CSKಗೆ ನೀರು ಕುಡಿಸಿದ ಡೇವಿಡ್ – 3ನೇ ಮ್ಯಾಚಲ್ಲೂ ಕೊಚ್ಚಿ ಹೋದ ಚೆನ್ನೈ
RCB ಈಗ ನಡೆದಿದ್ದೇ ದಾರಿ!

ಎಂಥಾ ಪಂದ್ಯ. ಎಂಥಾ ಆಟ. ಆರ್ಸಿಬಿಯ ಬಲಿಷ್ಠ ಬ್ಯಾಟಿಂಗ್ ಲೈನಪ್ ಮುಂದೆ ಚೆನ್ನೈ ಬೌಲರ್ಸ್ ಅಕ್ಷರಶಃ ಥಂಡಾ ಹೊಡೆದಿದ್ರು. ಚಿನ್ನಸ್ವಾಮಿಯಲ್ಲಿ ಚೆನ್ನೈ ವಿರುದ್ಧವೂ ಆರ್ಸಿಬಿ ವಿನ್ನಿಂಗ್ ಟ್ರ್ಯಾಕ್ ಕಂಟಿನ್ಯೂ ಆಗಿದೆ. ಆದ್ರೆ ಚೆನ್ನೈ ಮಾತ್ರ ಹ್ಯಾಟ್ರಿಕ್ ಸೋಲಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಲಾಸ್ಟ್ ಪ್ಲೇಸ್ನಲ್ಲೇ ಇದೆ. ಟಿಮ್ ಡೇವಿಡ್ ಅಬ್ಬರ, ಪಾಟಿದಾರ್, ಪಡಿಕ್ಕಲ್ ಪವರ್ ಶೋ, ಸಾಲ್ಟ್ ರೆಸ್ಪಾನ್ಸಿಬಲ್ ಪರ್ಫಾಮೆನ್ಸ್, ಕೊಹ್ಲಿ ಓಪನಿಂಗ್ ಇನ್ನಿಂಗ್ಸ್ ಹಾಗೇ ಧೋನಿ ಇಲ್ಲದ ಚೆನ್ನೈ ಸ್ಥಿತಿ ಬಗ್ಗೆ ಚರ್ಚೆಯಾಗ್ತಿದೆ.
ಇದನ್ನೂ ಓದಿ : 24 ಗಂಟೆಗಳಲ್ಲಿ RR ರಾಜಯೋಗ ಕಸಿದುಕೊಂಡ RCB- ಅಗ್ರ ಸ್ಥಾನದಲ್ಲಿ ಅಲಂಕರಿಸಿದ ಬೆಂಗಳೂರು ಟೀಮ್
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಬೆಂಗಳೂರು ಪರ ಬ್ಯಾಟರ್ಗಳೆಲ್ಲಾ ಅಬ್ಬರಿಸಿದ್ರು. ಹೈವೋಲ್ಟೇಜ್ ಮ್ಯಾಚಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡಕ್ಕೆ ಹಾಲಿ ಚಾಂಪಿಯನ್ ಬೆಂಗಳೂರು ನೀರು ಕುಡಿಸಿತು. ಅದೂ ಅಲ್ದೇ 43 ರನ್ಗಳ ಭಾರಿ ಅಂತರದ ಗೆಲುವು ದಾಖಲಿಸಿತು. ಕಂಪ್ಲೀಟ್ ಡಾಮಿನೇಷನ್ ಮಾಡಿದ ರೆಡ್ ಆರ್ಮಿ ಈ ಬಾರಿಯ ಐಪಿಎಲ್ನಲ್ಲೂ ಹೊಸ ಮೆಸೇಜ್ ಪಾಸ್ ಮಾಡಿದ್ದಾರೆ. ಸಿಎಸ್ಕೆ ತಂಡಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ ನೀಡಿ ಪಾಯಿಂಟ್ಸ್ ಪಟ್ಟಿಯಲ್ಲಿ ಫಸ್ಟ್ ಪ್ಲೇಸ್ಗೇರಿದೆ.
ಬೆಂಗಳೂರು ಪರ ಟಿಮ್ ಡೇವಿಡ್ ಸುನಾಮಿ ಬ್ಯಾಟಿಂಗ್!
ಮೊದಲು ಬ್ಯಾಟಿಂಗ್ಗೆ ಬಂದ ಬೆಂಗಳೂರಿಗೆ ಆರಂಭದಲ್ಲಿ ಬ್ಯಾಟಿಂಗ್ ಸ್ಟ್ರಗಲ್ ಕಾಣ್ತಿತ್ತು. ಬೌಂಡರಿಗಳೇ ಬರ್ತಾ ಇರ್ಲಿಲ್ಲ. ಆದ್ರೆ 4ನೇ ಓವರ್ ಬಳಿಕ ಮ್ಯಾಜಿಕ್ ಸ್ಟಾರ್ಟ್ ಆಯ್ತು. ಕೊಹ್ಲಿ 28 ರನ್ ಗಳಿಸಿ ಔಟಾದ್ರೆ ಸಾಲ್ಟ್ 46 ರನ್ಸ್ ಸಿಡಿಸಿದ್ರು. ದೇವದತ್ ಪಡಿಕ್ಕಲ್ ಅರ್ಧಶತಕ ಬಂದ್ರೆ ಪಾಟಿದಾರ್ 48 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಌಂಡ್ ಸಿಎಸ್ಕೆ ಬೌಲರ್ಗಳನ್ನ ಅಕ್ಷರಶಃ ಬೆಂಡೆತ್ತಿದ್ದು ಟಿಮ್ ಡೇವಿಡ್. 5ನೇ ಕ್ರಮಾಂಕದಲ್ಲಿ ಬಂದ ಟಿಮ್ ಡೇವಿಡ್ ಬ್ಯಾಟ್ ಬಿಚ್ಚೋಕೆ ಸ್ಟಾರ್ಟ್ ಮಾಡಿದ್ರು. ಆದ್ರೆ 28 ರನ್ ಗಳಿಸಿದ್ದಾಗ್ಲೇ ಔಟ್ ಆಗ್ತಾರೆ. ಅದೃಷ್ಟ ಅಂದ್ರೆ ಅದು ನೋ ಬಾಲ್ ಆಗಿತ್ತು. ಅಲ್ಲಿಂದ ಡೇವಿಡ್ ಹಿಂತಿರುಗಿ ನೋಡ್ಲೇಇಲ್ಲ. 19ನೇ ಓವರ್ನಲ್ಲಿ 30 ರನ್ಸ್ ಬಂತು. ಕೊನೆಗೆ 25 ಎಸೆತಗಳಲ್ಲಿ 8 ಸಿಕ್ಸ್, 3 ಬೌಂಡರಿಗಳೊಂದಿಗೆ 70 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಅಲ್ಲಿಗೆ 250 ರನ್ಗಳನ್ನ ಕಲೆ ಹಾಕಿದ್ರು. ಟಾರ್ಗೆಟ್ ಬೆನ್ನತ್ತಿದ ಸಿಎಸ್ಕೆ ಪರ ಸರ್ಫರಾಜ್ 50 ರನ್, ಪ್ರಶಾಂತ್ ವೀರ್ 48, ಜೇಮಿ ಓವರ್ಟನ್ 37 ರನ್ ಗಳಿಸಿದ್ದು ಬಿಟ್ರೆ ಉಳಿದವರ್ಯಾರು ಸದ್ದು ಮಾಡ್ತಿಲ್ಲ. ಅಂತಿಮವಾಗಿ 207 ರನ್ಗಳಿಗೆ ಆಲೌಟ್ ಆದ್ರು. ಅಲ್ಲಿಗೆ 43 ರನ್ಗಳ ಅಂತರದಲ್ಲಿ ಸೋಲಬೇಕಾಯ್ತು. ಮ್ಯಾಚ್ ಟರ್ನಿಂಗ್ ಮೂಮೆಂಟ್ಸ್ ನೋಡೋಣ.
ಮ್ಯಾಚ್ ಟರ್ನಿಂಗ್ ಮೂಮೆಂಟ್ಸ್!
ಕೊಹ್ಲಿ 28 ಬಿಟ್ರೆ ಉಳಿದವ್ರೆಲ್ಲಾ 45 ಪ್ಲಸ್ ರನ್ಸ್ ಕಲೆ ಹಾಕಿದ್ದು
ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ಸ್ ಹೆಚ್ಚು
ಟಾರ್ಗೆಟ್ ಬೆನ್ನತ್ತಿದ ಸಿಎಸ್ ಕೆ ಮೊದಲ 3 ಓವರ್ 3 ವಿಕೆಟ್
ಬಿಗ್ ಪಾರ್ಟ್ನರ್ ಶಿಪ್ ಬರೋಕೆ ಬಿಡದೆ ಬೇಗ ಬೇಗ ವಿಕೆಟ್
4 ಓವರ್ ಬೌಲ್ ಮಾಡಿ 21 ರನ್ಸ್ ಮಾತ್ರ ಕೊಟ್ಟ ಸುಯಾಶ್

ನೋಡಿರಿ

