RCB ಫಾರಿನ್ ಪ್ಲೇಯರ್ಸ್ OUT – ಮ್ಯಾಕ್ಸಿ, ಅಲ್ಜಾರಿ, ಲಾಕಿಗೆ ಗೇಟ್ ಪಾಸ್
ಹರಾಜಿಗೂ ಮುನ್ನ ರಿಲೀಸ್ ಆಗೋದ್ಯಾರು?

RCB ಫಾರಿನ್ ಪ್ಲೇಯರ್ಸ್ OUT – ಮ್ಯಾಕ್ಸಿ, ಅಲ್ಜಾರಿ, ಲಾಕಿಗೆ ಗೇಟ್ ಪಾಸ್ಹರಾಜಿಗೂ ಮುನ್ನ ರಿಲೀಸ್ ಆಗೋದ್ಯಾರು?

ಎರಡೇ ವಾರ. ಜಸ್ಟ್ ಇನ್ನು ಎರಡೇ ವಾರ. ಐಪಿಎಲ್ ಆಕ್ಷನ್​ಗೆ ಯಾರೆಲ್ಲಾ ಬರ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ. 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸಾಕಷ್ಟು ಬದಲಾವಣೆಗಳನ್ನೂ ಕೂಡ ಮಾಡಿದೆ. 6 ಆಟಗಾರರನ್ನ ಉಳಿಸಿಕೊಂಡು ಉಳಿದ ಆಟಗಾರರನ್ನ ಆಕ್ಷನ್​ಗೆ ಬಿಡೋಕೆ ಫ್ರಾಂಚೈಸಿಗಳು ಲಿಸ್ಟ್ ರೆಡಿ ಮಾಡಿಕೊಂಡಿವೆ. ಹರಾಜಿಗೂ ಮುನ್ನ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಫೈನಲ್ ಮಾಡಿ ಸಲ್ಲಿಸಲು ಫ್ರಾಂಚೈಸಿಗಳಿಗೆ ಅಕ್ಟೋಬರ್ 31ರ ಸಂಜೆ 5 ಗಂಟೆಯ ಡೆಡ್​ಲೈನ್ ನೀಡಲಾಗಿದೆ. ಅದ್ರಂತೆ ಆರ್​ಸಿಬಿ ಕೂಡ 6 ಆಟಗಾರರನ್ನ ಉಳಿಸಿಕೊಂಡು ಸ್ಟಾರ್ ಪ್ಲೇಯರ್ಸ್​ನೇ ಹರಾಜಿಗೆ ಬಿಡಲು ಮುಂದಾಗಿದೆ. ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ್ರೂ ಫ್ಲ್ಯಾಪ್ ಶೋ ತೋರಿದ ಆಟಗಾರರಿಗೆ ಗೇಟ್​ಪಾಸ್ ಸಿಗೋದು ಫಿಕ್ಸ್ ಆಗಿದೆ. ಅಷ್ಟಕ್ಕೂ ಬೆಂಗಳೂರು ರಿಲೀಸ್ ಮಾಡಲಿರುವ ಪ್ಲೇಯರ್ಸ್ ಯಾರು? ಸೂಪರ್ ಸ್ಟಾರ್ ಅನ್ಕೊಂಡಿದ್ದ ಆಟಗಾರರೇ ಫೇಲ್ಯೂರ್ ಆಗಿದ್ದೇಗೆ? ವಿದೇಶಿ ಆಟಗಾರರಿಗೆ ಹಣ ಸುರಿದು ತಪ್ಪು ಮಾಡಿದ್ರಾ? ಈ ಬಗ್ಗೆ ಡೀಟೇಲ್ಡ್ ಆಗಿ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  Biggbossನಿಂದ ಜಗದೀಶ್‌, ರಂಜಿತ್‌ OUT – ಲೇ.. ಲೋ.. ಇದೇನಾ ಸಂಸ್ಕೃತಿ?

2024ರ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ತಲುಪಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಐಪಿಎಲ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಲೇಬೇಕು ಅನ್ನೋ ಟಾರ್ಗೆಟ್ ಇಟ್ಕೊಂಡಿದೆ. ಅಲ್ದೇ ಈ ಬಾರಿ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯೋದ್ರಿಂದ ಕ್ವಾಲಿಟಿ ಪ್ಲೇಯರ್ಸ್​​ನ ಖರೀದಿ ಮಾಡೋ ಪ್ಲ್ಯಾನ್​ನಲ್ಲಿದೆ. ಕಳೆದ ಸೀಸನ್​ನಲ್ಲಿ ತಂಡದಲ್ಲಿ ಕೋಟಿ ಕೋಟಿ ವೀರರ ದಂಡೇ ಇದ್ರೂ ಕೂಡ ಫೈನಲ್ ಪ್ರವೇಶ ಮಾಡೋಕೂ ಆಗಲಿಲ್ಲ. ಹೀಗಾಗಿ ಅಂಥವ್ರನ್ನೆಲ್ಲಾ ತಂಡದಿಂದ ಹೊರ ಹಾಕೋದು ಕನ್ಫರ್ಮ್ ಆಗಿದೆ. ಅದ್ರಲ್ಲೂ ಬೆಂಗಳೂರು ಫ್ರಾಂಚೈಸಿಗೆ ದೊಡ್ಡ ಹೊರೆಯಾಗಿದ್ದು ವಿದೇಶಿ ಆಟಗಾರರೇ. ಹೀಗಾಗಿ ಬಿಡುಗಡೆ ಮಾಡಲಿರುವ ಆಟಗಾರರ ಲಿಸ್ಟ್​ನಲ್ಲೂ ಫಾರಿನ್ ಪ್ಲೇಯರ್ಸೇ ಇದ್ದಾರೆ. ಈ ಪೈಕಿ ಮೊದಲ ಹೆಸರೇ ವೆಸ್ಟ್ ಇಂಡೀಸ್ ಬೌಲರ್.

₹11.5 ಕೋಟಿ ಪಡೆದು ಫ್ಲ್ಯಾಪ್ ಶೋ ನೀಡಿದ ಅಲ್ಜಾರಿ ಜೋಸೆಫ್!

17ನೇ ಸೀಸನ್ ಐಪಿಎಲ್​ನಲ್ಲಿ ಬೆಂಗಳೂರು ತಂಡದ ಅಭಿಮಾನಿಗಳಿಗೆ ತುಂಬಾನೇ ಸಿಟ್ಟು ತರಿಸಿದ್ದ ಆಟಗಾರ ಅಂದ್ರೆ ಅದು ವೆಸ್ಟ್ ಇಂಡೀಸ್​ನ ಅಲ್ಜಾರಿ ಜೋಸೆಫ್. ಈತ ಪಡೆದ ಸಂಭಾವನೆಗೂ ತೋರಿದ ಪ್ರದರ್ಶನಕಕ್ಕೂ ಒಂದಕ್ಕೊಂದು ಲಾಜಿಕ್ಕೇ ಇರಲಿಲ್ಲ. 2023ರಲ್ಲಿ 11.5 ಕೋಟಿ ರೂಪಾಯಿ ಸಂಭಾವನೆ ಪಡೆದು ಆರ್​ಸಿಬಿ ಸೇರಿದ್ದ ಜೋಸೆಫ್ ತೀರ ಕೆಟ್ಟ ಪ್ರದರ್ಶನ ನೀಡಿದ್ರು. ಮೂರು ಪಂದ್ಯಗಳನ್ನ ಆಡಿ ಜಸ್ಟ್ ಒಂದು ವಿಕೆಟ್ ಅಷ್ಟೇ ಕಿತ್ತಿದ್ರು. ಇದೇ ಕಾರಣಕ್ಕೆ ನಂತ್ರದ ಪಂದ್ಯಗಳಿಂದ ಜೋಸೆಫ್​ರನ್ನ ಕೈ ಬಿಡಲಾಗಿತ್ತು. ಐಪಿಎಲ್‌ನಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿರುವ ಅವರು 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಈ ಸಲ ಅಲ್ಜಾರಿ ಜೋಸೆಫ್​ನನ್ನ ಹರಾಜಿಗೆ ಬಿಡಲು ಫ್ರಾಂಚೈಸಿ ಮುಂದಾಗಿದೆ.

ಲಾಕಿ ಫರ್ಗುಸನ್ ಕೂಡ ಕಳಪೆ ಪ್ರದರ್ಶನ!

ಆರ್​ಸಿಬಿಯಲ್ಲಿರೋ ನ್ಯೂಜಿಲೆಂಡ್ ಆಟಗಾರ ಲಾಕಿ ಫರ್ಗುಸನ್ ಕೂಡ ರಿಲೀಸ್ ಆಗೋದು ಗ್ಯಾರಂಟಿ. 2017 ರ IPL ಸೀಸನ್​ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್‌ನೊಂದಿಗೆ IPLಗೆ ಪಾದಾರ್ಪಣೆ ಮಾಡಿದರು. ನಂತರ ಲಾಕಿಯನ್ನು ಕೋಲ್ಕತ್ತಾ ಫ್ರಾಂಚೈಸಿ 2019 ರ ಋತುವಿನಲ್ಲಿ 1.60 ಕೋಟಿಗೆ ಖರೀದಿಸಿತು. 2022 ರಲ್ಲಿ ಲಾಕಿ ಫರ್ಗುಸನ್ ಅವರನ್ನು ಗುಜರಾತ್ ಟೈಟಾನ್ಸ್ ಬರೋಬ್ಬರಿ 10 ಕೋಟಿಗೆ ಖರೀದಿಸಿತ್ತು. 2023ರಲ್ಲಿ ಮತ್ತೆ ಕೆಕೆಆರ್ ಗೆ 10 ಕೋಟಿಗೆ ತೆರಳಿದ್ದ ಲಾಕಿಯನ್ನ 2024ರ ಐಪಿಎಲ್​ಗೂ ಮುನ್ನ ರಿಲೀಸ್ ಮಾಡಿತ್ತು. ಈ ವೇಳೆ ಬೆಂಗಳೂರು ಫ್ರಾಂಚೈಸಿ 2 ಕೋಟಿ ರೂಪಾಯಿ ನೀಡಿ ತಂಡಕ್ಕೆ ಕರೆ ತಂದಿತ್ತು. ಆದರೆ ಒಟ್ಟು 7 ಪಂದ್ಯಗಳನ್ನು ಆಡಿದ್ದ ಲಾಕಿ 9 ವಿಕೆಟ್​ಗಳನ್ನ ಪಡೆದಿದ್ರು. ಹೀಗಾಗಿ ಮುಂದಿನ ಸೀಸನ್​ಗೆ ಉಳಿಸಿಕೊಳ್ಳದಿರಲು ಬೆಂಗಳೂರು ಮಾಲೀಕರು ನಿರ್ಧರಿಸಿದ್ದಾರೆ.

ಸತತ ಫೇಲ್ಯೂರ್ ಕಂಡ ಮ್ಯಾಕ್ಸಿಗೂ ಇಲ್ಲ ಉಳಿಗಾಲ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಗ್ಲೆನ್ ಮ್ಯಾಕ್ಸ್​ವೆಲ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಯಾಕಂದ್ರೆ ಮ್ಯಾಕ್ಸಿ ಬ್ಯಾಟಿಂಗ್ ಸ್ಟೈಲೇ ಹಂಗಿರುತ್ತೆ. ಬಟ್ ಕಳೆದ ಸೀಸನ್​ನಲ್ಲಿ ಮ್ಯಾಕ್ಸಿ ಬ್ಯಾಟ್ ಕೂಡ ಸದ್ದು ಮಾಡ್ಲಿಲ್ಲ. 2024ರ ಐಪಿಎಲ್​ನಲ್ಲಿ ಮಾತ್ರ ಕಳಪೆ ಫಾರ್ಮ್ ಅವ್ರನ್ನ ಬೆನ್ನತ್ತಿದ ಬೇತಾಳದಂತೆ ಕಾಡಿತ್ತು. ಕಾಲು ಗಂಟೆಗೂ ಹೆಚ್ಚು ಕಾಲ ಕ್ರೀಸ್​ನಲ್ಲಿ ನಿಲ್ಲೋಕೇ ಆಗಿರಲಿಲ್ಲ. ಬೆಂಗಳೂರು ಪರ 10 ಪಂದ್ಯಗಳನ್ನ ಆಡಿದ್ದ ಮ್ಯಾಕ್ಸಿ ಜಸ್ಟ್ 52 ರನ್​ ಗಳಿಸಿದ್ರು. ಹಾಗೇ 6 ವಿಕೆಟ್​ಗಳನ್ನ ಮಾತ್ರ ಪಡೆದಿದ್ರು. ಆರ್​ಸಿಬಿ ಕೀ ಪ್ಲೇಯರ್ ಆಗಿದ್ದ ಮ್ಯಾಕ್ಸ್​ವೆಲ್​ರ ಈ ಪ್ರದರ್ಶನದ ಎಫೆಕ್ಟ್ ಇಡೀ ತಂಡದ ಮೇಲೆ ಬಿದ್ದಿತ್ತು. ಹೀಗಾಗಿ ಸ್ಟ್ರಾಂಗ್​ ಟೀಮ್ ಕಟ್ಟುವುದಕ್ಕಾಗಿ ಈ ಸಲ ಫ್ರಾಂಚೈಸಿ ಮ್ಯಾಕ್ಸಿರನ್ನ ಕೈ ಬಿಡುವ ನಿರ್ಧಾರಕ್ಕೆ ಬಂದಿದೆ.

ಇನ್ನು ಉಳಿಸಿಕೊಳ್ಳೋ ಆಟಗಾರರ ಲಿಸ್ಟ್​ನಲ್ಲಿ ಕಿಂಗ್ ವಿರಾಟ್ ಕೊಹ್ಲಿ, ರಜತ್ ಪಟೀದಾರ್, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್ ಇದ್ದಾರೆ. ಉಳಿದಂತೆ ಫಾಫ್ ಡುಪ್ಲೆಸಿಸ್, ಅನೂಜ್ ರಾವತ್, ಕ್ಯಾಮರಾನ್ ಗ್ರೀನ್ ಇವ್ರ ಪೈಕಿ ಇಬ್ಬರನ್ನ ಆರ್​ಟಿಎಂ ಕಾರ್ಡ್ ಮೂಲಕ ಉಳಿಸಿಕೊಳ್ಳೋಕೆ ಮುಂದಾಗಿದೆ. ಒಟ್ನಲ್ಲಿ ರೀಟೇನ್ & ರಿಲೀಸ್ ಪಟ್ಟಿ ಜೊತೆಗೆ ಬೆಂಗಳೂರು ಫ್ರಾಂಚೈಸಿ ಹರಾಜಿನಲ್ಲಿ ಯಾರನ್ನೆಲ್ಲ ಖರೀದಿಸಬೇಕು? ಎಷ್ಟು ಹಣ ನೀಡಬಹುದು ಎಂಬ ಕುರಿತು ಬ್ಲೂ ಪ್ರಿಂಟ್ ಕೂಡ ತಯಾರು ಮಾಡಿಕೊಳ್ತಿದೆ. ಅಂತಿಮವಾಗಿ 2025ರ ಐಪಿಎಲ್​ಗೂ ಮುನ್ನ ಯಾರೆಲ್ಲಾ ಬೆಂಗಳೂರು ತಂಡ ಸೇರಿಕೊಳ್ತಾರೆ ಅನ್ನೋದೇ ಈಗಿರುವ ಕುತೂಹಲ.

Shwetha M