ದುಬಾರಿಯಾಯ್ತು ಆರ್‌ಸಿಬಿ ಮ್ಯಾಚ್ ಟಿಕೆಟ್ ದರ! – ಕನಿಷ್ಠ, ಗರಿಷ್ಠ ಬೆಲೆ ಎಷ್ಟು ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ – ಐಪಿಎಲ್ 2025 ಗಾಗಿ ಕೌಂಟ್‌ಡೌನ್ ಪ್ರಾರಂಭವಾಗಿದೆ. ಮಾರ್ಚ್ 22 ರಿಂದ ಖೇಲ್ ಧಮಾಕಾ ಆರಂಭವಾಗಲಿದ್ದು, ಈಗಾಗಲೇ ವೇಳಾಪಟ್ಟಿ ಹೊರಬಿದ್ದಿದೆ. ಪ್ರತಿವರ್ಷದಂತೆ ಬೆಂಗಳೂರಿನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕ್ರಿಕೆಟ್ ಪಂದ್ಯಗಳ ಟಿಕೆಟ್ ದರ ದುಬಾರಿಯಾಗಿದ್ದು ಇಳಿಕೆ ಮಾಡುವಂತೆ ಆಗ್ರಹ ಕೇಳಿ ಬಂದಿದೆ.
ಇದನ್ನೂ ಓದಿ: ಭಯೋತ್ಪಾದನಾ ಘಟನೆಗಳು ಶೇ. 71 ರಷ್ಟು ಕಡಿಮೆ – ಮೋದಿ ಸರ್ಕಾರದ ಸಾಧನೆ : ನಿತ್ಯಾನಂದ ರೈ
ಆರ್‌ಸಿಬಿ ಪಂದ್ಯಗಳ ಟಿಕೆಟ್‌ನ ಆರಂಭಿಕ ದರವೇ 2,300 ರೂ. ನಿಂದ ಆರಂಭವಾಗಿ 43,000 ರೂ. ವರೆಗೆ ಇದೆ. ಬುಧವಾರದಿಂದ ಟಿಕೆಟ್ ಮಾರಾಟ ಆರಂಭವಾಗಿದ್ದು ಮೊದಲ ಪಂದ್ಯದ ಟಿಕೆಟ್‌ಗಳು ಈಗಾಗಲೇ ಖಾಲಿಯಾಗಿದೆ. ಆರ್‌ಸಿಬಿ ಅಭಿಮಾನಿಗಳು ಆರ್‌ಸಿಬಿ ವೆಬ್‌ಸೈಟ್ ಅಥವಾ ಬುಕ್‌ಮೈ ಶೋ ವೆಬ್‌ಸೈಟಿನಿಂದ ಐಪಿಎಲ್ ಪಂದ್ಯಗಳ ಟಿಕೆಟ್ ಖರೀದಿಸಬಹುದು.
ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಲುಕದ ರೀತಿಯಲ್ಲಿ ಟಿಕೆಟ್ ದರ ಇರುವ ಹಿನ್ನೆಲೆಯಲ್ಲಿ ಟಿಕೆಟ್ ದರ ಕಡಿಮೆ ಮಾಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧ್ಯಕ್ಷ ಪ್ರಥಮೇಶ್ ಮಿಶ್ರಾಗೆ ಅವರಿಗೆ ಕನ್ನಡ ಚಳುವಳಿ ಕೇಂದ್ರ ಸಮಿತಿಯಿಂದ ಪತ್ರ ಬರೆಯಲಾಗಿದೆ.
- ಟಿಕೆಟ್ ಬೆಲೆ ಎಷ್ಟಿದೆ?
- ಕೆಐಎ ವೈರ್‌ಗಳು ಮತ್ತು ಕೇಬಲ್‌ಗಳು ಎ ಸ್ಟ್ಯಾಂಡ್: 2,300 ರೂ.
- ಬೋಟ್ ಸಿ ಸ್ಟ್ಯಾಂಡ್ – 3,300
- ಪೂಮಾ ಬಿ ಸ್ಟ್ಯಾಂಡ್ 3,300
- ಟಿಕೆಟಿ ಜಿಟಿ ಅನೆಕ್ಸ್ – 4,000 ರೂ.
- ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ – 10,000 ರೂ.
- ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ – 15,000 ರೂ.
ಬೆಂಗಳೂರಿನಲ್ಲಿ ಯಾವ ದಿನ ಪಂದ್ಯ?
- RCB vs GT: ಏಪ್ರಿಲ್ 2
- RCB vs DC: ಏಪ್ರಿಲ್ 10
- RCB vs PBKS: ಏಪ್ರಿಲ್ 18
- RCB vs RR: ಏಪ್ರಿಲ್ 24
- RCB vs CSK: ಮೇ 3
- RCB vs SRH: ಮೇ 13
- RCB vs KKR: ಮೇ 17