RCB ಫ್ಯಾನ್ಸ್ ನಿದ್ದೆಗೆಡಿಸಿದ ಇಂಗ್ಲೆಂಡ್ ಸುಂದರಿ – ಲಾರೆನ್ ಬೆಲ್ ಈಗ WPLನ ಹೊಸ ಕ್ರಶ್

RCB ಫ್ಯಾನ್ಸ್ ನಿದ್ದೆಗೆಡಿಸಿದ ಇಂಗ್ಲೆಂಡ್ ಸುಂದರಿ – ಲಾರೆನ್ ಬೆಲ್ ಈಗ WPLನ ಹೊಸ ಕ್ರಶ್

ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 12 ಆಟಗಾರ್ತಿಯರನ್ನ ಖರೀದಿ ಮಾಡಿದೆ. ರಿಟೇನ್ ಮಾಡಿಕೊಂಡಿದ್ದ 4 ಆಟಗಾರ್ತಿಯರು ಹಾಗೇ ಖರೀದಿಸಿದ ಪ್ಲೇಯರ್ಸ್ ಒಟ್ಟು ಸೇರಿ ಟೋಟಲ್ ಆಗಿ 16 ಆಟಗಾರ್ತಿಯರು ಸೇರಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಮೆಗಾ ಹರಾಜಿನ ಬಳಿಕ ಆರ್ ಸಿಬಿಯಲ್ಲಿ ಅದೊಬ್ಬ ಆಟಗಾರ್ತಿ ಫುಲ್ ಟ್ರೆಂಡಿಂಗ್ ನಲ್ಲಿದ್ದಾರೆ. ಆಲ್ರೆಡಿ ಕನ್ನಡಿಗರ ಕ್ರಶ್ ಕೂಡ ಆಗಿ ಬಿಟ್ಟಿದ್ದಾರೆ. ಹೌದು ಅವ್ರೇ ಇಂಗ್ಲೆಂಡ್ ಪ್ಲೇಯರ್ ಲಾರೆನ್ ಬೆಲ್.

ಇದನ್ನೂ ಓದಿ : ಪಂತ್ & ಶ್ರೇಯಸ್ IPL ಕುಬೇರರು – RCBಯಲ್ಲಿ ಕೊಹ್ಲಿಯೇ ಕಾಸ್ಟ್ಲಿ KING

ಡಬ್ಲ್ಯೂಪಿಎಲ್ ಮೆಗಾ ಹರಾಜಿಗೂ ಮುನ್ನ ಒಂದಷ್ಟು ಟ್ರೋಲ್ ಪೇಜ್ ಗಳಲ್ಲಿ ಲಾರೆನ್ ಬೆಲ್ ಫೋಟೋ ಹರಿದಾಡ್ತಿದ್ವು. ಗುರು ಈ ಪ್ಲೇಯರ್ ಯಾವ ತಂಡಕ್ಕೆ ಸೇರ್ತಾರೋ ಅವ್ರಿಗೇ ನಾವು ಸಪೋರ್ಟ್ ಮಾಡೋದು ಅಂತಾ. ಯಾಕಂದ್ರೆ ಲಾರೆನ್ ಬೆಲ್ ನೋಡೋಕೆ ನಿಜಕ್ಕೂ ಅಪ್ಸರೆಯೇ. ಹಾಗಂತ ಸೌಂದರ್ಯ ಅಷ್ಟೇ ಅಲ್ಲ ಆಟದಲ್ಲೂ ಅಷ್ಟೇ ಸಾಮರ್ಥ್ಯ ಇದೆ. ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತ ಕೆಚ್ಚೆದೆಯ ಪ್ಲೇಯರ್. ಬರೋಬ್ಬರಿ 6.2 ಅಡಿ ಎತ್ತರದ ಲಾರೆನ್​ ಬೌಲಿಂಗ್ ನಲ್ಲಿ ತುಂಬಾನೇ ಸ್ಟ್ರಾಂಗ್ ಇದ್ದಾರೆ. ಸ್ವಿಂಗ್​ & ಪೇಸ್​ ಅಸ್ತ್ರದಿಂದಲೇ ಎದುರಾಳಿ ಬ್ಯಾಟರ್ಸ್​ಗೆ ಬೆವರಿಳಿಸುತ್ತಾರೆ. ಇದೇ ಕಾರಣಕ್ಕೆ ಹರಾಜಿನಲ್ಲಿ ಫ್ರಾಂಚೈಸಿ 90 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದೆ. ಹಾಗೇ ಈ ಹರಾಜಿನಲ್ಲಿ ಆರ್ ಸಿಬಿ ಬಿಡ್ ಮಾಡಿದ ದುಬಾರಿ ಪ್ಲೇಯರ್ ಇವ್ರೇ ಆಗಿದ್ದಾರೆ.

ಮೆಗಾ ಹರಾಜಿನ ಬಳಿಕ ಬೆಂಗಳೂರು ಸೇರಿದ ಲಾರೆನ್ ಬೆಲ್ ಆರ್ ಸಿಬಿ ಫ್ಯಾನ್ಸ್ ಗೆ ವಿಡಿಯೋ ಸಂದೇಶ ಕಳಿಸಿದ್ದಾರೆ. ಎಲ್ಲರಿಗೂ ಹಾಯ್​ ಹೇಳಿ​ Can’t wait to Play Bold with you all ಎಂದಿದ್ದಾರೆ. ಆಲ್ರೆಡಿ ಬೆಂಗಳೂರು ಅಭಿಮಾನಿಗಳು ಲಾರೆನ್ ಬ್ಯೂಟಿಗೆ ಬೋಲ್ಡ್ ಆಗಿದ್ದು ಬೌಲಿಂಗ್ ನೋಡೋಕೆ ಕಾಯ್ತಾ ಇರೋದಾಗಿ ಕಮೆಂಟ್ಸ್ ಹಾಕ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಲಾರೆನ್​ ಬೆಲ್​ ಟ್ರೆಂಡ್ ಹಲ್‌ಚಲ್‌ ಸೃಷ್ಟಿಸಿದೆ. Reason to watch WPL 2026 ಎಂದೇ ಲಾರೆನ್​ ಬೆಲ್​ ಟ್ರೆಂಡ್​ ಆಗ್ತಿದ್ದಾರೆ. ಇನ್ನು ಇಂಗ್ಲೆಂಡಿನ ಬೆಲ್ ಅವರನ್ನ ಆರ್‌ಸಿಬಿ 90 ಲಕ್ಷಕ್ಕೆ  ಖರೀದಿಸಿದೆ. ತಂಡದ ಮಾಜಿ ವೇಗಿ ರೇಣುಕಾ ಸಿಂಗ್​ ಕೇವಲ 60 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ರೂ ಆರ್​​ಸಿಬಿ ಖರೀದಿಗೆ ಮುಂದಾಗಲಿಲ್ಲ. ಆಗ ಅದೆಷ್ಟೋ ಅಭಿಮಾನಿಗಳು ಬೈದುಕೊಂಡಿದ್ರು. ಆದ್ರೆ, 24 ವರ್ಷದ ಯುವ ವೇಗಿ ಲಾರೆನ್​ ಬೆಲ್​ ಆಕ್ಷನ್​ಗೆ ಬತ್ತಿದ್ದಂತೆ ಆರ್‌ಸಿಬಿ ಪಟ್ಟು ಹಿಡಿದು 90 ಲಕ್ಷ ನೀಡಿ ಖರೀದಿಸಿತು. ಆಲ್ರೆಡಿ ಬೆಂಗಳೂರು ತಂಡದಲ್ಲಿ ಬ್ಯೂಟಿಗಳ ದಂಡೇ ಇದೆ. ನ್ಯಾಷನಲ್ ಕ್ರಶ್ ಸ್ಮೃತಿ ಮಂದಾನ, ಚೆರ್ರಿ ಚೆರ್ಲಿ ಲೇಡಿ ಎಲ್ಲಿಸ್ ಪೆರ್ರಿ, ಟಗರುಪುಟ್ಟಿ ಶ್ರೇಯಾಂಕಾ ಪಾಟೀಲ್ ಅಭಿಮಾನಿಗಳ ನಿದ್ದೆಕೆಡಿಸಿದ್ರು. ಈಗ ಈ ಪಟ್ಟಿಗೆ ಲಾರೆನ್ ಬೆಲ್ ಕೂಡ ಸೇರ್ಕೊಂಡಿದ್ದು ಈ ಸುಂದರಿಯನ್ನ ಆರ್ ಸಿಬಿ ಜೆರ್ಸಿಯಲ್ಲಿ ನೋಡೋಕೆ ಫ್ಯಾನ್ಸ್ ಅಂತೂ ಕಾತುರದಿಂದ ಕಾಯ್ತಾ ಇದ್ದಾರೆ.

Shantha Kumari