RCB ಫ್ಯಾನ್ಸ್.. CSK ಫುಲ್ ರೋಸ್ಟ್ – KGF ಕೋಟೆಗೆ ಕೊಹ್ಲಿಯೇ BOSS
ರೀಲ್ಸ್ ನಲ್ಲೂ RCBಯದ್ದೇ ಹವಾ

17ನೇ ಸೀಸನ್ ಕಂಪ್ಲೀಟ್ ಮಾಡಿ 18ನೇ ಸೀಸನ್ ಐಪಿಎಲ್ ಯಶಸ್ವಿಯಾಗಿ ನಡೀತಿದೆ. 10 ಟೀಮ್ಗಳು ಟೇಬಲ್ ಟಾಪರ್ಸ್ ಆಗೋಕೆ ಸೆಣಸಾಡ್ತಿದ್ದಾರೆ. ಲೀಗ್ನಲ್ಲಿ ಐದೈದು ಸಲ ಟ್ರೋಫಿ ಗೆದ್ದೋವ್ರು ಇದ್ದಾರೆ. ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರೋ ಕನಸಿನೊಂದಿಗೆ ಕಣಕ್ಕಿಳಿದವ್ರೂ ಇದ್ದಾರೆ. ಬಟ್ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆರ್ಸಿಬಿ ಫ್ಯಾನ್ಸ್ದೇ ಕ್ರೇಜ್. ಬೆಂಗಳೂರು ಟೀಂ ಟ್ರೋಫಿ ಗೆದ್ದಿಲ್ದೇ ಇದ್ರೂ ನಮ್ಮ ದಿಲ್ ಗೆದ್ದಿದ್ದಾರೆ. ಅಷ್ಟೇ ಸಾಕು ಗುರೂ ನಾವು ಸೆಲೆಬ್ರೇಟ್ ಮಾಡೋಕೆ ಅಂತಾ ಲಾಯಲ್ಲಾಗಿ ಸಪೋರ್ಟ್ ಮಾಡ್ತಿದ್ದಾರೆ. ಸಿನಿಮಾ ಸೀನ್ಗಳಲ್ಲೂ ಎದುರಾಳಿಗಳನ್ನ ಉರಿಸ್ತಿದ್ದಾರೆ.
ಇದನ್ನೂ ಓದಿ : RCBಗೆ ಬುಮ್ರಾ ಎಂಟ್ರಿಯೇ ಸವಾಲ್.. ಕೊಹ್ಲಿ & ಸಾಲ್ಟ್ ಸಿಡಿದ್ರೆ ಗೆಲುವು ಫಿಕ್ಸ್ – ಬ್ಯಾಟಿಂಗ್ ಫ್ಲಾಪ್.. MI ವೀಕ್ನೆಸ್ ಏನು?
ಐಪಿಎಲ್ನಲ್ಲಿ ಅತೀ ಹೆಚ್ಚು ಟ್ರೋಲ್ ಆಗೋ ಕಂಟೆಂಟ್ ಯಾವ್ದಪ್ಪ ಅಂದ್ರೆ ಅದು ಆರ್ಸಿಬಿ ವರ್ಸಸ್ ಸಿಎಸ್ಕೆ ನಡುವಿನ ಪಂದ್ಯಗಳು. ಯಾರೇ ಗೆದ್ರೂ ಯಾರೇ ಸೋತ್ರೂ ಒಬ್ರನ್ನೊಬ್ರು ಟ್ರೋಲ್ ಮಾಡೋದು ಬಿಡಲ್ಲ. ಅದ್ರಲ್ಲೂ ಈ ಸಲ 17 ವರ್ಷಗಳ ಬಳಿಕ ಚೆಪಾಕ್ನಲ್ಲಿ ಬೆಂಗಳೂರು ಟೀಂ ಚೆನ್ನೈ ತಂಡವನ್ನ ಸೋಲಿಸಿತ್ತು. ಈ ಸೋಲಿನ ಬಳಿಕ ಸಿಎಸ್ಕೆಯನ್ನ ಆರ್ಸಿಬಿ ಫ್ಯಾನ್ಸ್ ಸರಿಯಾಗೇ ರೋಸ್ಟ್ ಮಾಡಿದ್ದಾರೆ. ಮ್ಯಾಚ್ ಟೈಮಲ್ಲಿ ಸಿಎಸ್ಕೆ ಸೋಲೋ ಹಂತಕ್ಕೆ ಬರ್ತಿದ್ದಂತೆ ಸಿಎಸ್ಕೆ ಅಭಿಮಾನಿ ಕೊರಳಲಿದ್ದ ವಿಶಲ್ನ ಆರ್ಸಿಬಿ ಅಭಿಮಾನಿಯೊಬ್ಬಳು ಊದಿದ್ದಳು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇ ಸಿಚುಯೇಷನ್ ಇಟ್ಕೊಂಡು ಸಿನಿಮಾ ಡೈಲಾಗ್ ಸಿಂಕ್ ಮಾಡಿದ್ದಾರೆ. ಪೈನಾಪಲ್ ಅವ್ರದ್ದೇ ಬಟ್ ಹಿಂಡುತ್ತಿರೋದು ನಾವೇ ಅಂತಾ ಟ್ರೋಲ್ ಮಾಡಿದ್ದಾರೆ.
ಹಾಗೇ ಸಿಎಸ್ಕೆ ತಂಡ ಪದೇಪದೆ ಸೋಲ್ತಿರೋದಕ್ಕೆ ಆರ್ಸಿಬಿ ಫ್ಯಾನ್ಸ್ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹೇಳೋ ಡೈಲಾಗ್ನ ಸಿಂಕ್ ಮಾಡಿದ್ದಾರೆ. ಹೇಗ್ ಹೊಡ್ದಿದ್ದಾರೆ ನೋಡು, ನಾಯಿಗ್ ಹೊಡ್ದಂಗೆ ಹೊಡ್ದಿದ್ದಾರೆ ಅಂತಾ ರೋಸ್ಟ್ ಮಾಡಿದ್ದಾರೆ.
ಸೋಮವಾರ ಬೆಂಗಳೂರು ಟೀಂ ಮತ್ತು ಮುಂಬೈ ಟೀಂ ನಡುವೆ ಐಪಿಎಲ್ನ 20ನೇ ಮ್ಯಾಚ್ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆಯಲಿರೋ ಈ ಪಂದ್ಯಕ್ಕೆ ಅಭಿಮಾನಿಗಳು ಕೆಜಿಎಫ್ ಸಿನಿಮಾ ಡೈಲಾಗ್ನ ಸಿಂಕ್ ಮಾಡಿದ್ದಾರೆ. ಕಿಂಗ್ ವಿರಾಟ್ ಕೊಹ್ಲಿಯನ್ನ ರಾಕಿಭಾಯ್ನಂತೆ ಲಿಂಕ್ ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ. ಕಿಂಗ್ ಕೊಹ್ಲಿಗೆ ಈ ಡೈಲಾಗ್ ಸಖತ್ತಾಗೇ ಸೂಟ್ ಆಗ್ತಿದೆ. ಇನ್ನು ಐಪಿಎಲ್ ಶುರುವಾಗಿ 17 ಸೀಸನ್ ಕಳ್ದು 18ನೇ ಸೀಸನ್ ಬಂದ್ರೂ ಆರ್ಸಿಬಿ ಕಪ್ ಗೆದ್ದಿಲ್ಲ. ಅದನ್ನ ಎಷ್ಟು ಸೆಂಟಿಮೆಂಟ್ ಆಗಿ ತೋರಿಸಿದ್ದಾರೆ ನೋಡಿ. ಸಿನಿಮಾವೊಂದ್ರಲ್ಲಿ ಉಮಾಶ್ರೀ ದೇವಸ್ಥಾನಕ್ಕೆ ಹೋಗಿ ಬೇಡಿಕೊಳ್ಳೋ ಸೀನ್ಗೆ ಟ್ರೋಫಿಯನ್ನ ಇಟ್ಟು ಕನೆಕ್ಟ್ ಮಾಡಿದ್ದಾರೆ.
ಇನ್ನು ಈ ವಿಡಿಯೋ ಅಂತೂ ಅಲ್ಟಿಮೇಟ್ ಆಗಿದೆ ನೋಡಿ. ಲಕ್ನೋ ಸೂಪರ್ ಜೇಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್ರನ್ನ ಕೈಬಿಟ್ಟು ರಿಷಭ್ ಪಂತ್ ಅವ್ರನ್ನ 27 ಕೋಟಿ ಕೊಟ್ಟು ಖರೀದಿ ಮಾಡಿದ್ರು. ಬಟ್ ಪಂತ್ ಆಡಿರೋ ನಾಲ್ಕೂ ಪಂದ್ಯಗಳನ್ನ ಸೇರಿ 19 ರನ್ ಅಷ್ಟೇ ಗಳಿಸಿರೋದು. ಸೋ ಪಂತ್ ಮತ್ತು ಕೆಎಲ್ ರಾಹುಲ್ ಮಾತಾಡಿಕೊಳ್ಳೋ ವಿಡಿಯೋ ಇದು. ಪಂತ್ ನನಗ್ಯಾಕೋ ಹೊಡೆದ್ರು ಅಂತಾ ಕೇಳಿದ್ರೆ ರಾಹುಲ್ ನಂಗೇನ್ ಗೊತ್ತು. ತಾಯಿ ಚಾಮುಂಡೇಶ್ವರಿ ತಾಯಿ ನನ್ನೆಲ್ಲಾ ನವಗ್ರಹಗಳನ್ನ ಇವ್ನಿಗೆ ಶಿಫ್ಟ್ ಮಾಡಿದ್ದೀಯಲ್ಲ ಸಾಕಪ್ಪ ಅನ್ನೋ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.