RCBಯಲ್ಲಿ 3+19 = 22 ಸೂತ್ರ – ಕನ್ನಡಿಗರು ಬೆಂಚ್ ಗೋ.. ಮೈದಾನಕ್ಕೋ?
ಬೆಸ್ಟ್ ಫಾರಿನ್ ಪ್ಲೇಯರ್ ಯಾರು?

ಫೈನಲಿ 2025ರ ಐಪಿಎಲ್ ಹಬ್ಬಕ್ಕೆ 10 ಫ್ರಾಂಚೈಸಿಗಳು ಟೀಂಗಳನ್ನ ಸೆಟ್ ಮಾಡಿಕೊಂಡಿದೆ. 18ನೇ ಸೀಸನ್ಗಾದ್ರೂ ಕಪ್ ಗೆಲ್ಲೇಬೇಕು ಅಂತಾ ಪಣ ತೊಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19 ಆಟಗಾರರನ್ನ ಖರೀದಿ ಮಾಡಿದೆ. ರಿಟೇನ್ ಮಾಡಿಕೊಂಡಿದ್ದ ಮೂವರು ಸೇರಿ ಸೋ ಟೋಟಲ್ 22 ಪ್ಲೇಯರ್ಸ್ ಆಗಿದ್ದಾರೆ. ಹಾಗಾದ್ರೆ ಬೆಂಗಳೂರು ತಂಡ ಸೇರಿದ ಆಟಗಾರರು ಯಾರ್ಯಾರು? ಯಾವೆಲ್ಲಾ ವಿದೇಶಿ ಪ್ಲೇಯರ್ಸ್ ಮೇಲೆ ಬಿಡ್ ಮಾಡಿದೆ? ಸ್ಟ್ರಾಗೆಂಸ್ಟ್ ಪ್ಲೇಯರ್ಸ್ ಯಾರು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಗುವೇ ಜಯಂತ್ ಗೆ ಮೂರನೇ ವ್ಯಕ್ತಿ – ಅಬ್ಬಬ್ಬಾ.. ಈತ ಮನುಷ್ಯನಾ ರಾಕ್ಷಸನಾ?
ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಳೆದು ತೂಗಿ ಒಂದಷ್ಟು ಸ್ಟಾರ್ ಪ್ಲೇಯರ್ಸ್ ನ ಕೈ ಬಿಟ್ಟು ಟೀಂ ಫಾರ್ಮ್ ಮಾಡಿದೆ. ಸೋ ಟೋಟಲ್ಲಾಗಿ ಈಗ ಬೆಂಗಳೂರು ತಂಡದಲ್ಲಿ 22 ಪ್ಲೇಯರ್ಸ್ ಇದ್ದಾರೆ.
ರಿಟೇನ್ ಮೂಲಕ ಮೂವರನ್ನ ಉಳಿಸಿಕೊಂಡಿದ್ದ ಬೆಂಗಳೂರು ಫ್ರಾಂಚೈಸಿ!
ಹರಾಜಿಗೂ ಮುನ್ನ ಕಿಂಗ್ ವಿರಾಟ್ ಕೊಹ್ಲಿ, ರಜತ್ ಪಟೀದಾರ್ ಹಾಗೇ ಯಶ್ ದಯಾಳ್ರನ್ನ ರಿಟೇನ್ ಮಾಡಿಕೊಂಡಿತ್ತು. ಸೋ 83 ಕೋಟಿ ರೂಪಾಯಿ ಬ್ಯಾಲೆನ್ಸ್ನೊಂದಿಗೆ ಆಕ್ಷನ್ ಅಖಾಡಕ್ಕೆ ಧುಮುಕಿದ್ರು. ಇದೀಗ 19 ಆಟಗಾರರನ್ನು ಖರೀದಿಸಿದೆ. ಈ 19 ಆಟಗಾರರಲ್ಲಿ 8 ವಿದೇಶಿ ಆಟಗಾರರಿದ್ದಾರೆ. ಸೋ ಫೈನಲಿ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕೊಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ ಇದ್ದಾರೆ.
8 ವಿದೇಶಿ ಪ್ಲೇಯರ್ ಗಳನ್ನ ಖರೀದಿ ಮಾಡಿದ ಆರ್ ಸಿಬಿ!
ಬೆಂಗಳೂರು ತಂಡದ ಮಾಲೀಕರು ಹರಾಜಿನಲ್ಲಿ 8 ಜನ ಫಾರಿನ್ ಪ್ಲೇಯರ್ಸ್ ನ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಅದ್ರಲ್ಲಿ ನಂಬರ್ 1 ಫಿಲ್ ಸಾಲ್ಟ್. ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಇಂಗ್ಲೆಂಡ್ನ ಸ್ಪೋಟಕ ದಾಂಡಿಗ ಫಿಲ್ ಸಾಲ್ಟ್ ರನ್ನು ಈ ಬಾರಿ ಆರ್‌ಸಿಬಿ 11.50 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಸಾಲ್ಟ್ ಓಪನರ್ ಮತ್ತು ವಿಕೆಟ್ ಕೀಪರ್ ಆಗಿ ಆಡಬಲ್ಲರು. ಹಾಗೇ ಮತ್ತೊಬ್ಬ ಪ್ಲೇಯರ್ ಇಂಗ್ಲೆಂಡ್ ತಂಡದ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ಲಿವಿಂಗ್ಸ್ಟೋನ್ ಅವರನ್ನು 8.75 ಕೋಟಿ ರೂ. ನೀಡಿ ಖರೀದಿಸಿದೆ. 2023 ರ ಐಪಿಎಲ್ ನಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಜೋಶ್ ಹ್ಯಾಝಲ್ವುಡ್ ಕಳೆದ ಸೀಸನ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಐಪಿಎಲ್ಗೆ ಮರಳಿರುವ ಆಸ್ಟ್ರೇಲಿಯಾ ವೇಗಿಯನ್ನು ಆರ್‌ಸಿಬಿ 12.50 ಕೋಟಿ ರೂ. ನೀಡಿ ಜಾಯ್ನ್ ಮಾಡಿಸಿಕೊಮಡಿದೆ. ಹಾಗೇ ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾದ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್ ಗೆ ಆರ್‌ಸಿಬಿ ಫ್ರಾಂಚೈಸಿಯು 3 ಕೋಟಿ ರೂಪಾಯಿ ನೀಡಿದೆ. ವೆಸ್ಟ್ ಇಂಡೀಸ್ನ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಈ ಬಾರಿಯ ಮೆಗಾ ಹರಾಜಿನಲ್ಲಿ 1.5 ಕೋಟಿ ರೂಪಾಯಿ ಬೆಂಗಳೂರು ಸೇರಿದ್ದಾರೆ. ಇಂಗ್ಲೆಂಡ್ನ ಯುವ ಆಲ್ರೌಂಡರ್ ಜೇಕೊಬ್ ಬೆಥೆಲ್ ಗೆ ಬೆಂಗಳೂರು ಫ್ರಾಂಚೈಸಿ 2.6 ಕೋಟಿ ರೂಪಾಯಿ ನಿಡಿದೆ. ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಈ ಬಾರಿ ಆರ್‌ಸಿಬಿ ಫ್ರಾಂಚೈಸಿ ನುವಾನ್ ಅವರನ್ನು 1.6 ಕೋಟಿ ರೂ. ನೀಡಿ ಖರೀದಿಸಿದೆ. ಸೌತ್ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್ಗಿಡಿರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 1 ಕೋಟಿ ರೂಪಾಯಿ ನೀಡಿ ಸೇರಿಸಿಕೊಂಡಿದೆ.
ಜಿತೇಶ್ ಶರ್ಮಾಗೆ 11 ಕೋಟಿ ನೀಡಿದ್ದು ದುಬಾರಿಯಾಯ್ತಾ?
ಆರ್‌ಸಿಬಿ ಖರೀದಿ ಮಾಡಿದ ಆಟಗಾರದಲ್ಲಿ ತುಂಬಾ ಎಕ್ಸ್ಪೆನ್ಸಿವ್ ಅನ್ಸಿದ ಪ್ಲೇಯರ್ ಅಂದ್ರೆ ಅದು ಜಿತೇಶ್ ಶರ್ಮಾ. ಕಳೆದ ಸೀಸನ್ನಲ್ಲಿ ಪಂಜಾಬ್ ಪರ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ದ ಯಂಗ್ ಸ್ಟರ್ ಖರೀದಿಗೆ ಚೆನ್ನೈ, ಲಕ್ನೋ ತಂಡಗಳು ಪೈಪೋಟಿಗೆ ಬಿದ್ದಿದ್ವು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಿಡ್ಡಿಂಗ್ ವಾರ್ಗೆ ಬಂದು ಹೋಯ್ತು. ಅಂತಿಮವಾಗಿ ಕಹಾನಿ ಮೆ ಟ್ವಿಸ್ಟ್ ಎಂಬಂತೆ ಪಂಜಾಬ್ ಆರ್ಟಿಎಮ್ ದಾಳ ಉರುಳಿಸಿತು. ಅಂತಿಮವಾಗಿ 11 ಕೋಟಿ ಫೈನಲ್ ಬಿಡ್ ಮಾಡಿ ಜಿತೇಶ್ ಶರ್ಮಾನ ಆರ್‌ಸಿಬಿ ಖರೀದಿಸಿದೆ.
ಕೊನೆಗೂ ಕನ್ನಡಿಗ ದೇವದತ್ ಪಡಿಕ್ಕಲ್ ಖರೀದಿಸಿದ ಆರ್ ಸಿಬಿ!
2025ರ ಐಫಿಎಲ್ನಲ್ಲಿ ಆರ್ ಸಿಬಿ ಕನ್ನಡಿಗ ಕೆಎಲ್ ರಾಹುಲ್ ರನ್ನ ಖರೀದಿ ಮಾಡುತ್ತೆ ಅಂತಾನೇ ಫ್ಯಾನ್ಸ್ ಅನ್ಕೊಂಡಿದ್ರು. ಬಟ್ ಫೈನಲ್ ಆಗಿ ಕೆಎಲ್ ರಾಹುಲ್ ಸೇರಿದಂತೆ ಪ್ರಮುಖರನ್ನು ಕೈಬಿಟ್ಟರೂ ಬ್ಯಾಲೆನ್ಸ್ಡ್ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಐಪಿಎಲ್ 2025 ಮೆಗಾ ಹರಾಜು ಎರಡನೇ ದಿನದ ಕೊನೆಯ ಘಟ್ಟದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಆರ್‌ಸಿಬಿ ಖರೀದಿಸಿದೆ. ಮೂಲ ಬೆಲೆ 2 ಕೋಟಿಗೆ ಅವರನ್ನು ಮತ್ತೊಮ್ಮೆ ತಂಡಕ್ಕೆ ಸೇರಿಸಿಕೊಂಡಿದೆ. ಕನ್ನಡಿಗರನ್ನ ಖರೀದಿಸಿಲ್ಲ ಎನ್ನುವ ಆರೋಪದ ಮಧ್ಯೆ ಮನೋಜ್ ಭಾಂಡಗೆ ಬಳಿಕ ಪಡಿಕ್ಕಲ್ಗೆ ಮಣೆ ಹಾಕಲಾಗಿದೆ. ಮನೋಜ್ 30 ಲಕ್ಷಕ್ಕೆ ಆರ್‌ಸಿಬಿ ಸೇರಿದ್ದಾರೆ. ಈಗಾಗಲೇ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದ ಎಡಗೈ ಬ್ಯಾಟರ್ ಪಡಿಕ್ಕಲ್, ಮೊದಲ ಬಾರಿಗೆ ಹರಾಜಿಗೆ ಬಂದಾಗ ಅನ್ ಸೋಲ್ಡ್ ಆಗಿದ್ದರು. 2ನೇ ಬಾರಿಗೆ ಹರಾಜಿಗೆ ಬಂದಾಗ ಆರ್‌ಸಿಬಿ ಖರೀದಿಸಿದೆ. ಒಟ್ನಲ್ಲಿ 2025ರ ಐಪಿಎಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ರೆಡಿಯಾಗಿದೆ.