RCBಗೆ ಬೌಲಿಂಗ್ ದೇ ತಲೆಬಿಸಿ – ಜೋಶ್ ಇಂಜುರಿ.. ದಯಾಳ್ ಮಿಸ್ಸಿಂಗ್!
ಭುವಿ ಮೇಲೆಯೇ ಡಿಪೆಂಡ್ ಆಗ್ಬೇಕಾ?

RCBಗೆ ಬೌಲಿಂಗ್ ದೇ ತಲೆಬಿಸಿ – ಜೋಶ್ ಇಂಜುರಿ.. ದಯಾಳ್ ಮಿಸ್ಸಿಂಗ್!ಭುವಿ ಮೇಲೆಯೇ ಡಿಪೆಂಡ್ ಆಗ್ಬೇಕಾ?

ಐಪಿಎಲ್ ಅಂತಾ ಬಂದಾಗ ಆರ್​ಸಿಬಿ ಕ್ರೇಜ್ ಬೀಟ್ ಮಾಡೋಕೆ ಯಾವ ಟೀಮ್​ಗೂ ಚಾನ್ಸೇ ಇಲ್ಲ. 18ನೇ ಸೀಸನ್​ನಲ್ಲಿ ಚೊಚ್ಚಲ ಟ್ರೋಫಿ ಗೆದ್ಮೇಲಂತೂ ರೆಡ್ ಆರ್ಮಿ ಹವಾ ಇನ್ನೂ ಜಾಸ್ತಿಯಾಗಿದೆ. ಈ ಸಲ ಕೂಡ ಸಾಲಿಡ್​ ಕಾಂಬಿನೇಷನ್ ಇರೋದ್ರಿಂದ ಕಪ್ ಗೆಲ್ಲೋ ಫೇವರೆಟ್ ಟೀಂ ಅಂದ್ರೆ ಅದು ಬೆಂಗಳೂರು ತಂಡವೇ.

ಇದನ್ನೂ ಓದಿ : RCB ಫ್ಲವರ್ ಅಲ್ಲ ಫೈಯರ್ – ಆಲ್ ರೌಂಡರ್ ಗಳೇ ಮ್ಯಾಚ್ ವಿನ್ನರ್ಸ್

ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಆರ್​ಸಿಬಿ ವರ್ಸಸ್ ಎಸ್​ಆರ್​ಹೆಚ್ ಪಂದ್ಯದೊಂದಿಗೆ ಈ ಬಾರಿಯ ಟೂರ್ನಿ ಆರಂಭ ಆಗುತ್ತೆ. ಐಪಿಎಲ್ ಅಂತಾ ಬಂದಾಗ ಎರಡೂ ಮೋಸ್ಟ್ ಡೇಂಜರಸ್ ಟೀಮ್​ಗಳೇ. ಅದ್ರಲ್ಲೂ ಹೈದ್ರಾಬಾದ್ ತಂಡದ ಪ್ಲಸ್ ಪಾಯಿಂಟೇ ಅವ್ರ ಸಾಲಿಡ್ ಬ್ಯಾಟಿಂಗ್ ಲೈನಪ್. ಐಪಿಎಲ್ ಇತಿಹಾಸದಲ್ಲಿ ಹೈಯೆಸ್ಟ್ ಸ್ಕೋರ್​ಗಳ ಪೈಕಿ ಟಾಪ್ 5ನಲ್ಲಿ ಹೈದ್ರಾಬಾದ್ ತಂಡವೇ 4 ಸ್ಥಾನಗಳನ್ನ ಪಡೆದಿದೆ. ಸೋ ಇಂಥಾ ಆರೆಂಜ್ ಆರ್ಮಿಯನ್ನ ಕಟ್ಟಿ ಹಾಕ್ಬೇಕು ಅಂದ್ರೆ ನಮ್ಮ ಬೌಲಿಂಗ್ ಸ್ಟ್ರಾಂಗ್ ಇರ್ಬೇಕು. ಆದ್ರೆ ಟೂರ್ನಿ ಆರಂಭಕ್ಕೆ ಇನ್ನೊಂದೇ ವಾರ ಇರುವಾಗ ತಲೆಬಿಸಿ ಸ್ಟಾರ್ಟ್ ಆಗಿದೆ.

ಬ್ಯಾಟಿಂಗ್ ಮತ್ತು ಮಿಡಲ್ ಆರ್ಡರ್ ನಲ್ಲಿ ಆರ್ ಸಿಬಿ ಡೇಂಜರಸ್!

ಆರ್​ಸಿಬಿ ಪರ ಟಾಪ್ ಆರ್ಡರ್ ಬ್ಯಾಟಿಂಗ್ ಹಾಗೇ ಫಿನಿಶರ್ಸ್ ರೋಲ್​ ಪ್ಲೇ ಮಾಡುವ ಪ್ಲೇಯರ್​ಗಳು ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಓಪನರ್ ಗಳಾಗಿ ಕೊಹ್ಲಿ ಮತ್ತು ಸಾಲ್ಟ್ ಪವರ್ ಪ್ಲೇನಲ್ಲೇ ಫೈರ್ ಥರ ಪರ್ಫಾಮ್ ಮಾಡ್ತಾರೆ. ನಂಬರ್ 3ನಲ್ಲಿ ಪಡಿಕ್ಕಲ್ ಆಡಿದ್ರೆ ಜವಾಬ್ದಾರಿಯುತ ಬ್ಯಾಟಿಂಗ್ ಬರುತ್ತೆ. ಇನ್ನು ರಜತ್ ಪಾಟಿದಾರ್, ಜಿತೇಶ್ ಶರ್ಮಾ ಕೂಡ ಗೇಮ್ ಚೇಂಜಿಂಗ್ ಪ್ರದರ್ಶನ ನೀಡ್ತಾರೆ. ಮಿಡಲ್ ಆರ್ಡರ್ ನಲ್ಲಿ ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್ ಹಾಗೇ ಕೃನಾಲ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡ್ತಾರೆ. ಸೋ 1 ರಿಂದ 8ರವರೆಗೂ ಬ್ಯಾಟಿಂಗ್ ಲೈನಪ್ ಬೆಂಕಿ ಅನ್ನೋ ಥರನೇ ಇದೆ. ಆದ್ರೆ ತಲೆಬಿಸಿ ಇರೋದೇ ಬೌಲಿಂಗ್ ಸ್ಕ್ವಾಡ್​ನದ್ದು.

ಆರ್ ಸಿಬಿಗೆ ಬೌಲಿಂಗ್ ಟೆನ್ಷನ್!

ಆರಂಭದ ಪಂದ್ಯಗಳನ್ನ ಆಡಲ್ಲ ಬೆಂಕಿ ಚೆಂಡು ಹೇಜಲ್ ವುಡ್

ಪ್ರಾಕ್ಟೀಸ್ ಗೂ ಬಂದಿಲ್ಲ, ಸಂಪರ್ಕಕ್ಕೂ ಸಿಗ್ತಿಲ್ಲ ಯಶ್ ದಯಾಳ್

ಸುಯಾಶ್ ಶರ್ಮಾ ಬಿಟ್ರೆ ಸ್ಪೆಷಲಿಸ್ಟ್ ಸ್ಪಿನ್ನರ್ ಅಂತಾ ಯಾರೂ ಇಲ್ಲ

ಪೇಸ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮೇಲೆಯೇ ಡಿಪೆಂಡ್

ಜೇಕಬ್ ಡಫಿ ಇದ್ರೂ ಕೂಡ ಭಾರತದ ನೆಲದಲ್ಲಿ ಆರ್ಭಟ ಕಮ್ಮಿ

Shantha Kumari