RCB ಏಟಿಗೆ ಮಕಾಡೆ ಮಲಗಿದ LSG – KING ಮುಡಿಗೇರಿತು ಆರೆಂಜ್ ಕ್ಯಾಪ್
ಬೆಂಗಳೂರು ಬಾಯ್ಸ್ ಈಗ ನಂ.1

RCB ಏಟಿಗೆ ಮಕಾಡೆ ಮಲಗಿದ LSG – KING ಮುಡಿಗೇರಿತು ಆರೆಂಜ್ ಕ್ಯಾಪ್ಬೆಂಗಳೂರು ಬಾಯ್ಸ್ ಈಗ ನಂ.1

ಲಕ್ನೋ ಇದ್ದ ಫಾರ್ಮ್ ನೋಡಿದಾಗ್ಲೇ ಈ ಮ್ಯಾಚ್ ಬೆಂಗಳೂರೇ ಗೆಲ್ಲೋದು ಅಂತಾ ಎಲ್ರಿಗೂ ಗೊತ್ತಿತ್ತು. ಅದ್ರಂತೆ ಗೆದ್ದು ಬೀಗಿದ್ದಾರೆ. ಹೋಂ ಪಿಚ್​ನಲ್ಲಿ ಪಾರುಪತ್ಯ ಮರೆಯುತ್ತಿರೋ ಬೆಂಗಳೂರು ಈಗಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದೆ.

ಇದನ್ನೂ ಓದಿ :RCB ವಿರುದ್ಧCSK ಕಂಪ್ಲೇಂಟ್‌ – ಏನಿದು ಚಿನ್ನಸ್ವಾಮಿಯಲ್ಲಿ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ವಿವಾದ?

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಈ ಮ್ಯಾಚಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋಗೆ ಒನ್ಸ್ ಅಗೇನ್ ಬ್ಯಾಟರ್ಸ್ ಕೈಕೊಟ್ರು. 20 ಓವರ್‌ಗಳಲ್ಲಿ 146 ರನ್‌ಗಳಿಗೆ ಸರ್ವಪತನ ಕಂಡಿತು. ತಂಡದ ಪರ ಮಿಚೆಲ್ ಮಾರ್ಷ್ 40 ರನ್​ ಗಳಿಸಿ ಹೈಸ್ಕೋರರ್ ಎನಿಸಿಕೊಂಡರೇ, ಮುಕುಲ್ ಚೌಧರಿ 39, ಮತ್ತು ಆಯುಷ್ ಬದೋನಿ 38 ರನ್ ಗಳಿಸಿದರು. ಆರ್​ಸಿಬಿ ಪರ ರಸಿಕ್ ಸಲಾಂ ನಾಲ್ಕು ವಿಕೆಟ್, ಭುವಿ 3 ಹಾಗೇ ಕೃನಾಲ್ 2 ವಿಕೆಟ್ ಪಡೆದು ಮಿಂಚಿದ್ರು.  ಆಲ್ರೆಡಿ ನಾಲ್ಕು ಮ್ಯಾಚಲ್ಲಿ 200+ ರನ್ ಗಳಿಸಿದ್ದ ಬೆಂಗಳೂರು ಲಕ್ನೋ ನೀಡಿದ್ದ 147 ರನ್​ಗಳ ಗುರಿಯನ್ನ 15.1 ಓವರ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ರೀಚ್ ಆಯ್ತು.

ಮ್ಯಾಚ್ ಟರ್ನಿಂಗ್ ಪಾಯಿಂಟ್ಸ್!

ರಿಷಭ್ ಪಂತ್ ಇಂಜುರಿ, ಪವರ್ ಪ್ಲೇನಲ್ಲೇ ಡೌನ್ ಫಾಲ್

ಲಕ್ನೋ ಕಡೆಯಿಂದ ಮೂವರು ಮಾತ್ರವೇ ಮಿನಿಮನ್ ಸ್ಕೋರ್

147 ರನ್ ಗಳ ಟಾರ್ಗೆಟ್ ಸೆಟ್ ಮಾಡಿದಾಗ್ಲೇ ಗೆದ್ದ ಬೆಂಗಳೂರು

ಬೆಂಗಳೂರು ಪರ ಬೌಲಿಂಗ್ ನಲ್ಲಿ ಸೂಪರ್ ಡೂಪರ್ ಪ್ರದರ್ಶನ

ಪವರ್ ಪ್ಲೇ ನಲ್ಲಿ ವಿರಾಟ್ ಕೊಹ್ಲಿ ಅದ್ಬುತ ಬ್ಯಾಟಿಂಗ್

ಫೀಲ್ಡಿಂಗ್ ಕೂಡ ಅದ್ಭುತ.. ಆಲ್ ರೌಂಡ್ ಪ್ರದರ್ಶನ ನೀಡಿ ಗೆಲುವು

ರಜತ್ ಪಾಟಿದಾರ್ ಕ್ಯಾಪ್ಟನ್ಸಿ ಕೂಡ ಸೂಪರ್

ಬೆಂಗಳೂರು ಮತ್ತು ಲಕ್ನೋ ನಡುವಿನ ಮ್ಯಾಚಲ್ಲಿ ಲಕ್ನೋ ತಂಡ ಎಲ್ಲಿಯೂ ಕೂಡ ಫೈಟ್ ನೀಡ್ತಿದೆ ಅನ್ನಿಸ್ಲೇ ಇಲ್ಲ. ಫಸ್ಟ್ ಬಾಲ್​ನಿಂದ ಹಿಡ್ದು ಲಾಸ್ಟ್​ ಬಾಲ್​ವರೆಗೂ ಡಾಮಿನೇಟ್ ಮಾಡಿ ಬೆಂಗಳೂರು ವಿನ್ ಆಯ್ತು. ಹಾಗೇ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಸ್ಥಾನಕ್ಕೇರಿದೆ. ಇನ್ನು ಕಿಂಗ್ ಕೊಹ್ಲಿ ಈ ಸೀಸನ್​ನಲ್ಲಿ ಸದ್ಯಕ್ಕೆ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಬ್ಯಾಟಿಂಗ್ ಅಂತಾ ಬಂದ್ರೆ ನಾನು ಈಗ್ಲೂ ನಂಬರ್ 1 ಅನ್ನೋದನ್ನ ತೋರಿಸಿದ್ದಾರೆ.

Shantha Kumari