10 ಪಂದ್ಯ.. 7 ಸೋಲು.. 3 ಜಯ – RCB ಪ್ಲೇ ಆಫ್ ಚಾನ್ಸ್ ಇನ್ನೂ ಇದ್ಯಾ?
ಕೊಹ್ಲಿ-ಜಾಕ್ಸ್ ಮೋಡಿ ಮಾಡ್ತಾರಾ?

10 ಪಂದ್ಯ.. 7 ಸೋಲು.. 3 ಜಯ – RCB ಪ್ಲೇ ಆಫ್ ಚಾನ್ಸ್ ಇನ್ನೂ ಇದ್ಯಾ?ಕೊಹ್ಲಿ-ಜಾಕ್ಸ್ ಮೋಡಿ ಮಾಡ್ತಾರಾ?

ಆರ್​ಸಿಬಿ ಮ್ಯಾಚ್ ಇದೆ ಅಂದ್ರೇನೆ ಫ್ಯಾನ್ಸ್​ಗೆ ಹಬ್ಬ. ಅದ್ರಲ್ಲೂ ಒಂದೆರಡು ಮ್ಯಾಚ್​ ಭರ್ಜರಿಯಾಗಿ ಗೆದ್ರು ಅಂದ್ರೆ ಮುಗೀತು. ಸೋಶಿಯಲ್ ಮೀಡಿಯಾಗಳಲ್ಲಿ ಜೈ ಆರ್​ಸಿಬಿ ಅಂತಾ ಧೂಳೆಬ್ಬಿಸಿ ಬಿಡ್ತಾರೆ. ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್​ಸಿಬಿ ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಕಂಡಿದೆ. ಈ ಎರಡು ಮ್ಯಾಚ್​ಗಳೇ ಆರ್​ಸಿಬಿ ಅಭಿಮಾನಿಗಳಿಗೆ ಈಗ ಹೊಸ ಕನಸು ಮೂಡಿಸಿವೆ. ಅದೇ ಪ್ಲೇ ಆಫ್ ಚಾನ್ಸ್. ಹಾಗಾದ್ರೆ ಆರ್​ಸಿಬಿ ಪ್ಲೇಆಫ್​ಗೆ ಹೋಗುತ್ತಾ..? ಅಭಿಮಾನಿಗಳ ಕ್ಯಾಲ್ಕುಲೇಷನ್ ಏನು? ಇಂಥಾದ್ದೊಂದು ನಿರೀಕ್ಷೆ ಹೆಚ್ಚಾಗೋಕೆ ಕಾರಣ ಏನು ಅನ್ನೊ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತವರಿನಲ್ಲೇ ಸಿಎಸ್‌ಕೆಗೆ ಹೀನಾಯ ಸೋಲು – 7 ವಿಕೆಟ್‌ಗಳಿಂದ ಗೆದ್ದು ಬೀಗಿದ ಪಂಜಾಬ್‌

ಆಲ್ರೆಡಿ ಐಪಿಎಲ್​ನಲ್ಲಿ ಅರ್ಧಕ್ಕಿಂತ ಹೆಚ್ಚು ಪಂದ್ಯಗಳು ಮುಗಿದು ಹೋಗಿವೆ. ಈ ಬಾರಿಯ ಟೂರ್ನಿಯಲ್ಲಿ ಆರ್​ಸಿಬಿ ಕಳಪೆ ಪ್ರದರ್ಶನದ ಮೂಲಕ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೇ ಸ್ಥಾನದಲ್ಲಿದೆ. ಪ್ಲೇಆಫ್​ ದಾರಿ ಕೂಡ ಬಹುತೇಕ ಮುಚ್ಚಿದೆ. ಹೀಗಿದ್ರೂ ಆರ್​ಸಿಬಿ ಫ್ಯಾನ್ಸ್ ಮಾತ್ರ ನಾವು ಪ್ಲೇಆಫ್​ಗೆ ಹೋಗೇ ಹೋಗ್ತೇವೆ ಅಂತಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ರಣರೋಚಕ ಗೆಲುವು ಸಾಧಿಸಿದೆ. ಇದೇ ಗೆಲುವು ಪ್ಲೇಆಫ್ ಹಾದಿಯನ್ನ ಇನ್ನೂ ಕೂಡ ಜೀವಂತವಾಗಿರಿಸಿದೆ. ಅಷ್ಟಕ್ಕೂ ಏಕಾಂಗಿಯಾಗಿದ್ದ ಕೊಹ್ಲಿಗೆ ಜೊತೆಗಾರನಾಗಿ ವಿಲ್​ ಜಾಕ್ಸ್​ ಸಿಕ್ಕಿರೋದೆ ಈ ಆತ್ಮವಿಶ್ವಾಸದ ಹಿಂದಿನ ಸೀಕ್ರೆಟ್​​.

ಪ್ಲೇ ಆಫ್ ಗೆ RCB?

ಐಪಿಎಲ್​​ ಸೀಸನ್​ 17ರಲ್ಲಿ ಸೋಲಿನ ಪ್ರಪಾತಕ್ಕೆ ಬಿದ್ದಿದ್ದ ಆರ್​​ಸಿಬಿ ಕಳೆದ ಎರಡು ಪಂದ್ಯಗಳಲ್ಲಿ ಸಿಡಿದೆದ್ದು ನಿಂತಿದೆ. ಆಟಗಾರರ ಕಳಪೆ ಆಟವನ್ನ ನೋಡಿ ಇದು ಹೊಸ ಅಧ್ಯಾಯ ಅಲ್ಲ, ಇದು ಅಂತಿಮ ಅಧ್ಯಾಯ ಅಂತಿದ್ದ ಫ್ಯಾನ್ಸ್ ಇದೀಗ ಆರ್​​ಸಿಬಿ ಕಮ್​ಬ್ಯಾಕ್​ ಕಂಡು ಫುಲ್ ಹ್ಯಾಪಿಯಾಗಿದ್ದಾರೆ. ಹೊಸ ಹುರುಪಿನೊಂದಿಗೆ ಆರ್​​ಸಿಬಿಗೆ ಜೈ ಅಂತಿದ್ದಾರೆ. ಜೊತೆಗೆ ಕಾಲ್ಕ್ಯುಲೇಟರ್​ ಹಿಡಿದು ಪ್ಲೇ ಆಫ್ ಲೆಕ್ಕಾಚಾರ ಹಾಕೋಕು ಶುರುವಿಟ್ಟುಕೊಂಡಿದ್ದಾರೆ. ಸನ್​ರೈಸರ್ಸ್​ ಹೈದ್ರಾಬಾದ್​, ಗುಜರಾತ್​​ ಟೈಟನ್ಸ್​ ಎದುರು ಜಯಭೇರಿ ಬಾರಿಸಿದ ಬೆನ್ನಲ್ಲೇ ಆರ್​​ಸಿಬಿ ಪಾಳಯದಲ್ಲಿ ಪ್ಲೇ ಆಫ್​ನ ಕನಸು ಚಿಗುರೊಡೆದಿದೆ. ಉಳಿದ ಎಲ್ಲಾ ಪಂದ್ಯಗಳನ್ನ ಜಯಿಸಿದ್ರೆ, ಆರ್​​ಸಿಬಿಗೆ ಪ್ಲೇ ಆಫ್​ಎಂಟ್ರಿಗೆ ಒಂದು ಅವಕಾಶ ಇನ್ನೂ ಇದೆ. ಆದ್ರೆ ಸಾಮಾನ್ಯ ಗೆಲುವು ಸಾಕಾಗಲ್ಲ. ಭಾರೀ ಅಂತರದ ಗೆಲುವು ಅತ್ಯಗತ್ಯ. ಆಡಿದ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯ ಗೆದ್ದಿರುವ ಆರ್​​ಸಿಬಿ ಸದ್ಯ 6 ಪಾಯಿಂಟ್​​ಗಳನ್ನ ಹೊಂದಿದೆ. ಮುಂದಿನ 4 ಪಂದ್ಯಗಳನ್ನ ಗೆದ್ದರೆ 14 ಅಂಕಗಳನ್ನು ಕಲೆ ಹಾಕಲಿದೆ. ಭಾರೀ ಅಂತರದಲ್ಲಿ ಜಯಭೇರಿ ಭಾರಿಸಿದ್ರೆ, ರನ್​​ರೇಟ್​ ಕೂಡ ಹೆಚ್ಚಲಿದೆ. ಆಗ ಮಾತ್ರ ಪ್ಲೇಆಫ್​ಗೆ ಹೋಗೋ ಚಾನ್ಸ್ ಇರಲಿದೆ. )

ಇಲ್ಲಿ ಆರ್​ಸಿಬಿ ಗೆಲ್ಲೋದಷ್ಟೇ ಇಂಪಾರ್ಟೆಂಟ್ ಇಲ್ಲ. ಉಳಿದ ತಂಡಗಳ ಸೋಲು-ಗೆಲುವು ಕೂಡ ಆರ್​​ಸಿಬಿಯ ಪ್ಲೇ ಆಫ್​ ಹಣೆಬರಹವನ್ನು ನಿರ್ಧರಿಸಲಿದೆ. ಎಲ್ಲಾ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಅದೃಷ್ಟದ ಅವಕಾಶಕ್ಕಾಗಿ ಕಾಯೋದಷ್ಟೇ ಆರ್​​ಸಿಬಿ ಮುಂದಿರೋ ಆಯ್ಕೆಯಾಗಿದೆ. ಪ್ಲೇಆಫ್​ನಿಂದ ಆಲ್​ಮೋಸ್ಟ್ ಔಟ್ ಆಗಿದ್ರೂ ಅಭಿಮಾನಿಗಳು ಇಂಥಾದ್ದೊಂದು ಆಸೆ ಇಟ್ಟುಕೊಳ್ಳೋಕೆ ಕಾರಣ ಕೊಹ್ಲಿ ಮತ್ತು ವಿಲ್ ಜಾಕ್ಸ್ ಜೋಡಿ.

ಎರಡು ಗೆಲುವಿನ ಕನಸು!

ಗುಜರಾತ್ ಟೈಟನ್ಸ್​​ ಎದುರಿನ ಗೆಲುವಿನ ಬೆನ್ನಲ್ಲೇ ಅಭಿಮಾನಿಗಳ ವಲಯದಲ್ಲಿ ಆರ್​​ಸಿಬಿ ಉಳಿದ ಪಂದ್ಯಗಳನ್ನ ಗೆದ್ದೇ ಗೆಲ್ಲುತ್ತೆ ಅನ್ನೋ ಅಪಾರ ನಿರೀಕ್ಷೆ ಹುಟ್ಟಿದೆ. ಈ ನಿರೀಕ್ಷೆ ಹುಟ್ಟು ಹಾಕಿರೋದು ಕಿಂಗ್​ ಕೊಹ್ಲಿ ಹಾಗೂ ವಿಲ್​ ಜಾಕ್ಸ್​ ಜೋಡಿ. ಈ ಸೀಸನ್​ನ ಫಸ್ಟ್​ ಹಾಫ್​ನಲ್ಲಿ ವಿರಾಟ್​ ಕೊಹ್ಲಿ ಏಕಾಂಗಿಯಾಗಿದ್ರು. ವಿರಾಟ್​ ಹೊರತುಪಡಿಸಿದ್ರೆ ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳು ಇನ್​ಕನ್ಸಿಸ್ಟೆಂಟ್​​ ಪರ್ಫಾಮೆನ್ಸ್​​ ನೀಡಿದ್ರು. ವಿರಾಟ್​ ಕೊಹ್ಲಿಯೊಬ್ಬರೇ ಏಕಾಂಗಿಯಾಗಿ ತಂಡದ ಬ್ಯಾಟಿಂಗ್​ನ ಜವಾಬ್ದಾರಿ ಹೊತ್ತಿದ್ರು. ಇದೀಗ ಸೆಕೆಂಡ್​ ಹಾಫ್​ನಲ್ಲಿ ವಿಲ್​ ಜಾಕ್ಸ್​ ಕೊಹ್ಲಿಗೆ ಸಾಥ್​​ ಕೊಡೋ ಸೂಚನೆ ಕೊಟ್ಟಿದ್ದಾರೆ. ಗುಜರಾತ್​ ವಿರುದ್ಧ ವಿಲ್​ ಜಾಕ್ಸ್ ಶತಕ ಸಿಡಿಸಿದ ರೀತಿ, ಅಭಿಮಾನಿಗಳಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ. ಈ ಹಿಂದಿನ ಸೀಸನ್​ಗಳಲ್ಲಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿ, ವಿರಾಟ್​ ಕೊಹ್ಲಿ ಜೋಡೆತ್ತುಗಳಂತೆ ತಂಡದ ಬ್ಯಾಟಿಂಗ್​ಗೆ ಬಲ ತುಂಬಿದ್ರು. ಆದ್ರೆ, ಈ ಸೀಸನ್​ನಲ್ಲಿ ಫಾಫ್​ ಡುಪ್ಲೆಸಿ ರನ್​ಗಳಿಕೆಗೆ ಪರದಾಡ್ತಿದ್ದಾರೆ. ಹೀಗಾಗಿ ಕೊಹ್ಲಿ ಏಕಾಂಗಿಯಾಗಿದ್ರು. ಇದೀಗ ವಿಲ್​ ಜಾಕ್ಸ್​ ಕೊಹ್ಲಿ ಜೊತೆಗೆ ಒಳ್ಳೆ ಪಾರ್ಟನರ್ ​ಶಿಪ್​ ಕಟ್ಟಿದ್ದಾರೆ. ಇದೇ ಕಾರಣಕ್ಕೆ ಮುಂದಿನ ಪಂದ್ಯಗಳಲ್ಲೂ ಅತ್ಯಮೋಘ ರೀತಿಯಲ್ಲಿ ಆರ್​ಸಿಬಿ ಗೆಲ್ಲುತ್ತೆ. ಪ್ಲೇಆಫ್​ಗೆ ಹೋಗುತ್ತೆ ಅನ್ನೋ ಕಾನ್ಫಿಡೆನ್ಸ್ ನಲ್ಲಿದ್ದಾರೆ.

ಒಟ್ಟಾರೆ ಗುಜರಾತ್ ತಂಡದ​​ ಎದುರು 74 ಎಸೆತಗಳಲ್ಲಿ 166 ರನ್​ ಸಿಡಿಸಿದ ಕೊಹ್ಲಿ ಮತ್ತು ಜಾಕ್ಸ್ ಜೋಡಿ ಆರ್​​​ಸಿಬಿ ಕ್ಯಾಂಪ್​ನಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ. ವಿರಾಟ್​ ಕೊಹ್ಲಿ  ವಿಲ್​ ಜಾಕ್ಸ್​ ಆಟ ಅಭಿಮಾನಿಗಳ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಜೊತೆಗೆ ಪ್ಲೇಆಫ್ ಆಸೆಯನ್ನ ಹುಟ್ಟು ಹಾಕಿದೆ. ಆದ್ರೆ ಆರ್​ಸಿಬಿ ಗೆದ್ರೆ ಮಾತ್ರ ಸಾಕಾಗೋದಿಲ್ಲ. ಬೇರೆ ಟೀಂಗಳ ಸೋಲು, ಗೆಲುವು ಕೂಡ ಡಿಪೆಂಡ್ ಆಗುತ್ತೆ ಅನ್ನೋದನ್ನ ಮರೆಯುವಂತಿಲ್ಲ.

Shwetha M

Leave a Reply

Your email address will not be published. Required fields are marked *