ಬಿಗ್ ಸ್ಟಾರ್ ಗೆ RCB ಗೇಟ್ ಪಾಸ್ – CSK, MI ದುಬಾರಿ ವೀರರೂ ಔಟ್
ರಿಲೀಸ್ ನಿಂದ ಎಷ್ಟು ಕೋಟಿ ಉಳಿತಾಯ?

ಬಿಗ್ ಸ್ಟಾರ್ ಗೆ RCB ಗೇಟ್ ಪಾಸ್ – CSK, MI ದುಬಾರಿ ವೀರರೂ ಔಟ್ರಿಲೀಸ್ ನಿಂದ ಎಷ್ಟು ಕೋಟಿ ಉಳಿತಾಯ?

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್​ಗೆ ಇನ್ನೂ ಸಾಕಷ್ಟು ಟೈಂ ಇದೆ. ಬಟ್ ಆಲ್ರೆಡಿ  ಎಲ್ಲಾ ಹತ್ತು ಫ್ರಾಂಚೈಸಿಗಳು ಟ್ರೇಡ್ ವಿಂಡೋ ಮೂಲಕ ತಮ್ಮ ಟೀಮ್​ನ ಸೂಪರ್ ಸ್ಟ್ರಾಂಗ್ ಮಾಡಿಕೊಳ್ಳೋಕೆ ತಂತ್ರಗಳನ್ನ ರೂಪಿಸ್ತಿವೆ. ಆಟಗಾರರ ವಿನಿಮಯ ಮಾಡಿಕೊಳ್ಳೋದು ಅಥವಾ ಖರೀದಿ ಮಾಡೋದಾ ಅಂತಾ ಲೆಕ್ಕಾಚಾರದಲ್ಲಿದೆ. ಹಾಗೇ ಐಪಿಎಲ್​ನ ದಿ ಮೋಸ್ಟ್ ವ್ಯಾಲ್ಯುಯೇಬಲ್ ಟೀಮ್ಸ್ ಆಗಿರುವ ಆರ್​ಸಿಬಿ, ಎಂಐ ಮತ್ತು ಸಿಎಸ್​ಕೆ ತಂಡದಲ್ಲಿ ದುಬಾರಿ ಆಟಗಾರರಿಗೆ ಗೇಟ್​ಪಾಸ್ ಸಿಗೋ ಸಾಧ್ಯತೆ ಇದೆ. ಮಿನಿ ಹರಾಜಿಗೂ ಮುನ್ನ ಅತಿ ಹೆಚ್ಚು ಸಂಭಾವನೆ ಪಡೆದು ಕಳಪೆ ಪ್ರದರ್ಶನ ನೀಡಿದವನ್ನ ರಿಲೀಸ್ ಮಾಡೋಕೆ ಫಾರ್ಮುಲಾ ರೆಡಿ ಆಗಿದೆ. ಹಾಗಂತ ಇಲ್ಲಿ ಆಟಗಾರರ ಪ್ರದರ್ಶನವನ್ನಷ್ಟೇ ಗಮನದಲ್ಲಿ ಇಟ್ಟುಕೊಂಡು ಬಿಡುಗಡೆ ಮಾಡಲ್ಲ. ಅವ್ರು ಹೊರ ಹೋಗೋದ್ರಿಂದ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಹಣ ಕೂಡ ಸೇವಿಂಗ್ಸ್ ಆಗುತ್ತೆ.

ಇದನ್ನೂ ಓದಿ : ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಹರ್ಭಜನ್ – 2008ರ ವಿಡಿಯೋ ಈಗ ರಿಲೀಸ್ ಯಾಕೆ?

ಲಿವಿಂಗ್ ಸ್ಟೋನ್ ಹೊರ ಬಿದ್ರೆ ಆರ್ ಸಿಬಿಗೆ 8.75 ಕೋಟಿ ಉಳಿತಾಯ!

2025ರ ಐಪಿಎಲ್​ನಲ್ಲಿ ಆರ್​​ಸಿಬಿ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. ಆಲ್​ರೌಂಡ್ ಪ್ರದರ್ಶನದ ಮೂಲಕ ಟೂರ್ನಿಯುದ್ದಕ್ಕೂ ಕಂಪ್ಲೀಟ್ ಡಾಮಿನೇಟ್ ಮಾಡಿದ ತಂಡ ಇದು. ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತವನ್ನೇ ನೀಡಿ ಆಟಗಾರರನ್ನ ಖರೀದಿ ಮಾಡಿತ್ತು. ಈ ಪೈಕಿ ಇಂಗ್ಲಿಷ್ ಆಟಗಾರ ಲಿಯಾಮ್ ಲಿವಿಂಗ್ ಸ್ಟೋನ್ ಕೂಡ ಒಬ್ರು. ಬರೋಬ್ಬರಿ 8.75 ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಲಾಗಿತ್ತು. ಆಲ್‌ರೌಂಡರ್ ಪ್ರದರ್ಶನದ ಬಗ್ಗೆ ತುಂಬಾ ಹೋಪ್ಸ್ ಇತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಬಲ ನೀಡ್ತಾರೆ ಅನ್ನೋ ಕಾರಣದಿಂದಲೇ ಅಷ್ಟೊಂದು ಹಣ ಸುರಿಯಲಾಗಿತ್ತು. ಆದ್ರೆ ಲಿವಿಂಗ್ ಸ್ಟೋನ್ ಕಡೆಯಿಂದ ಹೇಳಿಕೊಳ್ಳುವಂತ ಪ್ರದರ್ಶನ ಬರ್ಲಿಲ್ಲ. 10 ಪಂದ್ಯಗಳಲ್ಲಿ ಕಣಕ್ಕಿಳಿದ್ರೂ ಒಟ್ಟಾರೆಯಾಗಿ 112 ರನ್​ಗಳನ್ನಷ್ಟೇ ಕಲೆ ಹಾಕಿದ್ರು. ಅಷ್ಟು ಮೊತ್ತ ಕೊಟ್ಟು ಸಫರ್ ಆಗೋದಕ್ಕಿಂತ ರಿಲೀಸ್ ಮಾಡಿದ್ರೆ 8.75 ಕೋಟಿ ಸೇವ್ ಆಗುತ್ತೆ. ಅದೇ ದುಡ್ಡಲ್ಲಿ ಬೇರೆ ಬಲಿಷ್ಠ ಆಟಗಾರರನ್ನ ಸೇರಿಸಿಕೊಳ್ಳೋ ಪ್ಲ್ಯಾನ್ ನಲ್ಲಿದೆ ಆರ್ ಸಿಬಿ ಫ್ರಾಂಚೈಸಿ.

ಸಿಎಸ್ ಕೆ ತಂಡಕ್ಕೆ ಹೊರೆಯಾಗಿದ್ರೆ ಡ್ವೇನ್ ಕಾನ್ವೇ!

ಇನ್ನು ಐಪಿಎಲ್​ನಲ್ಲಿ ಹೆಚ್ಚು ಹಣ ಪಡೆದು ಡಲ್ ಆದ ಮತ್ತೊಬ್ಬ ಪ್ಲೇಯರ್ ಅಂದ್ರೆ ಡ್ವೇನ್ ಕಾನ್ವೇ. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ 2023 ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ  CSK ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಆದ್ರೆ ಅದ್ಯಾಕೋ 2025ರ ಆವೃತ್ತಿಯಲ್ಲಿ ಸದ್ದು ಮಾಡ್ಲಿಲ್ಲ. 6.25 ಕೋಟಿ ರೂಪಾಯಿ ಸಂಭಾವನೆ ಪಡೆದ್ರೂ 6 ಪಂದ್ಯಗಳಲ್ಲಿ ಕಣಕ್ಕಿಳಿದು 131ರ ಸ್ಟ್ರೈಕ್ ರೇಟ್​ನಲ್ಲಿ 156 ರನ್ ಅಷ್ಟೇ ಕಲೆ ಹಾಕಿದ್ರು. ಈ ಪ್ರದರ್ಶನದಿಂದಾಗಿಯೇ ಸಿಎಸ್‌ಕೆ ಪವರ್-ಪ್ಲೇನಲ್ಲಿಯೇ ಪವರ್ ಕಳ್ಕೊಂಡು ಸಾಲು ಸಾಲು ಸೋಲುಗಳನ್ನ ಕಾಣ್ಬೇಕಾಯ್ತು, ಅದೂ ಅಲ್ದೇ ಆಯುಷ್ ಮ್ಹಾತ್ರೆ, ಉರ್ವಿಲ್ ಪಟೇಲ್ ಇರೋದ್ರಿಂದ  ಕಾನ್ವೇಗೆ ಆರಂಭಿಕ ಸ್ಥಾನದಲ್ಲಿ ಸ್ಲಾಟ್ ಗ್ಯಾರಂಟಿ ಇಲ್ಲ. ಹೀಗಾಗಿ ಬಿಡುಗಡೆ ಮಾಡೋ ಸಿದ್ಧತೆ ನಡೀತಿದೆ.

ದೀಪಕ್ ಚಹಾರ್ ಗೆ ಮುಂಬೈ 9.25 ಕೋಟಿ ಕೊಟ್ಟಿದ್ದು ವೇಸ್ಟ್?

ಬಲಗೈ ಮಧ್ಯಮ ವೇಗದ ಸ್ವಿಂಗ್ ಬೌಲರ್ ಆಗಿರುವ ದೀಪಕ್ ಚಹಾರ್ ಡೇಂಜರಸ್ ಬೌಲರ್. 2025ರ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಸಲಾಗಿತ್ತು. ಅಲ್ದೇ ಈ ಸೀಸನ್​ಗಾಗಿ ಬರೋಬ್ಬರಿ 9.25 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಲೈನ್ ಌಂಡ್ ಲೆಂಗ್ತ್ ಮಿಸ್ ಆಗ್ತಿವೆ. ವೇಗ ಕಡಿಮೆ ಆಗಿದೆ. ಚಹಾರ್ ಬೌಲಿಂಗ್​ನಲ್ಲಿ ಎದುರಾಳಿ ಬ್ಯಾಟರ್​ಗಳು ಲೀಲಾಜಾಲವಾಗಿ ಬ್ಯಾಟ್ ಬೀಸ್ತಿದ್ದಾರೆ. ಕಳೆದ ಎರಡು ಋತುಗಳಲ್ಲಿ ಕೇವಲ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಚಹಾರ್​ರನ್ನ ರಿಲೀಸ್ ಮಾಡಿದ್ರೆ 9.25 ಕೋಟಿ ಉಳಿತಾಯ ಆಗುತ್ತೆ ಅನ್ನೋದು ಮುಂಬೈ ಪ್ಲ್ಯಾನ್ ಆಗಿದೆ.

Shantha Kumari