RCB ಹೀರೋ ಟಿಮ್ ಡೇವಿಡ್‌ಗೆ ನಿಷೇಧ- ವಿಚಾರಣೆ ಬಳಿಕ ಶಿಕ್ಷೆ ನೀಡಿದ ಬಿಸಿಸಿಐ

RCB ಹೀರೋ ಟಿಮ್ ಡೇವಿಡ್‌ಗೆ ನಿಷೇಧ- ವಿಚಾರಣೆ ಬಳಿಕ ಶಿಕ್ಷೆ ನೀಡಿದ ಬಿಸಿಸಿಐ

ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಬರ್ತಾ ಬರ್ತಾ ಅಶಿಸ್ತಿನ ವರ್ತನೆ ಜಾಸ್ತಿ ಮಾಡುತ್ತಿದ್ದಾರೆ. ಒಂದು ಸಲ  ವಾರ್ನಿಂಗ್ ಕೊಟ್ಟು ಸುಮ್ಮನಿದ್ದ ಬಿಸಿಸಿಐ ಕೊನೆಗೂ ಶಿಕ್ಷೆಯ ಬರೆ ಎಳೆದಿದೆ.

ಇದನ್ನೂ ಓದಿ:ಬೇಟೆಗಾರರಲ್ಲ ರಣಬೇಟೆಗಾರರು – TEAM GAME ಮಂತ್ರ ಸಕ್ಸಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಸಂಭ್ರಮದ ಬೆನ್ನಲ್ಲೇ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ನಿಷೇಧದ ಶಿಕ್ಷೆಗೊಳಗಾಗಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದ ವೇಳೆ ಅಂಪೈರ್ ನಿತಿನ್ ಮೆನನ್ ಅವರ ಕಡೆಗೆ ಆಕ್ರಮಣಕಾರಿಯಾಗಿ ಐಸ್ ಬ್ಯಾಗ್ ಎಸೆದಿದ್ದಕ್ಕಾಗಿ ಟಿಮ್ ಡೇವಿಡ್ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿದೆ. ಈ ಕಠಿಣ ನಿರ್ಧಾರದ ನಂತರ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಐಪಿಎಲ್ 2027 ರ ಮೊದಲ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲು ಸಾಧ್ಯವಾಗುವುದಿಲ್ಲ.

ಟಿಮ್ ಡೇವಿಡ್ ಲೆವೆಲ್ 1 ಅಪರಾಧದಲ್ಲಿ ತಪ್ಪಿತಸ್ಥನೆಂದು ಕಂಡುಬಂದಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಸೋಮವಾರ ಅಧಿಕೃತವಾಗಿ ತಿಳಿಸಿದೆ. ಶಿಕ್ಷೆಯಾಗಿ, ಅವರ ಪಂದ್ಯ ಶುಲ್ಕದ 50 ಪ್ರತಿಶತ ದಂಡ ವಿಧಿಸಲಾಗಿದೆ ಮತ್ತು ಅವರ ಖಾತೆಗೆ ಎರಡು ಡಿಮೆರಿಟ್ ಅಂಕಗಳನ್ನು ಸೇರಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿದ್ದಕ್ಕಾಗಿ ಡೇವಿಡ್ ತಪ್ಪಿತಸ್ಥನೆಂದು ಕಂಡುಬಂದಿದೆ. ಈ ನಿಯಮವು ಯಾವುದೇ ಆಟಗಾರನು ಪಂದ್ಯದ ಸಮಯದಲ್ಲಿ ತಂಡದ ಅಧಿಕಾರಿ, ಅಂಪೈರ್ ಅಥವಾ ಮ್ಯಾಚ್ ರೆಫರಿಯ ಕಡೆಗೆ ಕೋಪದಿಂದ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಅಥವಾ ಯಾವುದೇ ಕ್ರಿಕೆಟ್ ವಸ್ತುವನ್ನು ಎಸೆಯುವುದನ್ನು ನಿಷೇಧಿಸುತ್ತದೆ. ಮೊದಲ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ಗುಜರಾತ್ ಟೈಟನ್ಸ್ ವಿಕೆಟ್ ಕಳೆದುಕೊಂಡಾಗ ಈ ವಿವಾದಾತ್ಮಕ ಘಟನೆ ಸಂಭವಿಸಿತು. ವಿಕೆಟ್‌ನ ಉತ್ಸಾಹದ ನಡುವೆ, ಡಗೌಟ್‌ನಲ್ಲಿ ಕುಳಿತಿದ್ದ ಟಿಮ್ ಡೇವಿಡ್ ತನ್ನ ತಾಳ್ಮೆ ಕಳೆದುಕೊಂಡು ಇದ್ದಕ್ಕಿದ್ದಂತೆ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಬ್ಯಾಗ್ ಎಸೆದರು. ಪಂದ್ಯದ ನಂತರ ಈ ವಿಷಯವನ್ನು ಕೇಳಿದಾಗ, ಡೇವಿಡ್ ತನ್ನ ತಪ್ಪನ್ನು ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್‌ ಬಳಿ ಒಪ್ಪಿಕೊಂಡರು ಮತ್ತು ಆಕ್ಷೇಪಣೆಯಿಲ್ಲದೆ ತಮ್ಮ ಮೇಲಿನ ಶಿಕ್ಷೆಯನ್ನು ಟಿಮ್ ಡೇವಿಡ್ ಒಪ್ಪಿಕೊಂಡಿದ್ದಾರೆ.

Sulekha

Leave a Reply

Your email address will not be published. Required fields are marked *