ರಿಟೇನ್ ಟ್ವಿಸ್ಟ್ ಕೊಟ್ಟ RCB – 9 ಹೆಸ್ರು.. ಕೊಹ್ಲಿ ಕ್ಯಾಪ್ಟನ್.. KL ಎಂಟ್ರಿ?
ಫಜಲ್ ಗೇಮ್ ಲೆಕ್ಕಾಚಾರವೇನು?

ರಿಟೇನ್ ಟ್ವಿಸ್ಟ್ ಕೊಟ್ಟ RCB – 9 ಹೆಸ್ರು.. ಕೊಹ್ಲಿ ಕ್ಯಾಪ್ಟನ್.. KL ಎಂಟ್ರಿ?ಫಜಲ್ ಗೇಮ್ ಲೆಕ್ಕಾಚಾರವೇನು?

ಕೌಂಟ್​ಡೌನ್ ಬಿಗಿನ್ಸ್.. 2025ರ ಐಪಿಎಲ್​ ಆರಂಭಕ್ಕೂ ಮುನ್ನ ಯಾವ ಫ್ರಾಂಚೈಸಿ ಯಾವ ಆಟಗಾರರನ್ನ ಉಳಿಸಿಕೊಳ್ಳುತ್ತೆ ಅನ್ನೋದು ಅನೌನ್ಸ್ ಆಗೋದಕ್ಕೆ ಕೆಲವೇ ಕ್ಷಣಗಳಷ್ಟೇ ಬಾಕಿ. ಈಗಾಗ್ಲೇ ಕೆಲ ಫ್ರಾಂಚೈಸಿಗಳು ಹಿಂಟ್ ಕೂಡ ಕೊಟ್ಟಿವೆ. ಅದ್ರಲ್ಲೂ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಜಲ್ ರೀತಿಯಲ್ಲಿ ಆಟಗಾರರ ಹೆಸರುಗಳನ್ನು ಬಿಟ್ಟಿದ್ದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ. ರೀಟೇನ್ ಮತ್ತು ಆರ್​ಟಿಎಂ ಬಳಕೆಗೆ ಇರುವ ಮಿತಿಗಿಂತ ಹೆಚ್ಚಿನ ಹೆಸರುಗಳಿರೋದೇ ಈಗ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ. ಹಾಗಾದ್ರೆ ಬೆಂಗಳೂರು ಫ್ರಾಂಚೈಸಿ ಪ್ಲ್ಯಾನ್ ಏನು? ಎಷ್ಟು ಜನ್ರನ್ನ ಉಳಿಸಿಕೊಳ್ಳುತ್ತೆ? ಫಜಲ್​ನಲ್ಲಿ ಇರೋ ಹೆಸರುಗಳು ಯಾವುವು? ಫೈನಲ್ ಆಗಿ ಉಳ್ಕೊಳ್ಳೋರು ಯಾರು..? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ಗೆ ಖಂಡ್ರೆ ಕಂಟಕ – ನಿಲ್ಲುತ್ತಾ ಯಶ್ ಸಿನಿಮಾ?

2025ರ ಐಪಿಎಲ್​ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದನ್ನ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಇದೀಗ ಆರ್​ಸಿಬಿ ರಿಟೈನ್ ಮಾಡಿಕೊಳ್ಳುವ ಹೆಸರುಗಳನ್ನು ಪಜಲ್ ಅಂದ್ರೆ ಸುಡೋಕು ರೀತಿಯಲ್ಲಿರುವ ಫೋಟೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಇಂಗ್ಲಿಷ್​ನಲ್ಲಿ ಹೆಸರುಗಳನ್ನ ಹುಡುಕುವ ಕೆಲಸ ಕೊಟ್ಟಿದೆ. ಆದ್ರೆ ಫಜಲ್​ನಲ್ಲಿರುವ ಹೆಸರುಗಳೇ ಅಭಿಮಾನಿಗಳ ತಲೆ ಕೆಡಿಸಿವೆ.

ಫಜಲ್ ನಲ್ಲಿವೆ 9 ಹೆಸರು.. ಅಂತಿಮವಾಗಿ ಉಳಿಯೋದ್ಯಾರು?

ಬಿಸಿಸಿಐ ನಿಯಮದ ಪ್ರಕಾರ ಯಾವುದೇ ತಂಡ ಹರಾಜಿಗೂ ಮುನ್ನ 6 ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಬೇಕು. ಆದರೆ ಆರ್​ಸಿಬಿ ಪೋಸ್ಟ್ ಮಾಡಿರುವ ಪಜಲ್​ನಲ್ಲಿ 9 ಪ್ಲೇಯರ್ಸ್​ ಹೆಸರುಗಳಿವೆ. ರಜತ್, ಮ್ಯಾಕ್ಸ್ ವೆಲ್, ಕೊಹ್ಲಿ, ದಯಾಳ್, ಫಾಫ್, ಅನೂಜ್, ಜಾಕ್ಸ್, ಸಿರಾಜ್, ಗ್ರೀನ್ ಹೆಸರುಗಳಿವೆ. ಈ 9 ಆಟಗಾರರ ಪೈಕಿ ಆರ್​ಸಿಬಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳುವ ಆ 6 ಪ್ಲೇಯರ್ಸ್ ಯಾರು ಅನ್ನೋದೇ ಈಗಿರೋ ಪ್ರಶ್ನೆ.  ಮೂಲಗಳ ಪ್ರಕಾರ ಬೆಂಗಳೂರು ಫ್ರಾಂಚೈಸಿ 4 ಪ್ಲೇಯರ್​ಗಳನ್ನ ಮಾತ್ರ ಉಳಿಸಿಕೊಳ್ಳಲಿದೆ ಎನ್ನಲಾಗ್ತಿದೆ. ಇದರಲ್ಲಿ ಮೊದಲನೇ ಆಯ್ಕೆ ಆಗಿ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿಕೊಳ್ಳಲಿದೆ. 2ನೇ ಪ್ಲೇಯರ್ ಆಗಿ ಮೊಹಮ್ಮದ್ ಸಿರಾಜ್ ಅದ್ರೆ 3ನೇ ಆಟಗಾರನಾಗಿ ರಜತ್ ಪಾಟೀದರ್ ಆಗಿದ್ದಾರೆ. ಇವರೆಲ್ಲ ದೇಶಿಯ ಆಟಗಾರರು ಆದರೆ ಫಾರಿನ್ ಪ್ಲೇಯರ್ 4ನೇ ಪ್ಲೇಯರ್​ ಆಗಿ ವಿಲ್ ಜಾಕ್ಸ್ ಅವರನ್ನು ಆರ್​ಸಿಬಿ ತಂಡದಲ್ಲಿ ಉಳಿಸಿಕೊಳ್ಳಬಹುದು.

ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳೋದು ಪಕ್ಕಾ!

ಇನ್ನು ಕನ್ನಡಿಗ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯೋದು ಬಹುತೇಕ ಕನ್ಫರ್ಮ್ ಆಗಿದೆ. ಕ್ಯಾಪ್ಟನ್ಸಿ ಬಿಟ್ಟು ಬರೀ ಆಟಗಾರನಾಗಿ ಮುಂದುವರಿಯೋಕೆ ಒಪ್ಪದ ರಾಹುಲ್ ಆಕ್ಷನ್​ನಲ್ಲಿ ಕಾಣಿಸಿಕೊಳ್ಳೋಕೆ ನಿರ್ಧರಿಸಿದ್ದಾರೆ. ಕರ್ನಾಟಕದ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಮತ್ತೆ ಆರ್ ಸಿಬಿಗೆ ಕರೆತರುವ ಎಲ್ಲಾ ಸಾಧ್ಯತೆಗಳಿವೆ. ಹರಾಜು ಪ್ರಕ್ರಿಯೆಗೂ ಮುನ್ನ ಆರ್ ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸುಳಿವು ನೀಡಿದೆ. ನಿವೃತ್ತರಾಗಿರುವ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಜಾಗಕ್ಕೆ ಕೆಎಲ್ ರಾಹುಲ್ ಅವರನ್ನು ಕರೆತರುವ ಚಿಂತನೆ ಫ್ರಾಂಚೈಸಿಗಿದೆ. ಮತ್ತೊಂದೆಡೆ  ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮತ್ತು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಕೂಡ ಹರಾಜಿಗೆ ಬರುವ ಸಾಧ್ಯತೆಗಳಿವೆ.  ಹೀಗಾಗಿ ಈ ಬಾರಿ ಘಟಾನುಘಟಿ ಆಟಗಾರರೇ ಹರಾಜಿಗೆ ಬರಲಿದ್ದು, ಕೋಟಿಗಳ ಲೆಕ್ಕದಲ್ಲಿ ಬಿಡ್ ಆಗೋದಂತೂ ಪಕ್ಕಾ.

ವಿರಾಟ್ ಕೊಹ್ಲಿಗೇ ಮತ್ತೆ ಬೆಂಗಳೂರು ಕ್ಯಾಪ್ಟನ್ಸಿ?

2024ರ ಐಪಿಎಲ್​ನಲ್ಲೀ ಬೆಂಗಳೂರು ತಂಡದ ಅಭಿಮಾನಿಗಳು ಬೇಡಿಕೆ ಒಂದೇ ಆಗಿತ್ತು. ಅದುವೇ ಕಿಂಗ್ ವಿರಾಟ್ ಕೊಹ್ಲಿಯವ್ರನ್ನ ಮತ್ತೆ ಆರ್​ಸಿಬಿಯ ಕ್ಯಾಪ್ಟನ್ ಮಾಡೋದು. ಇದೀಗ ಮತ್ತೆ ಕಿಂಗ್ ಕೊಹ್ಲಿ ನಾಯಕತ್ವ ವಹಿಸಿಕೊಳ್ಳೋ ಸಾಧ್ಯತೆ ದಟ್ಟವಾಗಿದೆ. ರಿಟೆನ್ಶನ್ ಗಡುವು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಆರ್ ಸಿಬಿ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದು ವಿರಾಟ್ ಕೊಹ್ಲಿ ಅವರು ಸಹ ಒಪ್ಪಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆರ್ ಸಿಬಿಯಿಂದಲೇ ಐಪಿಎಲ್ ವೃತ್ತಿ ಜೀವನ ಆರಂಭಿಸಿದ ವಿರಾಟ್ ಕೊಹ್ಲಿ ಅವರು 2013ರಿಂದ 2021ರವರೆಗೆ ಸುದೀರ್ಘ ಕಾಲ ತಂಡದ ನಾಯಕತ್ವ ವಹಿಸಿದ್ದರು. 2016ರಲ್ಲಿ ಪ್ರಶಸ್ತಿ ಹಂತಕ್ಕೆ ತಲುಪಿದ್ದರೂ ಗೆಲ್ಲುವಲ್ಲಿ ತಂಡ ಎಡವಿತ್ತು. ಈವರೆಗೂ ಆರ್ ಸಿಬಿ ಪ್ರಶಸ್ತಿ ಮೇಲೆ ಕೈ ಇಟ್ಟಿಲ್ಲ. ಇದೀಗ ಮುಂದಿನ ಐಪಿಎಲ್​ಗೆ ಕೊಹ್ಲಿ ನಾಯಕತ್ವದಲ್ಲೇ ಚಾಂಪಿಯನ್ ಪಟ್ಟಕ್ಕೇರಬೇಕು ಅನ್ನೋದು ಮಾಲೀಕರ ಲೆಕ್ಕಾಚಾರ.

2025ರ ಐಪಿಎಲ್​ನಲ್ಲಿ ಟ್ರೋಫಿ ಮೇಲೆ ಕಣ್ಣಿಟ್ಟಿರೋ 10 ಫ್ರಾಂಚೈಸಿಗಳಲ್ಲೂ ಈ ಸಲ ದೊಡ್ಡ ದೊಡ್ಡ ಬದಲಾವಣೆಗಳೇ ನಡೆಯೋದು ಪಕ್ಕಾ. 17 ಸೀಸನ್​ಗಳ ಪೈಕಿ 3 ಬಾರಿ ಫೈನಲಿಸ್ಟ್ ಆಗಿ ಪ್ರಶಸ್ತಿಯಿಂದ ವಂಚಿತವಾಗಿರುವ​ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಲೇಬೇಕೆಂಬ ಪಟ್ಟು ಹಿಡಿದಿದ್ದು, ಬಲಿಷ್ಠ ತಂಡವನ್ನು ರಚಿಸಲು ಯೋಜನೆ ರೂಪಿಸಿದೆ. ಆರ್​ಸಿಬಿ ರಿಟೆನ್ಶನ್ ಪಟ್ಟಿಯನ್ನು ಸಲ್ಲಿಸುವುದಕ್ಕೂ ಮುನ್ನವೇ ಫ್ರಾಂಚೈಸಿ ಸಾಮಾಜಿಕ ಜಾಲತಾಣವಾದಲ್ಲಿ ಹಾಕಿರುದ ಇದೇ ಪೋಸ್ಟ್ ಬಾರೀ ಕುತೂಹಲ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *