ಅದೇ ರಾಗ.. ಅದೇ ಹಾಡು.. – ಮೊದಲ ಪಂದ್ಯ ದೇವರಿಗೆ ಅರ್ಪಣೆ ಎಂದ ಆರ್‌ಸಿಬಿ ಫ್ಯಾನ್ಸ್‌!

ಅದೇ ರಾಗ.. ಅದೇ ಹಾಡು.. – ಮೊದಲ ಪಂದ್ಯ ದೇವರಿಗೆ ಅರ್ಪಣೆ ಎಂದ ಆರ್‌ಸಿಬಿ ಫ್ಯಾನ್ಸ್‌!

ಈ ಬಾರಿ ಕಪ್‌ ಗೆದ್ದೇ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಕಂಡಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್​ಕೆ ವಿರುದ್ಧ ಮತ್ತೊಮ್ಮೆ ಆರ್​ಸಿಬಿ ಮುಗ್ಗರಿಸಿದೆ. ಸಿಎಸ್‌ಕೆ  ಆರ್‌ಸಿಬಿ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದೆ.

ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.  ಕ್ಯಾಪ್ಟನ್​ ಫಾಫ್​ ಡುಪ್ಲೆಸಿ, ವಿರಾಟ್​ ಕೊಹ್ಲಿ ಪವರ್​​ ಪ್ಲೇನಲ್ಲಿ ಅಬ್ಬರಿಸಲಿಲ್ಲ. 4 ಓವರ್​​​ಗಳಲ್ಲಿ ಕೇವಲ 37 ರನ್​ ಸಿಡಿಸಿದರು.

ಇದನ್ನೂ ಓದಿ: ನೂರಾರು ಕೋಟಿ ಒಡೆಯ ಧೋನಿ ಬಳಿ ಇರೋ ಬೈಕ್, ಕಾರುಗಳೆಷ್ಟು?

5ನೇ ಓವರ್​ನಲ್ಲಿ ದಾಳಿಗಿಳಿದ ಮುಸ್ತಫಿಜುರ್​​ ರೆಹಮಾನ್​ ಒಂದೇ ಓವರ್​ನಲ್ಲಿ ಡಬಲ್​ ಶಾಕ್​ ಕೊಟ್ರು. ಫಾಫ್​ ಡುಪ್ಲೆಸಿ, ರಜತ್​ ಪಟಿದಾರ್​ಗೆ ಪೆವಿಲಿಯನ್ ದಾರಿ ತೋರಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್​ ಮ್ಯಾಕ್ಸ್​ವೆಲ್​ ಡಕೌಟ್​ ಆಗಿ ನಿರ್ಗಮಿಸಿದರು. ಅದರ ಬೆನ್ನಲ್ಲೇ, ವಿರಾಟ್​ ಕೊಹ್ಲಿ, ಕ್ಯಾಮರೂನ್​ ಗ್ರೀನ್​ ಆಟಕ್ಕೆ ಮತ್ತೆ ಮುಸ್ತಫಿಜುರ್​​ ಬ್ರೇಕ್ ಹಾಕಿದರು.

6ನೇ ವಿಕೆಟ್​ಗೆ ಜೊತೆಯಾದ ದಿನೇಶ್​ ಕಾರ್ತಿಕ್​, ಅನುಜ್​ ರಾವತ್​​ ತಂಡಕ್ಕೆ ಚೇತರಿಕೆ ನೀಡಿದರು. 95 ರನ್​ಗಳ ಸಾಲಿಡ್​ ಜೊತೆಯಾಟವಾಡಿದ ಈ ಜೋಡಿ ಆರ್​​ಸಿಬಿ ಬಿಗ್​ಸ್ಕೋರ್​​​ ಕಲೆ ಹಾಕುವಲ್ಲಿ ನೆರವಾದರು. ಅದರಂತೆ ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.

174 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ಅಬ್ಬರದ ಆರಂಭದ ಸೂಚನೆ ನೀಡಿತು. ಆದ್ರೆ, ಇಂಪ್ಯಾಕ್ಟ್​ ಪ್ಲೇಯರ್​​ ಯಶ್​ ದಯಾಳ್​, ಋತುರಾಜ್​ ಗಾಜ್ವಾಡ್​ಗೆ ಪೆವಿಲಿಯನ್​ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ವಿಕೆಟ್​​ ಕಳೆದರು ಅಬ್ಬರದ ಆಟವಾಡ್ತಿದ್ದ ರಚಿನ್​ ರವೀಂದ್ರ, ಕರನ್​ ಶರ್ಮಾ ಸ್ಪಿನ್​ ಬಲೆಗೆ ಬಿದ್ದರು.

ಬಳಿಕ ಜೊತೆಯಾದ ಡೇರಿಲ್​ ಮಿಚೆಲ್​, ಅಜಿಂಕ್ಯಾ ರಹಾನೆ ಸ್ಟಡಿ ಇನ್ನಿಂಗ್ಸ್​ ಕಟ್ಟೋ ಯುತ್ನದಲ್ಲಿದ್ದರು. ಆದ್ರೆ, ಇವರ ಜೊತೆಯಾಟಕ್ಕೆ ಕ್ಯಾಮರೂನ್​ ಗ್ರೀನ್​ ಬ್ರೇಕ್​ ಹಾಕಿದರು. ಆರ್​​ಸಿಬಿ ಸುಲಭಕ್ಕೆ ಗೆಲ್ಲೋ ಸಿಚ್ಯುವೇಶನ್​ ನಿರ್ಮಾಣವಾಗಿತ್ತು. ಆದ್ರೆ, 5ನೇ ವಿಕೆಟ್​ಗೆ ಜೊತೆಯಾದ ಶಿವಮ್​ ದುಬೆ, ರವಿಂದ್ರ ಜಡೇಜಾ ಎಚ್ಚರಿಕೆಯ ಆಟ ಗೆಲುವಿನ್ನ ಕಸಿದುಕೊಂಡರು. ಆರ್​​ಸಿಬಿ ಶಾರ್ಟ್​​ಬಾಲ್​ ತಂತ್ರ, ಬೈಸ್​​, ಓವರ್​ ಥ್ರೋ ರೂಪದಲ್ಲಿ ನೀಡಿದ ಬಿಟ್ಟಿ ರನ್​ಗಳು ಗೆಲುವಿಗೆ ಮುಳುವಾದವು. 18.4 ಓವರ್​​ಗಳಲ್ಲಿ ಗುರಿ ಮುಟ್ಟಿದ ಚೆನ್ನೈ 6 ವಿಕೆಟ್​​ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

Shwetha M