ಆಗ HERO.. ಈಗ VILLAIN!  – RCBಗೆ ಜಿತೇಶ್ & ಶೆಫರ್ಡ್ ಭಾರ
ಬ್ಯಾಟಿಂಗ್ ಖದರ್ ಕಳೆದುಕೊಂಡ್ರಾ?

ಆಗ HERO.. ಈಗ VILLAIN!  – RCBಗೆ ಜಿತೇಶ್ & ಶೆಫರ್ಡ್ ಭಾರಬ್ಯಾಟಿಂಗ್ ಖದರ್ ಕಳೆದುಕೊಂಡ್ರಾ?

19ನೇ ಸೀಸನ್ ಐಪಿಎಲ್ ಈಗ ನಿರ್ಣಾಯಕ ಘಟ್ಟದಲ್ಲಿದೆ. ಇನ್ನೊಂದು ವಾರದಲ್ಲಿ ಪ್ಲೇಆಫ್ ರೇಸ್​ನಲ್ಲಿ ಒಂದು ಕ್ಲಾರಿಟಿ ಸಿಗುತ್ತೆ. ಬಟ್ ಇಂಥಾ ಟೈಮಲ್ಲೇ ಆರ್​ಸಿಬಿ ಬ್ಯಾಕ್​ ಟು ಬ್ಯಾಕ್ ಪಂದ್ಯಗಳನ್ನ ಸೋತಿದೆ. ಌಂಡ್ ಸೋತ ಪಂದ್ಯಗಳೆಲ್ಲಾ ಆಲ್ಮೋಸ್ಟ್ ಬ್ಯಾಟಿಂಗ್ ಸ್ಟ್ರಗಲ್​ನಿಂದಲೇ. ಅದ್ರಲ್ಲೂ ಇವ್ರಿಬ್ಬರ ಕಳಪೆ ಫಾರ್ಮ್ ದೊಡ್ಡ ತಲೆಬಿಸಿ ತಂದಿಟ್ಟಿದೆ. ಮುಂದಿನ ಪಂದ್ಯಗಳಲ್ಲೂ ಕೈಕೊಟ್ರೆ ಹೆಂಗೆ ಅನ್ನೋ ಟೆನ್ಷನ್ ಸ್ಟಾರ್ಟ್ ಆಗಿದೆ. ಲಾಸ್ಟ್ ಸೀಸನ್​ನಲ್ಲಿ ಹೀರೋಗಳಾಗಿ ಮೆರೆದಿದ್ದ ಜಿತೇಶ್ ಶರ್ಮಾ ಮತ್ತು ರೊಮ್ಯಾರಿಯೋ ಶೆಫರ್ಡ್ ಈ ಸೀಸನ್​ನಲ್ಲಿ ವಿಲನ್​ಗಳಂತೆ ಕಾಡ್ತಿದ್ದಾರೆ.

ಇದನ್ನೂ ಓದಿ : ಮಳೆ ಜೊತೆ ಮುಳುವಾದ ಮಾರ್ಷ್ – ಕೈಯಲ್ಲಿದ್ದ ಮ್ಯಾಚ್ ಬಿಟ್ಟ RCB

ಲಕ್ನೋ ವಿರುದ್ಧದ ರಿವೇಂಜ್ ಮ್ಯಾಚ್​ ಮುಗಿಸಿರೋ ಆರ್​ಸಿಬಿ ಈ ಸೀಸನ್​ನಲ್ಲಿ ಈವರೆಗೆ 10 ಪಂದ್ಯಗಳನ್ನ ಆಡಿ 6ರಲ್ಲಿ ಗೆದ್ದು 4ರಲ್ಲಿ ಸೋತಿದೆ. ಌಂಡ್ ಎಲ್​ಎಸ್​ಜಿ ವಿರುದ್ಧ ಸೋತ್ರೂ ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ ಆಗಿಲ್ಲ. ಗೆದ್ದಿದ್ರೆ ಟಾಪ್-1ನಲ್ಲಿ ಇರ್ತಿದ್ರು. ಬಟ್ ಈಗ 3ನೇ ಸ್ಥಾನದಲ್ಲೇ ಇದ್ದಾರೆ. ಟೆನ್ಷನ್ ಏನಂದ್ರೆ 4, 5ನೇ ಸ್ಥಾನದಲ್ಲಿರೋ ರಾಜಸ್ಥಾನ ಮತ್ತು ಗುಜರಾತ್ ಕೂಡ 12 ಅಂಕ ಪಡೆದಿದ್ದು ಮುಂದಿನ ಪಂದ್ಯಗಳಲ್ಲಿ ಗೆದ್ರೆ ಆರ್​ಸಿಬಿಯನ್ನ ಹಿಂದಿಕ್ಕಿ ಮೇಲೆ ಹೋಗ್ತಾರೆ. ಇಂಥಾ ಕ್ರೂಶಿಯಲ್ ಟೈಮಲ್ಲಿ ಆರ್​ಸಿಬಿ ಪರ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಹಾಗೇ ಆಲ್​ರೌಂಡರ್ ರೊಮ್ಯಾರಿಯೋ ಶೆಫರ್ಡ್ ಕೈಕೊಡ್ತಿದ್ದಾರೆ. ಜಿತೇಶ್ ಶರ್ಮಾ ಮತ್ತು ರೊಮ್ಯಾರಿಯೋ ಶೆಫರ್ಡ್ 2025ರ ಸೀಸನ್​ನಲ್ಲಿ ಅಕ್ಷರಶಃ ಹೀರೋಗಳು. ಆದ್ರೆ ಈ ಸೀಸನ್ ತಾವು ಮಂಕಾಗೋದ್ರ ಜೊತೆಗೆ ತಂಡಕ್ಕೂ ಮುಳುವಾಗ್ತಿದ್ದಾರೆ.

ಆಗ ಫೈಯರ್.. ಈಗ ಫೇಲ್ಯೂರ್!

ಕಳೆದ ಆವೃತ್ತಿಯಲ್ಲಿ ಲಕ್ನೋ ವಿರುದ್ಧ ಅಜೇಯ 85 ರನ್ ​ಗಳ ಇನ್ನಿಂಗ್ಸ್

176.35ರ ಅದ್ಭುತ ಸ್ಟ್ರೈಕ್ ​ರೇಟ್ ​ನಲ್ಲಿ 261 ರನ್ಸ್, 24 ಫೋರ್, 17 ಸಿಕ್ಸರ್ಸ್

10 ಪಂದ್ಯಗಳ 8 ಇನ್ನಿಂಗ್ಸ್, 108.47ರ ಸ್ಟ್ರೈಕ್​ ರೇಟ್ ​ನಲ್ಲಿ 64 ರನ್ಸ್ ಅಷ್ಟೇ

ಬೆಂಗಳೂರಿನಲ್ಲಿ 9 ಬಾಲಲ್ಲಿ 23 ರನ್ಸ್ ಹೊಡೆದಿದ್ದೇ ಈ ಸೀಸನ್ ಹೈಯೆಸ್ಟ್

ಗುಜರಾತ್ ವಿರುದ್ಧ 3 ಬಾಲಲ್ಲಿ 1 ರನ್, ಲಕ್ನೋ ವಿರುದ್ಧ 3 ಬಾಲಲ್ಲಿ 1 ರನ್

ವಿಕೆಟ್ ಕೀಪರ್ ಆಗಿ ಆಡ್ತಿರೋದ್ರಿಂದ ಮತ್ತೆ ಮತ್ತೆ ಚಾನ್ಸ್ ಕೊಡ್ತಿದ್ರೂ ಫೇಲ್ಯೂರ್

ರೊಮ್ಯಾರಿಯೋ ಶೆಫರ್ಡ್ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಹೊರೆ

14 ಬಾಲಲ್ಲೇ ಚೆನ್ನೈ ವಿರುದ್ಧ ಅರ್ಧಶತಕ, ಫೈನಲ್ ನಲ್ಲಿ ಶ್ರೇಯಸ್ ವಿಕೆಟ್ ಬೇಟೆ

10 ಪಂದ್ಯಗಳ 8 ಇನ್ನಿಂಗ್ಸ್​ 79 ರನ್ಸ್, 143ರ ಸ್ಟ್ರೈಕ್​ರೇಟ್, ಬಿಗ್ ಹಿಟ್ಸ್ ಇಲ್ಲ

ಬೌಲಿಂಗ್ ಅಂತಾ ಬಂದಾಗ್ಲೂ ದುಬಾರಿ, ಎದುರಾಳಿಗಳಿ ಬ್ಯಾಟರ್ ಗಳಿಗೆ ಹಬ್ಬ

102 ಬಾಲ್, 13ರ ಎಕಾನಮಿಯಲ್ಲಿ 220 ರನ್ಸ್, 5 ವಿಕೆಟ್ಸ್

ಇಲ್ಲಿ ಜಿತೇಶ್ ಮತ್ತು ಶೆಫರ್ಡ್​ನ ಫ್ರಾಂಚೈಸಿ ಪಿಕ್ ಮಾಡ್ತಿರೋದೇ ಅವ್ರಲ್ಲಿ ಬಿಗ್ ಹಿಟ್​ಗಳನ್ನ ಬಾರಿಸೋ ಎಬಿಲಿಟಿ ಇದೆ ಅಂತಾ. ಅವ್ರ ಜವಾಬ್ದಾರಿ ಕೂಡ ಅದೇ ಆಗಿರುತ್ತೆ. ಆದ್ರೆ ಒಂದೇ ಒಂದು ಮ್ಯಾಚಲ್ಲೂ ಅದನ್ನ ಮಾಡಿ ತೋರಿಸಿಲ್ಲ. ಌಂಡ್ ಒನ್ ಮೋರ್ ಥಿಂಗ್ ರೊಮ್ಯಾರಿಯೋ ಶೆಫರ್ಡ್ ಪ್ಲೇಯಿಂಗ್ 11ನಲ್ಲಿ ಇರ್ಬೇಕಾ ಬೇಡ್ವಾ ಅನ್ನೋ ಬಗ್ಗೆ ಈ ಹಿಂದೆಯೇ ಚರ್ಚೆ ಆಗಿತ್ತು. ಆಗ ಕೋಚ್ ಌಂಡಿ ಫ್ಲವರ್ ಶೆಫರ್ಡ್ ಬೆನ್ನಿಗೆ ನಿಂತಿದ್ರು. ಲಾಸ್ಟ್ ಸೀಸನ್ ಕಪ್ ಗೆಲ್ಲೋಕೆ ಅವ್ರ ಕೊಡುತ್ತೆ ದೊಡ್ಡದಿದೆ ಈಗ ಕಳಪೆ ಫಾರ್ಮ್​ನಲ್ಲೂ ನಾವು ಅವ್ರಿಗೆ ಬೆಂಬಲ ಕೊಡ್ತೀವಿ. ನೆಕ್ಸ್​ಟ್ ಅವ್ರು ಕಂ ಬ್ಯಾಕ್ ಮಾಡ್ತಾರೆ ಅಂದಿದ್ರು. ಆದ್ರೆ ಶೆಫರ್ಡ್ ಅದನ್ನ ಪ್ರೂವ್ ಮಾಡ್ತಿಲ್ಲ. ಮತ್ತೊಂದ್ಕಡೆ ಜಿತೇಶ್ ಶರ್ಮಾ ಹಿಂದೆ ಒಂದ್ಸಲ ಪಾಡ್​ಕಾಸ್ಟ್​ವೊಂದ್ರಲ್ಲಿ ಮಾತಾಡ್ತಾ ಒಂದು ಸ್ಟೇಟ್​ಮೆಂಟ್ ಪಾಸ್ ಮಾಡಿದ್ರು. ಅದೇನಂದ್ರೆ ಡಗೌಟ್​ನಲ್ಲಿ ಕುಳಿತಾಗ ನಮ್ಮ ತಂಡದ ಟಾಪ್ ಆರ್ಡರ್ ಬೇಗ ಔಟ್ ಆಗ್ಲಿ. ನನಗೆ ಬ್ಯಾಟಿಂಗ್ ಸಿಗಬೇಕು. ನಾವು ವಿನ್ನಿಂಗ್ಸ್ ರನ್ಸ್ ಹೊಡೀಬೇಕು ನಾನು ಹೀರೋ ಆಗ್ಬೇಕು ಅಂತಾ ಬೇಡಿಕೊಳ್ತೇನೆ ಅಂದಿದ್ರು. ಆ ದೇವ್ರು ಅಸ್ತು ಎಂದಿತ್ತೋ ಏನೋ. ಈ ಸೀಸನ್​ನಲ್ಲಿ ಸಾಲು ಸಾಲು ಅವಕಾಶಗಳೇ ಸಿಕ್ವು. ಆದ್ರೆ ಜಿತೇಶ್ ಮಾತ್ರ ಜ್ವಾಲೆಯಾಗಲೇಇಲ್ಲ. ರನ್ಸ್ ಬರಲೇಇಲ್ಲ. ಹೀಗಾಗಿ ಆರ್​ಸಿಬಿ ಈ ಸಲ ಡೆತ್ ಓವರ್ಸ್ ಅಂತಾ ಬಂದ್ರೆ ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಮೇಲೆಯೇ ಡಿಪೆಂಡ್ ಆಗೋ ಥರ ಆಗೋಗಿದೆ. ಡೇವಿಡ್ ಮತ್ತು ಕೃನಾಲ್ ಆಡ್ತಾರೆ ನಿಜ. ಬಟ್ ಪ್ರತೀ ಮ್ಯಾಚಲ್ಲೂ ಅವ್ರ ಮೇಲೇ ಡಿಪೆಂಡ್ ಆಗೋಕೆ ಆಗಲ್ಲ. ಬೇರೆ ಪ್ಲೇಯರ್​ಗಳಿಂದಲೂ ಸಾಥ್ ಸಿಗ್ಭೇಕಾಗುತ್ತೆ.

ಸದ್ಯಕ್ಕೇನೋ ಆರ್ಸಿಬಿ ಪ್ಲೇಆಫ್ ಹಾದಿ ಕಷ್ಟ ಏನಿಲ್ಲ. ಉಳಿದಿರೋ ನಾಲ್ಕು ಮ್ಯಾಚಲ್ಲಿ 2 ಗೆದ್ರೂ ಟಾಪ್​-4 ಗ್ಯಾರಂಟಿ ಇದೆ. ಸೇಫ್ ಜೋನ್​ನಲ್ಲಿ ಇರ್ತಾರೆ. ಒಳ್ಳೆ ನೆಟ್ ರನ್ ರೇಟ್ ಇರೋದ್ರಿಂದ ಸೆಲೆಕ್ಟ್ ಆಗ್ಬೋದು. ಅದು ಚಿಂತೆ ಅಲ್ಲ. ಆದ್ರೆ ಪ್ಲೇಆಫ್ ಪಂದ್ಯಗಳಲ್ಲಿ ಇವ್ರು ಹಿಂಗೇ ಕೈಕೊಟ್ರೆ ಕಥೆ ಏನು ಅನ್ನೋದು. ಹೀಗಾಗಿ ಫ್ರಾಂಚೈಸಿ ಆಲ್ಟರ್​ನೇಟಿವ್ ಆಗಿ ಯಾರಿಗಾದ್ರೂ ಚಾನ್ಸ್ ಕೊಡ್ತಾರಾ ಅಥವಾ ಇವ್ರನ್ನೇ ಆಡಿಸ್ತಾರಾ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *