ಕಚೇರಿಯಲ್ಲಿ ಸುಳ್ಳು ಹೇಳಿ ಐಪಿಎಲ್ಗೆ ಹೋದ ಯುವತಿ – ಟಿವಿಯಲ್ಲಿ ಮ್ಯಾಚ್ ನೋಡಿದ ಬಾಸ್ಗೆ ಶಾಕ್

ಹುಷಾರಿಲ್ಲ.. ಮನೆಯಲ್ಲಿ ಸಮಾರಂಭ ಇದೆ.. ಅಜ್ಜಿ ತೀರಿಕೊಂಡ್ರು ಹೀಗೆ ಕಾರಣ ಕೊಟ್ಟು ಶಾಲಾ – ಕಾಲೇಜು ಮಕ್ಕಳು, ಹಾಗೇ ಕಚೇರಿಗೆ ಚಕ್ಕರ್ ಹಾಕುವವರು ಅನೇಕರಿದ್ದಾರೆ. ಈ ಹೀಗೆ ಸುಳ್ಳು ಹೇಳಿದ್ಮೇಲೆ ಎಚ್ಚರಿಕೆ ವಹಿಸೋದು ತುಂಬಾನೇ ಮುಖ್ಯ. ಇದೀಗ ಇಲ್ಲೊಬ್ಬಳು ಸುಳ್ಳು ಹೇಳಿ ಆಫೀಸ್ಗೆ ರಜರ ತೆಗೆದುಕೊಂಡಿದ್ದಾಳೆ. ಇದೀಗ ಆಕೆ ಬಾಸ್ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಇದನ್ನೂ ಓದಿ: ಮತದಾರರು ಕೈ ಕೊಟ್ರೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಬಂದ್? – ಕಾಂಗ್ರೆಸ್ ಗಿಮಿಕ್ ಏನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖ್ನೋ ಸೂಪರ್ ಜೈಂಟ್ಸ್ ಪಂದ್ಯ ಇತ್ತೀಚೆಗೆ ನಡೆದಿತ್ತು. ಈ ಪಂದ್ಯ ನೋಡಲು ನೇಹಾ ದ್ವಿವೇದಿ ಎಂಬ ಯುವತಿ ಟಿಕೆಟ್ ಖರೀಸಿದಿದ್ದರು. ಬಾಸ್ಗೆ ಸುಳ್ಳು ಕಾರಣ ಹೇಳಿ ಅವರು ಸ್ಟೇಡಿಯಂ ಹೋಗಿದ್ದರು. ಆದರೆ, ಬಾಸ್ಗೆ ಅವರು ಟಿವಿ ಕ್ಯಾಮೆರಾದಲ್ಲಿ ಕಾಣಿಸಿದ್ದರು. ಇದರಿಂದ ಅವರ ರಜೆಗೆ ಅಸಲಿ ಕಾರಣ ಸಿಕ್ಕಿದೆ.
ಪಂದ್ಯ ಮುಗಿದ ಬಳಿಕ ಬಾಸ್ ಕಡೆಯಿಂದ ನೇಹಾಗೆ ಸಂದೇಶ ಬಂದಿದೆ. ‘ನೀವು ಆರ್ಸಿಬಿ ಅಭಿಮಾನಿಯೇ’ ಎಂದು ಕೇಳಲಾಯಿತು. ಇದಕ್ಕೆ ನೇಹಾ ಹೌದು ಎಂದು ಉತ್ತರಿಸಿದ್ದು ಅಲ್ಲದೆ, ಏಕೆ ಎಂದು ಪ್ರಶ್ನಿಸಿದ್ದರು. ‘ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದೆ. ಕ್ಯಾಚ್ ಬಿಟ್ಟಾಗ ನೀವು ಬೇಸರದಲ್ಲಿ ಕಾಣಿಸಿಕೊಂಡಿರಿ’ ಎಂದಿದ್ದಾರೆ ಬಾಸ್. ಇದನ್ನು ಕೇಳಿ ನೇಹಾಗೆ ಒಂದು ಕ್ಷಣ ಶಾಕ್ ಆಗಿದೆ. ಆದರೆ, ಬಾಸ್ ಇದನ್ನು ಹೆಚ್ಚು ಗಂಭೀರವಾಗಿ ಸ್ವೀಕರಿಸಿಲ್ಲ ಅನ್ನೋದು ಖುಷಿಯ ವಿಚಾರ.
ಇದೀಗ ಈ ಘಟನೆಯ ಬಗ್ಗೆ ಆಕೆಯ ಸ್ನೇಹಿತರು ಸೋಶೀಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಮ್ಯಾನೇಜರ್ ಸಾಹೇಬ್ರೇ ನೀವು ಕಚೇರಿಯಲ್ಲಿ ಮ್ಯಾಚ್ ನೋಡ್ತಿದ್ರಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ದೊಡ್ಡ ಬ್ಯಾಡ್ ಲಕ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಎಲ್ಲರಿಗೂ ಕ್ಯಾಮೆರಾಗೆ ಕಾಣಿಸಿಕೊಳ್ಳಬೇಕು ಎಂದಿರುತ್ತದೆ. ನಿಮಗೆ ಹಾಗೆ ಇರಲಿಲ್ಲ. ಆದರೂ ಕ್ಯಾಮೆರಾ ನಿಮ್ಮನ್ನು ಹುಡುಕಿ ಬಂದಿದೆ. ಎಂತಹ ದುರಾದೃಷ್ಟ’ ಎಂದು ಕೆಲವರು ಬರೆದುಕೊಂಡಿದ್ದಾರೆ.