RCB ಫ್ಯಾನ್ಸ್‌ಗೆ ಬಿಗ್‌ ಶಾಕ್!‌ – RCB Vs SRH ಮ್ಯಾಚ್‌ ಟಿಕೆಟ್‌ ದರ ಜಸ್ಟ್‌ 47,000 ರೂಪಾಯಿ!

RCB ಫ್ಯಾನ್ಸ್‌ಗೆ ಬಿಗ್‌ ಶಾಕ್!‌ – RCB Vs SRH ಮ್ಯಾಚ್‌ ಟಿಕೆಟ್‌ ದರ ಜಸ್ಟ್‌ 47,000 ರೂಪಾಯಿ!

IPL ಸೀಸನ್‌ 19ರ ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿಯಲ್ಲಿ RCB Vs SRH ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಮ್ಯಾಚ್‌ ನೋಡಲು ಹೋಗಬೇಕು ಅಂದುಕೊಂಡವರಿಗೆ ಶಾಕ್‌ ಎದುರಾಗಿದೆ. ಪಂದ್ಯದ ಟಿಕೆಟ್‌ ದರ ಕೇಳಿ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ! – ಶ್ವಾನಗಳ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋದ ಅಪಾರ್ಟ್ಮೆಂಟ್ ನಿವಾಗಳು!   

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗಾಗಿ ಹಾಲಿ ಚಾಂಪಿಯನ್ ತಂಡದ ಆಟವನ್ನು ತವರಿನ ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ಈ ಬಾರಿಯ ಉದ್ಘಾಟನಾ ಪಂದ್ಯ ಕೂಡಾ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯುತ್ತಿದೆ. ಹೀಗಾಗಿ ಎಲ್ಲಾ ಟಿಕೆಟ್‌ಗಳು ಕೆಲವು ನಿಮಿಷಗಳಲ್ಲೇ ಸೇಲ್ ಆಗುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಅಭಿಮಾನಿಗಳ ಅಭಿಮಾನವನ್ನೇ ಬಂಡವಾಳ ಮಾಡಿಕೊಳ್ಳಲು ಫ್ರಾಂಚೈಸಿ ಸಜ್ಜಾಗಿದೆ.

ಹೌದು, RCB ಮ್ಯಾಚ್‌ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಬೇಕು ಅಂದುಕೊಂಡ ಫ್ಯಾನ್ಸ್‌ ಈ ಬಾರಿ ಕೈಯಲ್ಲಿ ಹೆಚ್ಚು ದುಡ್ಡು ಇಟ್ಟುಕೊಂಡಿರ್ಬೇಕು. ಪಂದ್ಯ ನೋಡಲು ಈ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲು ಸಿದ್ಧರಾಗಬೇಕು. ಕಾರಣ, ಟಿಕೆಟ್‌ ದರ ಈ ಹಿಂದಿನ ಎಲ್ಲ ಆವೃತ್ತಿಗಳಿಗಿಂತಲೂ ದುಬಾರಿಯಾಗಿರಲಿದೆ . ಆರ್‌ಸಿಬಿ ತವರಿನ ಪಂದ್ಯದ ಟಿಕೆಟ್‌ಗಳ ಕನಿಷ್ಠ ಮೊತ್ತ ₹3750, ಗರಿಷ್ಠ ಮೊತ್ತ ₹47,000 ಆಗಿರಲಿದೆ ಎಂದು ಹೇಳಲಾಗುತ್ತಿದೆ. ಕ್ರೀಡಾಂಗಣದ ನಾಲ್ಕು ಸ್ಟ್ಯಾಂಡ್‌ಗಳ ಟಿಕೆಟ್‌ ದರ ₹3750, ಎರಡು ಸ್ಟ್ಯಾಂಡ್‌ಗಳ ಟಿಕೆಟ್‌ ದರ ₹6000, ಮತ್ತೆರಡು ಸ್ಟ್ಯಾಂಡ್‌ಗಳ ದರ ತಲಾ ₹12000 ನಿಗದಿಯಾಗಿದೆ. ₹15,000, ₹25,000, ₹27,500 ಹಾಗೂ ₹47,000 ಟಿಕೆಟ್‌ಗಳಿರುವ ತಲಾ ಒಂದು ಸ್ಟ್ಯಾಂಡ್‌ಗಳು ಇರಲಿವೆ ಎನ್ನಲಾಗಿದೆ.

ಇನ್ನು ವಿಮಾನ ಟಿಕೆಟ್‌ ಬುಕಿಂಗ್‌ ವೇಳೆ ಬೇಡಿಕೆಗೆ ತಕ್ಕಂತೆ ದರ ಹೆಚ್ಚಿಗೆ ಮಾಡಲಾಗುತ್ತದೆ. ಇದನ್ನು ಡೈನಮಿಕ್‌ ಪ್ರೈಸಿಂಗ್‌ ಎನ್ನುತ್ತಾರೆ. ಆರ್‌ಸಿಬಿ ಟಿಕೆಟ್‌ಗಳ ಖರೀದಿ ವೇಳೆಯೂ ಡೈನಮಿಕ್‌ ಪ್ರೈಸಿಂಗ್‌ ಬಳಕೆಯಾಗಲಿದೆ. ಅಂದರೆ ₹3750ರ ಟಿಕೆಟ್‌ ನಿಮಗೆ ಅದೇ ಮೊತ್ತಕ್ಕೆ ಸಿಗಲಿದೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಆ ಮೊತ್ತ ಗರಿಷ್ಠ ₹4875ರ ವರೆಗೂ ಏರಿಕೆ ಆಗಬಹುದು. ಅದೇ ರೀತಿ ₹47000ನ ಟಿಕೆಟ್‌ನ ದರ ಗರಿಷ್ಠ ₹65800ರ ವರೆಗೂ ಹೆಚ್ಚಳವಾಗಬಹುದು.

ಮೊದಲೆರಡು ಪಂದ್ಯಗಳ ವೇಳಾಪಟ್ಟಿ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಹಂತದ ಪಂದ್ಯಗಳಲ್ಲಿ ಆರ್‌ಸಿಬಿ ಬಲಿಷ್ಠ ತಂಡಗಳನ್ನು ಎದುರಿಸಲಿದೆ.

ಮಾರ್ಚ್ 28: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯ.

ಏಪ್ರಿಲ್ 05: ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡನೇ ಪಂದ್ಯ.

 RCB vs SRH ಟಿಕೆಟ್ ಬುಕ್ ಮಾಡುವುದು ಹೇಗೆ? ಎಲ್ಲಿ?

shop.royalchallengers.com ನಲ್ಲಿ ಅಧಿಕೃತ ಬುಕಿಂಗ್ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಿ ಅಥವಾ RCB ಅಪ್ಲಿಕೇಶನ್ ತೆರೆಯಿರಿ.

ಪಂದ್ಯ ಲೈವ್ ಆದ ನಂತರ RCB vs SRH ಪಂದ್ಯವನ್ನು ಆಯ್ಕೆ ಮಾಡಿ.

ನಿಮ್ಮ ಆದ್ಯತೆಯ ಆಸನ ವರ್ಗ ಮತ್ತು ಟಿಕೆಟ್‌ಗಳ ಸಂಖ್ಯೆಯನ್ನು ಆರಿಸಿ

ಅಗತ್ಯವಿದ್ದರೆ ಪಾರ್ಕಿಂಗ್ ಅನ್ನು ಮೊದಲೇ ಬುಕ್ ಮಾಡಿ. ಗರುಡ ಮಾಲ್, ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್, ಸೇಂಟ್ ಜೋಸೆಫ್ಸ್ ಬಾಯ್ಸ್ ಹೈಸ್ಕೂಲ್ ಮತ್ತು ಫ್ರೀಡಂ ಪಾರ್ಕ್ ಸೀಮಿತ ಸ್ಥಳಗಳು ಲಭ್ಯವಿದೆ

ನಂತರ ಪಾವತಿಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಇ-ಟಿಕೆಟ್ ಅನ್ನು ಸ್ವೀಕರಿಸಿ.

ಪಂದ್ಯದ ದಿನದಂದು, ಪ್ರವೇಶಕ್ಕಾಗಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಮೆಟ್ರೋ ಗೇಟ್‌ನಲ್ಲಿ ನಿಮ್ಮ ಪಂದ್ಯದ ಟಿಕೆಟ್ QR ಅನ್ನು ಸ್ಕ್ಯಾನ್ ಮಾಡುವ ಮೂಲಕ ಉಚಿತ ಮೆಟ್ರೋ ಪ್ರಯಾಣ ಸೌಲಭ್ಯವನ್ನು ಪಡೆಯಬಹುದು.

Shwetha M