RCBಗೆ ಈಗ 7ರ ಚಾಲೆಂಜ್ – ಪ್ಲೇಆಫ್ ಅಲ್ಲ.. ಟಾಪ್-2 ಟಾರ್ಗೆಟ್
REVENGE ಫೈಟ್ ಪಂದ್ಯಗಳೆಷ್ಟು?

RCBಗೆ ಈಗ 7ರ ಚಾಲೆಂಜ್ – ಪ್ಲೇಆಫ್ ಅಲ್ಲ.. ಟಾಪ್-2 ಟಾರ್ಗೆಟ್REVENGE ಫೈಟ್ ಪಂದ್ಯಗಳೆಷ್ಟು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಸಲಿ ಆಟ ಇನ್ಮುಂದೆ ಶುರುವಾಗುತ್ತೆ. ಆಲ್ರೆಡಿ 7 ಪಂದ್ಯಗಳನ್ನ ಕಂಪ್ಲೀಟ್ ಮಾಡಿರೋ ಬೆಂಗಳೂರು ಮುಂದಿನ 7 ಪಂದ್ಯಗಳಲ್ಲಿ ದಿ ಬೆಸ್ಟ್ ಪರ್ಫಾಮೆನ್ಸ್ ಕೊಡ್ಲೇಬೇಕು. ಯಾಕಂದ್ರೆ ಟಾಪ್ 4 ಟಾರ್ಗೆಟ್​ಗಿಂತ ಟಾಪ್ 2 ಟಾರ್ಗೆಟ್ ಇಟ್ಕೊಂಡು ಆಡಿದ್ರಷ್ಟೇ ಫೈನಲ್ ಹಾದಿ ಈಸಿ ಇರುತ್ತೆ.

ಇದನ್ನೂ ಓದಿ : RCBಯಲ್ಲಿ ಬೆಥೆಲ್ ಟೈಂ ವೇಸ್ಟ್? – ಲೀಗ್ ಅರ್ಧದಲ್ಲೇ ಬಿಟ್ಟು ಹೋಗ್ತಾರಾ?

ಒಂದೊಂದು ಮ್ಯಾಚ್ ಮುಗಿದ್ಮೇಲೂ ಪಾಯಿಂಟ್ಸ್ ಪಟ್ಟಿಯಲ್ಲಿ ವೇರಿಯೇಷನ್ಸ್ ಆಗೋದು ಕಾಮನ್. ಯಾರೋ ಒಬ್ಬರ ಗೆಲುವು ಇನ್ನೊಬ್ಬರಿಗೆ ಪ್ಲಸ್ ಆದ್ರೆ ಮತ್ತೊಬ್ಬರಿಗೆ ಮೈನಸ್ ಆಗುತ್ತೆ. ಸ್ಲಾಟ್ಸ್ ಕೂಡ ಮೇಲೆ ಕೆಳಗೆ ಆಗುತ್ತೆ. ಹೀಗಾಗಿ ಬೆಂಗಳೂರು ಟಾಪ್​ನಲ್ಲೇ ಕಂಟಿನ್ಯೂ ಆಗ್ಬೇಕು ಅಂದ್ರೆ ಮುಂದಿನ ಒಂದೊಂದು ಪಂದ್ಯಗಳೂ ಕ್ರೂಶಿಯಲ್ ಆಗ್ತಾ ಹೋಗುತ್ತೆ. ಪ್ಲೇಆಫ್​ಗೆ ಎಂಟ್ರಿ ಕೊಡ್ತೀವಿ ಅನ್ನೋದಕ್ಕಿಂತ ಟಾಪ್ 2ನಲ್ಲಿ ಇರಲೇಬೇಕು ಅಂತಾ ಗೆಲ್ಲಬೇಕಿದೆ. ಯಾಕಂದ್ರೆ ಲಾಸ್ಟ್ ಸೀಸನ್ ಬೆಂಗಳೂರು ಐಪಿಎಲ್ ಗೆಲ್ಲೋಕೆ ಕಾರಣವೇ ಟಾಪ್ 2ನಲ್ಲಿದ್ದು ಡೈರೆಕ್ಟ್ ಫೈನಲ್​ಗೆ ಎಂಟ್ರಿ ಕೊಟ್ಟಿದ್ದು.

ಆರ್ ಸಿಬಿ ಮುಂದಿನ ಪಂದ್ಯಗಳು!

ದಿನಾಂಕ                         ಎದುರಾಳಿ                          ಮುಖಾಮುಖಿ

ಏಪ್ರಿಲ್ 27                      ಡೆಲ್ಲಿ                                2ನೇ ಮ್ಯಾಚ್

ಏಪ್ರಿಲ್ 30                     ಗುಜರಾತ್                           2ನೇ ಮ್ಯಾಚ್

ಮೇ 7                          ಲಕ್ನೋ                              2ನೇ ಮ್ಯಾಚ್

ಮೇ 10                         ಮುಂಬೈ                            2ನೇ ಮ್ಯಾಚ್

ಮೇ 13                     ಕೊಲ್ಕತ್ತಾ                               1ನೇ ಮ್ಯಾಚ್

ಮೇ 17                     ಪಂಜಾಬ್                              1ನೇ ಮ್ಯಾಚ್

ಮೇ 22                    ಹೈದರಾಬಾದ್                           2ನೇ ಮ್ಯಾಚ್

ಹೀಗೆ ಆರ್​ಸಿಬಿಗೆ ಸೆಕೆಂಡ್​ ಆಫ್​ನಲ್ಲಿ 7 ಪಂದ್ಯಗಳ ಪೈಕಿ 5 ಪಂದ್ಯಗಳು ರಿವೇಂಜ್ ಮ್ಯಾಚ್​ಗಳೇ ಇದೆ. ಕೊಲ್ಕತ್ತಾ ಮತ್ತು ಪಂಜಾಬ್ ವಿರುದ್ಧ ಮಾತ್ರವೇ ಈ ಸೀಸನ್​ನಲ್ಲಿ ಒಂದು ಪಂದ್ಯ ಮಾತ್ರ ಇದೆ. ಆದ್ರೆ ಇಲ್ಲಿ ಎದುರಾಳಿ ಯಾರೇ ಇದ್ರೂ ಆರ್​ಸಿಬಿ ಡಾಮಿನೇಟ್ ಮಾಡಿ ಗೆಲ್ಲೋ ಸಾಮರ್ಥ್ಯ ಇದೆ.

Shantha Kumari