RCB ಕಿಂಗ್ ವಿಶ್ವಕಪ್ ನಲ್ಲಿ ಸೈಲೆಂಟ್ – ವಿರಾಟ್ ವೈಫಲ್ಯಕ್ಕೆ 5 ಕಾರಣಗಳು!
3ಕ್ಕೆ ಮುಕ್ತಾಯ.. ಇನ್ಮುಂದೆ ಅಸಲಿ ಅಧ್ಯಾಯ
ಕ್ರಿಕೆಟ್ ಲೋಕದ ಅನಭಿಷಕ್ತ ದೊರೆ ಕಿಂಗ್ ವಿರಾಟ್ ಕೊಹ್ಲಿ ಟಿ-20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೇಲ್ಯೂರ್ ಅನುಭವಿಸಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ರನ್ ಮಿಷನ್ನಂತೆ ಅಬ್ಬರಿಸಿ ಗೇಮ್ ಚೇಂಜರ್ ಆಗ್ತಿದ್ದ ವಿರಾಟ್ ಈಗ ಶಸ್ತ್ರತ್ಯಾಗ ಮಾಡಿದಂತೆ ಸೈಲೆಂಟಾಗಿದ್ದಾರೆ. ಕ್ರೀಸ್ ಕಚ್ಚಿ ನಿಲ್ಲೋಕೂ ಆಗದೆ ಪರದಾಡ್ತಿದ್ದಾರೆ. ವಿಶ್ವಕಪ್ನಂಥ ಟೂರ್ನಿಯಲ್ಲಿ ವಿರಾಟ್ ಹೀಗೆ ಪೆವಿಲಿಯನ್ ಪರೇಡ್ ನಡೆಸ್ತಿರೋದು ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೇ ಬಿಸಿಸಿಐ ಟೆನ್ಷನ್ ಹೆಚ್ಚಿಸಿದೆ. ಬಟ್ ಇಲ್ಲಿ ವಿರಾಟ್ ಫೇಲ್ಯೂರ್ಗೆ ಹಲವು ಕಾರಣಗಳಿವೆ.
ಇದನ್ನೂ ಓದಿ: ಪುಟ್ಟಕ್ಕನ ಕರುಳಿನ ಕೂಗು ನಿಜವಾಯ್ತು! – ತಿಥಿ ದಿನವೇ ಸಹನಾ ಪ್ರತ್ಯಕ್ಷ
ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಿರುವ ಮೂರೂ ಪಂದ್ಯಗಳನ್ನ ಗೆದ್ದಿದೆ. ಸೂಪರ್ 8 ಹಂತಕ್ಕೂ ಸೆಲೆಕ್ಟ್ ಆಗಿದೆ. ಬಟ್ ಇಲ್ಲಿ ಭಾರತ ತಂಡದ ಚಿಂತೆ ಹೆಚ್ಚಿಸಿರೋದು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಲಯ ಕಂಡುಕೊಳ್ಳೋಕೂ ಆಗ್ದೇ ಒದ್ದಾಡ್ತಿರೋ ವಿರಾಟ್ ಆಡಿದ ಮೂರೂ ಪಂದ್ಯಗಳಲ್ಲಿ ಸಿಂಗಲ್ ಡಿಜಿಟ್ ದಾಟೋಕೂ ಆಗಿಲ್ಲ. ಅಮೆರಿಕದ ನ್ಯೂಯಾರ್ಕ್ನ ಡೆಡ್ ಪಿಚ್ನಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೂರ್ನಿ ಆರಂಭಿಸಿದ್ದ ಭಾರತ ತಂಡ ಮೊದಲನೇ ಮ್ಯಾಚ್ನಲ್ಲೇ ಗೆದ್ದು ಶುಭಾರಂಭ ಮಾಡಿತ್ತು. ಬಟ್ ಈ ಮ್ಯಾಚ್ನಲ್ಲಿ ವಿರಾಟ್ 5 ಬಾಲ್ ಎದುರಿಸಿ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಬಳಿಕ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲೂ ಬರೀ ನಾಲ್ಕು ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ನಂತ್ರ ಅಮೆರಿಕ ವಿರುದ್ಧ ನಡೆದ ಪಂದ್ಯದಲ್ಲಿ ಖಾತೆಯನ್ನೇ ತೆರೆಯದೇ ಡಕೌಟ್ ಆದ್ರು. ಐಪಿಎಲ್ನಲ್ಲಿ ಆರಂಭಿಕನಾಗಿ ಮಿಂಚಿದ್ದ ವಿರಾಟ್, ಟಿ20 ವಿಶ್ವಕಪ್ನಲ್ಲೂ ಓಪನರ್ ಆಗಿಯೇ ಕಣಕ್ಕಿಳಿದು ವೈಫಲ್ಯ ಅನುಭವಿಸಿದ್ದಾರೆ. ಅಸಲಿಗೆ 2021ರ ಟಿ20 ವಿಶ್ವಕಪ್ಗೂ ಮುನ್ನ ಕೊಹ್ಲಿ ಕೊನೆಯ ಬಾರಿಗೆ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದ್ರೀಗ ವಿಶ್ವಕಪ್ನಲ್ಲಿ ವೈಫಲ್ಯ ಅನುಭವಿಸ್ತಿದ್ದು, ಐಪಿಎಲ್ ಟೈಮಲ್ಲಿ ಕೊಹ್ಲಿ ಅವ್ರ ಸ್ಟ್ರೈಕ್ರೇಟ್ ಟೀಕಿಸಿದ್ದ ಸುನಿಲ್ ಗವಾಸ್ಕರ್ ಅವ್ರೇ ಶೀಘ್ರವೇ ವಿರಾಟ್ ಫಾರ್ಮ್ಗೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿ ಬೆಂಬಲಕ್ಕೆ ನಿಂತಿದ್ದಾರೆ. ಹಾಗೇ ಆಡಿದ ಮೂರೂ ಪಂದ್ಯಗಳಲ್ಲಿ ಕೊಹ್ಲಿ ಮಾಡಿದ ತಪ್ಪೇನು ಎಂಬುದನ್ನು ವಿವರಿಸಿದ್ದಾರೆ. ಕೊಹ್ಲಿ ಔಟಾದ ಎಸೆತಗಳು ಯಾವುವು ಸಹ ಯಾವುದು ವಿಕೆಟ್ ಪಡೆಯುವ ಉತ್ತಮ ಎಸೆತಗಳಾಗಿರಲಿಲ್ಲ. ಆದರೂ ಕೊಹ್ಲಿ ಇವುಗಳಿಗೆ ಬಲಿಯಾದರು. ಇದು ಕೆಟ್ಟ ಸಮಯ ಅಷ್ಟೆ. ಕೊಹ್ಲಿ ಬ್ಯಾಟ್ನಿಂದ ಶೀಘ್ರದಲ್ಲೇ ರನ್ ಹರಿಯಲಿವೆ. ಅವರು ಮೂರು ಕಡಿಮೆ ಸ್ಕೋರ್ ಗಳಿಸಿದ್ದಾರೆ ಎಂದರೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ ಎಂದರ್ಥವಲ್ಲ. ಸದ್ಯಕ್ಕೆ ಚಿಂತಿಸುವುದಂತದ್ದೇನು ಆಗಿಲ್ಲ. ನಾವು ಆತನ ನಂಬಿಕೆಯನ್ನು ಮನವರಿಕೆ ಮಾಡಬೇಕು. ಶೀಘ್ರದಲ್ಲೇ ಕಂಬ್ಯಾಕ್ ಮಾಡಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ ಎಂದು ಭಾರತದ ದಿಗ್ಗಜ ಆಟಗಾರ ಗವಾಸ್ಕರ್ ಹೇಳಿದ್ದಾರೆ.
ಅಷ್ಟಕ್ಕೂ ಐಪಿಎಲ್ನಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದ ವಿರಾಟ್ 15 ಇನ್ನಿಂಗ್ಸ್ಗಳಿಂದ ಭರ್ಜರಿ 741 ರನ್ ಬಾರಿಸಿದ್ದರು. ಬಟ್ ಈಗ ಟಿ20 ವಿಶ್ವಕಪ್ ಯುದ್ಧಭೂಮಿಯಲ್ಲಿ ರನ್ ಗಳಿಸಲು ಹೆಣಗಾಡ್ತಿದ್ದಾರೆ. 1, 4, ಸೊನ್ನೆ ಅಂತಾ ಮೂರು ಪಂದ್ಯಗಳಿಂದ ಜಸ್ಟ್ 5 ರನ್ ಕಲೆ ಹಾಕಿದ್ದಾರೆ. ಕ್ರಿಕೆಟ್ ಲೋಕದ ದೊರೆ, ಮಾಡ್ರನ್ ಕ್ರಿಕೆಟ್ನ ಲೆಜೆಂಡ್ ಅಂತೆಲ್ಲಾ ಕರೆಸಿಕೊಳ್ಳುವ ಕಿಂಗ್ ಕೊಹ್ಲಿ ಒಂದಂಕಿ ಗಡಿ ದಾಟಲು ಪರದಾಡ್ತಿರೋದೇ ಟೆನ್ಷನ್ ಹೆಚ್ಚಿಸಿದೆ.
ನಂಬರ್ 3 ಸ್ಲಾಟ್ ನಿಂದ ಏಕಾಏಕಿ ಆರಂಭಿಕನಾಗಿ ಕಣಕ್ಕೆ!
ವಿರಾಟ್ ಕೊಹ್ಲಿ ಟಿ-20 ವಿಶ್ವಕಪ್ನಲ್ಲಿ ಫೇಲ್ಯೂರ್ ಅನುಭವಿಸೋಕೆ ಮೇನ್ ರೀಸನ್ ಅಂದ್ರೆ ಸ್ಥಾನ ಬದಲಾವಣೆ. ಈ ಹಿಂದಿನ ಪಂದ್ಯಗಳಲ್ಲಿ ನಂಬರ್ 3 ಸ್ಲಾಟ್ನಲ್ಲಿ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದ ಕೊಹ್ಲಿಯವ್ರನ್ನ ಈ ಬಾರಿ ದಿಢೀರ್ ಅಂತಾ ಓಪನರ್ ಆಗಿ ಆಡಿಸಲಾಗ್ತಿದೆ. ಬಟ್ ವಿರಾಟ್ ನಂ.3 ಸ್ಲಾಟ್ನಲ್ಲಿ ರನ್ ಸರಮಾಲೆ ಕಟ್ಟಿದ್ದಾರೆ. ಇದು ಗೊತ್ತಿದ್ರೂ, ಏಕಾಏಕಿ ವಿಶ್ವಕಪ್ನಲ್ಲಿ ಮಿಡಲ್ ಆರ್ಡರ್ನಿಂದ ಆರಂಭಿಕರಾಗಿ ಬಡ್ತಿ ನೀಡಿದ್ರು. ಟೀಮ್ ಮ್ಯಾನೇಜ್ಮೆಂಟ್ ಮಾಡಿದ ಮಹಾಪ್ರಮಾದ ಕೂಡ ಕೊಹ್ಲಿ ಬ್ಯಾಡ್ಫಾರ್ಮ್ಗೆ ಒಂದು ಕಾರಣ ಅಂತಾ ಕ್ರಿಕೆಟ್ ವಿಶ್ಲೇಷಕರು ವಿಶ್ಲೇಷಣೆ ಮಾಡ್ತಿದ್ದಾರೆ. ಐಪಿಎಲ್ನಲ್ಲಿ ಓಪನರ್ ಆಗಿ ಆಡಿರೋ ಅನುಭವ ಇದ್ರೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಂದಿಕೊಳ್ಳೋಕೆ ಕೊಹ್ಲಿಯವ್ರಿಗೆ ಸಾಧ್ಯವಾಗ್ತಿಲ್ಲ.
ಎಲ್ಲರಿಗಿಂತ ತಡವಾಗಿ ಅಮೆರಿಕಾಗೆ ಪ್ರಯಾಣ
ಸತತ 2 ತಿಂಗಳು ಐಪಿಎಲ್ನಲ್ಲಿ ಬ್ಯುಸಿ ಇದ್ದ ಟೀಂ ಇಂಡಿಯಾ ಆಟಗಾರರು ಬಳಿಕ ಟಿ-20 ವಿಶ್ವಕಪ್ ಗಾಗಿ ಅಮೆರಿಕಕ್ಕೆ ಹಾರಿದ್ರು. ಪೂರ್ವ ಸಿದ್ಧತೆ ದೃಷ್ಟಿಯಿಂದ ಬಹುತೇಕ ಆಟಗಾರರು ಒಂದು ವಾರ ಮೊದಲು ಅಮೆರಿಕಾಗೆ ಫ್ಲೈಟ್ ಏರಿದ್ರು. ಆದ್ರೆ ವಿರಾಟ್ ಕೊಹ್ಲಿ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ತಡವಾಗಿ ತಂಡ ಸೇರಿಕೊಂಡ್ರು. ಬಾಂಗ್ಲಾ ಎದುರಿನ ಅಭ್ಯಾಸ ಪಂದ್ಯವನ್ನೂ ಸಹ ಆಡಲಿಲ್ಲ. ನೇರವಾಗಿ ವಿಶ್ವಕಪ್ ಅಖಾಡಕ್ಕೆ ಧುಮುಕಿದ್ರು. ಇದು ಕೂಡ ವ್ಯತಿರಿಕ್ತ ಪ್ರದರ್ಶನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಸ್ಲೋ ಪಿಚ್ ನಲ್ಲೂ ಅಗ್ರೆಸ್ಸಿವ್ ಆಟಕ್ಕೆ ಮುಂದಾಗಿದ್ದು
ವಿರಾಟ್ ಕೊಹ್ಲಿ ರನ್ ಮಷಿನ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಬಟ್ ಕೆಲ ವರ್ಷಗಳಿಂದ ಅವ್ರ ಸ್ಟ್ರೈಕ್ ರೇಟ್ ಬಗ್ಗೆ ಭಾರೀ ಚರ್ಚೆಯಾಗ್ತಿತ್ತು. 2024ರ ಐಪಿಎಲ್ನಲ್ಲೂ ಕೂಡ ಇದು ಕಂಟಿನ್ಯೂ ಆಗಿತ್ತು. ಈ ವಿರಾಟ್ ಮಾತ್ರ ಐಪಿಎಲ್ನಲ್ಲಿ 150 ಪ್ಲಸ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ ಎಲ್ಲರ ಬಾಯಿ ಮುಚ್ಚಿಸಿದ್ರು. ಇದೇ ಮೈಂಡ್ ಸೆಟ್ನಲ್ಲೇ ಪ್ರಸಕ್ತ ಟಿ20 ವಿಶ್ವಕಪ್ನಲ್ಲೂ ಏಕಾಏಕಿ ಬ್ಯಾಟ್ ಬೀಸಲು ಆರಂಭಿಸಿದ್ರು. ಆದರೆ ಅದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರೀಡಾಂಗಣದಂಥಹ ಸ್ಲೋಪಿಚ್ನಲ್ಲಿ ಸಾಧ್ಯವಾಗ್ತಿದೆ. ಹೀಗಾಗಿ ಕ್ರೀಸ್ನಲ್ಲಿ ಅಡ್ಜೆಸ್ಟ್ ಆಗೋ ಮುನ್ನವೇ ವಿಕೆಟ್ ಒಪ್ಪಿಸಿ ನಿರ್ಗಮಿಸುತ್ತಿದ್ದಾರೆ.
ಐಪಿಎಲ್ ಫಾರ್ಮ್ ನಿಂದ ಓವರ್ ಕಾನ್ಫಿಡೆನ್ಸ್ ಬಂತಾ?
ವಿಶ್ವಕಪ್ ಗೂ ಮುನ್ನ ವಿರಾಟ್ ಕೊಹ್ಲಿ ಸತತ ಎರಡು ತಿಂಗಳು ಐಪಿಎಲ್ ನಲ್ಲಿ ಭರ್ಜರಿ ರನ್ ಗಳಿಸಿದ್ದರು. ಸೋ ಇದೇ ಕಾನ್ಫಿಡೆನ್ಸ್ ವಿಶ್ವಕಪ್ ನಲ್ಲೂ ಚೆನ್ನಾಗಿ ಬ್ಯಾಟ್ ಬೀಸೋ ಆತ್ಮವಿಶ್ವಾಸದಲ್ಲಿದ್ರು. ಹೀಗಾಗಿ ಆರಂಭದ ಪಂದ್ಯಕ್ಕೆ ಪ್ರಾಕ್ಟೀಸ್ ಮ್ಯಾಚ್ ಆಡದೇ ಅಖಾಡಕ್ಕೆ ಇಳಿದಿದ್ರು. ಬಟ್ ಇದು ಫೇಲ್ಯೂರ್ ಗೆ ಕಾರಣವಾಯ್ತು.
ಹೊಡಿಬಡಿ ಆಟದ ಹುಮ್ಮಸ್ಸಿನಲ್ಲಿ ಫೇಲ್ಯೂರ್
ವಿರಾಟ್ ಕ್ರೀಸ್ನಲ್ಲಿ ಇದ್ದೊಷ್ಟು ಹೊತ್ತೂ ಹೊಡಿಬಡಿ ಆಟವಾಡ್ತಾರೆ ಅನ್ನೋದು ಎಲ್ರಿಗೂ ಗೊತ್ತೇ ಇದೆ. ಕ್ರಿಕೆಟರ್ಸ್ ಮತ್ತು ಫ್ಯಾನ್ಸ್ ಎಕ್ಸ್ಪೆಕ್ಟ್ ಮಾಡೋದೂ ಇದನ್ನೇ. ಪ್ರತೀ ಪಂದ್ಯದಲ್ಲೂ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿರುತ್ತೆ. ಹೀಗಾಗಿ ಈ ಎಕ್ಸ್ಪೆಕ್ಟೇಷನ್ಗೆ ತಕ್ಕಂತೆ ಆಡಬೇಕು ಎಂಬ ಒತ್ತಡ ವಿರಾಟ್ ಮೇಲಿರುತ್ತೆ. ಈ ಬಾರಿಯೂ ಅದೇ ಭರವಸೆ ಇಡಲಾಗಿತ್ತು. ಇದ್ರಿಂದಾಗಿ ಅಸಲಿ ಆಟವಾಡಲು ಸಾಧ್ಯವಾಗ್ತಿಲ್ಲ ಎನ್ನಲಾಗ್ತಿದೆ.
ಕಿಂಗ್ ಕೊಹ್ಲಿ ಓರ್ವ ಅಪ್ರತಿಮ ಆಟಗಾರ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ತಮ್ಮ ಬ್ಯಾಡ್ಫಾರ್ಮ್ನಿಂದ ಯಾವುದೇ ಕ್ಷಣದಲ್ಲೂ ಹೊರ ಬರಬಹುದು. ತಮ್ಮ ಸುದೀರ್ಘ ಕರಿಯರ್ನಲ್ಲಿ ಹಲವು ಏಳು-ಬೀಳುಗಳನ್ನ ಕಂಡಿದ್ದು, ಪ್ರರೀ ಬಾರಿಯೂ ಸಾಲಿಡ್ ಕಮ್ಬ್ಯಾಕ್ ಮಾಡಿದ್ದಾರೆ. ಬಟ್ ಯುಎಸ್ಎ ಪಿಚ್ಗಳು ಐಪಿಎಲ್ನಲ್ಲಿ ಬಳಸುವ ಪಿಚ್ಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿದ್ದರಿಂದ ಅಡ್ಜಸ್ಟ್ ಆಗೋದು ಕಷ್ಟವಾಯ್ತು ಎನ್ನಲಾಗ್ತಿದೆ.. ಒಂದು ಖುಷಿ ವಿಚಾರ ಏನಪ್ಪ ಅಂದ್ರೆ ನ್ಯೂಯಾರ್ಕ್ನಲ್ಲಿ ಭಾರತ ತಂಡದ ಪಂದ್ಯಗಳು ಮುಕ್ತಾಯಗೊಂಡಿದ್ದು, ಉಳಿದ ಮ್ಯಾಚ್ಗಳು ಬೇರೆ ಬೇರೆ ಪಿಚ್ಗಳಲ್ಲಿ ನಡೆಯುತ್ತೆ. ಬುಧವಾರ ಕೆನಡಾ ವಿರುದ್ಧ ಭಾರತ ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಮ್ಯಾಚ್ ಫ್ಲೋರಿಡಾದ ಸ್ಟೇಡಿಯಂನಲ್ಲಿ ನಡೆಯಲಿದೆ. ಹೀಗಾಗಿ ಮ್ಯಾಚ್ನಲ್ಲಿ ವಿರಾಟ್ ಕಮ್ ಬ್ಯಾಕ್ ಮಾಡೋ ಸಾಧ್ಯತೆ ಇದೆ.