ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಚಿನ್ನಸ್ವಾಮಿಯಲ್ಲಿ ಗೆದ್ದು ಬೀಗಿದ ಕೆಕೆಆರ್​ ಟೀಮ್​​

ತವರಿನಲ್ಲಿ ಆರ್‌ಸಿಬಿಗೆ ಹೀನಾಯ ಸೋಲು – ಚಿನ್ನಸ್ವಾಮಿಯಲ್ಲಿ ಗೆದ್ದು ಬೀಗಿದ ಕೆಕೆಆರ್​ ಟೀಮ್​​

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಮತ್ತೊಮ್ಮೆ ಹೀನಾಯ ಸೋಲು ಕಂಡಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​​​ ಗೆದ್ದು ಬೀಗಿದೆ.

ಎಂ.ಎ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಕೆಕೆಆರ್ ಅಬ್ಬರದ ಬ್ಯಾಟಿಂಗ್‌ಗೆ ಆರ್‌ಸಿಬಿ ಫುಲ್ ಸೈಲೆಂಟ್ ಆಗಿದೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಕೆಕೆಆರ್ ತಂಡವು ಇನ್ನೂ 19 ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ಸುಲಭ ಗೆಲುವು ಸಾಧಿಸಿದೆ. ಆರ್​​ಸಿಬಿ ನೀಡಿದ ಗುರಿ ಬೆನ್ನತ್ತಿದ ಕೆಕೆಆರ್​ ಕೇವಲ 16.5 ಓವರ್​ಗಳಲ್ಲಿ 186 ರನ್​ ಗಳಿಸೋ ಮೂಲಕ ಗೆದ್ದು ಬೀಗಿದೆ. ಕೆಕೆಆರ್​ ಪರ ಸುನಿಲ್​ ನರೈನ್​ 47, ವೆಂಕಟೇಶ್​ ಅಯ್ಯರ್​​ 50, ಸಾಲ್ಟ್​​ 30, ಶ್ರೇಯಸ್​​ ಅಯ್ಯರ್​​ 39, ರಿಂಕು ಸಿಂಗ್​ 5 ರನ್​ ಗಳಿಸಿದ್ದಾರೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 7 ವರ್ಷಗಳ ಬಳಿಕ ಗರಿಷ್ಠ ತಾಪಮಾನ! – ಬಿಸಿಲ ಝಳಕ್ಕೆ ಜನ ಹೈರಾಣ

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​​ಸಿಬಿ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಅಜೇಯರಾಗಿ ಉಳಿದರು. ಕೇವಲ 59 ಬಾಲ್​ನಲ್ಲಿ 4 ಸಿಕ್ಸರ್​​, 4 ಫೋರ್​ ಸಮೇತ 83 ರನ್​ ಸಿಡಿಸಿದ್ರು. ಮೊದಲಿಗೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಹರ್ಷಿತ್​ ರಾಣಾ 2ನೇ ಓವರಿನ 5ನೇ ಬಾಲ್​ನಲ್ಲಿ ಭರ್ಜರಿ ಸಿಕ್ಸರ್​​ ಸಿಡಿಸಿದ್ರು. ಇದಾದ ಬೆನ್ನಲ್ಲೇ ಕೊನೇ ಬಾಲ್​ಗೆ ಸಿಕ್ಸರ್​​ ಬಾರಿಸಲು ಹೋದ ಫಾಫ್​ ಕ್ಯಾಚ್​ ನೀಡಿದ್ರು. ಬಳಿಕ ಕ್ಯಾಮೆರಾನ್ ಗ್ರೀನ್​ ಕೂಡ 2 ಸಿಕ್ಸರ್​​, 4 ಫೋರ್​ ಸಮೇತ 33 ರನ್​ ಗಳಿಸಿದ್ರು.

ಕ್ಯಾಮರಾನ್​ ಗ್ರೀನ್​ ಔಟಾದ ಬಳಿಕ ಬಂದ ಮ್ಯಾಕ್ಸಿ ಎಂದಿನಂತೆಯೇ ಬ್ಯಾಟ್​ ಬೀಸಿದ್ರು. ಕೇವಲ 19 ಬಾಲ್​​ನಲ್ಲಿ 1 ಸಿಕ್ಸರ್​​, 3 ಫೋರ್​ ಸಮೇತ 29 ರನ್​ ಸಿಡಿಸಿದ್ರು. ಎರಡು ಬಾರಿ ಮ್ಯಾಕ್ಸ್​ವೆಲ್​ಗೆ ಲೈಫ್​ ಸಿಕ್ಕಿತು. ಕೊನೆಗೆ ಸುನಿಲ್​ ನರೈನ್​​​ ಬೌಲಿಂಗ್​ನಲ್ಲಿ 14ನೇ ಓವರ್​ನಲ್ಲಿ ಮತ್ತೆ ಸಿಕ್ಸ್​ ಸಿಡಿಯಲು ಹೋದ ಮ್ಯಾಕ್ಸಿ ರಿಂಕು ಸಿಂಗ್​ಗೆ ಕ್ಯಾಚ್​ ನೀಡಿದ್ರು.

ಕೊನೆಗೆ ಬಂದ ದಿನೇಶ್​ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಮೂರು ಸಿಕ್ಸರ್​​ ಸಮೇತ ದಿನೇಶ್​ ಕಾರ್ತಿಕ್​​ 20 ರನ್​ ಸಿಡಿಸಿದ್ರು. ಆರ್​​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಪೇರಿಸಿ 183 ರನ್​ಗಳ ಗುರಿ ನೀಡಿತ್ತು.

Shwetha M