RCB ಕಪ್ ಕ್ರೆಡಿಟ್ ಕೊಹ್ಲಿಗೆ ಮಾತ್ರನಾ? – ಕಿಂಗ್ ಮುಂದೆ ರಜತ್ ಸೈಡ್ ಲೈನ್ ಆದ್ರಾ?
1 ಟ್ರೋಫಿಗಾಗಿ ವಿರಾಟ್ ತ್ಯಾಗಗಳೆಷ್ಟು?

ಐಪಿಎಲ್ನಲ್ಲಿ ಯಾವುದೇ ಫ್ರಾಂಚೈಸಿ ಐಪಿಎಲ್ ಕಪ್ ಗೆದ್ದಾಗ್ಲೂ ಮೊದಲು ಹೀರೋ ಆಗೋದೇ ಕ್ಯಾಪ್ಟನ್. ಆತನ ಲೀಡರ್ಶಿಪ್, ಪರ್ಫಾಮೆನ್ಸ್, ಟೀಂ ಎಕ್ಸಿಕ್ಯೂಷನ್ ಎಲ್ಲವೂ ಹಾಟ್ ಟಾಪಿಕ್ ಆಗಿಬಿಡುತ್ತೆ. ಬಟ್ ಆರ್ಸಿಬಿಯಲ್ಲಿ ಮಾತ್ರ ಸೀನೇ ಫುಲ್ ಉಲ್ಟಾ. ಇಲ್ಲಿ ನಾಯಕ ರಜತ್ ಪಾಟಿದಾರ್ ಆದ್ರೂ ಕಂಪ್ಲೀಟ್ ಕ್ರೆಡಿಟ್ ವಿರಾಟ್ ಕೊಹ್ಲಿಗೆ ಸೇರ್ತಿದೆ. ಕ್ರಿಕೆಟರ್ಸ್, ಎಕ್ಸ್ಪರ್ಟ್ಸ್, ಫ್ಯಾನ್ಸ್ ಎಲ್ರೂ ಕೂಡ ಫೈನಲಿ ವಿರಾಟ್ ಕಪ್ ಗೆದ್ರು ಅಂತಾನೇ ಸೆಲೆಬ್ರೇಟ್ ಮಾಡ್ತಿದ್ದಾರೆ.
ಇದನ್ನೂ ಓದಿ: ಸಿಎಂ, ಡಿಸಿಎಂ, ಗೃಹಸಚಿವರು RCB ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕು – ಬಿ.ಎಸ್. ಯಡಿಯೂರಪ್ಪ
ಒಂದಲ್ಲ ಎರಡಲ್ಲ.. ಬರೋಬ್ಬರಿ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ನಲ್ಲಿ ತನ್ನ ಚೊಚ್ಚಲ ಕಪ್ಗೆ ಮುತ್ತಿಕ್ಕಿದೆ. ಹೊಸ ನಾಯಕನ ಸಾರಥ್ಯದಲ್ಲಿ ಮೊದಲ ವರ್ಷವೇ ಟ್ರೋಫಿ ಎತ್ತಿ ಹಿಡಿದಿದೆ. ಬಟ್ ಆರ್ಸಿಬಿ ಟ್ರೋಫಿ ಗೆಲುವಿನಲ್ಲಿ ಹೈಲೆಟ್ ಆಗ್ತಿರೋದು ವಿರಾಟ್ ಕೊಹ್ಲಿ. ಎಲ್ಲಾ ಕ್ರೆಡಿಟ್ ಕೂಡ ಕಿಂಗ್ ವಿರಾಟ್ ಕೊಹ್ಲಿಗೇ ಸಿಗ್ತಿದೆ. ಕ್ರಿಕೆಟರ್ಸ್, ಫ್ಯಾನ್ಸ್ ಕೂಡ ಈ ಗೆಲುವು, ಈ ಕಪ್ ನಿನ್ನದೂ ಅಂತಿದ್ದಾರೆ.
ಚೊಚ್ಚಲ ಕ್ಯಾಪ್ಟನ್ಸಿಯಲ್ಲೇ ಆರ್ ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ರಜತ್!
2008ರಿಂದಲೂ ಐಪಿಎಲ್ನಲ್ಲಿ ಆಡ್ತಿರೋ ಆರ್ಸಿಬಿ ಈಗಾಗ್ಲೇ ಹಲವು ನಾಯಕರನ್ನ ಕಂಡಿದೆ. ಈ 18 ಸೀಸನ್ಗಳಲ್ಲಿ ಇದಕ್ಕೂ ಮುನ್ನ ಒಟ್ಟು 3 ಬಾರಿ ಫೈನಲ್ ಆಡಿತ್ತು. 2009, 2011 ಹಾಗೇ 2016ರಲ್ಲಿ. ಆದ್ರೆ ಕಪ್ ಗೆಲ್ಲೋಕೆ ಆಗಿರಲಿಲ್ಲ. ಈ ಲಾಂಗ್ ಜರ್ನಿಯಲ್ಲಿ ಹಲವು ನಾಯಕರನ್ನೂ ಕಂಡಿದೆ. ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ, ಶೇನ್ ವ್ಯಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ಸೇರಿದ್ದಾರೆ. 2025ರ ಐಪಿಎಲ್ಗೂ ಮುನ್ನ ರಜತ್ ಪಾಟಿದಾರ್ ಅವ್ರನ್ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು. ತಂಡದ ಸಾರಥ್ಯ ಹೊತ್ತ ಮೊದಲ ವರ್ಷವೇ ತಂಡವನ್ನ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಜತ್ ಕ್ಯಾಪ್ಟನ್ ಆದ್ರೂ ವಿರಾಟ್ ತೆರೆ ಮರೆಯ ನಾಯಕ!
ಹೌದು. ಈ ಸೀಸನ್ನಲ್ಲಿ ರಜತ್ ಪಾಟಿದಾರ್ ತಂಡವನ್ನ ಲೀಡ್ ಮಾಡಿದ್ರೂ ಕೂಡ ತೆರೆಮರೆಯ ನಾಯಕನಾಗಿ ಕೆಲಸ ಮಾಡಿದ್ದು ವಿರಾಟ್ ಕೊಹ್ಲಿ. ಅದು ಆನ್ ಫೀಲ್ಡ್ ಇರ್ಲಿ, ಆಫ್ ಫೀಲ್ಡ್ ಇರ್ಲಿ. ಅವ್ರ ಎಕ್ಸ್ಪೀರಿಯನ್ಸ್ ತಂಡಕ್ಕೆ ಬೇಕಿತ್ತು. ಹೀಗಾಗಿ ರಜತ್ನ ಮುಂದೆ ಬಿಟ್ಟು ಕಂಪ್ಲೀಟ್ ಗೇಮ್ ಪ್ಲ್ಯಾನ್ ಅವ್ರೇ ಮಾಡ್ತಿದ್ರು. ಫೀಲ್ಡ್ ಸೆಟ್, ಬೌಲರ್ ಸೆಲೆಕ್ಷನ್ ಹೀಗೆ ಎಲ್ಲವೂ ಅವ್ರದ್ದೇ ನಿರ್ಧಾರವಾಗಿತ್ತು. ಹೀಗಾಗಿ ರಜತ್ ಅಫಿಶಿಯಲ್ ಕ್ಯಾಪ್ಟನ್ ಆಗಿದ್ರೂ ವಿರಾಟ್ ಅನ್ ಅಫಿಶಿಯಲ್ ಲೀಡರ್ ಆಗಿದ್ರು. ಹೀಗಾಗೇ ಆರ್ಸಿಬಿ ಕಪ್ ಗೆದ್ದಾಗ ರಜತ್ ಪಾಟಿದಾರ್ ಗಿಂತ ಕೊಹ್ಲಿಯೇ ಮೋಸ್ಟ್ ಡಿಸರ್ವಿಂಗ್ ಅಂತಾ ಎಲ್ರೂ ವಿಶ್ ಮಾಡಿದ್ರು.
ಆರ್ ಸಿಬಿ ಪರ ವಿರಾಟ್ ಕೊಹ್ಲಿ ಹಲವು ದಾಖಲೆ!
ಅದೆಲ್ಲಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿ ಆರ್ಸಿಬಿಗಾಗಿ ಹಲವು ದಾಖಲೆಗಳನ್ನ ಬರೆದಿದ್ದಾರೆ. 2008ರಲ್ಲಿ ಆರ್ಸಿಬಿ ಮೂಲಕ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದ ವಿರಾಟ್ ಈಗ್ಲೂ ಅದೇ ಟೀಮ್ನಲ್ಲೇ ಕಂಟಿನ್ಯೂ ಆಗ್ತಿದ್ದಾರೆ. ಸೋ ಸತತವಾಗಿ 18 ವರ್ಷಗಳ ಕಾಲ ಒಂದೇ ಫ್ರಾಂಚೈಸಿಗಾಗಿ ಆಡಿದ ಏಕೈಕ ಆಟಗಾರ ಆಗಿದ್ದಾರೆ. ಇನ್ನೂ 9000ಕ್ಕೂ ಹೆಚ್ಚು ಕಲೆ ಹಾಕಿದ್ದಾರೆ. 63 ಅರ್ಧಶತಕಗಳನ್ನ ಬಾರಿಸಿದ್ದಾರೆ. ಹಾಗೇ ಐಪಿಎಲ್ನಲ್ಲಿ ಅತೀ ಹೆಚ್ಚು ಫೋರ್ಸ್ ಭಾರಿಸಿದ ಕ್ರಿಕೆಟರ್ ಕೂಡ ಹೌದು. ಇನ್ನು 8 ಶತಕಗಳನ್ನ ಕೊಹ್ಲಿಯೊಬ್ಬರೇ ಕಂಪ್ಲೀಟ್ ಮಾಡಿರೋದು. ಹಾಗೇ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ರನ್ಸ್ ಕೂಡ ಇವ್ರ ಹೆಸರಲ್ಲೇ ಇದೆ. 2016ರ ಒಂದೇ ಸೀಸನ್ನಲ್ಲಿ 973 ರನ್ ಗಳಿಸಿ ಹೈಯೆಸ್ಕ್ ಸ್ಕೋರರ್ ಆಗಿದ್ರು. ಈ ರೆಕಾರ್ಡ್ನ ಯಾರಿಂದಲೂ ಬ್ರೇಕ್ ಮಾಡೋಕೆ ಆಗಿಲ್ಲ.
ಈ ಎಲ್ಲಾ ಕಾರಣಗಳಿಂದಲೆ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಕಪ್ ಗೆಲ್ಲಲೇಬೇಕು ಅಂತಾ ಎಲ್ಲರೂ ಹರಸಿದ್ರು. ಈ ಸಲ ಕಪ್ ಗೆದ್ದಾಗ ಕೊಹ್ಲಿಗೇ ಈ ಗೌರವ ಸಲ್ಲಬೇಕು ಎಂದಿದ್ರು. ಕೊಹ್ಲಿಗೆ ಆರ್ಸಿಬಿ ಜೊತೆ 18 ವರ್ಷಗಳ ನಂಟು ಇರೋದ್ರಿಂದಲೇ ಎಲ್ಲರೂ ಕೂಡ ಅವ್ರನ್ನೇ ಹೈಲೆಟ್ ಮಾಡ್ತಾರೆ. ರಜತ್ ಪಾಟಿದಾರ್ ಕೂಡ ಈ ಗೆಲುವು, ಟ್ರೋಫಿಯನ್ನ ವಿರಾಟ್ಗೇ ಅರ್ಪಿಸಿದ್ದಾರೆ. ಆದ್ರೆ ನಾಯಕನಾಗಿ ರಜತ್ ಪಾಟಿದಾರ್ ಗೆದ್ದಿರೋದೂ ಕೂಡ ಸುಳ್ಳಲ್ಲ.

ನೋಡಿರಿ

