RCB ಫೈನಲ್.. ಫ್ಯಾನ್ಸ್ ಕ್ರೇಜ್ ಫ್ರೀ ಪಾನಿಪೂರಿ.. ಪಬ್ ಸೋಲ್ಡ್ ಔಟ್
ಕಪ್ ಗೆಲ್ಲೋ ಮುಂಚೆ ಹವಾ

RCB ಫೈನಲ್.. ಫ್ಯಾನ್ಸ್ ಕ್ರೇಜ್ ಫ್ರೀ ಪಾನಿಪೂರಿ.. ಪಬ್ ಸೋಲ್ಡ್ ಔಟ್ಕಪ್ ಗೆಲ್ಲೋ ಮುಂಚೆ ಹವಾ

 

ಬೆಂಗಳೂರಿನ ರೆಸ್ಟೋರೆಂಟ್‌ಗಳು, ಪಬ್‌ಗಳು ಸೋಲ್ಡ್ ಔಟ್

ಇಂದು ಆರ್‌ಸಿಬಿ ಮತ್ತು ಪಂಜಾಬ್ ಮಂಗಳವಾರ ಐಪಿಎಲ್‌ ಕಪ್‌ಗಾಗಿ ಕಾದಾಟ ನಡೆಸಲಿವೆ. ಯಾಕಂದ್ರೆ  ಈ ಫೈನಲ್ ಗೆದ್ದರೇ ಈ ಎರಡು ತಂಡಕ್ಕೆ ಇದು ಮೊದಲ ಕಪ್ ಆಗಿರುತ್ತೆ. ಹೀಗಾಗಿ ಈ ಸಲ ಕಪ್ ಬಿಟ್ಟು ಕೊಡುವ ಮಾತಿಲ್ಲ ಅನ್ನೋ ರೇಂಜ್ ಇಬ್ಬರು ಗೆಲುವಿಗಾಗಿ ಹೋರಾಟ ನಡೆಸಲಿದ್ದಾರೆ.  ಆರ್‌ಸಿಬಿ ಫೈನಲ್‌ಗೆ  ಹೋಗಿದ್ದು,  ಸಂಭ್ರಮ ಸಡಗರ ಮನೆ ಮಾಡಿದ್ದು, ಬೆಂಗಳೂರಿನ ರೆಸ್ಟೋರೆಂಟ್‌ಗಳು, ಪಬ್‌ಗಳು ಸೋಲ್ಡ್ ಔಟ್ ಆಗಿದೆಯಂತೆ.  ವೀಕ್‌ ಡೇಸ್‌ಗಳಲ್ಲಿ 350 ರಿಂದ 400 ಜನರು ಒಂದು ಪಬ್‌ ಅಥವಾ ರೆಸ್ಟೋರೆಂಟ್‌ಗಳಿಗೆ ಆಗಮಿಸುತ್ತಾರೆ. ಆದರೆ ಆರ್‌ಸಿಬಿ ಫೈನಲ್‌ ಪಂದ್ಯ ಇರುವ ಕಾರಣ ಮಂಗಳವಾರ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆ ಇದ್ದು, ವೀಕೆಂಡ್‌ಗಿಂತ ಹೆಚ್ಚು ಜನ ಆಗೋ ನಿರೀಕ್ಷೆಯಿದೆ. ಇದ್ದಕ್ಕಾಗಿ ಪಬ್‌ಗಳು ಸಿದ್ದತೆ ಮಾಡಿಕೊಂಡಿದ್ದು, ದೊಡ್ಡ ದೊಡ್ಡ ಸ್ಕೀನ್ ಗಳನ್ನ ಅಳವಡಿಸಲಾಗಿದೆ.

 ಈ ಸಲ ಕಪ್​​ ನಮ್ದು ಆದರೆ ಒನ್ ಡೇ ಪಾನಿಪುರಿ ನಿಮ್ದು

ಇನ್ನು RCB ಅಭಿಮಾನಿಯಿಂದ ಉಚಿತ ಚಾಟ್ಸ್ ವಿತರಣೆ ಹಮ್ಮಿಕೊಳ್ಳಲಾಗಿದೆ. ಈ ಸಲ ಕಪ್​​ ನಮ್ದು ಆದರೆ ಒನ್ ಡೇ ಪಾನಿಪುರಿ ನಿಮ್ದು ಎಂದು ಬೋರ್ಡ್​​ ಹಾಕಿದ್ದಾರೆ. ಈ ಸಲ ಆರ್​​ಸಿಬಿ ಕಪ್ ಗೆದ್ದಿದ್ದೇ ಆದರೆ ಎಲ್ಲರಿಗೂ ಪಾನಿಪೂರಿ, ಮಸಾಲಪೂರಿ, ಭೇಲ್ ಪುರಿ.. ಫ್ರೀ.. ಫ್ರೀ.. ಫ್ರೀ.. ಎಂದು ಅಂಗಡಿ ಮುಂದೆ ಬೋರ್ಡ್ ಹಾಕಿದ್ದಾರೆ. ಅಂಗಡಿ ಮಾಲೀಕ ಕೂಡ ಆರ್​​ಸಿಬಿ ದೊಡ್ಡ ಅಭಿಮಾನಿಯಾಗಿದ್ದು, ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಈ ಉಚಿತ ಚಾಟ್ಸ್​​ ವಿತರಣೆ ಎಂದಿದ್ದಾರೆ. RCB ಮ್ಯಾಚ್ ಹಿನ್ನೆಲೆ ಉಚಿತ ಚಾಟ್ಸ್ ವಿತರಣೆಗೆ ಮುಂದಾಗಿರುವುದು ಅನಿಲ್ ಚಾಟ್ಸ್ ಸೆಂಟರ್. ಇದು ಇರುವುದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ. ಐಪಿಲ್ ಫೈನಲ್ ನಲ್ಲಿ ಆರ್ ಸಿಬಿ ಗೆದ್ರೆ ಉಚಿತವಾಗಿ ಚ್ಯಾಟ್ಸ್ ಹಂಚಿಕೆ ಮಾಡಲಾಗುತ್ತದೆ ಎಂದು ಅನಿಲ್​​ ಚಾಟ್ಸ್​​ ಸೆಂಟರ್​​ ಭರವಸೆ ನೀಡಿದೆ. ನಾಳೆ ಆರ್​​ಸಿಬಿ ಕಪ್​​ ಗೆದ್ದಿದ್ದೇ ಆದರೆ ಅನಿಲ್​ ಚಾಟ್ಸ್​​ ಸೆಂಟರ್​​ ಜೂನ್ 4 ರಂದು ಬುಧವಾರ ಸಂಜೆ 5ಕ್ಕೆ ಫ್ರಿ ಚಾಟ್ಸ್ ವಿತರಣೆ ಮಾಡಲಿದೆ.

 

Kishor KV