಪಾಯಿ ಸಂಭಾವನೆ. ಕಲೆ ಹಾಕಿದ್ದು ಕೇವಲ 52 ರನ್. ಸೋ ಮ್ಯಾಕ್ಸ್​ವೆಲ್ ಪ್ರತಿ ರನ್​ಗೆ 21 ಲಕ್ಷ ರೂಪಾಯಿ ಕೊಟ್ಟಂತಾಗಿತ್ತು. ಇನ್ನು ಬೌಲಿಂಗ್​ನಲ್ಲೂ ಕೂಡ ಮ್ಯಾಕ್ಸ್​ವೆಲ್ 10 ಪಂದ್ಯಗಳಿಂದ 6 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ರು. ಅಂದರೆ ಆಲ್​ರೌಂಡರ್ ಆಗಿ ಮ್ಯಾಕ್ಸ್​ವೆಲ್ ಸಂಪೂರ್ಣ ವಿಫಲರಾಗಿದ್ರು.

ಐಪಿಎಲ್​ನಲ್ಲಿ ಸೊನ್ನೆ ಸುತ್ತುವ ಮೂಲಕವೇ ಸುದ್ದಿಯಲ್ಲಿದ್ದ ಮ್ಯಾಕ್ಸ್​ವೆಲ್ ಅದಾದ ಬಳಿಕ ಆರಂಭವಾದ ಟಿ20 ವಿಶ್ವಕಪ್​ನಲ್ಲೂ ಕಳಪೆ ಪ್ರದರ್ಶನದಿಂದಲೇ ಬಳಲಿದ್ರು. ತನ್ನ ಮೊದಲ ಪಂದ್ಯದಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ ಗೋಲ್ಡನ್ ಡಕ್​ಗೆ ಔಟಾಗಿದ್ದಾರೆ. ಬಾರ್ಬಡೋಸ್​ನಲ್ಲಿ ನಡೆದಿದ್ದ ಒಮಾನ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು. ಆ ಬಳಿಕ ಕಮ್ ಬ್ಯಾಕ್ ಮಾಡಿದ್ರೂ ಕೂಡ 7 ಪಂದ್ಯಗಳಿಂದ 132 ರನ್ ಮಾತ್ರ ಕಲೆ ಹಾಕಿದ್ರು.

ಬಿಗ್ ಬ್ಯಾಷ್ ಲೀಗ್ ಮೂಲಕ ಮ್ಯಾಕ್ಸ್ ವೆಲ್ ಕಮ್ ಬ್ಯಾಕ್ ಮಾಡಿರೋದು ಪಂಜಾಬ್ ಕಿಂಗ್ಸ್ ಫುಲ್ ಖುಷ್ ಆಗಿದೆ. ಯಾಕಂದ್ರೆ ಆರ್ ಸಿಬಿ ರಿಲೀಸ್ ಮಾಡಿದ್ದ ಮ್ಯಾಕ್ಸಿಯನ್ನ ಮೆಗಾ ಹರಾಜಿನಲ್ಲಿ ಪಂಜಾಬ್​ ಕಿಂಗ್ಸ್​ 4.20 ಕೋಟಿ ನೀಡಿ ಖರೀದಿಸಿದೆ. ಹೀಗಾಗಿ ಮ್ಯಾಕ್ಸಿ 18ನೇ ಸೀಸನ್​ಗೆ ಪಂಜಾಬ್ ಪರ ಅದ್ಭುತ ಪ್ರದರ್ಶನ ನೀಡೋ ನಿರೀಕ್ಷೆಯಲ್ಲಿದೆ. ಭಾನುವಾರವಷ್ಟೇ ಹಿಂದಿ ಬಿಗ್ ಬಾಸ್ ವೇದಿಕೆ ಮೇಲೆ ಪಂಜಾಬ್ ತಂಡದ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಘೋಷಣೆಯಾಗಿದ್ದಾರೆ.

Shantha Kumari

Leave a Reply

Your email address will not be published. Required fields are marked *