RCB ಫಾರ್ಮ್ ಕಳೆದುಕೊಳ್ಳುತ್ತಾ? – ನಾಲ್ವರು ಫಾರಿನ್ ಪ್ಲೇಯರ್ಸ್ ವಾಪಸ್?
IPL ಲೇಟ್ ಆದಷ್ಟೂ ಪ್ರಾಬ್ಲಂ!

ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿ ನಡೀತಾ ಇರೋದ್ರಿಂದ ಭದ್ರತಾ ದೃಷ್ಟಿಯಿಂದ ಐಪಿಎಲ್ನ ಒಂದು ವಾರ ಪೋಸ್ಟ್ ಪೋನ್ ಮಾಡ್ಲಾಗಿದೆ. ಆ ನಂತ್ರ ಪರಿಸ್ಥಿತಿಯನ್ನ ನೋಡಿಕೊಂಡು ವಾಟ್ ನೆಕ್ಸ್ಟ್ ಅನ್ನೋದನ್ನ ಡಿಸೈಡ್ ಮಾಡ್ಲಾಗುತ್ತೆ. ಬಟ್ ಇಂಡಿಯನ್ ಪ್ರೀಮಿಯರ್ ಲೀಗ್ನ ಇನ್ನುಳಿದ ಪಂದ್ಯಗಳನ್ನ ಪೋಸ್ಟ್ ಪೋನ್ ಮಾಡಿರೋದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಮಸ್ಯೆಯನ್ನು ಉಂಟು ಮಾಡಬಹುದು.
ಇದನ್ನೂ ಓದಿ : ರೋಹಿತ್ ಶರ್ಮಾ ಬಳಿಕ ಕೊಹ್ಲಿ ಫ್ಯಾನ್ಸ್‌ಗೆ ಶಾಕ್! – ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ನಿವೃತ್ತಿ?
ಮೆಗಾ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ ಮೂವರು ಇಂಗ್ಲೆಂಡ್ ಪ್ಲೇಯರ್ಸ್ಗೆ ಮಣೆ ಹಾಕಿತ್ತು. ಫಿಲ್ ಸಾಲ್ಟ್, ಜೇಕಬ್ ಬೆಥೆಲ್ ಹಾಗೇ ಲಿಯಾಮ್ ಲಿವಿಂಗ್ಸ್ಟೋನ್. ಈ ಮೂವರೂ ಕೂಡ ಈಗಾಗ್ಲೇ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದು ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಐಪಿಎಲ್ ಆರಂಭ ತಡವಾದರೆ, ಲಿಯಾಮ್ ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್ ಹಾಗೂ ಫಿಲ್ ಸಾಲ್ಟ್ ತವರಿಗೆ ವಾಪಸ್ ಆಗಲಿದ್ದಾರೆ. ಯಾಕಂದ್ರೆ ಮೇ 22 ರಿಂದ ಇಂಗ್ಲೆಂಡ್ ಹಾಗೂ ಝಿಂಬಾಬ್ವೆ ನಡುವಣ ಟೆಸ್ಟ್ ಸರಣಿ ಶುರುವಾಗಲಿದೆ. ಇದರ ಬೆನ್ನಲ್ಲೇ ಮೇ 29 ರಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ 3 ಪಂದ್ಯಗಳ ಏಕದಿನ ಸರಣಿ ಕೂಡ ಆರಂಭವಾಗುತ್ತಿದೆ. ಈ ಸರಣಿಗಳಿಗೆ ಜೇಕಬ್ ಬೆಥೆಲ್, ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಫಿಲ್ ಸಾಲ್ಟ್ ಆಯ್ಕೆಯಾಗುವುದು ಪಕ್ಕಾ ಎನ್ನಲಾಗಿದೆ. ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧದ ಸರಣಿಗೆ ಈಗಾಗಲೇ ವೆಸ್ಟ್ ಇಂಡೀಸ್ ತಂಡವನ್ನು ಘೋಷಣೆ ಮಾಡಲಾಗಿದೆ. ಈ ತಂಡದಲ್ಲಿ ಆರ್ಸಿಬಿ ಆಟಗಾರ ರೊಮಾರಿಯೊ ಶೆಫರ್ಡ್ ಹೆಸರನ್ನೂ ಘೋಷಿಸಲಾಗಿದೆ. ಅಂದರೆ ಐಪಿಎಲ್ ರೀ ಸ್ಟಾರ್ಟ್ ಲೇಟ್ ಆದ್ರೆ ಆರ್ಸಿಬಿ ತಂಡದಿಂದ ರೊಮಾರಿಯೊ ಶೆಫರ್ಡ್, ಲಿಯಾಮ್ ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್, ಫಿಲ್ ಸಾಲ್ಟ್ ಹೊರಗುಳಿಯುವುದು ಪಕ್ಕಾ.
ಇನ್ನು ಇಂಗ್ಲೆಂಡ್ ಆಟಗಾರರು ಅಷ್ಟೇ ಅಲ್ದೇ ಇತರೆ ಫಾರಿನ್ ಪ್ಲೇಯರ್ಸ್ ಕೂಡ ವಾಪಸ್ ಆಗಬಹುದು. ಸೌತ್ ಆಫ್ರಿಕಾದ ಲುಂಗಿ ಎನ್ಗಿಡಿ, ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್, ಟಿಮ್ ಡೇವಿಡ್ ಹಾಗೂ ಶ್ರೀಲಂಕಾದ ನುವಾನ್ ತುಷಾರ ತಂಡದಲ್ಲಿ ಉಳಿಯಲಿದ್ದಾರೆ. ಆದ್ರೆ ಇವ್ರೂ ಕೂಡ ಕೊನೆಯ ಪಂದ್ಯಗಳಿಗೆ ಆರ್ಸಿಬಿ ಪರ ಆಡುವ ಸಾಧ್ಯತೆ ತೀರಾ ಕಡಿಮೆ. ತಮ್ಮ ತಮ್ಮ ರಾಷ್ಟ್ರಗಳ ಪರ ಕಣಕ್ಕಿಳಿಯೋಕೆ ಅನಿವಾರ್ಯತೆ ಇರೋದ್ರಿಂದ ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತ ಬೀಳುತ್ತೆ.
ಸದ್ಯ ಕ್ರಿಕೆಟ್ ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆ ಇದೇ. ಒಂದು ವಾರದ ಬಳಿಕವೂ ಟೂರ್ನಿ ಸ್ಟಾರ್ಟ್ ಆಗದೇ ಇದ್ರೆ ಮುಂದೇನು ಅನ್ನೋದು. ಬಿಸಿಸಿಐ ಸದ್ಯ ಕಾದು ನೊಡುವ ತಂತ್ರಕ್ಕೆ ಮೊರೆ ಹೋಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಒಂದು ವಾರದೊಳಗೆ ತಿಳಿಯಾದ್ರೆ ಆ ನಂತ್ರ ರೀ ಶೆಡ್ಯೂಲ್ ಹಾಕಿ ಉಳಿದ ಪಂದ್ಯಗಳನ್ನ ಆಡಿಸೋದು. ಅಥವಾ ಈ ವರ್ಷದೊಳಗೆ ಟೀಂ ಇಂಡಿಯಾ ಪಂದ್ಯಗಳನ್ನ ನೋಡಿಕೊಂಡು ಮಿಡ್ಲಲ್ಲಿ ಆಡಿಸೋದು. ಅಥವಾ ಟೂರ್ನಿಯನ್ನ ಶಿಫ್ಟ್ ಮಾಡೋದು. ಹೀಗೆ ಸಾಕಷ್ಟು ಆಪ್ಶನ್ಸ್ ಇದ್ರೂ ಯಾವುದೇ ಫೈನಲ್ ಡಿಸಿಷನ್ ತಗೊಂಡಿಲ್ಲ. ಬಟ್ ಇದೆಲ್ಲದ್ರ ನಡುವೆ ಇನ್ನೊಂದು ದಾರಿಯೂ ಬಿಸಿಸಿಐ ಮುಂದಿದೆ.
ಒಂದು ವಾರದ ಬಳಿಕವೂ ಪರಿಸ್ಥಿತಿ ಸುಧಾರಿಸದೇ ಇದ್ರೆ ಬಿಸಿಸಿಐ ರಿಸ್ಕ್ ತೆಗೆದುಕೊಳ್ಳೋಕೆ ರೆಡಿ ಇಲ್ಲ. ಹೀಗಾಗಿ ಗಡಿ ಭಾಗದ ಬದಲಾಗಿ ದಕ್ಷಿಣ ಭಾರತದಲ್ಲಿ ಉಳಿದ ಪಂದ್ಯಗಳನ್ನ ಆಯೋಜಿಸೋ ಬಗ್ಗೆ ಚರ್ಚೆ ನಡೆದಿದೆ. ಲೀಗ್ ಹಂತದ 12 ಪ್ಲಸ್ ಪ್ಲೇಆಫ್, ಫೈನಲ್ನ 4 ಮ್ಯಾಚ್ ಸೇರಿ ಟೋಟಲ್ಲಾಗಿ 16 ಮ್ಯಾಚ್ ಬಾಕಿ ಇವೆ. ಹೀಗಾಗಿ ಈ ಮ್ಯಾಚಸ್ ಆಡಿಸೋಕೆ ಮಿನಿಮಮ್ ಅಂದ್ರೂ ಎರಡು ವಾರ ಬೇಕು. ಸೋ ಬೆಂಗಳೂರು, ಹೈದ್ರಾಬಾದ್ನಲ್ಲಿ ಉಳಿದ ಪಂದ್ಯಗಳನ್ನ ನಡೆಸೋ ಸಾಧ್ಯತೆಗಳಿವೆ.
ಐಪಿಎಲ್ ಡಿಲೇ ಆದಷ್ಟು ಬಿಸಿಸಿಐಗೇ ಹೊಡೆತ ಬೀಳುತ್ತೆ. ಯಾಕಂದ್ರೆ ಭಾರತ ತಂಡವು ಜೂನ್ 20 ರಿಂದ ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಆಗಸ್ಟ್ 4 ರಂದು ಕೊನೆಯ ಟೆಸ್ಟ್ ಪಂದ್ಯ ಮುಗಿಯುತ್ತದೆ. ನಂತರ, ಆಗಸ್ಟ್ 17 ರಿಂದ ಆಗಸ್ಟ್ 31 ರವರೆಗೆ ಬಾಂಗ್ಲಾದೇಶದಲ್ಲಿ ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ. ಅಕ್ಟೋಬರ್ 2 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಬಾಂಗ್ಲಾದೇಶ ಪ್ರವಾಸ ಮತ್ತು ವೆಸ್ಟ್ ಇಂಡೀಸ್ ಸರಣಿಯ ನಡುವಿನ ಸಮಯದಲ್ಲಿ ಐಪಿಎಲ್ 2025 ಅನ್ನು ಆಡಬಹುದು. ಬಟ್ ಈ ಟೈಮಲ್ಲಿ ವಿದೇಶಿ ಪ್ಲೇಯರ್ಸ್ ಬರೋದು ಕಷ್ಟಸಾಧ್ಯ.