ಕೊಹ್ಲಿಗೆ ಮಾತ್ರನಾ ಮ್ಯಾಚ್? – ಉದ್ಧಟ ಗಂಭೀರ್ ಗೆ ಉತ್ತರವಿಲ್ವಾ?

ಕೊಹ್ಲಿಗೆ ಮಾತ್ರನಾ ಮ್ಯಾಚ್? – ಉದ್ಧಟ ಗಂಭೀರ್ ಗೆ ಉತ್ತರವಿಲ್ವಾ?

ಗೌತಮ್‌ ಗಂಭೀರ್‌ ಉದ್ಧಟತನದ ಮಾತಿಗೂ ಆರ್‌ಸಿಬಿ ಹುಡುಗರ ಉತ್ತರವೇ ಇಲ್ಲದಾಗಿ ಹೋಗಿರೋದು ನಮ್ ಬೆಂಗಳೂರು ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಬೇಸರ ತಂದಿದೆ.. ಕೆಕೆಆರ್‌ ವಿರುದ್ಧದ ಮ್ಯಾಚ್‌ಗೂ ಮೊದ್ಲು ಗೌತಮ್ ಗಂಭೀರ್‌ ಹಿಂದೆ ನೀಡಿದ್ದ ಸ್ಟೇಟ್‌ಮೆಂಟ್‌ ವೈರಲ್‌ ಆಗಿತ್ತು. ಐಪಿಎಲ್‌ನ ಅಫೀಶಿಯಲ್‌ ಬ್ರಾಡ್‌ಕಾಸ್ಟರ್‌ ಸ್ಟಾರ್‌ ಸ್ಪೋರ್ಟ್ಸ್‌ ಗಂಭೀರ್‌ ಹೇಳಿಕೆಯೊಂದನ್ನು ಪೋಸ್ಟ್‌ ಮಾಡಿತ್ತು.. ಈ ಮೂಲಕ ಆರ್‌ಸಿಬಿಯನ್ನು ಕೆಣಕಿತ್ತು.. ಆದ್ರೆ ಬೆಂಗಳೂರು ಟೀಂನಲ್ಲಿ ಕಿಂಗ್‌ ಕೊಹ್ಲಿ ಬಿಟ್ರೆ ಉಳಿದವರೆಲ್ಲಾ ಲೆಕ್ಕಕ್ಕೇ ಇಲ್ಲದವರಂತೆ ಮ್ಯಾಚ್‌ ಮುಗಿಸಿ, ಕೆಕೆಆರ್‌ವಿರುದ್ಧ ಕಳಪೆ ಆಟ ಪ್ರದರ್ಶಿಸಿದ್ದಾರೆ.. ಆರ್‌ಸಿಬಿ ಬೌಲಿಂಗ್‌ ಯುನಿಟ್‌ ಅಂತೂ ನಾವು ನೆಟ್‌ ಪ್ರ್ಯಾಕ್ಟೀಸ್‌ ಮಾಡ್ತಿದ್ದೀವೋ.. ರಿಯಲ್‌ ಮ್ಯಾಚ್‌ ಆಡ್ತಿದ್ದೀವೋ ಎಂಬುದನ್ನೇ ಮರೆತವರಂತೆ ಆಟವಾಡಿ ಆರ್‌ಸಿಬಿ ಅಭಿಮಾನಿಗಳ ತಾಳ್ಮೆ ಪರೀಕ್ಷಿಸಿದ್ದಾರೆ.

ಇದನ್ನೂ ಓದಿ: ಶಿವಂ ದುಬೆ, ರಚಿನ್ ರವೀಂದ್ರ ಬೊಂಬಾಟ್ ಬ್ಯಾಟಿಂಗ್ – ಧೋನಿ ತಂತ್ರಗಾರಿಕೆ ವರ್ಕೌಟ್ ಆಗಿದ್ದು ಹೇಗೆ?

ನಿಜ ಹೇಳ್ಬೇಕು ಅಂದ್ರೆ ಆರ್‌ಸಿಬಿ ಮತ್ತು ಕೆಕೆಆರ್‌ ನಡುವೆ ಪಂದ್ಯ ನೋಡಿದ್ಮೇಲೆ ನಮ್‌ ಟೀಂ ಇಷ್ಟು ಕೆಟ್ಟದಾಗಿ ಬೌಲಿಂಗ್‌ ಮಾಡಲು ಸಾಧ್ಯವೆ ಎನ್ನುವುದನ್ನು ಅರಗಿಸಿಕೊಳ್ಳೋದಿಕ್ಕೂ ಸಾಧ್ಯವಾಗ್ತಿಲ್ಲ.. ಯಾಕಂದ್ರೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಬೈಬೇಕೋ.. ಬೌಲರ್‌ಗಳಿಗೆ ಬೈಬೇಕೋ.. ಅಥವಾ ಕ್ಯಾಪ್ಟನ್‌ಗೆ ಬೈಬೇಕೋ ಎಂದು ಗೊತ್ತಾಗದೆ ಫ್ಯಾನ್ಸ್‌ ಪರದಾಡುವಂತಾಗಿದೆ.. ಒಂದು ಕಡೆ ಟೋಟಲ್‌ ಸ್ಕೋರ್‌ ನೋಡಿದ್ರೆ 183 ರನ್‌ಗಳು ಬೋರ್ಡ್‌ನಲ್ಲಿದ್ವು.. ಆದ್ರೆ ಅಷ್ಟು ದೊಡ್ಡ ಟೋಟಲ್‌ ಅನ್ನು ಕೂಡ ನೀರು ಕುಡಿಯುವುದಕ್ಕಿಂತಲೂ ಸಲೀಸಾಗಿ ಕೆಕೆಆರ್‌ನವರು ರೀಚ್‌ ಆದ್ರು.. ಗಾಯದ ಮೇಲೆ ಬರೆ ಎಳೆಯುವಂತೆ ಬ್ಯಾಟ್ಸ್‌ಮನ್‌ಗಳ ಬದಲು ಒಬ್ಬ ಬೌಲರ್‌ ಬಂದು ಎರ್ರಾಬಿರ್ರಿ ಚಚ್ಚಿದ್ದನ್ನು ನೋಡಿದ್ರೆ ಆರ್‌ಸಿಬಿ ಬೌಲಿಂಗ್‌ ಎಷ್ಟು ವೀಕ್‌ ಆಗಿದೆ ಎನ್ನುವುದು ಗೊತ್ತಾಗಿದೆ.. ಒಂದು ಕಡೆಯಿಂದ ಸ್ಟ್ರಾಂಗ್‌ ಬೌಲರ್ ಇದ್ರೆ ನಮ್‌ ಸಿರಾಜ್‌ ಬಾಯ್‌ ಕೂಡ ಹಾರುತ್ತಾ, ನೆಗೆಯುತ್ತಾ ಬೌಲಿಂಗ್‌ ಮಾಡಿ, ಒಂದಿಷ್ಟು ವಿಕೆಟ್‌ ಕಬಳಿಸಿ ಜೋಷ್‌ ತೋರಿಸ್ತಿದ್ರು.. ಆದ್ರೆ ಈಗ ಸಿರಾಜ್‌ ಬಿಟ್ರೆ ಗತಿಯಿಲ್ಲ.. ಸಿರಾಜ್‌ಗೆ ಹೊಡೆಸಿಕೊಳ್ಳೋದು ಬಿಟ್ರೆ ಬೇರೇನೂ ಗೊತ್ತಿಲ್ಲ ಎಂಬ ಸ್ಥಿತಿಗೆ ಆರ್‌ಸಿಬಿಯ ಬೌಲಿಂಗ್‌ ಬಂದು ನಿಂತಿದೆ.. ಸ್ಪಿನ್‌ ಬೌಲಿಂಗ್‌ ಅಂತೂ ದೇವರಿಗೇ ಪ್ರೀತಿ ಎಂಬಂತಾಗಿದ್ದು, ಈ ಟೀಂ ಕಪ್‌ ಗೆಲ್ಲೋದಿರಲಿ.. ಬೆಂಗಳೂರಿನ ಮಾನ ಉಳಿಸ್ಕೊಳ್ಳೋ ರೀತಿಲಾದ್ರೂ ಆಟ ಆಡ್ರಪ್ಪಾ ಅಂತ ಅಭಿಮಾನಿಗಳು ಕೇಳಿಕೊಳ್ಳುವಂತಾಗಿದೆ..

ಕೆಕೆಆರ್‌ ವಿರುದ್ಧದ ಪಂದ್ಯವನ್ನೇ ನೋಡಿ.. ನಾಯಕ ಫಾಫ್‌ ಡುಪ್ಲೆಸಿಸ್‌ ಪ್ಲಾಪ್‌ ಶೋ ಮುಂದುವರಿದಿದೆ.. ಕೊಹ್ಲಿ ಒಂದು ಎಂಡ್‌ನಲ್ಲಿ ಎಲ್ಲಾ ಜವಾಬ್ದಾರಿ ಮೈಮೇಲೆ ಎಳ್ಕೊಂಡು ಆಟ ಆಡಿದ್ದಾರೆ.. ಕ್ಯಾಮರೊನ್‌ ಗ್ರೀನ್‌ಗೆ ಒನ್‌ಡೌನ್‌ಗೆ ಭಡ್ತಿ ಸಿಕ್ಕಿದ್ದು ಸರಿಯಾಗಿಯೇ ಇತ್ತು.. ಮ್ಯಾಕ್ಸಿ ದೊಡ್ಡ ಆಟ ಆಡದಿದ್ದರೂ ಬ್ಯಾಟಿಂಗ್‌ಗೊಂದು ವೇಗ ಕೊಟ್ಟಿದ್ದರು. ರಜತ್‌ ಪಟಿದಾರ್‌ಗಂತೂ ಆಟವೇ ಮರೆತು ಹೋದಂಗಿದೆ.. ಇರೋದ್ರಲ್ಲಿ ದಿನೇಶ್‌ ಕಾರ್ತಿಕ್‌ ಮಾತ್ರ ತನ್ನ ಆಟವನ್ನು ನಿಯತ್ತಾಗಿ ಆಡ್ತಿದ್ದಾರೆ.. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬ್ಯಾಟಿಂಗ್‌ಗೆ ವೇಗ ಕೊಡ್ತಿದ್ದಾರೆ.. 8 ಎಸೆತಗಳಲ್ಲಿ ಕಾರ್ತಿಕ್‌ 20 ರನ್‌ ಬಾರಿಸದೇ ಇರುತ್ತಿದ್ದರೆ, ಇನ್ನೂ ಎರಡು ಓವರ್‌ ಮೊದಲೇ ಕೆಕೆಆರ್‌ ತಂಡ ಗುರಿ ತಲುಪಿ ಆಗಿರುತ್ತಿತ್ತು.. ಈ ದಿನೇಶ್‌ ಕಾರ್ತಿಕ್‌ ಅವರನ್ನು ಬ್ಯಾಟಿಂಗ್‌ನಲ್ಲಿ ಮೇಲಿನ ಆರ್ಡರ್‌ನಲ್ಲಿ ಕಳಿಸುವಂತಹ ಪ್ರಯೋಗಕ್ಕೆ ಕೈಹಾಕಿದ್ರೆ ಮಾತ್ರ ಆರ್‌ಸಿಬಿಯಿಂದ 200 ಪ್ಲಸ್‌ ರನ್‌ ನಿರೀಕ್ಷೆ ಮಾಡಬಹುದು.. ಇಲ್ದೇ ಹೋದ್ರೆ ಇವರು ಹೊಡೆಯೋ 170-180 ರನ್‌ಗಳನ್ನು ಡಿಫೆಂಡ್‌ ಮಾಡ್ಕೊಳ್ಳೋದಿಕ್ಕೆ ಬೌಲರ್‌ಗಳಿಂದಂತೂ ಸಾಧ್ಯವೇ ಇಲ್ಲ.. ಯಾಕಂದ್ರೆ ಕೆಕೆಆರ್‌ನ ಬ್ಯಾಟ್ಸ್‌ಮನ್‌ಗಳು ಮಾಡಬೇಕಿದ್ದ ಕೆಲಸವನ್ನು ಬೌಲರ್‌ ಸುನಿಲ್‌ ನರೈನ್‌ ಆರ್‌ಸಿಬಿ ವಿರುದ್ಧ ಮಾಡಿದ್ದಾರೆ.. ಸುನಿಲ್‌ ನರೈನ್‌ ಅವರನ್ನು ಓಪನಿಂಗ್‌ ಕಳಿಸುವ ಪ್ರಯೋಗವನ್ನು ಕೆಕೆಆರ್‌ ಅನೇಕ ಬಾರಿ ಮಾಡಿದೆ.. ಆದ್ರೆ ನರೈನ್‌ ಸಕ್ಸಸ್‌ ಆಗುವುದು ಆರ್‌ಸಿಬಿಯಂತಹ ದುರ್ಬಲ ಬೌಲಿಂಗ್‌ ಯುನಿಟ್‌ ಎದುರು ಮಾತ್ರ.. ಸುನಿಲ್‌ ನರೈನ್‌ ಶಾರ್ಟ್‌ ಪಿಚ್‌ ಎಸೆತಗಳಿಗೆ ಬ್ಯಾಟಿಂಗ್‌ ಮಾಡಲು ಒದ್ದಾಡ್ತಾರೆ.. ಗುಡ್‌ ಲೆಂಗ್ತ್‌ ಬಾಲ್‌ ಮೂಲಕ ಅವರನ್ನು ಕಟ್ಟಿಹಾಕೋದಿಕ್ಕೂ ಅವಕಾಶವಿದೆ.. ಆದ್ರೆ ಅದ್ಯಾವ ವೇರಿಯೇಷನ್‌ ಇಲ್ಲದೆ, ನೀನು ಹೊಡೆಯಪ್ಪ.. ನಾವು ಹೊಡೆಸ್ಕೋತೀವಿ ಅನ್ನೋ ತರ ಆರ್‌ಸಿಬಿ ಬೌಲರ್‌ಗಳು ಆಟ ಆಡ್ತಿದ್ದಾರೆ.. ಅದ್ರಲ್ಲೂ ಆರ್‌ಸಿಬಿಯವರು 11.5 ಕೋಟಿ ಕೊಟ್ಟಿದ್ದೀವಿ ಅನ್ನೋ ಏಕೈಕ ಕಾರಣಕ್ಕೋ ಏನೋ ಅಲ್ಝಾರಿ ಜೋಸೆಫ್‌ ಅವರನ್ನು ಪ್ಲೇಯಿಂಗ್‌ 11ನಲ್ಲಿ ಇಟ್ಕೊಂಡಿದ್ದಾರೆ.. ಅದ್ಯಾವ ಆ್ಯಂಗಲ್‌ನಲ್ಲಿ ಆರ್‌ಸಿಬಿ  ಅಲ್ಝಾರಿ ಜೋಸೆಫ್‌ಗೆ 11.5 ಕೋಟಿ ರುಪಾಯಿ ಕೊಟ್ಟಿದ್ಯೋ ಗೊತ್ತಿಲ್ಲ.. ಆದ್ರೆ ಅಲ್ಝಾರಿ ಜೋಸೆಫ್‌ ಮಾತ್ರ, ಎದುರಾಳಿಗಳಿಂದ ಹೊಡೆಸಿಕೊಳ್ಳೋದು ನಿಲ್ತಿಲ್ಲ.. ಪರಿಸ್ಥಿತಿಗೆ ಕೆಕೆಆರ್‌ ಮುಂದೆ ಹೇಗಾಗಿತ್ತು ಅಂದ್ರೆ ಕೇವಲ ಎರಡೇ ಓವರ್‌ ಬೌಲಿಂಗ್‌ ಮಾಡಿ 34 ರನ್‌ ಹೊಡೆಸ್ಕೊಂಡ ಅಲ್ಝಾರಿ ಜೋಸೆಫ್‌ನಿಂದಾಗಿ ವೈಶಾಕ್‌ ವಿಜಯ್‌ ಕುಮಾರ್‌ ನಾಲ್ಕು ಓವರ್‌ ಬೌಲಿಂಗ್‌ ಮಾಡುವಂತಾಯಿತು.. ಹೀಗೆ ಆರ್‌ಸಿಬಿಯ ಬೌಲಿಂಗ್‌ ಯುನಿಟ್‌ ಕಂಪ್ಲೀಟ್‌ ಎಕ್ಸ್‌ಪೋಸ್‌ ಆಗಿದೆ.. ಆದ್ರೆ ನಿಜಕ್ಕೂ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಇನ್ನೊಂದು ಕಾರಣಕ್ಕೆ.. ಗೌತಮ್‌ ಗಂಭೀರ್‌ ಉದ್ಧಟತನದ ಹೇಳಿಕೆಗಳು ಬಂದಿರೋದು ಒಂದೆರಡು ಸಲವೇನಲ್ಲ.. ಆದ್ರೆ ಆರ್‌ಸಿಬಿ ಎದುರಿನ ಪಂದ್ಯಕ್ಕೂ ಮೊದಲು ಗಂಭೀರ್‌ ಹಿಂದೆ ಹೇಳಿದ್ದ ಮಾತನ್ನು ಸ್ಟಾರ್‌ ಸ್ಪೋರ್ಟ್ಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿತ್ತು.. ನಾನು ಕನಸಿನಲ್ಲೂ ಸೋಲಿಸೋದಿಕ್ಕೆ ಬಯಸೋದು ಆರ್‌ಸಿಬಿಯನ್ನು.. ಆರ್‌ಸಿಬಿಯವರು ಒಂದೇ ಒಂದು ಬಾರಿ ಕಪ್‌ ಗೆಲ್ಲದಿದ್ದರೂ ಆಟಗಾರರ ಆ್ಯಟಿಟ್ಯೂಡ್‌ಗೇನೂ ಕಮ್ಮಿಯಿಲ್ಲ.. ಪ್ರತಿಬಾರಿಯೂ ಮೈದಾನಕ್ಕೆ ಇಳಿದು ಆರ್‌ಸಿಬಿಯನ್ನು ಸೋಲಿಸಬೇಕು ಅಂತ ನಂಗೆ ಆಸೆ ಆಗ್ತಾನೆ ಇರುತ್ತೆ ಅಂತೆಲ್ಲಾ ಈ ಕೆಕೆಆರ್‌ನ ಮೆಂಟರ್‌ ವೀಡಿಯೋದಲ್ಲಿ ಹೇಳಿದ್ದರು.. ಆರ್‌ಸಿಬಿ ಫ್ಯಾನ್ಸ್‌ಗೆ ಉರಿಸ್ಬೇಕು ಅಂತಲೇ ಆ ಪೋಸ್ಟ್‌ ಹಾಕಿದಂತಿತ್ತು.. ಆದ್ರೆ ಅಂತ ಗಂಬೀರ್‌ ಮೆಂಟರ್‌ ಆಗಿರುವ ತಂಡವನ್ನು ಸೋಲಿಸಬೇಕಿದ್ದು ಆರ್‌ಸಿಬಿ ಹೀನಾಯವಾಗಿ ಸೋತಿದೆ.. ಕಿಂಗ್‌ ಕೊಹ್ಲಿ ಒಬ್ರ ಮೇಲೆ ಮಾತ್ರ ಮತ್ತೆ ಆರ್‌ಸಿಬಿ ಡಿಪೆಂಡ್‌ ಆದಂತೆ ಕಾಣ್ತಿದೆ.. ಹೆಣ್ಮಕ್ಕಳೇನೋ ಈ ಬಾರಿ ಐಪಿಎಲ್‌ ಟೈಟಲ್‌ ಗೆದ್ದಿದ್ದರು.. ಆದ್ರೆ ಗಂಡ್ಮಕ್ಕಳ ಟೀಂ ಹಿಂಗಾದ್ರೆ ಬೇಗನೆ ಮನೆ ಸೇರಿಕೊಳ್ಳುತ್ತಾ ಎಂಬ ಅನುಮಾನ ಶುರುವಾಗಿದೆ.. ಇನ್ನಾದ್ರೂ ಟೀಂ ಮ್ಯಾನೇಜ್‌ಮೆಂಟ್‌ ಬೌಲಿಂಗ್‌ ಯುನಿಟ್‌ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳದೇ ಹೋದ್ರೆ ಫ್ಯಾನ್ಸ್‌ಗೆ ಮತ್ತಷ್ಟು ನಿರಾಶೆಗಳು ಎದುರಾಗುವ ಸಾಧ್ಯತೆ ದಟ್ಟವಾಗಿ ಗೋಚರಿಸುತ್ತಿದೆ..

Sulekha